ಕೂದಲು ಸುಂದರವಾಗಿ ಹೊಳೆ ಹೊಳೆಯುತ್ತಿದ್ದರೆ, ಅದು ಇಡೀ ಮುಖದ ಸೌಂದರ್ಯಕ್ಕೇ ಹೆಚ್ಚಿನ ಕಳೆತಂದುಕೊಡುತ್ತದೆ. ಆದರೆ ಈಗೆಲ್ಲ ಸ್ಟೈಲ್ ಗ್ಲಾಮರಸ್ ನದೇ ಝಮಾನಾ. ಈ ಸ್ಟೈಲಿಶ್ ಲುಕ್ಸ್ ಗಾಗಿ ಹೆಂಗಸರು ತಮ್ಮ ಕೂದಲಿಗೆ ಕಲರಿಂಗ್, ಹೈಲೈಟ್, ರೀಬಾಂಡಿಂಗ್, ಕರ್ಲಿಂಗ್…. ಎಂದೆಲ್ಲ ಮಾಡುತ್ತಾ ಹೇರ್ ಸ್ಟೈಲಿಂಗ್ ಪ್ರಾಡಕ್ಟ್ಸ್ಗೆ ಮೊರೆಹೋಗುತ್ತಾರೆ. ಕಾಲಕ್ಕೆ ತಕ್ಕಂತೆ ಇರಬೇಕು, ನಿಜ, ಆದರೆ ಅದಕ್ಕಾಗಿ ಯಾವುದನ್ನೂ ಅತಿ ಆಗಿಸುವುದು ಬೇಡ, ಅದು ವಿವೇಕ ಅಲ್ಲ.
ಇದನ್ನೆಲ್ಲ ಟ್ರೈ ಮಾಡಲು ಹೋದಾಗ ಒಮ್ಮೊಮ್ಮೆ ಒಂದೊಂದು ಸರಿಹೋಗುತ್ತದೆ, ಎಲ್ಲ ಅಲ್ಲ. ಸ್ಟೈಲಿಂಗ್ ಗೆ ಮುಗಿಬಿದ್ದು ಕೂದಲಿಗೆ ನೀವು ಅಗತ್ಯಕ್ಕಿಂತ ಹೆಚ್ಚಾಗಿರುವ ಕೆಮಿಕಲ್ಸ್ ಬೆರೆತ, ಹೀಟ್ ಪ್ರಾಡಕ್ಟ್ಸ್ ಬಳಸತೊಡಗಿದರೆ ಅಥವಾ ಕೂದಲಿನ ಕಡೆ ಗಮನವೇ ಹರಿಸದಿದ್ದರೆ, ಅವು ಕೂದಲಿನ ನ್ಯಾಚುರಲ್ ಮಾಯಿಶ್ಚರ್ ಹಾಳು ಮಾಡಿ, ಕೂದಲನ್ನು ನಿರ್ಜೀವ ಆಗಿಸಿ, ಕೂದಲಿಗೆ ಹಾನಿ ಮಾಡುತ್ತವೆ. ಇಷ್ಟು ಮಾತ್ರವಲ್ಲ, ಮುಂದೆ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಸಲ್ಪೇಟ್ ಎಂಡ್ಸ್ ದಿನೇ ದಿನೇ ಹೆಚ್ಚುತ್ತಲೇ. ಒಮ್ಮೊಮ್ಮೆ ಕೂದಲಿಗೆ ಫ್ರೀಝಿನೆಸ್ ಬರುತ್ತದೆ, ಇದು ನಿಮ್ಮ ಕೇಶ ಸೌಂದರ್ಯಕ್ಕೆ ಮಾರಕ. ಹೀಗಾಗಿ ನಿಮ್ಮ ಕೂದಲು ಈ ರೀತಿ ಹಾಳಾಗಿದ್ದರೆ, ಅದಕ್ಕೆ ವಿಶೇಷ ಚಿಕಿತ್ಸೆಯ ಅಗತ್ಯವಿದೆ, ಆಗ ಮಾತ್ರ ನಿಮ್ಮ ಕೂದಲಿಗೆ ಹೊಸ ಜೀವ ಬರುತ್ತದೆ.
ಸೀರಮ್ ನಿಂದ ಮಾಯಿಶ್ಚರ್ ಕೂದಲು ತನ್ನ ಮಾಯಿಶ್ಚರ್ ಕಳೆದುಕೊಂಡಂತೆ ಅದು ಕ್ರಮೇಣ ಹಾಳಾಗತೊಡಗುತ್ತದೆ. ಇದರಿಂದ ಕೂದಲು ಕಳಾಹೀನವಾಗುತ್ತದೆ. ಆದರೆ ಇಂಥ ಹಾಳಾಗಿರುವ ಕೂದಲನ್ನು ಸೀರಮ್ ನಿಂದ ಹೈಡ್ರೇಟೆಡ್ ಆಗಿಸಿದರೆ, ನಿಧಾನವಾಗಿ ಕೂದಲು ತನ್ನ ಹಿಂದಿನ ಸ್ವಸ್ಥ ಸ್ಥಿತಿ ತಲುಪುತ್ತದೆ. ಏಕೆಂದರೆ ಇದು ಪರಿಸರ ಮಾಲಿನ್ಯ, ಸೂರ್ಯ ಕಿರಣಗಳ ಮಧ್ಯೆ ರಕ್ಷಣಾ ಕವಚವಾಗಿ ನಿಲ್ಲುತ್ತದೆ. ಆದರೆ ನೀವು ಬಳಸುವ ಸೀರಂ, ನಿಮ್ಮ ಕೂದಲಿನ ಟೈಪ್ ಗೆ ಹೊಂದುತ್ತದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅದನ್ನು ಬಳಸುವ ವಿಧಾನ ಪರ್ಫೆಕ್ಟ್ ಆಗಿರಬೇಕು. ಆಗ ಮಾತ್ರ ಸೀರಂ ನಿಮಗೆ ಲಾಭ ತರುತ್ತದೆ.
ನೀವು ಇದನ್ನು ಕೂದಲಿಗಾಗಿ ಬಳಸುವಾಗೆಲ್ಲ, ನಿಮ್ಮ ಕೂದಲು ತುಸು ಒದ್ದೆ ಆಗಿರಬೇಕು. ನಂತರ ನೀವು ನಿಮ್ಮ ಕೈಗಳಿಗೆ ಇದರ ಕೆಲವು ಹನಿಗಳನ್ನು ಹಾಕಿಕೊಂಡು, ಎರಡೂ ಕೈಗಳಿಂದ ಅದನ್ನು ತಿಕ್ಕುತ್ತಾ, ನಿಧಾನವಾಗಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಇದಾದ ಮೇಲೆ ಸ್ನಾನದ ಗೋಜಿಲ್ಲ, ಇಡೀ ದಿನ ಹಾಗೇ ಬಿಡಿ. ಇದರಿಂದ ಇಡೀ ದಿನ ನಿಮ್ಮ ಕೂದಲು ಶೈನ್‌ಸಾಫ್ಟ್ ಆಗಿರುತ್ತದೆ. ನಿಮಗೆ ಎಂದಾದರೂ ಕೂದಲಲ್ಲಿ ಡ್ರೈನೆಸ್, ಫ್ರಿಝಿನೆಸ್, ಹ್ಯುಮಿಡಿಟಿ ಕಾರಣ ಕೂದಲು ನಿರ್ಜೀವ ಅನಿಸಿದರೆ, ಆಗ ತಕ್ಷಣ ಸೀರಂ ಹಚ್ಚಬೇಕು. ಇದನ್ನೇ ಸ್ಮೂದನಿಂಗ್ ಟ್ರೀಟ್ ಮೆಂಟ್ ಎನ್ನುತ್ತಾರೆ.
ಸೀರಂನ ಘಟಕಗಳು
ಇಂದಿನ ಮಾರುಕಟ್ಟೆಯಲ್ಲಿ ನಿಮಗೆ ಹಲವು ಬಗೆಯ ಸೀರಂ ಲಭ್ಯವಿವೆ. ನಿಮ್ಮ ಕೂದಲಿಗೆ ಅತ್ಯಧಿಕ ಲಾಭ ತಂದುಕೊಂಡುವಂಥ ಸೀರಂನ್ನು ಮಾತ್ರ ನೀವು ಆರಿಸಬೇಕು. ಹೀಗಾಗಿ ನೀವು ಇದರ ಘಟಕಗಳ ಬಗ್ಗೆ ಅಗತ್ಯ ತಿಳಿಯಬೇಕು.
ಲೈಟ್ ವೆಯ್ಟ್ ಸೀರಂ ಬೆಸ್ಟ್, ಇದು ಆರ್ಗನ್ ಆಯಿಲ್, ಜೋಜೋಬಾ ಆಯಿಲ್, ಸನ್ ಫ್ಲವರ್ ಆಯಿಲ್ ನ ಗುಣಾಂಶಗಳನ್ನು ಒಳಗೊಂಡಿರುತ್ತದೆ. ಇದು ಸೀಳು ತುದಿ ಕೂದಲಿನ ಸಮಸ್ಯೆಯನ್ನು ತಡೆಯುತ್ತದೆ. ಹೀಗಾಗಿ ಈ ಸೀರಂ ಕೂದಲನ್ನು ಹೆಲ್ದಿ, ಸ್ಮೂಥ್, ಶೈನಿ ಆಗಿಸುವ ಕೆಲಸ ಮಾಡಿಸುತ್ತದೆ.
ಕೋಕೋನಟ್ ಮಿಲ್ಕ್ ಆ್ಯಂಟಿ ಬ್ರೇಕೇಜ್ ಸೀರಂ
ಕಡಿಮೆ ಸಮಯದಲ್ಲಿ ಹಾಳಾದ ಕೂದಲನ್ನು ಸರಿಪಡಿಸಿ, ಅದನ್ನು ಸ್ವಸ್ಥಗೊಳಿಸುತ್ತದೆ.
ಸೀರಂನಲ್ಲಿನ ಹಾಲ್ಯುಝೋನಿಕ್ ಆ್ಯಸಿಡ್, ಕೂದಲನ್ನು ಹೈಡ್ರೇಟ್ ಗೊಳಿಸಿ ಅದರ ಹೇರ್ ಡೆನ್ಸಿಟಿ ಹೆಚ್ಚಿಸುತ್ತದೆ.
ಇದರಲ್ಲಿನ ಪಾಲಿಫಿನಾಲ್, ಕೂದಲಿಗೆ ಆ್ಯಂಟಿ ಆಕ್ಸಿಡೆಂಟ್ ಪ್ರೊಟೆಕ್ಷನ್ ಒದಗಿಸುತ್ತದೆ.
ವಿಟಮಿನ್ ರಿಚ್ ಸೀರಂ ಕೂದಲಿಗೆ ಸೂಪರ್ ಸಾಫ್ಟ್ ಫೀಲ್ ಒದಗಿಸುತ್ತದೆ.
ಇಂಥ ಘಟಕಗಳು ಬೇಡ
ಪಾಲಿಕ್ವಾಟೇರ್ನಿಯಂ, ಕೃತಕ ಬಣ್ಣ, ಡೀಸೋಡಿಯಂ, ಫ್ರಾಗ್ರೆನ್ಸ್ ನಂಥ ಹಾನಿಕಾರಕ ಘಟಕಗಳಿಂದ ದೂರವಿರಿ. ಜೊತೆಗೆ ಇದರಲ್ಲಿ ಸಿಂಥೆಟಿಕ್ ಸಿಲಿಕಾನ್ ಸಹ ಬಳಸುತ್ತಾರೆ. ಇದು ಕೂದಲಿನ ಮೇಲೆ ಒಂದು ರಕ್ಷಣಾ ಪದರವಾಗಿದ್ದು, ಮಾಯಿಶ್ಟರ್ ಲಾಸ್ ಆಗದಂತೆ ರಕ್ಷಿಸುತ್ತದೆ. ಜೊತೆಗೆ ಇದು ಇತರ ಉತ್ತಮ ಘಟಕಗಳು ಕೂದಲಿನ ಆಂತರಿಕ ಭಾಗ ತಲುಪದಂತೆ ಮಾಡುತ್ತವೆ. ಇದರಿಂದ ಕೂದಲಿಗೆ ಲಾಸ್ ತಪ್ಪಿದ್ದಲ್ಲ.
ಹೇರ್ ಕಂಡೀಶನರ್
ಕಂಡೀಶನರ್ ಕೂದಲಿಗೆ ಅಗತ್ಯ ಘಟಕ ಒದಗಿಸಿ ಅದನ್ನು ಹೆಲ್ದಿ, ಸಾಫ್ಟ್ ಮಾಡುತ್ತದೆ. ಆದರೆ ಬಹುತೇಕ ಹೆಂಗಸರು ಭಾವಿಸುವುದೆಂದರೆ, ನಾವು ಕೂದಲಿನ ಡಲ್ ನೆಸ್ ದೂರಗೊಳಿಸಿ ಅದನ್ನು ಸಾಫ್ಟ್ ಗೊಳಿಸಲು ಕಂಡೀಶನರ್ ಬಳಸುತ್ತೇವೆ, ಆದರೆ ಇದನ್ನು ಬಳಸಿದ 1 ದಿನದ ನಂತರ ನಮ್ಮ ಕೂದಲು ಮೊದಲು ಹೇಗಿತ್ತೋ ಹಾಗೆಯೇ ಇದೆ, ಆದರೆ ಇದರ ಶೀಶೆ ಮೇಲೆ ಬಳಕೆಯಿಂದ ಕೂದಲು ರೇಷ್ಮೆಯಂತೆ ಆಗುತ್ತದೆ ಎಂದಿದೆಯಲ್ಲ…. ಎಂದು ಚಿಂತಿಸುತ್ತಾರೆ. ಒಂದು ವಿಷಯ ನೆನಪಿಡಿ, ಅಗತ್ಯಕ್ಕಿಂತ ಹೆಚ್ಚು ಕೆಮಿಕಲ್ಸ್ ತುಂಬಿರುವ ಕಾರಣ, ಬಳಸುವವರ ಕೂದಲು ಶುಷ್ಕವಾಗುತ್ತದೆ. ಹಾಗಾಗಿ ನೀವು ಡ್ಯಾಮೇಜ್ ಕೂದಲಿನಿಂದ ಕಂಗೆಟ್ಟಿದ್ದರೆ, ಮನಸ್ಸಿಗೆ ತೋಚಿದ ಯಾವುದೋ ಕಂಡೀಶನರ್ ಖರೀದಿಸಬೇಡಿ, ಬದಲಿಗೆ ಅದರಲ್ಲಿ ಅಡಕವಾಗಿರುವ ಘಟಕಗಳ ಬಗ್ಗೆ ಒಮ್ಮೆ ಕಣ್ಣು ಹಾಯಿಸಿ, ನಂತರ ನಿಮಗೆ ಸೂಕ್ತ ಆಗುವಂಥದ್ದನ್ನೇ ಖರೀದಿಸಿ. ಆಗ ಮಾತ್ರ ನಿಮಗೆ ಕಂಡೀಶನರ್ ಲಾಭಕರ ಎನಿಸುತ್ತದೆ.
ಕಂಡೀಶನರ್ ನ ಘಟಕಗಳು
ಅವಕಾಡೋ ಆಯಿಲ್ ನಲ್ಲಿ ಮಾನೋ ಅನ್ ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ ನಿಮ್ಮ ಕೂದಲನ್ನು ಸಶಕ್ತಗೊಳಿಸಿ UV ಕಿರಣಗಳಿಂದ ಅದನ್ನು ಸಂಪೂರ್ಣ ರಕ್ಷಿಸುತ್ತದೆ.
ವೀಟ್ ಪ್ರೋಟೀನ್ ನಿಮ್ಮ ಕೂದಲಿನ ದೃಢತೆ ಹೆಚ್ಚಿಸಿ, ಅದರ ಮಾಯಿಶ್ಚರ್ ನ್ನು ಮತ್ತೆ ವಾಪಸ್ ಬರುವಂತೆ ಮಾಡುತ್ತದೆ.
ಕಂಡೀಶನರ್ ನಲ್ಲಿ ಕೆರ್ಯಾಟಿನ್ ಇದ್ದರೆ, ಕೂದಲಿಗೆ ಹೆಚ್ಚು ಲಾಭಕಾರಿ. ಈ ಕೆರ್ಯಾಟಿನ್ ನಮ್ಮ ಕೂದಲಿನ ಸೆಲ್ಸ್ ನ್ನು ಸಾಫ್ಟ್ ಗೊಳಿಸಿ ಸಲ್ಫೇಟ್ ಎಂಡ್ಸ್ ಸಮಸ್ಯೆ ನಿವಾರಿಸುತ್ತದೆ. ಇದರಿಂದಾಗಿ ಕೂದಲಿನ ಮಾಯಿಶ್ಚರ್ ನಿಧಾನವಾಗಿ ಕೂಡಿಕೊಳ್ಳುತ್ತದೆ.
ಆರ್ಗನ್ ಆಯಿಲ್ ನಲ್ಲಿ ಔಲಿಕ್‌ಅನೋಲಿಕ್ ಎಂಬ 2 ಬಗೆ ಫ್ಯಾಟಿ ಆ್ಯಸಿಡ್ಸ್ ಇದ್ದು, ನಿಮ್ಮ ಕೂದಲು ಸ್ಕಾಲ್ಪ್ ಗೆ ಪ್ಯಾಚಿ ಪದರ ಒದಗಿಸುತ್ತವೆ. ಅದರಿಂದಾಗಿ ಕೂದಲಿನ ಡ್ರೈನೆಸ್, ಫ್ರಿಝಿನೆಸ್, ಒರಟುತನ ದೂರಗೊಳಿಸಿ ಅದನ್ನು ಸಾಫ್ಟ್ ಸ್ಮೂಥ್ ಮಾಡುತ್ತವೆ.
ಪೆಥನಾಲ್ ಅಂದ್ರೆ ವಿಟಮಿನ್ಸ್ ಬಲು ಪರಿಣಾಮಕಾರಿ ಹ್ಯುಮೆಕ್ಟೆಂಟ್ ಆಗಿದ್ದು, ಇದು ಹೇರ್ ಶ್ಯಾಫ್ಟ್ ಗೆ ಎಂಟ್ರಿ ಪಡೆದ ತಕ್ಷಣ, ಕೂದಲಿನ ಮಾಯಿಶ್ಚರ್ ಹೆಚ್ಚಿಸುವ ಕೆಲಸ ಮಾಡುತ್ತದೆ.
ಶಿಯಾ ಬಟರ್ ನಲ್ಲಿ ವಿಟಮಿನ್ ಹಾಗೂ ಎಸೆನ್ಶಿಯಲ್ ಫ್ಯಾಟಿ ಆ್ಯಸಿಡ್ಸ್ ಅಡಗಿದ್ದು, ಹೀಟ್ ಪ್ರಾಡಕ್ಟ್ಸ್ ಬಳಕೆಯಿಂದ ಕೂದಲಿಗಾದ ಹಾನಿಯನ್ನು ತಪ್ಪಿಸುವಲ್ಲಿ ಇದು ಮುಂದು. ಜೊತೆಗೆ ಇದು ಕೂದಲಿನ ಫ್ರಿಝಿನೆಸ್ ಕಡಿಮೆ ಮಾಡಿ, ಅದರ ಶೈನ್ ಹೆಚ್ಚಿಸುವಲ್ಲಿ ಸಹಕಾರಿ.
ಇಂಥ ಘಟಕ ಬೇಡ
ಪ್ಯಾರಾಬೇನ್ಸ್, ಸಲ್ಫೇಟ್ಸ್, ಟ್ರಿಕ್ಲೋಸನ್, ಸಿಂಥೆಟಿಕ್ ಕಲರ್ಸ್, ಫ್ರಾಗ್ರೆನ್ಸ್, ಕ್ಯಾಟಿನಲ್ ಪಲ್ಮಿಟೇಟ್…. ಮುಂತಾದವು ನಿಧಾನವಾಗಿ ಕೂದಲಿನ ಮಾಯಿಶ್ಚರ್ ತಗ್ಗಿಸುತ್ತಾ, ಸ್ಕಿನ್ ಅಲರ್ಜಿಗೂ ಕಾರಣವಾಗುತ್ತದೆ. ಹೀಗಾಗಿ ಇಂಥ ಘಟಕ ಅಡಗಿರುವ ಕಂಡೀಶನರ್ ಬಳಸುವುದರಿಂದ ಹಾನಿ ತಪ್ಪಿದ್ದಲ್ಲ.
ಶ್ಯಾಂಪೂ
ಪರಿಸರ ಮಾಲಿನ್ಯ, ಧೂಳು ಮಣ್ಣಿನ ಕಾರಣ ಕೂದಲು ಬೇಗ ಹಾಳಾಗುತ್ತದೆ. ಅದರ ಕೊಳಕಿನಿಂದ ಕೂದಲು ಶುಷ್ಕ, ಒರಟಾಗುತ್ತದೆ. ಇದರಿಂದ ಪಾರಾಗಲು ಎಲ್ಲರೂ ಶ್ಯಾಂಪೂಗೆ ಮೊರೆಹೋಗುತ್ತಾರೆ. ಆದರೆ ನಿಮಗೆ ಗೊತ್ತೇ? ಕಣ್ಣು ಮುಚ್ಚಿ ನೀವು ಬಳಸುವ ಶ್ಯಾಂಪೂ ಹಾಳಾಗಿರುವ ಕೂದಲನ್ನು ರಿಪೇರಿ ಮಾಡುವ ಬದಲು, ಅದುವೇ ನಿಮ್ಮ ಕೂದಲನ್ನು ಇನ್ನಷ್ಟು ಡ್ಯಾಮೇಜ್ ಮಾಡಿಬಿಡುತ್ತದೆ. ಹೀಗಾಗಿ ನೀವು ಗಮನಿಸಬೇಕಾದುದು ಎಂದರೆ, ಯಾವ ಘಟಕ ತುಂಬಿರುವ ಶ್ಯಾಂಪೂ ಕೊಂಡರೆ ಅದು ಹಾಳಾಗಿರುವ ನಮ್ಮ ಕೂದಲನ್ನು ರಕ್ಷಿಸುತ್ತದೆ ಮತ್ತು ಸುಧಾರಿಸುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ.
ಶ್ಯಾಂಪೂನ ಉತ್ತಮ ಘಟಕಗಳು
ಡೀಪ್ ನರಿಶಿಂಗ್ ಶ್ಯಾಂಪೂ ಎಲ್ಲಕ್ಕಿಂತ ಬೆಸ್ಟ್, ಇದರಲ್ಲಿ ವರ್ಜಿನ್ ಆಲಿವ್ ಆಯಿಲ್, ವಿಟಮಿನ್‌ಇತ್ಯಾದಿಗಳ ಉತ್ತಮ ಗುಣಾಂಶಗಳಿವೆ. ಇದು ಕೂದಲನ್ನು ಡೀಟಾಕ್ಸ್ ಮಾಡುವುದರ ಜೊತೆ ರಫ್ ನೆಸ್, ಫ್ರಿಝಿನೆಸ್ ದೂರಗೊಳಿಸಿ ಅದನ್ನು ಸಾಫ್ಟ್ ಶೈನಿ ಮಾಡುತ್ತದೆ.
ಶ್ಯಾಂಪೂನಲ್ಲಿ ಫರ್ಮೆಂಟೆಡ್ ರೈಸ್ ವಾಟರ್, ಪ್ರೋ ವಿಟಮಿನ್ಸ್, ಅಮೈನೋ ಆ್ಯಸಿಡ್ಸ್ ನಂಥ ಅಂಶಗಳಿದ್ದು ಬಳಕೆಯಾದ ಕೆಲವೇ ದಿನಗಳಲ್ಲಿ ಡ್ಯಾಮೇಜ್ ಕೂದಲಿಗೆ ಮತ್ತೆ ಹೊಸ ಜೀವ ತುಂಬುತ್ತದೆ.
ಆ್ಯಪಲ್ ಸೈಡರ್ ವಿನಿಗರ್ ನಲ್ಲಿ ಅಲ್ಟ್ರಾ ಅಸಿಡಿಕ್ ಪವರ್ ಹೌಸ್ ಅಂಶಗಳಿದ್ದು, ಇದು ಕೂದಲಿನ ಹೊಳಪನ್ನು ಹೆಚ್ಚಿಸುವುದರ ಜೊತೆ ಡ್ಯಾಮೇಜ್ ಹೇರ್ ನ್ನು ಮತ್ತೆ ಸ್ಮೂಥ್ ಮಾಡುತ್ತದೆ.
ಶ್ಯಾಂಪೂನಲ್ಲಿ ಸೋಯಾ ಪ್ರೋಟೀನ್ ಕೂದಲಿಗೆ ಪೋಷಕಾಂಶ ಒದಗಿಸಿ, ಅದನ್ನು ಸದಾ ಸ್ವಸ್ಥವಾಗಿಡುತ್ತದೆ. ಇದರಿಂದ ಕೂದಲಿನ ಬುಡ ಸಶಕ್ತಗೊಂಡು, ಸಹಜ ಕಾಂತಿ ಚಿಮ್ಮಿಸುತ್ತದೆ.
ಹನೀ ಮಾಯಿಶ್ಚರ್
ಶ್ಯಾಂಪೂ ಡ್ರೈ ಡ್ಯಾಮೇಜ್ ಕೂದಲನ್ನು ಹೈಡ್ರೇಟ್ ಗೊಳಿಸಿ ಅದರ ಮಾಯಿಶ್ಚರ್ ನ್ನು ಮತ್ತೆ ಮರಳಿ ಕೊಡಿಸುತ್ತದೆ. ಇದು ಹೇರ್ ಫಾಲಿಕ್ಸ್ ನ್ನು ಸಶಕ್ತಗೊಳಿಸಿ, ಉದುರದಂತೆ ತಡೆಯುತ್ತದೆ.
ಇಂಥ ಘಟಕ ಬೇಡ
ಶ್ಯಾಂಪೂನಲ್ಲಿ ಸಲ್ಫೇಟ್ ಅಡಗಿದ್ದು, ಅದು ಸೋಡಿಯಂ ಲಾರೆಯಲ್ ಸೋಡಿಯಂ ಲಾರೆಥ್ ಅಂಶ ಹೊಂದಿರುತ್ತದೆ. ಇದು ಕೂದಲನ್ನು ಶುಷ್ಕ, ನಿರ್ಜೀವಗೊಳಿಸಿ ಸ್ಕಿನ್ ಅಲರ್ಜಿಗೂ ಕಾರಣವಾಗುತ್ತದೆ.
ಪ್ಯಾರಾಬೇನ್ಸ್ ನಲ್ಲಿ ಪ್ರಾಪಿಲ್‌ಎಥಿಲ್‌ಪ್ಯಾರಾಬೇನ್ಸ್ ಎಂಬ ಎರಡು ಬಗೆಯಿದ್ದು, ಹೇರ್ ಪ್ರಾಡಕ್ಟ್ಸ್ ದೀರ್ಘಾವಧಿ ಬಾಳಿಕೆ ಬರಲು ನೆರವಾಗುತ್ತದೆ, ಅದೇ ಸಮಯಕ್ಕೆ ಇದು ಫೀಮೇಲ್ ಹಾರ್ಮೋನ್ಸ್ ನ್ನು ದುಷ್ಟ್ರಭಾವಿತಗೊಳಿಸಿ ಕ್ಯಾನ್ಸರ್ ತರಿಸುತ್ತದೆ.
ಟ್ರಿಕ್ಲೋಸನ್ ಒಂದು ಆ್ಯಂಟಿ ಬ್ಯಾಕ್ಟೀರಿಯಲ್ ಏಜೆಂಟ್ ಆಗಿದ್ದು, ಪ್ರಿಸರ್ ವೇಟಿವ್ ರೂಪದಲ್ಲಿ ಬಳಸಲ್ಪಡುತ್ತದೆ. ಇದು ನಿಮ್ಮ ಕೊಬ್ಬಿನ ಜೀವಕೋಶಗಳಲ್ಲಿ ಜಮೆಗೊಂಡು ದೇಹಕ್ಕೆ ಅಪಾರ ಹಾನಿ ಮಾಡುತ್ತವೆ.
ಸೋಡಿಯಂ ಕ್ಲೋರೈಡ್ ಶ್ಯಾಂಪೂ ತೆಳು ಆಗದಿರಲು ಸಹಕರಿಸುತ್ತದೆ. ಆದರೆ ಇದರಿಂದ ಸ್ಕಾಲ್ಪ್ ನಲ್ಲಿ ಡ್ರೈನೆಸ್, ಉರಿ, ಉದುರುವಿಕೆಯ ಸಮಸ್ಯೆ ಹೆಚ್ಚಿಸುತ್ತದೆ. ಸುವಾಸನೆಗಾಗಿ ಶ್ಯಾಂಪೂನಲ್ಲಿ ಬಳಸಲ್ಪಡುವ ಕೆಮಿಕಲ್ಸ್ ಸ್ಕಾಲ್ಪ್ ಗೆ ಹಾನಿ ಮಾಡಿ ಆಸ್ತಮಾ, ಕ್ಯಾನ್ಸರ್ ನಂಥ ಘಾತಕ ರೋಗ ಹೆಚ್ಚಲು ಕಾರಣವಾಗುತ್ತದೆ.
ಸೆಲೇನಿಯಂ ಸಲ್ಪೈಡ್ ಅಂಶಗಳು ಕ್ಯಾನ್ಸರ್ ಹರಡಲು ಕಾರಣ.
ಶ್ಯಾಂಪೂನ ಬಣ್ಣಕ್ಕಾಗಿ ಬಳಸುವ ಕೆಮಿಕಲ್ಸ್ ನಮ್ಮ ಇಮ್ಯುನಿಟ ಹಾಳು ಮಾಡುತ್ತದೆ.
ರೆಟಿನ್ ಪಲ್ಮಿಟೇಟ್ ನಿಂದ ಚರ್ಮ ಹಳದಿಗಟ್ಟುವುದು ರೆಡ್ ನೆಸ್, ಉರಿಯ ತೊಂದರೆ ಹೆಚ್ಚುತ್ತವೆ.
ಹೇರ್ ಮಾಸ್ಕ್
ಇದು ಕೂದಲಿಗೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಏಕೆಂದರೆ ಇದರಲ್ಲಿ ಕೂದಲಿಗೆ ಮಾಯಿಶ್ಚರ್ ಒದಗಿಸುವ ಅಂಶಗಳಿವೆ. ಇದು ಕಂಡೀಶನರ್ ಗಿಂತ ಹೆಚ್ಚಾಗಿ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಆದರೆ ಹೇರ್ ಮಾಸ್ಕ್ ನೈಸರ್ಗಿಕ ಪದಾರ್ಥಗಳಿಂದ ತುಂಬಿರಬೇಕು, ಬರೀ ಕೆಮಿಕಲ್ಸ್ ಇದ್ದರೆ ಕೇಡು ತಪ್ಪದು. ಹೀಗಾಗಿ ಇಲ್ಲಿನ ಕೆಲವು ಫೇಸ್ ಮಾಸ್ಕ್ ಅನುಸರಿಸಿ, ನಿಮ್ಮ ಹಾಳಾದ ಕೂದಲನ್ನು ರಿಪೇರಿ ಮಾಡಿಸಿಕೊಂಡು ಅದಕ್ಕೆ ಹೆಚ್ಚಿನ ಮೃದುತ್ವ, ಹೊಳಪು ಕೊಡಿ.
ಕೆರಾಟಿನ್‌ಆರ್ಗನ್ ಆಯಿಲ್ ಹೇರ್ ಮಾಸ್ಕ್ ಹೇರ್ ಫಾಲ್ ನ್ನು ತಡೆಗಟ್ಟಿ ಕೂದಲನ್ನು ಹೈಡ್ರೇಟೆಡ್.ಮಾಯಿಶ್ಚರ್ ಒದಗಿಸಿ ಜೊತೆಗೆ ಅದರ ರಿಪೇರಿಯನ್ನೂ ಮಾಡುತ್ತದೆ. ಕೆರಾಟಿನ್ ಎಂಬುದು ನಮ್ಮ ಕೂದಲಲ್ಲಿರುವ ನ್ಯಾಚುರಲ್ ಪ್ರೋಟೀನ್ ಆಗಿದೆ. ಆದರೆ ಪರಿಸರ ಮಾಲಿನ್ಯ ಧೂಳು, ಮಣ್ಣು, ಬಿಸಿಲಿನ ಕಾರಣ ಇದು ಕ್ರಮೇಣ ಹಾಳಾಗುತ್ತದೆ. ಇದನ್ನು ಮತ್ತೆ ಕೂದಲಿಗೆ ವಾಪಸ್ ತರಿಸಲು, ಆಟಿರ್ಫಿಶಿಯಲ್ ಕೆರಾಟಿನ್ ಟ್ರೀಟ್ ಮೆಂಟ್ ನೀಡಬೇಕು. ಆಗ ಕೂದಲು ಮತ್ತೆ ಸಾಫ್ಟ್ ಶೈನಿ ಆಗುತ್ತದೆ. ಆರ್ಗನ್ ಆಯಿಲ್ ನಲ್ಲಿರುವ ವಿಟಮಿನ್, ಕೂದಲನ್ನು ಸಾಫ್ಟ್ ಸಿಲ್ಕಿ ಮಾಡುತ್ತದೆ. ಮುಖ್ಯವಾಗಿ ಇದು ಎಲ್ಲಾ ತರಹದ ಕೂದಲಿಗೂ ಹೊಂದುತ್ತದೆ ಎಂಬುದೇ ವಿಶೇಷ. ಮಾರುಕಟ್ಟೆಯಲ್ಲಿ ಇಂದು 200 ಮಿ.ಲೀ. ಹೇರ್ ಮಾಸ್ಕ್ ಬೆಲೆ ಸುಮಾರು 500/ ರೂ. ಆಗುತ್ತದೆ.
ರೆಡ್ ಆನಿಯನ್ ಬ್ಲ್ಯಾಕ್ ಸೀಡ್ಸ್ ಆಯಿಲ್ ನಿಂದ ತಯಾರಾದ ಹೇರ್ ಮಾಸ್ಕ್, ಕೂದಲಿನ ಮಾಯಿಶ್ಚರ್ ನ್ನು ರೆಸ್ಟೋರ್ ಮಾಡಿಸುತ್ತದೆ. ತೆಳು, ದುರ್ಬಲ, ಉದುರುವ ಕೂದಲಿಗೆ ಇದು ರಾಮಬಾಣ. ಇದರಲ್ಲಿ ಪ್ಯಾರಾಬೇನ್, ಸಲ್ಫೇಟ್, ಸಿಲಿಕಾನ್ ಅಥವಾ ಕಲರ್ ಇಲ್ಲ. ಅಂದ್ರೆ ಪರ್ಫೆಕ್ಟ್ ನ್ಯಾಚುರಲ್. ಇಲ್ಲಿನ ರೆಡ್ ಆನಿಯನ್ ನಲ್ಲಿ ವಿಟಮಿನ್ಸ್, ಆ್ಯಂಟಿ ಆಕ್ಸಿಡೆಂಟ್ಸ್ ಇರುವುದರಿಂದ ಇದು ಕೂದಲಿನ Ph ಲೆವೆಲ್ ಮೇಂಟೇನ್ ಮಾಡುತ್ತದೆ. ಅದೇ ಬ್ಲ್ಯಾಕ್ ಸೀಡ್ ಆಯಿಲ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ನರಿಶ್ಮೆಂಟ್ ಗುಣಗಳು ಅಡಗಿದ್ದು, ಇದು ಫ್ರೀ ರಾಡಿಕಲ್ಸ್ ವಿರುದ್ಧ ಕೂದಲಿಗೆ ರಕ್ಷಣೆ ಒದಗಿಸಿ, ಅದನ್ನು ಸೂಪರ್ ಹೆಲ್ಡಿ ಆಗಿಸುತ್ತದೆ. ಮಾರ್ಕೆಟ್ ನಲ್ಲಿ ಇಂಥ 200 ಮಿ.ಲೀ. ಹೇರ್ ಮಾಸ್ಕ್ ನ ಬೆಲೆ ರೂ.400/.
ಕೊಲೋಜೆನ್ ಹೇರ್ ಮಾಸ್ಕ್ ಎಂಬುದು ಬ್ಲ್ಯಾಕ್ ಸೀಡ್ ಆಯಿಲ್, ಆರ್ಗನ್ ಆಯಿಲ್, ಶಿಯಾ ಬಟರ್ ನ ಉತ್ತಮಿಕೆಗಳಿಂದ ಕೂಡಿದೆ. ಇದರಿಂದ ಡ್ರೈ ಡ್ಯಾಮೇಜ್ ಆದ ಕೂದಲನ್ನು ಸರಿಪಡಿಸಬಹುದಾಗಿದೆ. ಇದರಲ್ಲಿ ವಿಟಮಿನ್ಸ್ ಅತ್ಯಗತ್ಯ ಫ್ಯಾಟಿ ಆ್ಯಸಿಡ್ಸ್ ತುಂಬಿವೆ. ಅದರಿಂದ ಹೀಟ್‌ಕೆಮಿಕ್ಲ್ಸ ನಿಂದ ಕೂದಲಿಗಾಗುವ ಹಾನಿ ತಪ್ಪಿಸಬಹುದಾಗಿದೆ. ಇದರ 100 ಗ್ರಾಂ ಬೆಲೆ ರೂ.250/
ರೈಸ್ ವಾಟರ್ ಹೇರ್ ಮಾಸ್ಕ್ ನ ವಿಶೇಷತೆ ಎಂದರೆ ಇದರಲ್ಲಿನ ಇನೋಸಿಟೋವ್ ಅಂಶ ಹಾಳಾಗಿರುವ ಕೂದಲಿಗೆ ಪೋಷಣೆ ಒದಗಿಸುತ್ತದೆ. ಇದು ಸಲ್ಫೇಟ್, ಸಿಲಿಕಾನ್, ಪ್ಯಾರಾಬೀನ್ ಫ್ರೀ ಪ್ರಾಡಕ್ಟ್ ಆಗಿದ್ದು, ಇದರ 200 ಮಿ.ಲೀ. ಬೆಲೆ ಸುಮಾರು 550/ ರೂ.
– ವಾಣಿ ಸುಮಾ
4 ಬೆಸ್ಟ್ ಆಯಿಲ್ಸ್ ಕೋಕೋನಟ್ ಆಯಿಲ್ : ಇದರಲ್ಲಿ ವಿಟಮಿನ್ಸ್, ಮಿನರಲ್ಸ್, ಅಗತ್ಯ ಫ್ಯಾಟಿ ಆ್ಯಸಿಡ್ಸ್ ತುಂಬಿದ್ದು, ಕೂದಲಿನ ಬುಡ ತಲುಪಿ ಅದಕ್ಕೆ ಪೋಷಣೆ ಒದಗಿಸುತ್ತದೆ. ಇದರಿಂದಾಗಿ ಕೂದಲು ಉದ್ದ, ದಟ್ಟ, ಒತ್ತಾಗಿ, ಸಶಕ್ತಗೊಂಡು ಮೃದುವಾಗುತ್ತದೆ. ಸೀಳು ತುದಿಯ ಕೂದಲಿನಿಂದಲೂ ಮುಕ್ತಿ ಸಿಗುತ್ತದೆ.
ಆರ್ಗನ್ ಆಯಿಲ್ : ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ಸ್ ಅಡಗಿದ್ದು ಇದು ಫ್ರೀಝಿನೆಸ್ ದುರ್ಬಲ, ಡ್ರೈ ಕೂದಲನ್ನು ಮೂಲ ಸಮಸ್ಯೆಗಳಿಂದ ಮುಕ್ತಿಗೊಳಿಸುತ್ತದೆ.
ಬಾದಾಮಿ ಎಣ್ಣೆ : ಇದು ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ಸ್, ಪ್ರೋಟೀನ್ಸ್ ನಿಂದ ತುಂಬಿದ್ದು ಕೂದಲು ಉದುರದೆ, ತುಂಡರಿಸದೆ ಇರಲು ಸಹಕರಿಸುತ್ತದೆ. ಅದರ ಮಾಯಿಶ್ಚರನ್ನು ಲಾಕ್ ಮಾಡುತ್ತದೆ.
ಆಲಿವ್ ಆಯಿಲ್ : ಇದರಲ್ಲಿ ಎಕ್ಸ್ ಟ್ರಾಫಾಲಿಯೇಟಿಂಗ್‌ಡ್ಯಾಂಡ್ರಫ್ ಫೈಟಿಂಗ್ ಗುಣಗಳು ತುಂಬಿದ್ದು, ಇದು ಕೂದಲಿನ ಶುಷ್ಕತೆ, ಒರಟುತನ ದೂರಗೊಳಿಸಿ ಕೂದಲನ್ನು ಸ್ವಸ್ಥಗೊಳಿಸುತ್ತದೆ.