ಸ್ಯಾಂಡಲ್​ವುಡ್​ನ ಸೂಪರ್​ ​ ಹಿಟ್​ ಸಿನಿಮಾ ಕಾಂತಾರ ಚಾಪ್ಟರ್ 1 ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬಂದರೂ ತನ್ನ ನಾಗಾಲೋಟ ಮುಂದುವರಿಸಿದೆ. ಇದರ ನಡುವೆ ಹೊಂಬಾಳೆ ಸಂಸ್ಥೆ ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ ಮಾಯಕಾರನಾಗಿ ಕಾಣಿಸಿಕೊಂಡಿದ್ದು ಹೇಗೆ..? ಈ ಪಾತ್ರದ ಹಿಂದಿನ ಪರಿಶ್ರಮ ಹೇಗಿತ್ತು ಎಂಬುದನ್ನು ತೋರಿಸಿದೆ.

ರಿಷಬ್ ಶೆಟ್ಟಿಗೆ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೆಸರು ತಂದುಕೊಟ್ಟದ್ದು ಕಾಂತಾರ ಚಿತ್ರ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕರೂ, ನಿರ್ದೇಶಕರೂ ಹೌದು. ಅಲ್ಲದೆ ಈ ಚಿತ್ರದಲ್ಲಿ ಅವರು ಎರಡು ಪಾತ್ರಗಳನ್ನು ಮಾಡಿದ್ದಾರೆ. ಕಾಡುಬೆಟ್ಟು ಶಿವನ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಶಿವನ ಅಪ್ಪ ಅಣ್ಣಪ್ಪನ ರೋಲ್ ಕೂಡ ಇವರೇ ಮಾಡಿದ್ದಾರೆ. ಅನೇಕರಿಗೆ ಆ ಪಾತ್ರವನ್ನು ಮಾಡಿದ್ದು ರಿಷಬ್ ಅವರೇ ಎಂಬ ಗೊತ್ತಾಗುವುದೇ ಇಲ್ಲ.ಸದ್ಯ ಚಿತ್ರತಂಡದವರೇ ವಿಡಿಯೋ ರಿಲೀಸ್ ಮಾಡಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತಿದ್ದಾರೆ. ಕಾಂತಾರ ಚಾಪ್ಟರ್ 1 ಆರಂಭದಲ್ಲಿ ಹಾಗೂ ಕ್ಲೈಮ್ಯಾಕ್ಸ್​ನಲ್ಲಿ ಒಂದು ಪಾತ್ರ ಬರುತ್ತೆ. ಅದುವೇ ಮಾಯಕಾರ ರಿಷಬ್​​ಗೆ ಸಹಾಯ ಮಾಡುವ ಪಾತ್ರ. ಇದನ್ನು ಮಾಡಿದ್ದು ಯಾರು ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಲ್ಲ. ಈಗ ಸಿನಿಮಾ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹೊಂಬಾಳೆ ಈ ವಿಶೇಷ ವಿಡಿಯೋವನ್ನು ಹಂಚಿಕೊಂಡಿದೆ.

ರಿಷಬ್ ಶೆಟ್ಟಿ ಸೆಟ್​ಗೆ ಬೆಳಿಗ್ಗೆ 3 ಗಂಟೆಗೆ ಎದ್ದು ಬರ್ತಿದ್ರು. ನಂತರ ಸುಮಾರು ಆರು ಗಂಟೆಗಳ ನಿರಂತರ ಪರಿಶ್ರಮದೊಂದಿಗೆ ರಿಷಬ್ ಮಾಯಕಾರನಾಗಿ ಬದಲಾಗುತ್ತಾರೆ. ಅದೆಷ್ಟು ಬದಲಾಗಿದ್ದರು ಎಂದರೆ ರಿಷಬ್ ಎಂದು ಗುರುತಿಸಲೂ ಸಾಧ್ಯವಾಗದಷ್ಟು. ಈಗ ಈ ವಿಡಿಯೋ ನೋಡಿದ ಬಳಿಕ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ರಿಷಬ್ ತೋರಿದ ಸಮರ್ಪಣೆ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಯಕಾರನಾಗಿ ಬೇರೆ ಕಲಾವಿದ ಅಭಿನಯಿಸಬಹುದಿತ್ತು ಆದರೆ, ಈ ಪಾತ್ರವನ್ನು ರಿಷಬ್ ಮಾಡಿದ್ದು ತೂಕ ಹೆಚ್ವಿಸಿದೆ.

ಈ ಪಾತ್ರಕ್ಕೆ ಟೆಕ್ನಾಲಜಿ ಟಚ್ ಇದೆ. ಹಾಗಾಗಿಯೇ ದೇಹದ ತೂಕ ಸಂಪೂರ್ಣವಾಗಿ ಇಳಿದು ಹೋಗಿದೆ. ಸಡನ್ ಆಗಿ ಇವರು ರಿಷಬ್ ಅಂತ ಗೊತ್ತಾಗುವುದೇ ಇಲ್ಲ.  ಇನ್ನು ಕಾಂತಾರ 1 ಚಿತ್ರಕ್ಕಾಗಿ ರಿಷಬ್ ಶೆಟ್ರು ಟೀಮ್ ಮೂರು ವರ್ಷ ಕೆಲಸ ಮಾಡಿದೆ. ಸಾವಿರಕ್ಕೂ ಹೆಚ್ಚು ಜನ ಈ ಚಿತ್ರಕ್ಕೆ ದುಡಿದಿದ್ದಾರೆ. ಸಾಕಷ್ಟು ಶ್ರಮದ ಫಲವೇ ಕಾಂತಾರ ಚಾಪ್ಟರ್​ 1 ಚಿತ್ರ ರೆಡಿ ಆಗಿದೆ.

ಕಾಂತಾರ  ಚಾಪ್ಟರ್ 1 ರಿಲೀಸ್ ಆಗಿ 25 ದಿನಗಳು ಕಳೆದಿವೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 850 ಕೋಟಿ ಕಲೆಕ್ಷನ್ ಮಾಡಿದೆ. ಸದ್ಯದಲ್ಲೇ 1000 ಕೋಟಿ  ಗಳಿಕೆ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ