ಶರತ್ ಚಂದ್ರ 

ಕಳೆದ ಶುಕ್ರವಾರ ಬಿಡುಗಡೆಯಾದ ನಟ ಅಜಯ್ ರಾವ್ ನಿರ್ಮಾಣದ ‘ಯುದ್ಧಕಾಂಡ ಚಾಪ್ಟರ್ 2’ ಸಾಕಷ್ಟು ಸದ್ದು ಮಾಡುತ್ತಿದೆ.ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಬಂದಿದ್ದು  ಪ್ರೇಕ್ಷಕರಿಂದ ಕೂಡ ಸಾಕಷ್ಟು ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಚಿತ್ರದಲ್ಲಿ ಅಜಯ್ ರಾವ್, ಪ್ರಕಾಶ್ ಬೆಳವಾಡಿಯವರ ಅಭಿನಯ ಜನಕ್ಕೆ ಇಷ್ಟವಾಗಿದೆ. ಅದಕ್ಕಿಂತ ಹೆಚ್ಚಾಗಿ ನಿವೇದಿತಾ ಪಾತ್ರ ವಹಿಸಿರುವ ಅರ್ಚನಾ ಜೋಯಿಸ್ ಅಭಿನಯದ ಬಗ್ಗೆ  ಕೂಡ ಪ್ರಶಂಸೆಯ ಮಹಾ ಪೂರಾ ಹರಿದು ಬರ್ತಾ ಇದೆ.

1000496350

ಈ ಹಿಂದೆ ಸಂದರ್ಶನವೊಂದರಲ್ಲಿ ಅಜಯ್ ರಾವ್ ಮಾತಾಡಿ, ಈ ಚಿತ್ರದ protagonist ನಾನಲ್ಲ ಅರ್ಚನಾ ಅಂತ ಹೇಳಿದ್ದರು.ಅರ್ಚನಾ ಕೂಡ ತನಗೆ ಸಿಕ್ಕಿರುವ ಪವರ್ ಫುಲ್ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.ಕೋರ್ಟ್ ಕಟಕಟೆಯಲ್ಲಿ ನ್ಯಾಯಕ್ಕಾಗಿ ಹೊರಡುವ ತಾಯಿಯಾಗಿ, ಸಿಟ್ಟು, ಹತಾಶೆ,ಅಸಹಾಯಕತೆಯನ್ನು ಅಭಿನಯದ ಮೂಲಕ ಅರ್ಚನಾ ಚೆನ್ನಾಗಿ ಪ್ರದರ್ಶಿಸಿದ್ದಾರೆ.

1000496347

ಕೆ. ಜಿ. ಎಫ್ ಚಾಫ್ಟರ್ 1 ಮತ್ತು 2 ರಲ್ಲಿ ರಾಕಿ ಬಾಯ್ ತಾಯಿಯಾಗಿ ಪ್ರಪಂಚದಾದ್ಯಂತ ಗಮನ ಸೆಳೆದ ಅರ್ಚನಾ ಅನಂತರ ಮಾಡಿದ್ದು ಬೆರಳೆಣಿಕೆಯ ಚಿತ್ರಗಳು. ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ಮಾಡಿದ್ದ ಅರ್ಚನಾ ಆನಂತರ ನವೀನ್ ಗೆ ನಾಯಕಿಯಾಗಿ ‘ಕ್ಷೇತ್ರ ಪತಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರ ಅಷ್ಟೇನು ಯಶಸ್ಸನ್ನು ಕಂಡಿರಲಿಲ್ಲ.ಶಿವರಾಜ್ ಕುಮಾರ್ ನಟನೆಯ ಹಿಟ್ ಚಿತ್ರ ಘೋಸ್ಟ್ ಚಿತ್ರದಲ್ಲಿ  ಕೂಡ ನಟಿಸಿದ್ದಾರೆ

1000496358

ಭರತನಾಟ್ಯ ನೃತ್ಯ ಕಲೆಯಲ್ಲಿ ಪರಿಣಿತಿ ಹೊಂದಿರುವ ಅರ್ಚನಾ ಜೋಯಿಸ್, ಸಾಕಷ್ಟು ಕಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈಗಾಗಲೇ ಮರಾಠಿ ಚಿತ್ರದಲ್ಲಿ ಕೂಡ ನಟಿಸಿರುವ ಅರ್ಚನ ಜೋಯಿಸ್ ಕನ್ನಡದಲ್ಲಿ ಇನ್ನಷ್ಟು ಗಟ್ಟಿ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ಜನರನ್ನು ರಂಜಿಸಲಿ ಎಂದು ನಮ್ಮ ಆಶಯ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ