ವಿಭಿನ್ನತೆಯ ಏಕತೆ ಎಂಬುದೇ ನಮ್ಮ ದೇಶದ ವೈಶಿಷ್ಟ್ಯ. ಇಲ್ಲಿ ವಿವಿಧ ಪ್ರಕಾರದ ಜಾತಿ, ಧರ್ಮಗಳ ಜನ ಒಂದಾಗಿ ಬೆರೆತು ಅವರವರ ನಂಬಿಕೆಯ ಪ್ರಕಾರ ಹಬ್ಬಗಳನ್ನು ಆಚರಿಸುತ್ತಾರೆ. `ಪರವಧರ್ಮ ಸಹಿಷ್ಣುತೆ'ಯೇ ಹಿಂದೂ ಧರ್ಮದ ಮೂಲೋದ್ದೇಶ. `ಸುದೈವ ಕುಟುಂಬಕಂ' ಎಂಬ ಗೀತಾ ನಾಣ್ಣುಡಿಯೊಂದಿಗೆ ಇಡೀ ವಿಶ್ವದ ಎಲ್ಲಾ ಧರ್ಮಗಳೂ ಇಲ್ಲಿ ಮಾನ್ಯ, ಎಲ್ಲರೂ ಒಂದೇ ಎಂಬ ಭಾವ.

ಹೀಗಾಗಿ ಯಾವ ಧರ್ಮ, ಪಂಥದವರೇ ಇರಲಿ, ತಮ್ಮಲ್ಲಿನ ಹಬ್ಬಕ್ಕೆ ಇತರ ಎಲ್ಲಾ ಧರ್ಮೀಯರನ್ನೂ ಕರೆಸಿ ಆದರಿಸಿ, ಸತ್ಕರಿಸುವುದು ನಮ್ಮ ದೇಶದ ದೊಡ್ಡ ಸುಸಂಸ್ಕಾರ ಎಂದೇ ಹೇಳಬೇಕು. ಎಲ್ಲರೂ ಕೂಡಿ ಮೋಜುಮಸ್ತಿಯಿಂದ ಆಹಾರ ವಿಹಾರಗಳಲ್ಲಿ ಪಾಲ್ಗೊಂಡಾಗ ಹೊಟ್ಟೆಯ ಪಥ್ಯದ ಕಡೆ ಯಾರ ಗಮನ ಹರಿದೀತು? ಎಲ್ಲರೂ ಒಟ್ಟಾಗಿ ಒಂದೆಡೆ ತಿಂದುಂಡು, ಮಜಾ ಉಡಾಯಿಸುವುದು ಮಹಾ ಸಂಭ್ರಮವೇ ಸರಿ. ಇದರ ಅತಿ ದೊಡ್ಡ ಪ್ರಯೋಜನ ಎಂದರೆ ಸಾಮಾಜಿಕ ಸಂಘಟನೆ, ಒಗ್ಗಟ್ಟು, ಐಕ್ಯತಾ ಮನೋಭಾವದ ಹೆಚ್ಚಳ. ಇದರಿಂದ  ಮಾನಸಿಕ ಸ್ವಾಸ್ಥ್ಯ ವರ್ಧಿಸಿ, ಸಾಮಾಜಿಕ ಕಳಕಳಿ ಮಹತ್ವಪೂರ್ಣ ತಿರುವು ಪಡೆಯುತ್ತದೆ.

ಹಬ್ಬಗಳು ಅಂದ ಮೇಲೆ ಕೇಳಬೇಕೇ? ಧಾರಾಳ ತುಪ್ಪ, ಬೆಣ್ಣೆ, ಸಕ್ಕರೆ, ಬೆಲ್ಲ, ಮೈದಾ, ದಾರಾಪೂರ, ಡಾಲ್ಡಾ, ಹಿಟ್ಟುಗಿಟ್ಟು ಎಲ್ಲಾ ಬೆರೆತು ಹುರಿದ, ಕರಿದ, ಮಸಾಲೆಭರಿತ ತಿಂಡಿ ತಿನಿಸುಗಳ ವೈಭೋಗ ಹೇಳತೀರದು. ದಂಡಿಯಾಗಿ ರಜೆ ಇರುವ ಹಬ್ಬಗಳ ಸಂದರ್ಭದಲ್ಲಿ ಹೀಗೆ ಧಾರಾಳ ತಿಂದುಡು, ಆರಾಮವಾಗಿ ಮಲಗಿಬಿಟ್ಟರೆ ಹೊಟ್ಟೆ ಕೆಡದೆ ಇನ್ನೇನಾದೀತು? ಇಂಥ ಸಂದರ್ಭದಲ್ಲಿ ಆರೋಗ್ಯಕರ ಪೌಷ್ಟಿಕ ಆಹಾರದ ಬದಲು ಸಿಕ್ಕಿದ್ದನ್ನು ತಿಂದು ತೇಗುತ್ತೇವೆ. ಹೀಗಾಗಿ ನಮ್ಮ ದೇಹಕ್ಕೆ ಅತ್ಯಧಿಕ ಕ್ಯಾಲೋರಿಗಳ ಸಂಗ್ರಹವಾಗುತ್ತದೆ.

ಅಧಿಕ ಕ್ಯಾಲೋರಿಯುಕ್ತ ಆಹಾರ ಸೇವನೆ ಎಂದರೆ ಅಧಿಕ ಫ್ಯಾಟ್ಸ್, ಶುಗರ್‌, ಅತ್ಯಧಿಕ ಕಾನ್ ಸನ್ಟ್ರೇಟೆಡ್‌ ಕೂಲ್ ‌ಡ್ರಿಂಕ್ಸ್, ಅಧಿಕ ಉಪ್ಪಿನ ಅಂದ್ರೆ ಸೋಡಿಯಂ ತುಂಬಿದ ಆಹಾರಗಳಿಂದ ದೇಹ ರೋಗದ ತಯಾರಾಗುತ್ತದೆ. ಹೀಗಾಗಿ ನಮಗೆ ದೇಹ ತೂಕ ಹೆಚ್ಚುದು, ಅಜೀರ್ಣದ ಸಮಸ್ಯೆ, ಅಸಿಡಿಟಿ, ಗ್ಯಾಸ್ಟ್ರಿಕ್‌ ಟ್ರಬಲ್‌, ಮಲಬದ್ಧತೆ, ದೇಹದಲ್ಲಿ ನೀರಿನ ಕೊರತೆ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿರುತ್ತವೆ.

ಹಬ್ಬಗಳ ಗಡಿಬಿಡಿ ಮುಗಿದ ನಂತರ ದೇಹ ತೂಕ ಇಳಿಸುವ ಯೋಜನೆಗಳು ಶುರುವಾಗುತ್ತವೆ. ಈ ಟೆನ್ಶನ್‌ ಕಾರಣ ಹಸಿವಿನ ಅನುಭವ ಹೆಚ್ಚಿಸುವ ಹಾರ್ಮೋನ್ಸ್ ಹೆಚ್ಚು ಸ್ರವಿಸಲ್ಪಡುತ್ತದೆ. ಹೀಗಾಗಿ ಮುಂದಿನ ಹಬ್ಬಗಳಲ್ಲಿ ಇಂಥ ಸಮಸ್ಯೆ ಬಾರದಿರಲು ಈ ಸಲಹೆಗಳನ್ನು ಅನುಸರಿಸಿ :

ಬರಿ ಹೊಟ್ಟೆಯಲ್ಲಿ ಇರಬೇಡಿ

ದಿನದ ಆರಂಭ ಆರೋಗ್ಯಪೂರ್ಣ ಬ್ಯಾಲೆನ್ಸ್ಡ್ ಆಗಿರಲು ನಿಮ್ಮ ಬ್ರೇಕ್‌ ಫಾಸ್ಟ್ ನಲ್ಲಿ ಇಡಿಯಾದ ಧಾನ್ಯ, ಮೊಳಕೆಕಾಳು, ಲೋ ಫ್ಯಾಟ್‌, ಪ್ರೋಟೀನ್‌, ಹಸಿ ತರಕಾರಿ, ಹಣ್ಣು ಹಂಪಲು ಇತ್ಯಾದಿಗಳನ್ನು ಸೇವಿಸಿ. ಯಾರನ್ನೇ ಭೇಟಿ ಆಗಲು ಹೋದರೂ ತೀರ ಖಾಲಿ ಹೊಟ್ಟೆಯಲ್ಲಿ  ಹೊರಡಬೇಡಿ. ಫೆಸ್ಟಿವ್ ಟ್ರೀಟ್‌ ನೆಪದಲ್ಲಿ ಕಂಡದ್ದನ್ನು ತಿಂದು ಹೊಟ್ಟೆ ಗುಡಾಣ ಆಗಿಸಬೇಡಿ.

ಭಾರೀ ವ್ಯಂಜನಗಳ ರುಚಿಗೆ ಮನಸೋತು ನಾವು 1 ತಿನ್ನುವ ಕಡೆ 2-3 ತಿಂದುಬಿಡುತ್ತೇವೆ. ಈ ಹುರಿದ ಕರಿದ ತಿಂಡಿಗಳ ಸೇವನೆಯಿಂದ ನಾವು ಸಮಯಕ್ಕೆ ಸರಿಯಾಗಿ ಊಟ ಮಾಡದೆ ಅದನ್ನು ತಪ್ಪಿಸುತ್ತೇವೆ. ಊಟ ಮಾಡಲಿಲ್ಲವಲ್ಲ ಅನ್ನುವ ನೆಪ ಮಾಡಿಕೊಂಡು, ಈ ಹಾಳುಮೂಳನ್ನೇ ಅತ್ಯಧಿಕ ತಿಂದುಬಿಡುತ್ತೇವೆ. ಅಂದರೆ ಓವರ್‌ ಈಟಿಂಗ್‌ ಆಗುತ್ತದೆ. ಖಾಲಿ ಹೊಟ್ಟೆಯ ಕಾರಣ ಸ್ಯಾರೋಟ್ಯಾನಿನ್‌ ಲೆವೆಲ್ ‌ಬಿದ್ದುಹೋಗುತ್ತದೆ. ಹೀಗಾಗಿ ನಾವು ಏನನ್ನೂ ತಿನ್ನದೆ ಬಹಳ ಹೊತ್ತು ಹಾಗೇ ಇದ್ದುಬಿಟ್ಟರೆ, ಸಹಜವಾಗಿ ಸ್ಟ್ರೆಸ್‌ ಹೆಚ್ಚುತ್ತದೆ. ಹೀಗಾಗಿ ಏನಾದರೂ ಸಿಹಿ, ಕುರುಕಲು, ಸಮೋಸಾ, ಬಜ್ಜಿ ಇತ್ಯಾದಿ ತಿನ್ನುತ್ತಾ ಟೈಂಪಾಸ್ ಮಾಡಿಬಿಡುತ್ತೇವೆ. ಈ ರೀತಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸಾಮಗ್ರಿ ಹೊಟ್ಟೆಗೆ ಇಳಿದಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ