– ರಾಘವೇಂದ್ರ ಅಡಿಗ ಎಚ್ಚೆನ್.
ಶ್ರೀ ರಾಘವೇಂದ್ರ ರೆಡ್ಡಿರವರ “ಪೂಜ್ಯಾಯ ಫಿಲಂಸ್ ” ನಿರ್ಮಾಣದ ಚೊಚ್ಚಲು ಸಿನಿಮಾ ಜನಪ್ರಿಯ ಮಳವಳ್ಳಿ ಎಂ,ಎಲ್,ಪ್ರಸನ್ನ ರವರ ಚಿತ್ರಕಥೆ ನಿರ್ದೇಶನದ “ಭಾರತಿ ಟೀಚರ್ ” ಏಳನೇ ತರಗತಿ, ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರ್ ನಲ್ಲಿ ನೆರವೇರಿತು. ಶಿಕ್ಷಣ ಕ್ಷೇತ್ರದ ಬದಲಾವಣೆಗೆ ವಿಶೇಷ ಕೊಡುಗೆಯನ್ನು ನೀಡುವ ಮೌಲ್ಯದಾರಿತ, ರಾಜಕೀಯ ಸಂಘರ್ಷಗಳ ನಡುವೆಯೂ, ಶಿಕ್ಷಣ ಕ್ಷೇತ್ರದ ಉದ್ದೇಶಗಳನ್ನು ಈಡೇರಿಸುವ ಕಥಾನಕವಾದ ಚಿತ್ರದಲ್ಲಿ ಪುಟ್ಟ ಬಾಲಕಿ ಯಶಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರದ ಟೀಸರ್ ಬಿಡುಗಡೆಯನ್ನು ಕರ್ನಾಟಕ ಸರ್ಕಾರದ ಜನಪ್ರಿಯ ಕಾರ್ಮಿಕ ಸಚಿವರಾದ ಸಂತೋಷ್.ಎಸ್. ಲಾಡ್ ರವರು ಬಿಡುಗಡೆಗೊಳಿಸಿದರು,
ಇದೇ ಸಂದರ್ಭ ಸಚಿವ ಸಂತೋಷ್.
ಲಾಡ್ ಮಾತನಾಡಿ ನೀವು ಒಂದು ಡಿಸಿ ಪಾತ್ರ ಮಾಡಬೇಕು ಅಂತ ಹೇಳಿ ನನ್ನನ್ನು ಈ ಚಿತ್ರಕ್ಕೆ ಒಪ್ಪಿಸಲಾಗಿದೆ. ನಾನಿದುವರೆಗೆ ಯಾವ ಸಿನಿಮಾದಲ್ಲಿಯೂ ಅಭಿನಯಿಸಿಸ್ದವನಲ್ಲ ಎಂದರೂ ಕೇಳಲಿಲ್ಲ. ಈ ರಾಜಕಾರಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಅನ್ನೋ ಉದ್ದೇಶದಿಂದ ನಾವು ರಾಜಕಾರಣಕ್ಕೆ ಬಂದವರು ಅದೆಲ್ಲ ಬೇರೆ ಸಂದರ್ಭದಲ್ಲಿ ಮಾತನಾಡೋಣ, ಸಿಹಿ ಕಹಿ ಚಂದ್ರು ಈ ಸಿನಿಮಾದಲ್ಲಿದ್ದಾರೆ. ನಾವವರನ್ನು ಗಣೇಶನ ಮದುವೆ ಗೌರಿ ಗಣೇಶ ಅಲ್ಲಿಂದ ನೋಡಿ ಬೆಳೆದವರು ಹಾಗಾಗಿ ಈ ಸಿನಿಮಾದಲ್ಲಿ ನಾನೂ ಸಹ ಮಾಡಬಲ್ಲೆ ಎನ್ನಬಹೌದು. ಆದರೂ ಭಯವಿದೆ. ಎನ್ನುತ್ತಾ ನಿರ್ಮಾಪಕರು ಈ ಚಿತ್ರಕ್ಕೆ ಬಮ್ಡವಾಳ ಹಾಕಿದ್ದಾರೆ.
ಇದು ನಾನ್ ಕಮರ್ಷಿಯಲ್ ಮೂವಿ ಆಗಿದೆ. ಇವತ್ತು ಪಿಕ್ಚರ್ ಗೆಲ್ತಕ್ಕಂತದ್ದು ತುಂಬಾ ಕಷ್ಟ ಇದೆ ಒಟ್ಟಾರೆ ಪ್ರಪಂಚದಲ್ಲಿ 8% ಸಕ್ಸಸ್ ರೇಟ್ ಇದೆ. ಆದರೆ ಈ ಚಿತ್ರ ಉತ್ತಮ ಸಂದೇಶ ಕೊಡುವ ಚಿತ್ರವಾಗಿದೆ. ಹಾಗಾಗಿ ನಾನಿದರಲ್ಲಿ ಅಭಿನಯಿಸುತ್ತಿದ್ದೇನೆ.ನಿಮ್ಮೆಲ್ಲರಿಗೂ ಒಳ್ಳೆಯದಾಗಿ ಆಗಲಿ ಕನ್ನಡ ಸಿನಿಮಾನ ಹೆಚ್ಚಿನ ಬೆಳೆಯಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ರಾಜ್ ಕುಮಾರ್ ಅವರ ಕಾಲದಿಂದ ಅನಂತ್ ನಾಗ್ , ವಿಷ್ಣುವರ್ಧನ್ , ಶಂಕರ್ ನಾಗ್ , ರವಿಚಂದ್ರನ್ ಅವರ ಪಿಕ್ಚರ್ ನೋಡಿ ಬಂದಿರತಕ್ಕಂತವರು ನಾವು ಎಲ್ಲಾ ಹಂಸಲೇಖ ಇರಬಹುದು ಹಲವರು ಶ್ರೇಷ್ಠ ಸಂಗೀತ ನಿರ್ದೇಶಕರು, ಪುಟ್ಟಣ್ಣ ಕಳುಗರ್ ಅಂತ ನಿರ್ದೇಶಕರು ನಮ್ಮಲ್ಲಿದ್ದರು.
ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಇವತ್ತು ಕನ್ನಡ ಸಿನಿಮಾ ಗುರುತಿಸಿಕೊಳ್ಳುತ್ತಾ ಇದೆ ಇನ್ನ ಹೆಚ್ಚಿನ ಮಟ್ಟದಲ್ಲಿ ಕನ್ನಡ ಬೆಳೆಯಲಿ ಕನ್ನಡ ಸಿನಿಮಾ ತಲುಪಲಿ ಎಂದು ಕನ್ನಡ ಚಿತ್ರರಂಗ ವಿಶ್ವದಾದ್ಯಂತ ಬೆಳೆಯಲೆಂದು ಆಶಿಸಿ ಇಂದಿನ ಸಮಾಜಕ್ಕೆ ಹಾಗೂ ಯುವ ಸಮುದಾಯಕ್ಕೆ ದಾರಿದೀಪವಾಗುವ ಮೌಲ್ಯ ದಾರಿತ, ಸಿನಿಮಾಗಳನ್ನು ಹೆಚ್ಚು ಹೆಚ್ಚು ಮಾಡಲೆಂದು ಕೋರಿ ಚಿತ್ರತಂಡಕ್ಕೆ ಶುಭ ಕೋರಿದರು ಇದೇ ಸಂದರ್ಭ ಹೆಸರಾಂತ ಚಿತ್ರ ನಿರ್ದೇಶಕರು ನಾಗ ಪ್ರಸನ್ನ,ಹೆಸರಾಂತ ನಟ ಸಿಹಿ ಚಂದ್ರು , ಚಿತ್ರಸಾಹಿತಿ ವಿ. ನಾಗೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹಾಗೂ ಚಲನಚಿತ್ರ ಗಣ್ಯರು, ಚಲನಚಿತ್ರ ನಟರು ಸೇರಿದಂತೆ ಇಡೀ ಭಾರತೀ ಟೀಚರ್ ಏಳನೇ ತರಗತಿ ಚಿತ್ರತಡ್ಂಅದ ಸದಸ್ಯರು ಹಾಜರಿದ್ದರು.