ಜಾಗೀರ್ದಾರ್*

ಪ್ರತಿಯೊಂದು ಸಿನಿಮಾದಲ್ಲೂ ನಿರ್ದೇಶಕ ಸಿಂಪಲ್ ಸುನಿ ಅವರು ಡಿಫರೆಂಟ್ ಕಥಾವಸ್ತುವನ್ನು ಪ್ರೇಕ್ಷಕರ ಮುಂದಿಡುತ್ತಾರೆ. ಈಗ ಅವರು ‘ಗತವೈಭವ’ ಚಿತ್ರದ ಮೂಲಕ ಫ್ಯಾಂಟಸಿ ಮೈಥಾಲಜಿ ರೋಮ್ಯಾಂಟಿಕ್ ಲವ್ ಸ್ಟೋರಿ ಹೇಳೋದಿಕ್ಕೆ ಹೊರಟಿದ್ದಾರೆ. ನವ ಪ್ರತಿಭೆ ದುಶ್ಯಂತ್ ನಾಯಕನಾಗಿ ಆಶಿಕಾ ರಂಗನಾಥ್ ನಾಯಕಿ ಯಾಗ ಅಭಿನಯಿಸಿದ್ದಾರೆ. ಈಗಾಗಲೇ ತನ್ನ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ನವೆಂಬರ್‌ 14ಕ್ಕೆ ತೆರೆಗೆ ಬರ್ತಿದೆ. ಸದ್ಯ ಗತವೈಭವ ಚಿತ್ರದ ಪ್ರಚಾರ ಕೆಲಸ ಭರದಿಂದ ಸಾಗಿದ್ದು, ಅದರ ಭಾಗವಾಗಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶಿಪ್ ಸಾಂಗ್ ನ್ನು ಶಿವಣ್ಣ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಹಾಡು ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ, ಗತವೈಭವ ಶೂಟಿಂಗ್ ಸೆಟ್ ಗೆ ಒಮ್ಮೆ ಹೋಗಿದ್ದೆ. ತುಂಬಾ ಇಷ್ಟವಾಗಿತ್ತು. ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಿದ್ದರೂ ಸಿನಿಮಾ ನೋಡುವಾಗ ಅದು ದೊಡ್ಡದಾಗಿ ಕಾಣಿಸುತ್ತದೆ.‌ ಅವರ ಚಿತ್ರಗಳಲ್ಲಿ ಕಮರ್ಷಿಯಲ್, ಜೀವನದ ಮೌಲ್ಯ, ಮೇಕಿಂಗ್, ಇಂದಿನ ಟ್ರೆಂಡ್ ಗೆ ತಕ್ಕಂತೆ ಅಚ್ಚುಕಟ್ಟಾಗಿ ಮಾಡುತ್ತಾರೆ. ಒಬ್ಬ ಅಣ್ಣನಾಗಿ ಅವರ ಸಿನಿಮಾ ಹಿಟ್ ಆಗಲಿ. ಮನೋಹಕ ಸಿನಿಮಾ ಆಗುತ್ತದೆ. ಅದು ಅಮೇಜಿಂಗ್ ಸಿನಿಮಾ ಆಗುತ್ತದೆ. ಗತವೈಭವ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು. ನಂಬಿಕೆ ಇಟ್ಕೊಂಡು ಹಣ ಹಾಕಿದ್ದಾರೆ. ದುಶ್ಯಂತ್ ಅವರದ್ದು ಮೊದಲ ಸಿನಿಮಾ ಅನಿಸುವುದಿಲ್ಲ. ಅವರು ಮಾಡಿರುವುದು ಸುಲಭದ ಪಾತ್ರವಲ್ಲ. ಮೊದಲ ಚಿತ್ರದಲ್ಲಿ‌ ಒಳ್ಳೆ ಟ್ಯಾಲೆಂಟ್‌ ತೋರಿಸಿದ್ದಾರೆ. ಮ್ಯೂಸಿಕ್, ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ಆಶಿಕಾ ಮೊದಲು ಹೇಗೆ ಇದ್ದರೂ ಈಗಲೂ ಹಾಗೇ ಇದ್ದಾರೆ. ಕಿಶನ್ ಅದ್ಭುತ ಡ್ಯಾನ್ಸರ್. ಈ ಸಿನಿಮಾ ಚೆನ್ನಾಗಿ ಆಗುತ್ತದೆ. ಚಿತ್ರದಲ್ಲಿ ಪಾಸಿಟಿವ್ ವೈಬ್ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

simples1

ಸಿಂಪಲ್ ಸುನಿ ಮಾತನಾಡಿ, ನಾನು ಡೈರೆಕ್ಟರ್ ಆಗಿದ್ದರೂ ಯಾವ ಶಿವಣ್ಣ ಫ್ಯಾನ್ ಆಗಿ ಇರಲು ಇಷ್ಟಪಡುತ್ತೇನೆ. ಮನಮೋಹಕ ಶಿವಣ್ಣನಿಗೆ ಸ್ಕ್ರೀಪ್ಟ್ ಕೊಟ್ಟಾಗ ಅಡ್ವಾನ್ಸ್ ಆಗದೇ ಫೋಟೋಶೂಟ್ ಮಾಡಲು ಒಪ್ಪಿದ್ದರು. ಈ ವಯಸ್ಸಿನಲ್ಲಿ ಬಹಳಷ್ಟು ಸಂಖ್ಯೆಯ ಸಿನಿಮಾಗಳನ್ನು ಹೊಂದಿರುವ ಹೀರೋ ಅಂದರೆ ಜಗತ್ತಿನಲ್ಲಿ ಅದು ಶಿವಣ್ಣ ಒಬ್ಬರೇ ಎನ್ನುವುದನ್ನು ಎದೆ ತಟ್ಟಿಕೊಟ್ಟಿಕೊಂಡು ಹೇಳಬಹುದು ..

ಗತವೈಭವ ಸಾಂಗ್ ಬಗ್ಗೆ ಹೇಳುವುದಾದರೆ ಪೋರ್ಚುಗಲ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ಈ ಹಾಡಿಗೆ ಭೂಷಣ್ ಮಾಸ್ಟರ್ ಒಳ್ಳೆ ಎಫರ್ಟ್ ಹಾಕಿದ್ದಾರೆ. ದುಶ್ಯಂತ್ ಹಾಗೂ ಆಶಿಕಾ ಈ ಗೀತೆಗೆ ಸಖತ್ ಸ್ಟೆಪ್ ಹಾಕಿದ್ದಾರೆ ಎಂದರು.

simples2

ನಾಯಕ ದುಶ್ಯಂತ್ ಮಾತನಾಡಿ,‌ ನಮ್ಮಂತ ಯುವ ನಟರಿಗೆ ಶಿವಣ್ಣ ಮಾದರಿ. ಅಪ್ಪು ಸರ್ ಕಥೆ ಕೇಳಿದಾಗ ಇದು ಕಲ್ಟ್ ಸಿನಿಮಾ ಎಂದು ಹೊಗಳಿದ್ದರು. ಶಿವಣ್ಣ ಒಮ್ಮೆ ನಮ್ಮ ಸೆಟ್ ಗೆ ಸೈಲೆಂಟ್ ಆಗಿ ಬಂದು ಶೂಟಿಂಗ್ ನೋಡುತ್ತಿದ್ದರು. ಚಿತ್ರದ ಫುಟೇಜ್ ನೋಡಿ‌ ಇಷ್ಟಪಟ್ಟಿದ್ದರು. ಚಿಕ್ಕ ಹುಡ್ಗನಿದ್ದಾಗ ಸಿನಿಮಾ ಅಂದರೆ ಮ್ಯಾಜಿಕ್ ಎಂದುಕೊಂಡಿದ್ದೆ. ಆದರೆ ಈಗ ನನ್ನ ಜೀವನದಲ್ಲಿ ಮ್ಯಾಜಿಕ್‌ ನಡೆದಿದೆ. ಹತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ ಸುನಿ ಸರ್ ಜೊತೆ ಕೆಲಸ ಮಾಡಿದ್ದೇನೆ. ಮೂರು ಭಾಷೆಗಳಲ್ಲಿ ಕೆಲಸ ಮಾಡಿದ ಆಶಿಕಾ ರಂಗನಾಥ್, ಒಳ್ಳೆ ಮ್ಯೂಸಿಕ್ ಡೈರೆಕ್ಟರ್, ಕ್ಯಾಮೆರಾ ಮೆನ್ ನಮ್ಮ ಚಿತ್ರದಲ್ಲಿ ಕೆಲಸ ಮಾಡಿರುವುದು ಮ್ಯಾಜಿಕ್‌ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ