ವಯಸ್ಸು ಕ್ರಮೇಣ ಹೆಚ್ಚುತ್ತಿದ್ದಂತೆ, ಚಳಿಗಾಲದ ಪ್ರಕೋಪ ಅದರ ಮೇಲೆ ತೀವ್ರ ಹೆಚ್ಚಾಗುತ್ತದೆ. ನಮ್ಮ ವಯಸ್ಸು ಹೆಚ್ಚುತ್ತಿದ್ದಂತೆ, ನಮ್ಮ ಚರ್ಮ ತೆಳುವಾಗುತ್ತಾ ಹೋಗುತ್ತದೆ. ಮುಖ್ಯವಾಗಿ ಅತಿ ಬಿಸಿಲಿನಲ್ಲಿ ಓಡಾಡುವವರಿಗೆ ಈ ಕಾಟ ಹೆಚ್ಚು. ಹೀಗೆ ವಯಸ್ಸಾಗುತ್ತಿದ್ದಂತೆ ಚರ್ಮದ ತೈಲಗ್ರಂಥಿಗಳು, ತೈಲ ಸ್ರವಿಸುವುದನ್ನೂ ಕಡಿಮೆ ಮಾಡಿಬಿಡುತ್ತವೆ. ಹೀಗಾಗಿ ಈ ಸಮಸ್ಯೆಗಳಿಂದ ಪಾರಾಗಲು ಅಗತ್ಯ ಸಲಹೆಗಳನ್ನು ಅನುಸರಿಸಿ :

ಕ್ಲೆನ್ಸರ್ಬಳಕೆ ಅನಿವಾರ್ಯ

ವಾಸ್ತವದಲ್ಲಿ ನಾವು ಪ್ರತಿದಿನ ಇಡೀ ದೇಹವನ್ನು ಅಡಿಯಿಂದ ಮುಡಿಯವರೆಗೆ ಸೋಪ್‌ ತಿಕ್ಕಿ ತೊಳೆಯುವ ಅಗತ್ಯವೇನೂ ಇಲ್ಲ. ಕಂಕುಳ ಭಾಗ, ಕೈ ಕಾಲು, ಮುಖ ಮುಂತಾದವು ಗಾಳಿಗೆ ತೆರೆದಿಟ್ಟ ಭಾಗಗಳನ್ನು ಮಾಯಿಶ್ಚರೈಸ್‌ ಗೊಳಿಸುವ ಅಗತ್ಯವಿದೆ. ಮೈ ಮೇಲೆ ಎಣ್ಣೆ ಅಂಶ ತಗುಲಿದ್ದರೆ ಅದನ್ನು ತೊಲಗಿಸಲು ಸೋಪು ಬೇಕು. ಇದು ನಮ್ಮ ಚರ್ಮವನ್ನು ಕ್ರಮೇಣ ಡ್ರೈ ಮಾಡುತ್ತದೆ. ಹೀಗಾಗಿ ನಮ್ಮ ದೇಹದ ಹೊರಭಾಗದಲ್ಲಿನ ಮಾಯಿಶ್ಚರ್‌, ಆದಷ್ಟು ದೇಹದಲ್ಲಿ ಉಳಿದಿರಬೇಕೇ ಹೊರತು, ಸೋಪಿನಿಂದ ಹೋಗಿಬಿಡಬಾರದು.

ತೀರಾ ಅಗತ್ಯವಾದಾಗ, ಒಂದು ಮೃದು ಆದರೆ ಸುವಾಸನೆ ರಹಿತ ಕ್ಲೆನ್ಸರ್‌ ಕಾಪಿ ಬಳಸಿಕೊಳ್ಳಿ. ನೀವು ಬಳಸುವ ಪ್ರತಿ ಪ್ರಾಡಕ್ಟ್ ನಲ್ಲೂ ಮಾಯಿಶ್ಚರೈಸರ್‌ ಯಾವ ಆಯಿಲ್ ‌ಅಂಶ ಇರಬೇಕು. ಈ ರೀತಿ ನೀವು ಚರ್ಮದ ಆ ಭಾಗಗಳನ್ನು ಶುಚಿಗೊಳಿಸುವುದರ ಜೊತೆ ಅದನ್ನು ಮಾಯಿಶ್ಚರೈಸ್‌ ಸಹ ಮಾಡಬಹುದು.

ತಣ್ಣೀರಿನ ಶವರ್ಬೆಸ್ಟ್

ಚಳಿಗಾಲದಲ್ಲಿ ಎಲ್ಲರಿಗೂ ಬಿಸಿ ನೀರಲ್ಲಿ ಸ್ನಾನ ಮಾಡಬೇಕು ಅನಿಸುತ್ತದೆ. ಆದರೆ ಕುದಿ ಬಿಸಿ ನೀರು ನಿಮ್ಮ ಬಾಡಿಯ ನ್ಯಾಚುರಲ್ ಬ್ಯಾರಿಯರ್‌ ನ್ನು ಹಾಳು ಮಾಡುತ್ತದೆ, ಇದು ದೇಹದ ಮಾಯಿಶ್ಚರ್‌ ಲಾಸ್‌ ಗೆ ಮೂಲ.

ಟೆಂಪರೇಚರ್‌ ಕಂಫರ್ಟ್‌ ಆಗಿರಲು, ನೀರು ಸುಮಾರು ಬಿಸಿ ಇದ್ದರೆ ಸಾಕು, ಅತಿ ಬೇಡ. 5 ವರ್ಷದ ಮಗುವಿಗೆ ಯಾವ ನೀರಿನ ಉಷ್ಣತೆ ಹೆಚ್ಚು ಎನಿಸುತ್ತದೋ, ಅದು ನಿಮಗೂ ಸಹ ಒಳ್ಳೆಯದಲ್ಲ. ನೀವು ಆದಷ್ಟೂ ಅತಿ ಕಡಿಮೆ ಉಷ್ಣತೆಯ ಅಥವಾ ತಣ್ಣೀರಲ್ಲಿ ಸ್ನಾನ/ ಶವರ್‌ ಪಡೆದರೆ ಉತ್ತಮ. ತೀರಾ ಕಷ್ಟ ಎನಿಸಿದರೆ ಕನಿಷ್ಠ 10 ನಿಮಿಷಗಳಾದರೂ ಹೀಗೆ ಶವರ್‌ ಕೆಳಗಿರಿ.

ಸ್ನಾನಕ್ಕೆ ಮೊದಲು ಶವರ್‌ ಗೆ ಹೋಗುವ ಮೊದಲು ದೇಹವಿಡೀ ಲೋಶನ್‌ ಯಾ ಕ್ರೀಂ ಹಚ್ಚಿಕೊಳ್ಳಿ. ಇಲ್ಲದಿದ್ದರೆ ನೀವು ನೀರಿನ ಮಾಯಿಶ್ಚರೈಸಿಂಗ್‌ ನ ಲಾಭ ಪಡೆಯಲಾಗದು. ನೀವು ಶವರ್‌ ನಿಂದ ಹೊರ ಬರುವಾಗ, ನಿಮ್ಮ ದೇಹ ಚೆನ್ನಾಗಿ ಹೈಡ್ರೇಟ್ ಆಗಿರುತ್ತದೆ. ಆದರೆ ನೀವು ನೀರಿನ ಕೊರತೆ ನಿವಾರಿಸಲು, ದೇಹಕ್ಕೆ ಲೋಶನ್‌ ಕ್ರೀಂ ಬಳಸದಿದ್ದರೆ, ನಿಮ್ಮ ಚರ್ಮ ಬೇಗ ಡ್ರೈ ಆಗುತ್ತದೆ.

ಬಹಳಷ್ಟು ಹೆಂಗಸರು ದೇಹವನ್ನು ಮಾಯಿಶ್ಚರೈಸ್‌ ಗೊಳಿಸಲು ಸೆಂಟೆಡ್‌ ಲೋಶನ್‌ ಯಾ ಆಯಿಲ್ ‌ಬಳಸುತ್ತಾರೆ. ಇದು ದೇಹವನ್ನು ಇರಿಟೇಟ್‌ ಮಾಡುತ್ತದೆ. ಹೀಗಾಗಿ ನೀವು ಆದಷ್ಟೂ ಓಡರ್‌ ಲೆಸ್‌ ಪ್ರಾಡಕ್ಟ್ಸ್ ಬಳಸುವುದೇ ಲೈಸು.

ತೈಲ ದೂರ ಮಾಡದಿರಿ

ನಿಮ್ಮ ಚರ್ಮ ಆಯ್ಲಿ ಅಥವಾ ಮೊಡವೆಗಳಿಂದ ತುಂಬಿರಲಿ, ನಿಮ್ಮ ದೇಹವನ್ನು ತೊಳೆಯುವಂತೆಯೇ, ಮುಖದ ಚರ್ಮಕ್ಕೂ ಸಹ ಸುವಾಸನೆರಹಿತ ಮಾಯಿಶ್ಚರೈಸರ್‌ ಬಳಸುವುದು ಅತ್ಯಗತ್ಯ. ನಿಮ್ಮದು ಆಯ್ಲಿ ಚರ್ಮ ಆಗಿದ್ದರೂ, ನಿಮ್ಮ ಮುಖದ ಕೆಳ ಪದರ ಡ್ರೈ ಆಗಿಯೇ ಇರುತ್ತದೆ. ಇದನ್ನು ಸದಾ ನಾರ್ಮಲ್ ಆಗಿರಿಸಲು, ಒಂದು ಲೈಟ್‌, ತೈಲರಹಿತ, ಮಾಯಿಶ್ಚರೈಸರ್‌ಬಳಸುತ್ತಿರಬೇಕು. ಅದರಲ್ಲೂ ಮುಖ್ಯವಾಗಿ ನೀವು ಮೊಡವೆ ವಿರುದ್ಧದ ಪ್ರಾಡಕ್ಟ್ ಬಳಸುತ್ತಿದ್ದರೆ ಇದು ಅನಿವಾರ್ಯ. ಸುಮ್ಮನೆ ಮೆಡಿಕಲ್ ಸ್ಟೋರ್‌ ಗೆ ಹೋಗಿ ಯಾವುದೋ ಆ್ಯಂಟಿ ಪಿಂಪಲ್ ಕ್ರೀಂ ಕೊಳ್ಳದಿರಿ., ಇದು ಆ ಕೆಲಸ ಮಾಡಿ, ಇವರು ಚರ್ಮ ಪೂರ್ತಿ ಡ್ರೈ ಮಾಡೀತು, ಆದ್ದರಿಂದ ಎರಡೂ ಕೆಲಸ ನಿರ್ವಹಿಸುವಂಥ ವೈದ್ಯರು ಹೇಳಿದ ಉತ್ತಮ ಪ್ರಾಡಕ್ಟ್ಸ್ ಮಾತ್ರ ಬಳಸಿರಿ.

ಸನ್ಸ್ಕ್ರೀನ್ನಿರ್ಲಕ್ಷಿಸದಿರಿ

ನಮಗೆ ಚಳಿಗಾಲದಲ್ಲಿ ಸಖೆ ಕಾಟ, ತೀವ್ರ ಬಿಸಿಲು ಇಲ್ಲದಿರಬಹುದು, ಆದರೆ ಸೂರ್ಯನ ಹಾನಿಕಾರಕ UV ಕಿರಣಗಳ ಕಾಟಕ್ಕೇನೂ ಕಡಿಮೆ ಇಲ್ಲ. ಹೀಗಾಗಿ ನೀವು ಮನೆಯ ಒಳಗೇ ಇರಿ ಅಥವಾ ಕೆಲಸದ ಸಲುವಾಗಿ ಹೊರಗೆ ಓಡಾಡುತ್ತಿರಿ, SPF  30-40 ಯುಕ್ತ ಸನ್‌ ಸ್ಕ್ರೀನ್‌ ಲೋಶನ್‌ ಬಳಸಲು ಮರೆಯದಿರಿ. ಇದು ನಿಮ್ಮ ಮಾಯಿಶ್ಚರೈಸರ್‌ ಜೊತೆ ಬೆರೆತಿದ್ದರೆ ಇನ್ನೂ ಉತ್ತಮ. ನೀವು ತೀರಾ ಮಂಜು ಹೆಚ್ಚಾಗಿ ಬೀಳುವ ಕಡೆ ವಾಸಿಸುತ್ತಿದ್ದರೆ, ಪ್ರತಿದಿನ ಹಲವಾರು ಸಲ ಮಾಯಿಶ್ಚರೈಸರ್‌ ಹಚ್ಚಲು ಮರೆಯದಿರಿ.

ಲೈಫ್ಸ್ಟೈಲ್ ಸುಧಾರಿಸಿ

ಹೊರಗಿನ ಕೆಟ್ಟ ಸೀಸನ್‌ ನಿಯಂತ್ರಿಸಲಾಗದು, ಹೀಗಾಗಿ ನಿಮ್ಮ ಮನೆಯ ಒಳಗಿನ ವಾತಾವರಣ ನಿಯಂತ್ರಿಸಬಹುದು. ಇದರಲ್ಲಿ ನೀವು ಮುಖ್ಯವಾಗಿ ಮಾಡಬೇಕಾದುದು ಎಂದರೆ, ಮನೆ ಮತ್ತು ಆಫೀಸಿನಲ್ಲಿ ಉತ್ತಮ ಗುಣಮಟ್ಟದ ಹ್ಯುಮಿಡಿಫೈರ್‌ ಹಾಕಿಸುವುದು.

ಆರೋಗ್ಯದತ್ತ ಗಮನ

ಪ್ರತಿ ಸೀಸನ್‌ ಗೆ ತಕ್ಕಂತೆ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳ ಬೇಕಾದುದು ಅತ್ಯಗತ್ಯ. ಅದರಲ್ಲೂ ಚಳಿಗಾಲದಲ್ಲಿ ತೀವ್ರ ಕಾಡುವ ತೊಂದರೆಗಳಾದ ಎಗ್ಸಿಮಾ ಇತ್ಯಾದಿ ತಗುಲದಂತೆ ಎಚ್ಚರವಹಿಸಿ. ಈಗಾಗಲೇ ಬಂದಿರುವ ರೋಗವನ್ನು ಗುಣಪಡಿಸುವುದಕ್ಕಿಂತ ಅದು ಬಾರದಿರುವಂತೆ ನಿಯಂತ್ರಿಸುವುದೇ ಸುಲಭ! ಹೀಗಾಗಿ ಸಕಾಲಕ್ಕೆ ಎಚ್ಚೆತ್ತು ಚಳಿಗಾಲದ ಥಂಡಿ ನಿಮ್ಮನ್ನು ಸತಾಯಿಸದಂತೆ, ನಿಮ್ಮ ಸ್ಕಿನ್‌ ಕೇರ್‌ ರೊಟೀನ್‌ಸರಿಪಡಿಸಿಕೊಳ್ಳಿ.

ಡಾ. ಪೂಜಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ