ಎಲ್2 ಎಂಪುರಾನ್.. ಇದೇ ಮಾರ್ಚ್ 27ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸೋಕೆ ಸಜ್ಜಾಗ್ತಿರೋ ಮಲಯಾಳಂ ಮೂಲದ ಪ್ಯಾನ್ ಇಂಡಿಯಾ ಎಂಟರ್ ಟೈನರ್. ಮೋಹನ್ ಲಾಲ್ ಲೀಡ್ ನಲ್ಲಿ ನಟಿಸಿರೋ ಈ ಸಿನಿಮಾಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್ ಹೇಳೋದ್ರ ಜೊತೆಗೆ ಸ್ವತಃ ಅವರೇ ಸಿನಿಮಾಗೆ ಮಹತ್ವದ ತಿರುವು ನೀಡುವ ಪಾತ್ರಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ. ಅಂದಹಾಗೆ ಇದು ಬಾಲಿವುಡ್ ಸಿನಿಮಾಗಳ ರೇಂಜ್ ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ಇದು ಮಾಲಿವುಡ್ ಇಂಡಸ್ಟ್ರಿಯಲ್ಲಿ ಫಿಲ್ಮ್ ಮೇಕಿಂಗ್ ಸ್ಟ್ಯಾಂಡರ್ಡ್ಸ್ ನ ಸೆಟ್ ಮಾಡಿದ ಲೂಸಿಫರ್ ಸಿನಿಮಾದ ಸೀಕ್ವೆಲ್ ಅನ್ನೋದು.

ಅಂದಹಾಗೆ ಈ ಸಿನಿಮಾ ಇನ್ನೂ ರಿಲೀಸ್ ಗೆ ಒಂದು ವಾರ ಇರುವಾಗ್ಲೇ ಸುನಾಮಿ, ಸುಂಟರಗಾಳಿ ರೀತಿ ಪ್ರೇಕ್ಷಕರನ್ನ ತಲುಪಿದೆ. ಟ್ರೈಲರ್ ನೋಡಿದಾಕ್ಷಣ ಸಿನಿಮಾದ ಗತ್ತು, ಗಮ್ಮತ್ತು, ಗೈರತ್ತು ಎಂಥದ್ದು ಅನ್ನೋದು ನೋಡುಗರಿಗೆ ಅರ್ಥವಾಗಿದೆ. ಹಾಗಾಗಿಯೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಬಿಡ್ತಿದ್ದಂತೆ, 24 ಗಂಟೆಯಲ್ಲಿ ಅತಿ ಹೆಚ್ಚು ಟಿಕೆಟ್ಸ್ ಬುಕಿಂಗ್ ಆದ ಇಂಡಿಯಾದ ಮೊದಲ ಚಿತ್ರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಲ್ಲು ಅರ್ಜುನ್ ನಟನೆಯ ಪುಷ್ಪ-2, ರಾಜಮೌಳಿಯ ಬಾಹುಬಲಿ-2, ರಾಕಿಭಾಯ್- ಪ್ರಶಾಂತ್ ನೀಲ್ ರ ಕೆಜಿಎಫ್ ಚಾಪ್ಟರ್-2, ಪ್ರಭಾಸ್ ನಟನೆಯ ಸಲಾರ್ ಹೀಗೆ ಇತ್ತೀಚೆಗೆ ಸಂಚಲನ ಮೂಡಿಸಿದ ಪ್ಯಾನ್ ಇಂಡಿಯನ್ ಸಿನಿಮಾಗಳ ರೆಕಾರ್ಡ್ ಗಳನ್ನೆಲ್ಲಾ ಹಿಂದಿಕ್ಕಿದೆ ಎಂಪುರಾನ್. ಆನ್​ಲೈನ್ ಟಿಕೆಟ್ಸ್ ಬುಕಿಂಗ್ ನಲ್ಲಿ ಕೇವಲ 24 ಗಂಟೆಯಲ್ಲಿ, ಮೋಹನ್ ಲಾಲ್ ನಟನೆಯ ಎಂಪುರಾನ್ ಸಿನಿಮಾ, ದಾಖಲೆ 6 ಲಕ್ಷ 45 ಸಾವಿರ ಟಿಕೆಟ್ಸ್ ಮಾರಾಟ ಮಾಡಿದೆ. ಅಂದ್ರೆ ಪ್ರೇಕ್ಷಕರೇ ಈ ಸಿನಿಮಾನ ನೋಡೋಕೆ ಮುಗಿಬೀಳ್ತಿದ್ದಾರೆ. ಮುಂಗಡ ಟಿಕೆಟ್ಸ್ ನ ಖರೀದಿಸಲು ಕೇರಳಾದಲ್ಲಿ ನೂಕು ನುಗ್ಗಲು ಕೂಡ ನಡೆದಿದೆ.

ಮಲಯಾಳಂ ಜೊತೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಈ ಸಿನಿಮಾ ರಿಲೀಸ್ ಆಗ್ತಿದೆ. ಕೇರಳದಲ್ಲಿ ಮೊದಲು ದಿನ ಒಟ್ಟು 3212 ಶೋಗಳು ನಡೆಯಲಿದ್ದು, ಇಂಡಿಯಾ ಒಂದರಲ್ಲೇ ಏಳೂವರೆ ಕೋಟಿ ಅಡ್ವಾನ್ಸ್ ಬುಕ್ಕಿಂಗ್ ನಿಂದ ಗಳಿಸಿದೆ ಎಂಪುರಾನ್. ಜಾರ್ಖಂಡ್ ನಲ್ಲಿ 54 % ಆನ್ ಲೈನ್ ಬುಕಿಂಗ್ ಆಗ್ತಿರೋದು ಇಂಟರೆಸ್ಟಿಂಗ್. ಆಂದ್ರಾದಲ್ಲೂ 54%, ಕೇರಳ 58%, ಮಧ್ಯೆ ಪ್ರದೇಶ್ ನಲ್ಲಿ 36%, ಬಿಹಾರ್ ನಲ್ಲಿ 29% ಮೊದಲ ದಿನಕ್ಕೆ ಟಿಕೆಟ್ಸ್ ಬುಕ್ಕಿಂಗ್ ಆಗಿರೋದು ವಿಶೇಷ.

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ