ಭಾರತೀಯ ಹಬ್ಬಗಳಿಗೆ ಸುರಸುಂದರ ಸೀರೆಗಳು ಇಲ್ಲದಿದ್ದರೆ ಹೇಗೆ? ಅದರಲ್ಲೂ ನಮ್ಮ ಯುಗಾದಿ, ದೀಪಾವಳಿ, ನವರಾತ್ರಿಗಳಂಥ ಸಾಂಪ್ರದಾಯಿಕ ಹಬ್ಬಗಳಿಗೆ ಸೀರೆಯ ಅಲಂಕಾರವೇ ಸೊಗಸು. ಭಾರತೀಯ ಹೆಣ್ಣಿನ ಶೃಂಗಾರಕ್ಕೆ ಸೀರೆಗಿಂತ ಉತ್ಕೃಷ್ಟವಾದ ಡ್ರೆಸ್‌ ಬೇರೊಂದಿಲ್ಲ. ಇದು ಹಬ್ಬ, ಹರಿದಿನ, ಯಾವುದೇ ಶುಭ ಸಮಾರಂಭಕ್ಕೂ ಹೆಚ್ಚಿನ ಕಳೆಗಟ್ಟುತ್ತದೆ. ಸೀರೆಗಳು ಬೇರೆ ಬೇರೆ ಬಣ್ಣ, ಫ್ಯಾಬ್ರಿಕ್ಸ್ ನಲ್ಲಿ ಲಭ್ಯ. ಹೆಚ್ಚಿನ ಕಸೂತಿ, ಮಿರರ್‌ ವರ್ಕ್‌ ಇರುವ ಸೀರೆಗಳು, ತುಸು ದುಬಾರಿಯೂ ಹೌದು. ನಿಮಗೆ ಎಂಥ ಸೀರೆ ಬೇಕು ಎಂಬುದನ್ನು ಅದು ಯಾವ ಸಂದರ್ಭ, ಋತು, ಕಂಫರ್ಟ್‌ ಇತ್ಯಾದಿಗಳನ್ನು ಆಧರಿಸಿ ಆರಿಸಿಕೊಳ್ಳಿ. ಸೀರೆ ಉಡುವುದರಿಂದ ನೀವು ಹೆಚ್ಚು ಟ್ರೆಡಿಶನಲ್ ಆಗಿ ಕಾಣಿಸುವುದು ಮಾತ್ರವಲ್ಲದೆ, ಸೀರೆ ಒಂದು ಸ್ಟೈಲಿಶ್‌, ಫ್ಯಾಷನೆಬಲ್ ಅಟೈರ್‌ ಎಂಬುದೂ ನಿಜ. ಇದರಲ್ಲಿ ಯಾವ ಹೆಣ್ಣಾದರೂ ಸರಿ, ಬಲು ಸುಂದರವಾಗಿ ಕಂಡುಬರುತ್ತಾಳೆ. ಸದ್ಯದ ಬದಲಾಗುತ್ತಿರುವ ಫ್ಯಾಷನ್‌ ಗೆ ತಕ್ಕಂತೆ ಸೀರೆಗಳು ಸದಾ ಇನ್‌ಔಟ್‌ ಎನಿಸುತ್ತವೆ. ಹೀಗಿರುವಾಗ ನೀವು ಎಂಥ ಸೀರೆ ಆರಿಸಿಕೊಳ್ಳುತ್ತೀರಿ ಎಂಬುದು ಬಲು ಮುಖ್ಯ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಡಿಸೈನರ್‌ ಸೀರೆಗಳು ಲಭ್ಯ. ಆದರೆ ಪ್ರತಿ ಋತು, ಪ್ರತಿ ಸಂದರ್ಭಕ್ಕೂ ಹೊಂದುವಂಥ ಸೀರೆ ಸಿಕ್ಕಿದರೆ ಬಲು ಸೊಗಸು! ಇಲ್ಲಿ ನಿಮಗಾಗಿ ಅಂಥ ಎರ್‌ ಫ್ಯಾಷನೆಬಲ್ ಸೀರೆಗಳ ಬಗ್ಗೆ ಮಾಹಿತಿ ಇದೆ. ಇದರಿಂದ ನೀವು ಎಲ್ಲಿದ್ದರೂ ಮಿಂಚಿಂಗೋ ಮಿಂಚಿಂಗ್‌!

ಆರ್ಗೆಂಜಾ ಸೀರೆ

ಇದು ಇತ್ತೀಚೆಗೆ ಬಲು ಹೆಚ್ಚಿನ ಟ್ರೆಂಡ್‌ ನಲ್ಲಿದೆ. ಆದರೂ ಇದು ಬಲು ಹಳೆಯ ದಿನಗಳಿಂದಲೂ ಚಾಲನೆಯಲ್ಲಿದೆ. ಈ ಸೀರೆ ಬಲು ಆಕರ್ಷಕ, ಹೊಳೆ ಹೊಳೆಯುವಂಥ ಲೈಟ್‌ಮೆಟೀರಿಯಲ್ ನದಾಗಿದೆ. ಇದು ಹಗರುವಾಗಿರುತ್ತದೆ, ಉಟ್ಟಾಗ ಭಾರ ಎನಿಸುವುದಿಲ್ಲ. ಇದರ ಫ್ಯಾಬ್ರಿಕ್‌ ತುಸು ಜಾರುತ್ತದೆ ಎಂಬುದೇನೋ ನಿಜ, ಆದರೆ ಇದು ಎವರ್‌ ಗ್ರೀನ್‌ ಡಿಮ್ಯಾಂಡ್‌ ಹೊಂದಿದೆ. ನಿಮ್ಮ ವಾರ್ಡ್ ರೋಬ್‌ ನಲ್ಲಿ ಅಕಸ್ಮಾತ್‌ ಇದು ಮಿಸ್ಸಾಗಿದ್ದರೆ, ಇಂದೇ ಒಂದನ್ನು ಖರೀದಿಸಿ!

Sadi-2

ನೆಟ್ಸೀರೆ

ಇಂಥ ನೆಟ್‌ ಸೀರೆ ಬೇಡ ಎನ್ನುವ ಹೆಣ್ಣು ಉಂಟೇ? ಕಾಕ್‌ ಟೇಲ್ ಪಾರ್ಟಿ ಯಾ ಶುಭ ಸಮಾರಂಭ, ಎಲ್ಲದಕ್ಕೂ ಇದು ಅಚ್ಚುಕಟ್ಟಾಗಿರುತ್ತದೆ. ಅದರಲ್ಲೂ ಮುಖ್ಯಾಗಿ ಡಾರ್ಕ್‌ ಕಲರ್‌ ಯಾ ಬ್ಲ್ಯಾಕ್‌ ನೆಟೆಡ್‌ ಸೀರೆ ಬಲು ಬ್ಯೂಟಿಫುಲ್! ಆದಷ್ಟು ಬೇಗ ಇದನ್ನು ಖರೀದಿಸಿ.

Sadi-3

ಪ್ಲೇರ್ಎಂಬ್ರಾಯಿಡರಿ ಸೀರೆ

ಈ ಸೀರೆಯಂತೂ ಯಾವುದೇ ಮಾಸ್ಟರ್‌ ಪೀಸ್‌ ಗೆ ಕಡಿಮೆ ಇಲ್ಲ. ಬೇರೆ ಬೇರೆ ತರಹದ ಡಿಸೈನ್‌ ಪ್ಯಾಟರ್ನ್‌ ನಲ್ಲಿ ಇದು ಸುಲಭವಾಗಿ ಮಾರ್ಕೆರ್ಟ್‌ ನಲ್ಲಿ ಲಭ್ಯ. ಇದನ್ನು ಯಾವುದೇ ತರಹದ ಫಂಕ್ಷನ್‌ ಗೂ ಬಳಸಿಕೊಳ್ಳಬಹುದು. ಸೀರೆಗಳಲ್ಲಿ ಲಭ್ಯವಿರುವ ಹೊಸ ಹೊಸ ಡಿಸೈನ್‌ ಗಳಲ್ಲಿ ಈ ಪ್ಲೇರ್‌ ಎಂಬ್ರಾಯಿಡರಿ ಸೀರೆಗಳೇ ಪ್ರಧಾನ. ನೀವು ಮುಂದಿನ ನಿಮ್ಮ ಗ್ರಾಂಡ್ ಫಂಕ್ಷನ್‌ ಗಾಗಿ ಸೀರೆ ಕೊಳ್ಳಬೇಕೇ? ಇಂಥ ಒಂದನ್ನು ಆರಿಸಿಕೊಳ್ಳಲು ಮರೆಯದಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ