ಹಬ್ಬ ಬಂದ ಮೇಲೆ ಹೆಣ್ಣುಮಕ್ಕಳು ಸಡಗರದಿಂದ ಅಲಂಕಾರ ಮಾಡಿಕೊಳ್ಳದ್ದಿದ್ದರೆ ಹೇಗೆ? ದೀಪಾವಳಿಯಂಥ ಪ್ರಮುಖ ಹಬ್ಬದಲ್ಲಿ ಜನ ಪರಸ್ಪರ ಭೇಟಿ ಆಗುವುದು, ಪಾರ್ಟಿ ಇತ್ಯಾದಿ ಇರುತ್ತದೆ. ಆದರೆ ಮುಖದಲ್ಲಿ ಅದ್ಭುತ ಕಾಂತಿ ಮೂಡಿಸಲು ಪ್ರತಿ ಸಲ ಪಾರ್ಲರ್ ಗೆ ಹೋಗುವುದು ಎಲ್ಲರಿಗೂ ಸಾಧ್ಯವಾಗುವ ಕೆಲಸವಲ್ಲ. ಹೀಗಾಗಿ ಇಂಥ ಹಬ್ಬದ ಸಂದರ್ಭದಲ್ಲಿ ಕೆಲವೇ ನಿಮಿಷಗಳಲ್ಲಿ ಪಾರ್ಲರ್ ನಷ್ಟೇ ಪರ್ಫೆಕ್ಟ್ ಮೇಕಪ್ ಮಾಡಿಕೊಳ್ಳುವುದು ಹೇಗೆ?
ಬ್ಲೀಚ್ ನಿಂದ ಹೆಚ್ಚು ಕಾಂತಿ
ಮನೆಯಲ್ಲೇ ಉಳಿದು, ಕಡಿಮೆ ಬಜೆಟ್ ನಲ್ಲಿ ಬೆಟರ್ ರಿಸಲ್ಟ್ ಬಯಸಿದರೆ ಗೋಲ್ಡ್ ಬ್ಲೀಚ್ ಗಿಂತ ಉತ್ತಮ ಬೇರೊಂದಿಲ್ಲ. ಏಕೆಂದರೆ ಇದರಲ್ಲಿ ಕೆಲವು ವಿಶೇಷ ಘಟಕ ಅಡಗಿದ್ದು, ಚರ್ಮದ ಮೇಲೆ ಕ್ಲೆನ್ಸಿಂಗ್ ಕೆಲಸ ಮಾಡಿ, ಸ್ಕಿನ್ ಟ್ಯಾನಿಂಗ್ ರಿಮೂವ್ ಮಾಡಿ, ಡ್ಯಾಮೇಜ್ ಸ್ಕಿನ್ ನ್ನೂ ರಿಪೇರಿ ಮಾಡುತ್ತದೆ. ಜೊತೆಗೆ ಇದರಿಂದ ಚರ್ಮದ ಮೇಲೆ ಹೈಲೈಟ್ ಆಗುವ ಡಾರ್ಕ್ ಸ್ಪಾಟ್ಸ್ ಸಹ ಕವರ್ ಅಪ್ ಆಗುತ್ತದೆ. ಈ ಬ್ಲೀಚ್ ಕೆಲವೇ ನಿಮಿಷಗಳಲ್ಲಿ ನಿಮ್ಮ ಮುಖದಲ್ಲಿ ಹೆಚ್ಚಿನ ಕಾಂತಿ ತಂದು, ಈ ಬಾರಿಯ ದೀಪಾವಳಿ ಸ್ಮರಣೀಯ ಆಗಿಸುತ್ತದೆ.
ಸ್ಪೆಷಲ್ ಗ್ಲೋ
ದೀಪಾವಳಿಯಂಥ ದೊಡ್ಡ ಹಬ್ಬ ಎಂದ ಮೇಲೆ ಮುಖದಲ್ಲಿ ಸ್ಪೆಷಲ್ ಗ್ಲೋ ಇಲ್ಲದಿದ್ದರೆ ಹೇಗೆ? ಹೀಗಾಗಿ ಸ್ಪೆಷಲ್ ಗೋಲ್ಡನ್‌ಗ್ಲೋ ವಿತ್ 24 ಕ್ಯಾರೆಟ್ ಗೋಲ್ಡ್ ಡಸ್ಟ್ ಬ್ಲೀಚ್ ನಿಮಗೆ ಬಿಲ್ ಕುಲ್ ಅಪರಂಜಿ ಬಂಗಾರದ ಕಾಂತಿ ತಂದುಕೊಡಬಲ್ಲದು. ಏಕೆಂದರೆ ಇದರಲ್ಲಿನ ಗೋಲ್ಡ್ ಡಸ್ಟ್ ಒಂದು ದೊಡ್ಡ ಪ್ಲಸ್ ಪಾಯಿಂಟ್. ಇದು ಕೆಲವೇ ನಿಮಿಷಗಳಲ್ಲಿ ನಿಮ್ಮ ಚರ್ಮವನ್ನು ಬ್ರೈಟ್‌ಗ್ಲೋಯಿಂಗ್ ಮಾಡಿಬಿಡುತ್ತದೆ. ಜೊತೆಗೆ ಇದರಲ್ಲಿನ ಕೊಬ್ಬರಿ ಎಣ್ಣೆ ಚರ್ಮಕ್ಕೆ ಯಾವುದೇ ಅಲರ್ಜಿ ಆಗದಂತೆ ನೋಡಿಕೊಳ್ಳುತ್ತದೆ.
ಕಂಫರ್ಟ್ ಮುಖ್ಯ
ಮುಖ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಎಷ್ಟೊಂದು ಗಡಿಬಿಡಿ ಇರುತ್ತದೆ ಎಂದರೆ, ಹೆಂಗಸರು ತಮಗಾಗಿ ಒಂದಿಷ್ಟು ಟೈಂ ಮಾಡಿಕೊಳ್ಳುವುದು ಕಡುಕಷ್ಟ. ಶಾಪಿಂಗ್, ಮನೆಗೆ ಅತಿಥಿಗಳ ಆಗಮನ, ತಿಂಡಿಗಳ ತಯಾರಿ, ಗೃಹಾಲಂಕಾರ…. ಹೀಗೆ ಎಷ್ಟೋ ಕೆಲಸ ಇರುತ್ತದೆ. ಆದರೆ ಗೋಲ್ಡನ್ ಬ್ಲೀಚ್ ಪ್ಯಾಕ್ ಮನೆಯಲ್ಲಿದ್ದರೆ, ನಿಮ್ಮ ಸಮಯಾವಕಾಶ, ಸೌಲಭ್ಯ ನೋಡಿಕೊಂಡು ಬೇಕೆನಿಸಿದಾಗ ಇದನ್ನು ಮುಖಕ್ಕೆ ಹಚ್ಚಿ ಗ್ಲೋ ಪಡೆದುಕೊಳ್ಳಬಹುದು. ಇದರಿಂದ ಪಾರ್ಲರ್ ನ ಜಂಜಾಟ ತಪ್ಪುವುದಲ್ಲದೆ, ಉತ್ತಮ ಗುಣಮಟ್ಟದ ಪ್ರಾಡಕ್ಟ್ ಬಳಸುವುದರಿಂದ ಚರ್ಮಕ್ಕೆ ಯಾವ ಹಾನಿಯೂ ಇಲ್ಲ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಇಂಥ ಕ್ವಾಲಿಟಿ ಪ್ರಾಡಕ್ಟ್ ಖಂಡಿತಾ ಡರ್ಮಟಾಲಜಿಕಲಿ ಟೆಸ್ಟೆಡ್ ಆಗಿರುತ್ತದೆ.
ಈಝಿ ಟು ವರ್ಕ್
ಇಂಥ ಗೋಲ್ಡ್ ಬ್ಲೀಚ್ ಪ್ಯಾಕ್, ಅಮೋನಿಯಾ ಫ್ರೀ ಆಗಿರುವುದರಿಂದ ನಿಮ್ಮ ಚರ್ಮಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಚರ್ಮನ್ನು ಲೈಟ್‌ಬ್ರೈಟ್ ಮಾಡುವ ಹೊಣೆ ಹೊರುತ್ತದೆ. ಇದು ಚರ್ಮದ ಮೇಲ್ಪದರದಲ್ಲಿನ ಡೆಡ್ ಸೆಲ್ಸ್ ತೊಲಗಿಸಿ, ಪಿಗ್ಮೆಂಟೇಶನ್ ಉಂಟು ಮಾಡುವ ಸೆಲ್ಸ್ ಮತ್ತೆ ರೀಜನರೇಟ್ ಆಗದಂತೆ ತಡೆಯುತ್ತದೆ. ಎಲ್ಲಕ್ಕೂ ಹೆಚ್ಚಿನ ಪಿಗ್ಮೆಂಟೇಶನ್‌ಶ್ಯಾಮಲ ಸೌಂದರ್ಯವುಳ್ಳವರನ್ನು ಕಾಡುತ್ತದೆ. ಜೊತೆಗೆ ಮಾಲಿನ್ಯ, ಸೂರ್ಯನ UV ಕಿರಣಗಳು, ಕೆಮಿಕಲ್ಸ್ ಪ್ರಭಾವದಿಂದಾಗಿ ಚರ್ಮದಲ್ಲಿ ಅಧಿಕ ಮೆಲನಿನ್ ಉತ್ಪಾದನೆ ಶುರುವಾಗುತ್ತದೆ. ಆದರೆ ಬ್ಲೀಚ್ ಬಳಕೆಯಿಂದ ಇದು ಚರ್ಮದಲ್ಲಿನ ಮೆಲನೋ ಕೀಟ್ಸ್ ಸಂಖ್ಯೆಯನ್ನು ಎಷ್ಟೋ ತಗ್ಗಿಸುತ್ತದೆ. ಇದರಿಂದ ಚರ್ಮ ಸಹಜವಾಗಿ ಹೆಚ್ಚಿನ ಕಾಂತಿ ಗಳಿಸುತ್ತದೆ.
ಬ್ಲೀಚ್ ಏಕೆ ಬೇಕು?
ಹೆಚ್ಚಿನ ಕಾಂತಿ : ನೀವು ಎಂಥ ಉತ್ತಮ ಉಡುಗೆ ಧರಿಸಿದ್ದರೂ ಸಹ, ಮುಖದಲ್ಲಿ ಸಹಜ ಕಾಂತಿ ಇಲ್ಲದಿದ್ದರೆ, ಎಲ್ಲ ಕಳಾಹೀನ ಎನಿಸುತ್ತದೆ. ಆದರೆ ಈ ಬ್ಲೀಚ್ ಮುಖದಲ್ಲಿನ ಎಲ್ಲಾ ಟ್ಯಾನಿಂಗ್ ನ್ನೂ ನಿಮಿಷಗಳಲ್ಲೇ ನಿವಾರಿಸಿ, ಮುಖದಲ್ಲಿ ಇನ್ ಸ್ಟೆಂಟ್ ಗ್ಲೋ ತಂದುಕೊಡುತ್ತದೆ.
ಫೇಶಿಯಲ್ ಹೇರ್ ನ್ನು ಮರೆಮಾಚಲು : ಇತ್ತೀಚೆಗೆ ಎಲ್ಲರಿಗೂ ಹಾರ್ಮೋನ್ ಇಂಬ್ಯಾಲೆನ್ಸ್ ಮಾಮೂಲಿ ಆಗಿದೆ. ಈ ಕಾರಣದಿಂದ ಮುಖದಲ್ಲಿ ಅನಗತ್ಯ ಕೂದಲು ಮೂಡುತ್ತದೆ. ಹೀಗಿರುವಾಗ ಬ್ಲೀಚ್ ಇಂಥ ಕೂದಲನ್ನು ಮರೆಮಾಚಿ, ನಿಮ್ಮನ್ನು ಥ್ರೆಡಿಂಗ್ ನೋವಿನ ಪ್ರಕ್ರಿಯೆಯಿಂದ ದೂರವಿರಿಸಿ, ನಿಮ್ಮ ಸೌಂದರ್ಯ ಇಮ್ಮಡಿಸುತ್ತದೆ.
ಪಿಗ್ಮೆಂಟೇಶನ್ ತಗ್ಗಿಸಲು : ಧೂಳು ಮಣ್ಣು, ಮಾಲಿನ್ಯ, ಸೂರ್ಯನ UV ಕಿರಣ ಇತ್ಯಾದಿಗಳಿಂದಾಗಿ ಚರ್ಮ ನಿರ್ಜೀವ ಆಗುತ್ತದೆ, ಆಗ ಪಿಗ್ಮೆಂಟೇಶನ್ ಸಮಸ್ಯೆ ಸಹಜವಾಗಿ ಹೆಚ್ಚುತ್ತದೆ. ಹೀಗಾಗಿ ಬ್ಲೀಚ್ ಡೆಡ್ ಸ್ಕಿನ್ ತೊಲಗಿಸಿ, ಚರ್ಮವನ್ನು ಹೆಚ್ಚು ಕಾಂತಿಯುತಗೊಳಿಸುತ್ತದೆ.
ಸಮಯ ಹಣದ ಉಳಿತಾಯ : ನೀವು ಮನೆಯಲ್ಲೇ ಕುಳಿತು ಈ ಬ್ಲೀಚಿಂಗ್ ಕಾರ್ಯಕ್ರಮ ನಡೆಸುವುದರಿಂದ, ಪಾರ್ಲರ್ ಗೆ ಬಳಸುವ ಹಣ, ಸಮಯ ಎರಡೂ ಉಳಿದು ಸೋಂಕಿನ ಬಾಧೆ ತಪ್ಪಿ ಆರೋಗ್ಯ ವರ್ಧಿಸುತ್ತದೆ.
ಬ್ಲೀಚ್ ಬಳಸುವುದು ಹೇಗೆ?
ನೀವು ಯಾವಾಗ ಮುಖಕ್ಕೆ ಬ್ಲೀಚ್ ಬಳಸಿದರೂ, ಅದಕ್ಕೆ ಮೊದಲು ಮುಖವನ್ನು ಉತ್ತಮ ಕ್ಲೆನ್ಸರ್ ನಿಂದ ಶುಚಿಗೊಳಿಸಿ.
ನೀವು ಮೊದಲ ಸಲ ಬ್ಲೀಚ್ ಬಳಸುತ್ತಿರುವಿರಾದರೆ, ಎಲ್ಲಕ್ಕೂ ಮೊದಲು ಪ್ಯಾಚ್ ಟೆಸ್ಟ್ ಮಾಡಿಸಿ.
ಒಂದು ಬಟ್ಟಲಿಗೆ 1 ಸಣ್ಣ ಚಮಚ ಕ್ರೀಂ, ಅದರ ಕಾಲು ಭಾಗದಷ್ಟು ಬ್ಲೀಚ್ ಪೌಡರ್ ಸೇರಿಸಿ ಎರಡನ್ನೂ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ನಂತರ ಇದನ್ನು ನಿಮ್ಮ ಮುಖ, ಕುತ್ತಿಗೆಗೆ ಸವರಿಕೊಂಡು, 15 ನಿಮಿಷ ಹಾಗೇ ಬಿಡಿ. ಇದನ್ನು ಹಚ್ಚುವಾಗ ಮುಖದ ಮೇಲೆ ಪದರ ಪದರವಾಗಿ ಬರುವಂತೆ ಹಚ್ಚದಿರಿ. 15 ನಿಮಿಷ ಬಿಟ್ಟು, ಹತ್ತಿ ಬಳಸಿ ಕ್ಲೀನ್ ಮಾಡಿ, ತಣ್ಣೀರಿನಿಂದ ತೊಳೆಯಿರಿ.
ಡರ್ಮಟಾಲಜಿಕಲಿ ಟೆಸ್ಟೆಡ್ ಆಗಿರುವ ಬ್ಲೀಚ್ ಪ್ಯಾಕ್ ಮಾತ್ರ ಬಳಸಿರಿ. ಅಂಥದ್ದರ ಬಳಕೆ ಸೇಫ್. ಇದು ಎಲ್ಲಾ ಬಗೆಯ ಚರ್ಮಕ್ಕೂ ಸೂಟ್ ಆಗುತ್ತದೆ. ಇದರಿಂದ ಚರ್ಮಕ್ಕೆ ಯಾವುದೇ ಅಲರ್ಜಿ, ಉರಿ, ನವೆ, ಕಡಿತ ಆಗುವುದಿಲ್ಲ. ಹೀಗಾಗಿ ಈ ಸಲದ ದೀಪಾವಳಿಗೆ ಉತ್ತಮ ಕ್ವಾಲಿಟಿಯ ಗೋಲ್ಡ್ ಬ್ಲೀಚ್ ಬಳಸಬಾರದೇಕೆ?
– ಪ್ರತಿನಿಧಿ