ಮದುವೆಗಾಗಿ ಜಳಿ ಖರೀದಿ ಎಷ್ಟು ಮುಖ್ಯವೋ, ಬ್ರೈಡಲ್ ಮೇಕಪ್‌ ಮಾಡುವ ಆರ್ಟಿಸ್ಟ್ ಸಹ ಅಷ್ಟೇ ಮುಖ್ಯ. ಆಕೆ ಮಾತ್ರ ನವ ವಧುವಿನ ಮುಖಕ್ಕೆ ಅಪೂರ್ವ ಕಳೆ ತುಂಬಿಸಿ, ಧರಿಸಿರುವ ಉಡುಗೆಗೆ ಮೇಕಪ್‌ ಪೂರಕವಾಗುವಂತೆ ಮಾಡಬಲ್ಲಳು. ಆದರೆ ಇದರಲ್ಲಿ ಏನಾದರೂ ತಪ್ಪಾಗಿ ಹೋದರೆ, ನಿಮ್ಮ ಬ್ರೈಡಲ್ ಗೆಟಪ್‌ ಕಳೆಗುಂದುತ್ತದೆ, ದುಬಾರಿ ಜವಳಿ ಸಹ ನಿಮ್ಮನ್ನು ಸುಂದರವಾಗಿ ತೋರಿಸದು. ಹೀಗಾಗಿ ಚೆನ್ನಾಗಿ ರಿಸರ್ಚ್‌ ಮಾಡಿ ಬ್ರೈಡಲ್ ಮೇಕಪ್‌ ಆರ್ಟಿಸ್ಟ್ ನ್ನು ಆರಿಸಿ.

ಸೌಂದರ್ಯ ತಜ್ಞೆಯರು ಈ ಕುರಿತು ಹೇಳುವುದೆಂದರೆ, ಇದಕ್ಕಾಗಿ ನವ ವಧು ತನ್ನ ಫ್ರೆಂಡ್ಸ್, FB‌, ಇನ್‌ ಸ್ಟಾಗ್ರಾಮ್, ವೆಬ್‌ ಸೈಟ್‌ ಇತ್ಯಾದಿ ತಡಕಾಡಿ ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ಮಹಿಳಾ ಪತ್ರಿಕೆಗಳ `ವೆಡ್ಡಿಂಗ್‌ ಸ್ಪೆಷಲ್’ಗಳನ್ನು ಅಗತ್ಯ ಗಮನಿಸುವುದು. ಅವರನ್ನು ಸಂಪರ್ಕಿಸಿ ಈ ಕುರಿತು ಪ್ರಶ್ನೆ ಕೇಳಿ, ನಿಮ್ಮ ಸಂದೇಹ ನಿವಾರಿಸಿಕೊಳ್ಳಿ. ಇತ್ತೀಚೆಗೆ ಅವರು ಮಾಡಿದ ಬ್ರೈಡಲ್ ಮೇಕಪ್‌ ನ ಕೆಲವು ಫೋಟೋ ತರಿಸಿಕೊಂಡು ಪರಿಶೀಲಿಸಿ. ಇದರಿಂದ ನಿಮಗೆಷ್ಟೋ ಮಾಹಿತಿ ಸಿಗುತ್ತದೆ.

IB143363_143363155021293_SM223459

ಮೇಕಪ್ಟ್ರೆಂಡ್ಸ್ ಕುರಿತ ಮಾಹಿತಿ

ತಾವು ಬ್ರೈಡಲ್ ಮೇಕಪ್‌ ಆರ್ಟಿಸ್ಟ್ ಆಗುವುದು ಹೆಚ್ಚಲ್ಲ, ಆದರೆ ಕಾಲಕಾಲಕ್ಕೆ ಈ ಕುರಿತಂತೆ ಅಪ್‌ ಡೇಟ್‌ ಆಗುತ್ತಾ ಇರಬೇಕು. ಹೀಗಾಗಿ ಇವರು ಈ ಫೀಲ್ಡ್ ಗೆ ಸಂಬಂಧಿಸಿದ ಮೇಕಪ್‌ ನ ಹೊಸ ಹೊಸ ಟೆಕ್ನಿಕ್ಸ್ ನಲ್ಲಿ ಅಪ್‌ ಟುಡೇಟ್‌ ಆಗುತ್ತಿರಬೇಕು. ಹೀಗಾಗಿ ನಿಮ್ಮ ಬ್ರೈಡಲ್ ಮೇಕಪ್‌ ಆರ್ಟಿಸ್ಟ್ ಲೇಟೆಸ್ಟ್ ಮಾಹಿತಿ ಹೊಂದಿದ್ದಾರಾ ಖಚಿತಪಡಿಸಿಕೊಳ್ಳಿ.

ಇದಕ್ಕಾಗಿ ನೀವು ಒಂದಿಷ್ಟು ರಿಸರ್ಚ್‌ ಮಾಡಿ. ಮದುವೆ ದಿನ ನಿಮ್ಮ ಮುಖಕ್ಕೆ ಯಾವ ಸ್ಪೆಷಲ್ ಮೇಕಪ್‌ ಮಾಡಲಿದ್ದಾರೆ, ನೀವೇ ಸಜೆಸ್ಟ್ ಮಾಡಿ. ಇಂದು ವಿಭಿನ್ನ ಮೇಕಪ್‌ ಟ್ರೆಂಸ್ ಇವೆ, ನಿಮ್ಮ ಚರ್ಮಕ್ಕೆ ಹೊಂದುವಂಥದ್ದನ್ನೇ ಆರಿಸಿ. ಈ ಕುರಿತು ಕೆಳಗಿನ ವಿಷಯಗಳನ್ನು ಅವರ ಬಳಿ ಕೂಲಂಕಷವಾಗಿ ಚರ್ಚಿಸಿ :

ಹೈ ಡೆಫ್ನೇಶನ್ಮೇಕಪ್‌ : ಈ ಮೇಕಪ್‌ ನಿಮಗೆ ನ್ಯಾಚುರಲ್ ಲುಕ್ಸ್ ನೀಡುತ್ತದೆ. ಇದು ನಿಮ್ಮ ಚರ್ಮವನ್ನು ಅತಿ ಗಾಡಿ ಬಣ್ಣದಲ್ಲಿ ಶೈನಿ ಆಗಿ ತೋರಿಸುವುದಿಲ್ಲ. ಜೊತೆಗೆ ಕಲೆ ಗುರುತು ಅಡಗಿಸಿ, ನ್ಯಾಚುರಲ್ ಲುಕ್ಸ್ ನೀಡುತ್ತದೆ. ಹೀಗೆ ಮುಖ ಸಹಜ ಕಾಂತಿ ಗಳಿಸಿದಾಗ, ಫೋಟೋ ಸಹ ನೀಟಾಗಿ ಕ್ಲಿಕ್‌ ಆಗುತ್ತದೆ. ಹೀಗಾಗಿ ಸೆಲೆಬ್ರಿಟೀಸ್‌, ಖ್ಯಾತ ಆರ್ಟಿಸ್ಟ್ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.

ಏರ್ಬ್ರಶ್ಮೇಕಪ್‌ : ಫ್ಲಾಲೆಸ್‌ಹೆಲ್ದಿ ಸ್ಕಿನ್‌ ಬಗ್ಗೆ ಮಾತನಾಡುವಾಗ, ಅದಕ್ಕೆ ಸೂಟ್‌ ಆಗುವಂಥದ್ದು ಈ ಏರ್‌ ಬ್ರಶ್‌ ಮೇಕಪ್ ಮಾತ್ರ. ಇದರಲ್ಲಿ ಏರ್‌ ಗನ್ನಿನಿಂದ ಪ್ರಾಡಕ್ಟ್ ನ್ನು ಮುಖದ ಮೇಲೆ ಸ್ಪ್ರೇ ಮಾಡುತ್ತಾರೆ. ಹೈಜೀನ್‌ ಗೂ ಇಲ್ಲಿ ಪ್ರಾಮುಖ್ಯತೆ ಇದೆ. ಇದರಲ್ಲಿ ಮೊದಲು ಪ್ರಾಡಕ್ಟ್ಸ್ ನ ತೆಳು ಪದರ ಹಚ್ಚುತ್ತಾರೆ. ಇದರಿಂದ ಮುಖಕ್ಕೆ ಉತ್ತಮ ಆಕಾರ ದೊರೆತು, ಪೋರ್ಸ್‌, ಸುಕ್ಕು ನಿರಿಗೆ ಸುಲಭವಾಗಿ ಕವರ್‌ ಆಗುತ್ತದೆ. ಇದು ನಿಮ್ಮ ಚರ್ಮಕ್ಕೆ ಲಾಂಗ್‌ ಲಾಸ್ಟಿಂಗ್‌ ವಾಟರ್‌ ಪ್ರೂಫ್‌ ಎಫೆಕ್ಟ್ ನೀಡುತ್ತದೆ.

ಮಿನರಲ್ ಮೇಕಪ್‌ : ಈ ಮೇಕಪ್‌ ಮುಖಕ್ಕೆ ಕೃತಕತೆ ಒದಗಿಸುವ ಬದಲು ಅದಕ್ಕೆ ನ್ಯಾಚುರಲ್ ಟಚ್‌ ಕೊಡುತ್ತದೆ. ಮಿನರಲ್ ಘಟಕಗಳಿಂದ ತಯಾರಾದ ಈ ಕ್ರೀಮ್ಸ್ ನಲ್ಲಿ ವಿಟಮಿನ್ಸ್ ಸಹ ಇದೆ. ಇದು ಕ್ಲೆನ್ಸರ್‌ ಕೆಲಸ ಮಾಡುತ್ತದೆ. ಇದು ಮುಖದ ರೋಮರಂಧ್ರಗಳನ್ನು ಬ್ಲಾಕ್‌ ಆಗುವುದನ್ನು ತಪ್ಪಿಸಿ, ವಾಟರ್‌ ಪ್ರೂಫ್‌ ಆಗಿರುತ್ತದೆ. ಹೀಗಾಗಿ ಇದು ಆ್ಯಕ್ನೆ ಪ್ರೋನ್‌ ಸ್ಕಿನ್‌ಸೆನ್ಸಿಟಿವ್ ‌ಸ್ಕಿನ್‌ ಗೆ ಬೆಸ್ಟ್ ಆಗಿದೆ.

ನ್ಯಾಚುರಲ್ ಮೇಕಪ್‌ : ಈ ಮೇಕಪ್‌ ಎಲ್ಲಾ ಬಗೆಯ ಚರ್ಮಕ್ಕೂ ಹೊಂದುತ್ತದೆ. ಇದು ಮುಖವನ್ನು ಹೆಚ್ಚು ಗಾಡಿ ಆಗಿಸದೆ, ಫೀಚರ್ಸ್‌ ನ್ನು ಸುಂದರಗೊಳಿಸುತ್ತದೆ. ಇಲ್ಲಿ ಅತಿ ಕನಿಷ್ಠ ಪ್ರಮಾಣದ ಪ್ರಾಡಕ್ಟ್ ನ್ನು ಮುಖಕ್ಕೆ ಹಚ್ಚಿದರೆ ಸಾಕು, ಅತ್ಯುತ್ತಮ ರಿಸಲ್ಟ್ ಕಾಣಬಹುದು. ಯಾರಾದರೂ ಬ್ರೈಡಲ್ ನ್ಯಾಚುರಲ್ ಲುಕ್ಸ್ ಬಯಸಿದರೆ, ಇದನ್ನು ಬಳಸಿದರೆ ಆಯ್ತು.

ಹೈಶೈನ್ಮೇಕಪ್‌ : ಸಾಮಾನ್ಯವಾಗಿ ಹೆಚ್ಚು ಡ್ರೈ ಹೈಶೈನ್‌ ಮೇಕಪ್‌ ಬಯಸುವವರಿಗೆಂದೇ ಈ ಮೇಕಪ್‌ ಇದೆ ಎನ್ನಬಹುದು. ಇದರಲ್ಲಿ ಹೆಚ್ಚು ಗ್ಲೋ ಶೈನ್‌ ಇರುತ್ತದೆ. ಇದು ಮುಖವನ್ನು ಒಮ್ಮೆಲೇ ಹೈಲೈಟ್‌ ಮಾಡುತ್ತದೆ.

ಮ್ಯಾಟ್ಮೇಕಪ್‌ : ಈ ಮೇಕಪ್‌ ಇಡೀ ಮುಖಕ್ಕೆ ಹೆಚ್ಚು ಕಂಫರ್ಟ್‌ ಫೀಲ್ ನೀಡುತ್ತದೆ, ಉತ್ತಮ ಮ್ಯಾಟ್‌ ಫಿನಿಶ್‌ ದೊರಕುತ್ತದೆ. ಹೆಚ್ಚು ಆಯ್ಲಿ ಸ್ಕಿನ್‌ ವುಳ್ಳ ನವ ವಧುವಿಗೆ ಇದು ಚೆನ್ನಾಗಿ ಸೂಟ್‌ ಆಗುತ್ತದೆ. ಇಲ್ಲಿ ಬಳಸಲಾಗುವ ಪ್ರಾಡಕ್ಟ್ಸ್ ನಲ್ಲಿ ಜಿಡ್ಡಿನ ಅಂಶ ಇರುವುದಿಲ್ಲ. ಇದು ಮುಖದ ಸುಕ್ಕು ನಿರಿಗೆ ಅಡಗಿಸುತ್ತಾ, ಚರ್ಮಕ್ಕೆ ಹೆಚ್ಚಿನ ಕಾಂತಿ ತುಂಬುತ್ತದೆ. ಇವೆಲ್ಲದರ ಬಗ್ಗೆ ನಿಮ್ಮ ಮೇಕಪ್‌ ಆರ್ಟಿಸ್ಟ್ ಚಿರಪರಿಚಿತರಾಗಿ ಇರಬೇಕು.

ಪರಿಚಿತರು ಮೇಲು

ಬಹುಶಃ 1-2 ತಿಂಗಳ ಹಿಂದೆ ನೀವು ಗೆಳತಿಯ ಮದುವೆ ಅಟೆಂಡ್‌ ಆಗಿರಬಹುದು. ಆ ಮೇಕಪ್‌ ನಿಮಗೆ ಬಹಳ ಇಷ್ಟ ಆಗಿರಬಹುದು. ಈಗ ನಿಮ್ಮದೇ ಮದುವೆ ಸಂದರ್ಭವಾದ್ದರಿಂದ, ಯಾರೋ ಹೊಸಬರನ್ನು ಹುಡುಕುವ ಬದಲು, ನಿಮ್ಮ ಗೆಳತಿಯ ಪರಿಚಿತ ಆರ್ಟಿಸ್ಟ್ ನ್ನೇ ಆರಿಸಿಕೊಳ್ಳುವುದು ಮೇಲು. ಆಕೆ ಎಂಥ ಮೇಕಪ್‌ ಮಾಡುತ್ತಾರೆ, ಅದರಿಂದ ನೀವು ಹೇಗೆ ಕಾಣುವಿರೆಂಬ ಒಂದು ಅಂದಾಜು ನಿಮಗೆ ಇದ್ದೇ ಇರುತ್ತದೆ.

ಟ್ರಯಲ್ ಮೇಕಪ್ ನೆರವು

ಇತ್ತೀಚೆಗೆ ಆನ್‌ ಲೈನ್‌ ನಲ್ಲಿ `ಟ್ರೈ  ಬೈ’ ಸ್ಲೋಗನ್‌ ಮೇರೆ ಮೀರಿದೆ. ಇದನ್ನೇ ನೀವು ಮೇಕಪ್‌ ರೂಮ್ ‌ನಲ್ಲೂ ಫಾಲೋ ಮಾಡಿದರೆ ಆಯ್ತು. ನೀವು ಆರಿಸುವ ಮೇಕಪ್‌ ಆರ್ಟಿಸ್ಟ್ ಅವರಿಂದ ಅಗತ್ಯ ಟ್ರಯಲ್ ಮೇಕಪ್‌ ಮಾಡಿಸಿ. ಇದರಿಂದ ಆಕೆ ಎಂಥ ಮೇಕಪ್‌ ಮಾಡುತ್ತಾರೆ, ಯಾವ ಸುಧಾರಣೆ ಬೇಕು ಎಂದು ನಿಮಗೆ ತಿಳಿಯುತ್ತದೆ. ಮೇಕಪ್‌ ತೀರಾ ಕೆಟ್ಟದಾಗಿದೆ ಎನಿಸಿದರೆ, ನೀವು ಖಂಡಿತಾ ಬೇರೆ ಆರ್ಟಿಸ್ಟ್ ನ್ನು ಆರಿಸಬಹುದು.

ಪ್ರಾಡಕ್ಟ್ಸ್ ಬಗೆ ತಿಳಿದಿರಲಿ

ನೀವು ಆರಿಸಿದ ಆರ್ಟಿಸ್ಟ್, ಅವರಿಗೆ ಟ್ರೆಂಡ್‌ ಬಗ್ಗೆ ಗೊತ್ತಿರಬಹುದು, ಆದರೆ ಪ್ರಾಡಕ್ಟ್ಸ್ ಮಾತ್ರ ಲೋಕಲ್ ದೇ ಬಳಸುತ್ತಿದ್ದರೆ ಕಷ್ಟ. ಹೀಗಾಗಿ ನೀವು ಆರ್ಟಿಸ್ಟ್ ಆರಿಸುವಾಗ, ಆಕೆ ಎಂಥ ಪ್ರಾಡಕ್ಟ್ಸ್ ಬಳಸುತ್ತಾರೆ ಎಂಬುದನ್ನು ಅಗತ್ಯ ಕೇಳಿ ತಿಳಿಯಿರಿ. ಕೇವಲ ಸುಂದರವಾಗಿ ಕಾಣಿಸಿದರೆ ಸಾಲದು, ಚರ್ಮದ ಆರೋಗ್ಯ ಮುಖ್ಯ. ಹೀಗಾಗಿ ಸೌಂದರ್ಯಕ್ಕೆ ಆದ್ಯತೆ ಕೊಟ್ಟು, ನೀವು ಪ್ರಾಡಕ್ಟ್ಸ್ ಜೊತೆ ಕಾಂಪ್ರಮೈಸ್‌ ಮಾಡಿಕೊಳ್ಳುವ ಹಾಗಿಲ್ಲ. ನೀವೇ ಖುದ್ದಾಗಿ ಆಕೆಯ ಮೇಕಪ್‌ ಕಿಟ್ಸ್ ಪ್ರಾಡಕ್ಟ್ಸ್ ಪರಿಶೀಲಿಸಿ. ಇದರಿಂದ ಪ್ರಾಡಕ್ಟ್ಸ್ ಗುಣಮಟ್ಟ ಹಾಗೂ ಹೈಜೀನ್‌ ಗೆ ಆಕೆ ನೀಡುವ ಮಹತ್ವ ತಿಳಿಯುತ್ತದೆ.

ಆರ್ಟಿಸ್ಟ್ ಸಂಭಾವನೆ ವಿಚಾರಿಸಿ

ನೀವು ಆರ್ಟಿಸ್ಟ್ ಫೈನೈಲ್ಸ್ ಮಾಡುವ ಮೊದಲು, ಕೇವಲ ಒಬ್ಬರ ಬಳಿ ವಿಚಾರಿಸಿ, ಇವರೇ ಇರಲಿ ಎಂದು ನಿರ್ಧರಿಸಬೇಡಿ, ಬದಲಿಗೆ ಇಬ್ಬರು ಮೂವರನ್ನು ವಿಚಾರಿಸಿ. ಆಕೆ ಎಂತಹ ಪ್ಯಾಕೇಜ್‌ ನೀಡುತ್ತಾರೆ, ಎಂಥ ಮೇಕಪ್‌ ಮಾಡ್ತಾರೆ, ಎಂಥ ಪ್ರಾಡಕ್ಟ್ಸ್ ಬಳಸುತ್ತಾರೆ….. ಇತ್ಯಾದಿ ಪಟ್ಟಿ ಮಾಡಿ, ಎಲ್ಲವನ್ನೂ ಪರಿಶೀಲಿಸಿ, ಬೆಸ್ಟ್ ಇರುವಂಥದ್ದನ್ನೇ ಆರಿಸಿ. ಅದು ನಿಮ್ಮ ಬಜೆಟ್‌ ಗೆ ತೂಗುವಂತಿರಲಿ.

ಸೋಶಿಯಲ್ ಮೀಡಿಯಾ ಗಮನಿಸಿ ಇಂದು ಬಹುತೇಕ ಬಿಸ್‌ ನೆಸ್‌ ಮಂದಿ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ‌ಆಗಿರುತ್ತಾರೆ. ಅದರ ಮೂಲಕ ತಮ್ಮ ಬಿಸ್‌ ನೆಸ್‌ ಅಭಿವೃದ್ಧಿ ಪಡಿಸಿಕೊಳ್ಳುತ್ತಾರೆ. ಹೀಗಾಗಿ ನಿಮಗೂ ಈ ಪ್ಲಾಟ್‌ ಫಾರ್ಮ್ ಮೂಲಕ ಹೆಚ್ಚಿನ ನೆರವು ಸಿಗಬಹುದು. ಪ್ಯಾಕೇಜ್‌ ಕುರಿತಾದ ಡೀಟೈಲ್ಸ್, ಜನರ ರಿವ್ಯೂ, ಬ್ರೈಡಲ್ ಫೋಟೋ ಇತ್ಯಾದಿ. ಈ ಎಲ್ಲಾ ಸಲಹೆಗಳನ್ನೂ ಸರಿಯಾಗಿ ಪಾಲಿಸಿದರೆ ನಿಮಗೆ ಉತ್ತಮ ಆರ್ಟಿಸ್ಟ್ ಸಿಗಬಹುದು.

ಬಿ. ಪದ್ಮಜಾ ಭಟ್

ಮಲ್ಟಿಪರ್ಪಸ್ನೇಲ್ ಆರ್ಟ್

ಮದುವೆ ಮುಹೂರ್ತಕ್ಕೆ ಮೊದಲು 2-3 ಫಂಕ್ಷನ್ಸ್ ಇದ್ದೇ ಇರುತ್ತದೆ. ಹೀಗಾಗಿ ಪ್ರತಿ ಸಲ ಡ್ರೆಸ್‌ ಬದಲಾಯಿಸಿದಾಗಲೂ, ಅದಕ್ಕೆ ಹೊಂದುವಂಥ ಮ್ಯಾಚಿಂಗ್‌ ನೇಲ್ ‌ಪಾಲಿಶ್‌ ಬದಲಾಯಿಸುತ್ತಾ ಕೂರಲು ವಧುವಿನ ಬಳಿ ಸಮಯ ಎಲ್ಲಿ? ಹೀಗಾಗಿ ನಿಮ್ಮ ಆರ್ಟಿಸ್ಟ್ ಬಳಿ ಮಾತನಾಡಿ, ನಿಮ್ಮ ಪ್ರಮುಖ ಡ್ರೆಸ್‌/ಸೀರೆಗಳ ಕಲರ್‌ ಇತ್ಯಾದಿ ಹೇಳಿ, ಅದಕ್ಕೆ ಹೊಂದುವ ನೇಲ್ ‌ಆರ್ಟ್ ಮಾಡಿಸಿಕೊಳ್ಳಿ. ಇದು ಬಹುತೇಕ ಎಲ್ಲಾ ಡ್ರೆಸ್‌ ಗೂ ಗ್ರೇಸ್‌ ಪುಲಿ ಹೊಂದುಂತಿರಲಿ.

ಒಂದಿಷ್ಟು ಕಿವಿ ಮಾತು

ಮದುವೆಯ ಎಲ್ಲಾ ಫಂಕ್ಷನ್‌ ಗೂ ನಿಮ್ಮದೇ ಪರ್ಸನ್‌ ಲಿಪ್‌ ಸ್ಟಿಕ್‌ ಬಳಸಿಕೊಳ್ಳಿ.

ಎಷ್ಟೋ ಸಲ ಪಾರ್ಲರ್‌ ನವರು, ತಮ್ಮ ಬಳಿ ಇರುವ ಲಿಪ್‌ ಸ್ಟಿಕ್‌ ಶೇಡ್ಸ್ ನಲ್ಲೇ ಮಿಕ್ಸ್ ಮ್ಯಾಚ್‌ ಮಾಡಿ ನವ ವಧುವಿಗೆ ಲಿಪ್‌ ಸ್ಟಿಕ್‌ ಶೇಡ್ಸ್ ಹೊಂದಿಸಲು ಯತ್ನಿಸುತ್ತಾರೆ. ಬಹುಶಃ ನಿಮಗೆ ಇದು ಇಷ್ಟ ಆಗದಿರಬಹುದು ಅಥವಾ ಮ್ಯಾಟ್‌ ಲಿಪ್‌ ಸ್ಟಿಕ್‌ ನಿಮಗೆ ಒಪ್ಪಿಗೆ ಇಲ್ಲದಿರಬಹುದು. ಅವರು ಅಂಥದ್ದನ್ನೇ ಬಳಿದರೆ ಏನು ಲಾಭ? ಹೀಗಾಗಿ ನಿಮ್ಮ ಡ್ರೆಸ್‌ ಗೆ ಹೊಂದುವಂಥ 3-4 ಶೇಡ್ಸ್ ನ ಲಿಪ್‌ ಸ್ಟಿಕ್‌ ಇರಿಸಿಕೊಳ್ಳಿ. ಇದರಿಂದ ಧಾರೆಯ ದಿನ ನೀವು ಮಿರಿ ಮಿರಿ ಮಿಂಚುವಿರಿ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ