ಬಣ್ಣ ಅಲ್ಲ ಪ್ರತಿಭೆ ಗಮನಿಸಿ : ಕಪ್ಪಾದರೇನು….. ಪ್ರತಿಭೆಗೆ  ಅಡ್ಡಿಯೇ? `ಇಂಟರ್‌ ನ್ಯಾಷನಲ್ ಅಸೋಸಿಯೇಶನ್‌ ಆಫ್‌ ಬ್ಲ್ಯಾಕ್ಸ್ ಇನ್‌ ಡ್ಯಾನ್ಸ್’ ಸಂಸ್ಥೆ ಇದನ್ನು ಅರಿತು ಅವರಿಗೆ ಬೇಕಾದ ಅವಕಾಶ ಕಲ್ಪಿಸಿದೆ. ವಿಶ್ವವಿಡೀ ಅವರು ಪ್ರದರ್ಶನ ನೀಡುವಂತಾಗಿದೆ. ನಮ್ಮ ದೇಶದಲ್ಲಂತೂ ಬಣ್ಣದ ಕಾರಣ ಕಪ್ಪಾದವರನ್ನು ಹೀಯಾಳಿಸುತ್ತೇವೆ. ಇಂಥವರಿಗೆ ಪಾಠ ಕಲಿಸಲೆಂದೇ ಈ ಸಂಸ್ಥೆ, ಚರ್ಮದ ಬಣ್ಣ ಬಿಟ್ಟು ವ್ಯಕ್ತಿಯ ಪ್ರತಿಭೆ ನೋಡಿ ಎನ್ನುತ್ತದೆ. ಈ ಫೋಟೋ ಅಂತೂ ಬ್ಲ್ಯಾಕ್‌ ಬ್ಯೂಟಿಗಳ ಬೆಡಗು ಯಾರಿಗೇನೂ ಕಡಿಮೆ ಇಲ್ಲ ಎನ್ನುತ್ತಿದೆ.

Which-Upgraded-Vibrator-Is-Right-for-You_Ben-RaynerJPG

ಪಾರ್ಟ್ನರ್ಕೈನಿಂದ ಜಾರದಿದ್ದರೆ ಸರಿ : ವೆಲ್‌ ನೆಸ್‌ ಎಂಬುದು ನೇರ ವ್ಯಾಯಾಮಕ್ಕೆ ಸಂಬಂಧಿಸಿದ್ದು, ಹಾಗೆಯೇ ಸೆಕ್ಶುಯಲ್ ಹೆಲ್ತ್ ಸಹ ವೆಲ್ ‌ನೆಸ್‌ ಗೆ ಸಂಬಂಧಿಸಿದೆ. ಇತ್ತೀಚೆಗೆ ವಿಶ್ವ ಮಾರುಕಟ್ಟೆಯಲ್ಲಿ ಸೆಕ್ಸ್ ಟಾಯ್ಸ್ ಮಾಮೂಲಿ ಆಗಿದೆ. ಇದು ಕೃತಕ ಪ್ರಣಯ ತೃಪ್ತಿ ಒದಗಿಸುತ್ತದೆ. ಅದನ್ನು ಬಳಸುವವರೂ ಫಿಟ್‌ ಆಗಿರಬೇಕು ಎಂಬುದು ಮುಖ್ಯ. ರಿಲೇಶನ್‌ ಶಿಪ್‌ ಹಳಸತೊಡಗಿದಾಗ, ಲೈಂಗಿಕ ತೃಪ್ತಿ ಸರಿಹೋಗುತ್ತಿಲ್ಲ ಎಂದೇ ಅರ್ಥ. ಹೀಗಾಗಿ ಈ ಜೀವರಹಿತ ಸೆಕ್ಸ್ ಟಾಯ್ಸ್ ದಿನೇ ದಿನೇ ಜನಪ್ರಿಯ ಆಗುತ್ತಿವೆ.

13_carolleigh_lauremcelroy2

ಜನಮತಕ್ಕಾಗಿ ಇದು ಅತ್ಯಗತ್ಯ : ಇಂಟರ್‌ ನ್ಯಾಷನಲ್‌ ಪಾರ್ಲಿಮೆಂಟ್ರಿ ಯೂನಿಯನ್‌ ಒಂದು ವರ್ಲ್ಡ್ ವೈಡ್‌ ಬಾಡಿ ಆಗಿದ್ದು, ಪಾರ್ಲಿಮೆಂಟ್‌ ಗಳ ಮಾಧ್ಯಮದಿಂದ, ಪ್ರಧಾನಮಂತ್ರಿ ರಾಷ್ಟ್ರಪತಿಗಳನ್ನು ಡಿಕ್ಟೇಟರ್‌ ಗಳಾಗದಂತೆ ನಿಯಂತ್ರಿಸುತ್ತವೆ. ಇದರ ಸಮ್ಮೇಳನ ನಡೆದಾಗೆಲ್ಲ, ವಿಶ್ವವಿಡಿಯ ಆ್ಯಕ್ಟಿವಿಸ್ಟ್ ಈ ಪಾರ್ಲಿಮೆಂಟೇರಿಯನ್ಸ್ ನ್ನು ಇನ್‌ ಫ್ಲೂಯೆನ್ಸ್ ಮಾಡಲು ಧರಣಿ ಕೊಡುತ್ತಾರೆ. ಕ್ಲೈಮೆಟ್‌ ಚೇಂಜ್‌ ಆಧಾರಿತ ಇಂಥ ಒಂದು ಸಮ್ಮೇಳನಕ್ಕೆ ಸಂಬಂಧಿಸಿದ ಈ ಪ್ರದರ್ಶನ ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ನಡೆಯಿತು. ಜನಮನ ಸಾಧಿಸಲು ಇದು ಅತ್ಯಗತ್ಯ. ಈ ಕುರಿತಾಗಿ ಹೆಂಗಸರೇ ಮುಂದಾಗಬೇಕು, ಗಂಡಸರೆಲ್ಲ ಕೈಚೆಲ್ಲಿ ಹತಾಶರಾಗಿದ್ದಾರೆ.

286390706_552713802958206_9105339122212755494_n

ನೀವು ತುಸು ವಿಭಿನ್ನವಾಗಿ ಯೋಚಿಸಿ : ಕ್ರಿಸ್ಟೀ ಮ್ಯಾಕ್‌ ನೈಟ್‌ ಹಾಗೂ ಮೆಕ್ಸಿ ಗಿಬನ್ಸ್ ಒಂದು ಹೊಸ ಬಿಸ್‌ ನೆಸ್‌ ಶುರು ಮಾಡಿದ್ದಾರೆ. ಇವರು ತಮ್ಮ ಹಳೆ ಹೊಸ ಫೋಟೋಗಳು, ಪೇಂಟಿಂಗ್ಸ್ ಗಳಿಂದ ನಿಮ್ಮ ಮನೆಯ ಗೋಡೆಗಳನ್ನು ಸಿಂಗರಿಸಿ, ಹೊಸ ಲುಕ್ಸ್ ಒದಗಿಸುತ್ತಾರೆ. ಸಾಮಾನ್ಯವಾಗಿ ಗೃಹಾಲಂಕಾರದಲ್ಲಿ ಪೇಂಟಿಂಗ್ಸ್ ಗೆ ತಮ್ಮದೇ ಆದ ಮಹತ್ವವಿದೆ. ಆದರೆ ಇವರು ನಿಮ್ಮ ಮನೆಗೆ ಬಂದು ಎಲ್ಲಿ ಯಾವ ತರಹದ ಪೇಂಟಿಂಗ್ಸ್ ಹಾಕಬೇಕೆಂದು ಮಾರ್ಗದರ್ಶನ ನೀಡುತ್ತಾರೆ. ಕ್ಯಾಲಿಫೋರ್ನಿಯಾದ ನ್ಯೂಪೋರ್ಟ್‌ ಬೀಟ್‌ ಬಳಿಯ ಇವರ ಆಫೀಸ್‌ ಸದಾ ಸಕ್ರಿಯ ಆಗಿರುತ್ತದೆ, ಇದರಲ್ಲೂ ವಿಭಿನ್ನ ಬಗೆಯ ಎಕ್ಸ್ ಪರ್ಟೈಸ್‌ ಬೇಕು. ಪುರಸತ್ತಿನಲ್ಲಿ ನಮ್ಮ ಹೆಂಗಸರು ಕಿಟಿ ಪಾರ್ಟಿ, ಪ್ರವಚನ ಮರೆತು ಇಂಥ ಕ್ರಿಯೇಟಿವ್ ಬಿಸ್‌ ನೆಸ್‌ ಮಾಡಬಾರದೇಕೆ?

cc2

ನಗರಗಳು ಇನ್ನಷ್ಟು ಸುರಕ್ಷಿತ ಆಗಬೇಕು : ಫಿನ್‌ ಲೆಂಡ್‌ ನ ನಗರ ಪಿರಾಯಸ್‌ ನಲ್ಲಿ ಸ್ಮಾರ್ಟ್‌ ಸೆಕ್ಯೂರ್‌ ಸಿಟಿ ಕನ್ವೆನ್ಷನ್ ನಡೆಯಿತು. ಇದರಲ್ಲಿ ಭಾಗವಹಿಸಿದ ಅನೇಕ ನಗರಗಳು, ತಂತಮ್ಮ ನಗರಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಹೇಗೆ ಟೆಕ್ನಾಲಜಿಯ ನೆರವು ಪಡೆವುದೆಂದು ಹೇಳಿಕೊಂಡ. ಇಂದು ಪೊಲೀಸ್‌ ನವರ ದೊಡ್ಡ ಚಾಲೆಂಜ್‌ ಎಂದರೆ, ಡ್ಯಾನ್ಸ್ ಪ್ರಿಯ ನಗರಗಳಲ್ಲಿ ಯುವತಿಯರು, ಏಕಾಂಗಿಗಳು, ವೃದ್ಧರಿಗೆ ಹೇಗೆ ಸುರಕ್ಷತೆ ಒದಗಿಸುವುದು ಎಂಬುದು. ಕೆಲವು ತಲೆ ಕೆಟ್ಟವರು ಬೇಕೆಂದೇ ಇಂಥವರ ಜೊತೆ ಕಾಲು ಕೆರೆದು ಜಗಳ ಕಾಯುತ್ತಾರೆ. ಡ್ರಗ್‌ ಅಡಿಕ್ಟ್ಸ್ ಅಂತೂ ಕೆಲವು ನೂರು ರೂ.ಗಳಿಗಾಗಿ ತಲೆ ಒಡೆಯಲಿಕ್ಕೂ ಸಿದ್ಧ, ಮಾಸ್‌ ಮರ್ಡರ್‌ ಮಾಡಿ ತಮ್ಮನ್ನು ತಾವೇ ಸಾವಿಗೆ ದಬ್ಬುತ್ತಾರೆ. ಇದಕ್ಕೆ ಸರ್ವಿಯಾನ್ಸ್ ಟೇಕ್‌ ಕಂಪನಿಗಳು ನೀಡುತ್ತಿರುವ ಸಲಹೆ ಎಂದರೆ, ಈ ಆಲ್ ಮನ್‌ ಕಂಪನಿ ಸಹ ಅವುಗಳಲ್ಲಿ ಒಂದಂತೆ. ನಮ್ಮಲ್ಲಿ ದೆಹಲಿಯಂಥ ಮಹಾನಗರಗಳಿಗೆ ಇದು ಅತ್ಯಗತ್ಯ.

IABD-2020-FoundersGuests-007

ಇವರ ಅಹವಾಲನ್ನೂ ಕೇಳಿ : ಡೆಹರಾಡೂನ್‌ ಬಳಿಯ ಒಂದು ರೆಸಾರ್ಟ್‌ ನಲ್ಲಿ ಒಬ್ಬ ಹುಡುಗಿಯನ್ನು ಬಲವಂತವಾಗಿ ಸೂಳೇಗಿರಿಗೆ ತಳ್ಳಲಾಯಿತು. ಅವಳು ವಿರೋಧಿಸಿದಾಗ ಕೊಂದೇಬಿಟ್ಟರು! ಅಪರಾಧಿಗಳೇನೋ ಗಂಡಸರೇ….. ಆದರೆ ಇಂಥ ಕೇಸುಗಳಲ್ಲಿ ಸಂತ್ರಸ್ತೆ ಮಾತ್ರ ಶಿಕ್ಷೆಗೆ ಒಳಗಾಗುತ್ತಾಳೆ. ಇದು ಭಾರತದಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಹೀಗೇ ಇದೆ. ಈ ದಂಧೆಗೆ ಸಿಲುಕುವಳು, ತನ್ನ ತೀರದ ಬಡತನದ ಬೇಗೆಯಿಂದ ಒಪ್ಪಿರುತ್ತಾಳೆ. ಆದರೂ ಯಾವ ದೇಶದ ಪೊಲೀಸರೂ ಇಂಥ ಹುಡುಗಿಯರ ಅಹಾಲವನ್ನು ಕೇಳಿಸಿಕೊಳ್ಳುವುದಿಲ್ಲ, ಬದಲಿಗೆ ಇವರ ಮೇಲೆ ಬೇರೆ ಬೇರೆ ಆರೋಪ ಹೊರಿಸಿ, ಜೇಲಿಗೆ ಹಾಕಿ ಕೊಳೆಸುತ್ತಾರೆ. ಇದರ ವಿರುದ್ಧ ಎಷ್ಟೇ ಸಂಪು ನಡೆದರೂ, ಕಾನೂನು ಹೇಗೆ ಇದ್ದರೂ ಪೊಲೀಸರ ಧೋರಣೆ ಎಲ್ಲಾ ಕಡೆ ಒಂದೇ ತರಹ ಇರುತ್ತದೆ.

press_release_distribution_0494753_183013

ಒಂದಿಷ್ಟು ವಿಭಿನ್ನತೆ ಇರಲಿ : `ಗರ್ಲ್ ಪವರ್‌’ ಪಾಪ್‌ ಗ್ರೂಪ್‌ ಒಂದು ಹೊಸ ಮ್ಯೂಸಿಕ್‌ ಆಲ್ಬಂ ಲಾಂಚ್‌ ಮಾಡಿದೆ, ಇದು ಶುರು ಆಗುವುದೇ ಬಿಟ್ರೇಯಲ್ ನಿಂದ. ಭಾರತೀಯ ಹಾಡುಗಳಲ್ಲಂತೂ ಮೊದಲಿನಿಂದೊ ನಂಬಿಕೆ ದ್ರೋಹದ ಕುರಿತು ಧಾರಾಳ ಪ್ರಸ್ತಾಪವಿತ್ತು, ಈಗ ಅದು ವೆಸ್ಟರ್ನ್‌ ಮ್ಯೂಸಿಕ್‌ ಗೂ ಹರಡಿದೆ. ಈ ಹುಡುಗಿಯರ ಆಲ್ಪಂನ ಮೊದಲ ಹಾಡುಗಳು, ಮಧ್ಯಮ ನೋವಿನ ತಂತುಗಳಿಂದ ತುಂಬಿವೆ, ನಂತರ `ನೀನಿಲ್ಲದೆ ನಾ ಬಾಳಲೆ’ ಎಂಬ ಭಾವ ಕೂಡುತ್ತದೆ. ನಮ್ಮಲ್ಲಿನ ಆಧುನಿಕ ಪಾಪ್‌ಗಳಂತೂ ಸಾಹಿತ್ಯವಿಲ್ಲದೆ ಬರೀ ಅಬ್ಬರವೇ ತುಂಬಿಕೊಂಡಿವೆ. ಈ ತಂಡವಾದರೂ ಒಂದಿಷ್ಟು ವಿಭಿನ್ನತೆ ತೋರಿಸೀತೇ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ