S.J*

ಬ್ಲಾಕ್‌ಬಸ್ಟರ್ ಅಮರನ್ ಸಿನಿಮಾ ಬಳಿಕ ಶಿವಕಾರ್ತಿಕೇಯನ್ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಪ್ರಾಜೆಕ್ಟ್ ಮದರಾಸಿ. ಹೈ-ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಗ್ಲಿಂಪ್ಸ್‌ ಭಾರೀ ಸದ್ದು ಮಾಡಿವೆ. ಈ ಚಿತ್ರಕ್ಕೆ ಎ.ಆರ್. ಮುರುಗದಾಸ್ ಆಕ್ಷನ್‌ ಕಟ್‌ ಹೇಳಿದ್ದು, ಸಪ್ತ ಸಾಗರದಾಚೆ ಎಲ್ಲೋ ನಾಯಕಿ ರುಕ್ಮಿಣಿ ವಸಂತ್ ಶಿವಕಾರ್ತಿಕೇಯನ್‌ ಗೆ ಜೋಡಿಯಾಗಿ ಸಾಥ್‌ ಕೊಟ್ಟಿದ್ದಾರೆ. ಸದ್ಯ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರತಂಡ ಮದರಾಸಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
ಸೆಪ್ಟೆಂಬರ್ 5, 2025 ರಂದು ಮದರಾಸಿ ಸಿನಿಮಾ ತೆರೆಗೆ ಬರ್ತಿದೆ. ಸ್ಪೆಷಲ್ ಪೋಸ್ಟರ್‌ ಮೂಲಕ‌ ಚಿತ್ರತಂಡ ಬಿಡುಗಡೆ ದಿನಾಂಕ ರಿವೀಲ್‌ ಮಾಡಿದೆ. ಪೋಸ್ಟರ್‌ ನಲ್ಲಿ ಶಿವಕಾರ್ತಿಕೇಯನ್‌ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ವಿದ್ಯುತ್ ಜಮ್ವಾಲ್ ಖಳನಾಯಕನಾಗಿ ತೊಡೆ ತಟ್ಟಿದ್ದು, ಈ ಹಿಂದೆ ತುಪ್ಪಕ್ಕಿ ಚಿತ್ರದಲ್ಲಿ ಅಬ್ಬರಿಸಿದ್ದ ವಿದ್ಯುತ್‌ ಜಮ್ವಾಲ್‌ ಮತ್ತೊಮ್ಮೆ ಮುರುಗದಾಸ್‌ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ.

madrasi 1

ಬಿಜು ಮೆನನ್, ಶಬೀರ್ ಮತ್ತು ವಿಕ್ರಾಂತ್ ಹಲವರು ತಾರಾಬಳಗದಲ್ಲಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಅರುಣ್ ವೆಂಜರಮೂಡು ಕಲಾ ನಿರ್ದೇಶನ, ಕೆವಿನ್ ಮಾಸ್ಟರ್ ಮತ್ತು ದಿಲೀಪ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ. ಎನ್. ಶ್ರೀಲಕ್ಷ್ಮಿ ಪ್ರಸಾದ್ ಶ್ರೀ ಲಕ್ಷ್ಮಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಮದರಾಸಿ ಮೂಡಿ ಬರ್ತಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ