ಬೇಸಿಗೆ ಕಾಲಕ್ಕಿಂತ ಚಳಿಗಾಲದಲ್ಲಿ ಮಾಯಿಶ್ಚರೈಸರ್ ನ ಮಹತ್ವ ಹೆಚ್ಚು. ಹೀಗಾಗಿ ಸೌಂದರ್ಯ ತಜ್ಞೆಯರು ಚಳಿಗಾಲಕ್ಕೆ ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ನ ಆರೈಕೆ ಅತ್ಯಗತ್ಯ ಎಂದು ಒತ್ತಿ ಹೇಳುತ್ತಿರುತ್ತಾರೆ. ಚರ್ಮದ ಹೊಳಪು ಹೆಚ್ಚಿಸಲು, ಅದರ ಮೃದುತ್ವ, ಕೋಮಲತೆ ಕಾಪಾಡಿಕೊಳ್ಳಲು ಇದು ಅನಿವಾರ್ಯ. ಗ್ಲೋಯಿಂಗ್ ಹೂವಿನಂತೆ ನಳನಳಿಸುವ ಚರ್ಮ ನಮ್ಮೆಲ್ಲರ ಮೊದಲ ಆದ್ಯತೆ. ಅದರಲ್ಲೂ ಕಾಲೇಜು ಕಿಶೋರಿಯರು ತಮ್ಮ ಚರ್ಮ ಸದಾ ಸರ್ದಾ ಒರಟುತನವಿಲ್ಲದೆ ಸಾಫ್ಟ್ ಆಗಿರಲೆಂದೇ ಬಯಸುತ್ತಾರೆ. ಆಗ ಅವರು ತಮ್ಮ ಮೆಚ್ಚಿನ ಶಾರ್ಟ್ಸ್ ಧರಿಸಿ, ಪಾರ್ಟಿಗಳಲ್ಲಿ ಗ್ಲಾಮರಸ್ ಆಗಿ ಮಿಂಚಲು ಸಾಧ್ಯ. ಆದರೆ ಇಂಥ ಸ್ಮೂತ್ ಗ್ಲೋಯಿಂಗ್ ಸ್ಕಿನ್ ಗಾಗಿ ಅಗತ್ಯವಾದುದು ಎಂದರೆ ನಿಮ್ಮ ಚರ್ಮವನ್ನು ಸದಾ ಮಾಯಿಶ್ಚರೈಸ್ಡ್ ಆಗಿ ಇರಿಸುವುದು. ಹೀಗಾಗಿ ಈ ವಿಂಟರ್ ಸೀಸನ್ನಿಗೆ ಮಾಯಿಶ್ಚರೈಸರ್ ಎಷ್ಟು ಮುಖ್ಯ, ಹೇಗೆ ಕೆಲಸ ಮಾಡುತ್ತದೆ ಎಂದು ವಿವರವಾಗಿ ತಿಳಿಯೋಣವೇ?
ಡ್ರೈನೆಸ್ ಗೆ ಬ್ರೇಕ್
ಅಂತೂ ಚಳಿಗಾಲ ಬಂದೇಬಿಟ್ಟಿತು. ಮುಖ್ಯವಾಗಿ ಈ ವಿಂಟರ್ ನಲ್ಲಿ ಚರ್ಮದ ಡ್ರೈನೆಸ್ ಸಮಸ್ಯೆ ತಪ್ಪಿದ್ದಲ್ಲ. ಅದೂ ಅಲ್ಲದೆ ನಾವು ಹೆಚ್ಚು ಹೊತ್ತು AC ಕೋಣೆಗಳಲ್ಲೇ ಕಾಲ ಕಳೆಯುತ್ತೇವೆ. ಹೀಗಾಗಿ ನಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ನ ಸೇವೆ ಅತ್ಯಗತ್ಯ. ಇದರಿಂದಾಗಿ ನಮ್ಮ ಸ್ಕಿನ್ ಸೆಲ್ಸ್ ನಲ್ಲಿ ಆರ್ದ್ರತೆ ಕೂಡಿಕೊಳ್ಳುತ್ತದೆ. ಪ್ರತಿಯೊಂದು ಸೀಸನ್ ನಲ್ಲೂ ನಿಮ್ಮ ಚರ್ಮ ಕಾಂತಿಯುತವಾಗಿ ಸದಾ ನಳನಳಿಸುತ್ತಿರುವಂತೆ ನೋಡಿಕೊಳ್ಳಿ. ಆಗ ಮಾತ್ರ ಅದರಲ್ಲಿ ಸಹಜ ಹೊಳಪು ಮೂಡಲು ಸಾಧ್ಯ.
ಏಜಿಂಗ್ ನ ಗೊಡವೆ ಇಲ್ಲ
ನಮ್ಮ ದೇಹಕ್ಕೆ ಮಾಯಿಶ್ಚರೈಸರ್ ಎಷ್ಟು ಪರಿಣಾಮಕಾರಿ ಎಂದರೆ, ಹೆಚ್ಚುತ್ತಿರುವ ವಯಸ್ಸಿನ ಪರಿಣಾಮ ಚರ್ಮದ ಮೇಲೆ ಎಳ್ಳಷ್ಟೂ ಗೋಚರಿಸದಂತೆ ಇದು ನೋಡಿಕೊಳ್ಳುತ್ತದೆ. ನಮ್ಮ ಚರ್ಮಕ್ಕೆ ಇದರಿಂದ ಅತ್ಯಗತ್ಯ ಪೋಷಣೆ ದೊರೆಯುವುದರಿಂದ, ಫೈನಲ್ ಲೈನ್ಸ್ ರಿಂಕಲ್ಸ್ ಕಾಟ ಇರುವುದೇ ಇಲ್ಲ! ಇದರಿಂದ ನೀವು ಸದಾ ಯಂಗ್ ಬ್ಯೂಟಿಫುಲ್ ಎನಿಸುವಿರಿ. ನಿಮ್ಮ ಚರ್ಮದ ಸತತ ಆರೈಕೆ ಮಾಡುವ ಇದು, ನೀವು ಖಡಾಖಂಡಿತ ನಿಮ್ಮ ವಯಸ್ಸಿಗಿಂತ, 10 ವರ್ಷ ಚಿಕ್ಕವರಾಗಿ ಕಾಣುವಂತೆ ಮಾಡಬಲ್ಲದು. ಹೀಗಾಗಿ ನಿಮ್ಮ ಚರ್ಮಕ್ಕೆ ಸೂಟ್ ಆಗುವಂಥ ಮಾಯಿಶ್ಚರೈಸರ್ ನ್ನೇ ಆರಿಸಿ.
ಆ್ಯಕ್ನೆ/ಮೊಡವೆ ನಿವಾರಣೆಗೆ
ಸಾಮಾನ್ಯವಾಗಿ ಆಯ್ಲಿ ಚರ್ಮದವರಿಗೆ ಆ್ಯಕ್ನೆ ಮೊಡವೆಗಳ ಸಮಸ್ಯೆ ತಪ್ಪಿದ್ದಲ್ಲ. ಹೀಗಿರುವಾಗ ನಿಮ್ಮಂಥವರೂ ಮಾಯಿಶ್ಚರೈಸರ್ ಹಚ್ಚಿಕೊಳ್ಳಿರಿ ಎಂಬ ಸಲಹೆ ತುಸು ವಿಚಿತ್ರ ಅನ್ನಿಸಬಹುದು. ಆದರೆ ಒಂದಂತೂ ನಿಜ, ಆಯ್ಲಿ ಚರ್ಮವನ್ನು ಕ್ಲೀನ್ ಮಾಡಿ, ಸಮಯಕ್ಕೆ ಸರಿಯಾಗಿ ಆಗಾಗ ಮಾಯಿಶ್ಚರೈಸರ್ ಬಳಸುವುದರಿಂದ, ಈ ಆ್ಯಕ್ನೆ, ಮೊಡವೆಗಳ ಸಮಸ್ಯೆಗಳಿಂದ ಖಂಡಿತಾ ಪಾರಾಗಬಹುದು. ಇದರಿಂದ ಮುಖವನ್ನು ನೀಟಾಗಿ ಮಸಾಜ್ ಮಾಡುವುದರಿಂದ ಸ್ಕಿನ್ ಪೋರ್ಸ್ ಓಪನ್ ಆಗುತ್ತವೆ ಹಾಗೂ ಕಾಂತಿಯುತವಾಗಿ ನಳನಳಿಸುತ್ತಾ ಆರೋಗ್ಯ ಗಳಿಸುತ್ತದೆ.
ಲೈಟ್ ವೆಯ್ಟ್ ಮಾಯಿಶ್ಚರೈಸರ್
ಒಂದು ಲೈಟ್ ವೆಯ್ಟ್ ಮಾಯಿಶ್ಚರೈಸರ್ ನಿಮಗೆ ನಿಜಕ್ಕೂ ಮ್ಯಾಜಿಕ್ ಮಾಡಬಲ್ಲದು. ನಿಮ್ಮ ಚರ್ಮಕ್ಕೆ ಸೂಕ್ತವಾಗುವಂಥ ಮಾಯಿಶ್ಚರೈಸರನ್ನೇ ಆರಿಸಿ. ಆಗ ಮಾತ್ರ ನಿಮ್ಮ ಚರ್ಮಕ್ಕೆ ಸೂಕ್ತ ಆರೈಕೆ ಸಿಗಬಲ್ಲದು, ನಿಮ್ಮ ಸ್ಕಿನ್ನಿನ ಮಾಯಿಶ್ಚರ್ ಕಂಟೆಂಟ್ ಸರಿ ಆಗಬಲ್ಲದು.
ಸನ್ ಪ್ರೊಟೆಕ್ಷನ್
ಬಿಸಿಲಿನ ಕಾರಣ ಆಗು ಟ್ಯಾನಿಂಗ್‌ಸಹ ಬಲು ಬೇಗ ಚರ್ಮದ ಮೇಲೆ ತೀವ್ರ ಪರಿಣಾಮ ಆಗಲು ಬಿಡುವುದಿಲ್ಲ. ನಿಮ್ಮ ಚರ್ಮಕ್ಕೆ ಆರ್ದ್ರತೆ ಕೂಡಿಕೊಂಡು ಉತ್ತಮ ಪೋಷಣೆಯೂ ದೊರಕುತ್ತದೆ. ಹೀಗಾಗಿ ಸನ್ ಪ್ರೊಟೆಕ್ಷನ್ ನಲ್ಲಿಯೂ ಮಾಯಿಶ್ಚರೈಸರ್ ಬಲು ಸೂಕ್ತವಾಗಿ ಹೊಂದುವ 30-50 SPFನ ಮಾಯಿಶ್ಚರೈಸರ್‌ಮಾಯಿಶ್ಚರೈಸಿಂಗ್ ಕ್ರೀಂ ಬಳಸಿಕೊಳ್ಳಿ. ಈ ಚಳಿಗಾಲದಲ್ಲಿ ಇವು ನಿಮಗೆ ರಾಮಬಾಣದಂತೆ ಕೆಲಸ ಮಾಡಿ ನಿಮ್ಮ ಚರ್ಮದ ಆರೈಕೆಗೆ ಧಾವಿಸುತ್ತವೆ.
ಡ್ರೈ ಸ್ಕಿನ್ ಮಾಯಿಶ್ಚರೈಸರ್ ನ್ನು ನೀವು ಸಕಾಲಕ್ಕೆ ಸರಿಯಾಗಿ ಬಳಸದೆ ಇರುವುದರಿಂದ, ನಿಮ್ಮನ್ನು ಮತ್ತೊಂದು ಚರ್ಮ ಸಮಸ್ಯೆ ಕಾಡದೇ ಇರದು. ಹೆಂಗಸರು ನಿಯಮಿತವಾಗಿ ಮಾಯಿಶ್ಚರೈಸಿಂಗ್ ಮಾಡಿಕೊಳ್ಳದಿದ್ದರೆ, ಅದರಿಂದಾಗಿ ಅವರ ಚರ್ಮ ಡ್ರೈ ಆಗುವುದರಲ್ಲಿ ಎರಡು ಮಾತಿಲ್ಲ. ಅದರ ಬದಲು ಸಕಾಲಕ್ಕೆ ಇದನ್ನು ಆಗಾಗ ಹಚ್ಚುತ್ತಿರುವುದರಿಂದ ನಿಮ್ಮ ಚರ್ಮ ಸದಾ ಸ್ಮೂತ್‌ಸಾಫ್ಟ್ ಆಗಿರುತ್ತದೆ.
ಡೀಹೈಡ್ರೇಟೆಡ್ ಸ್ಕಿನ್
ನೀವು ನಿಮ್ಮ ಮುಖಕ್ಕೆ ಉತ್ತಮ ರೀತಿಯ ಮಾಯಿಶ್ಚರೈಸರ್ ಬಳಸದಿದ್ದರೆ, ನಿಮ್ಮ ಸ್ಕಿನ್ ಬಲು ಬೇಗ ಡೀಹೈಡ್ರೇಶನ್ ಗೆ ಒಳಗಾಗುತ್ತದೆ. ಇದರಿಂದ ನಿಮ್ಮ ಚರ್ಮಕ್ಕೆ ಹಲವು ಹನ್ನೊಂದು ಬಾಧೆಗಳು ತಪ್ಪಿದ್ದಲ್ಲ. ಇದರಿಂದ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಪ್ರೋವಿಟಮಿನ್ ಲೋಶನ್, ಪ್ರೋಟಮಿನ್ ಕ್ರೀಂ, ಪ್ರೋಟಮಿನ್ ರೋಸ್ ವಾಟರ್ ಮುಂತಾದುವನ್ನು ಬಳಸಿ ಡೀಹೈಡ್ರೇಶನ್ ನಿಂದ ಪಾರಾಗಿರಿ!
– ಪ್ರತಿನಿಧಿ