ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ನಟ ಬಾಲಕೃಷ್ಣ ಅವರ ಕುರಿತು ಮಾಡಿರುವ ಕಾಮೆಂಟ್‌ಗಳು ಸಾಮಾಜಿಕ ಜಲಾತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ, ಬಾಲಯ್ಯ ಅವರ ಜೊತೆ ಸಿನಿಮಾ ಮಡಿದ್ದು, ತಪ್ಪು ಎಂದು ನಟಿ ಹೇಳಿದ್ದು, ಈ ವಿಚಾರ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಈ ಚೆಂದುಳ್ಳಿ ಚೆಲುವೆ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾ ಮಾಡುವುದನ್ನು ಸಾಕಷ್ಟು ಕಡಿಮೆ ಮಾಡಿದ್ದಾರೆ. ಆದರೆ, ಸಿನಿಮಾಗಳಲ್ಲಿ ಅದ್ಯಾವಾಗ ನಟಿಸುತ್ತಾರೆ ಅಂತಾ ಅಭಿಮಾನಿಗಳು ಕಾದು ನೋಡುತ್ತಿದ್ದರು. ʻಬಾಹುಬಲಿʼ ಸಿನಿಮಾ ನಂತರ ಅನುಷ್ಕಾ ಶೆಟ್ಟಿ ಸಿನಿಮಾ ಕಡೆ ಅಷ್ಟೊಂದು ಗಮನ ಕೊಟ್ಟಿರಲಿಲ್ಲ. ಆದಷ್ಟು ಸಿನಿಮಾಗಳಿಂದ ದೂರವೇ ಉಳಿದಿದ್ದು, ಆಗೊಮ್ಮೆ ಈಗೊಮ್ಮೆ ಸಿನಿಮಾ ಮಾಡುತ್ತಿದ್ದಾರೆ.
ರಾಜಮೌಳಿ ನಿರ್ದೇಶನದ ʻಬಾಹುಬಲಿ-1ʼ, ʻಬಾಹುಬಲಿ-2ʼ ಸಿನಿಮಾಗಳು ಪ್ಯಾನ್ಸ್ ಇಂಡಿಯಾ ಲೆವೆಲ್‌ಗೆ ಹೆಸರು ತಂದು ಕೊಟ್ಟಿವು. ಆ ಸಿನಿಮಾಗಳ ನಂತರ ಅನುಷ್ಕಾ ಶೆಟ್ಟಿ ಅವರಿಗೆ ಸಾಲು ಸಾಲು ಸಿನಿಮಾ ಆಫರ್‌ಗಳು ಬರಲು ಆರಂಭವಾದವರು. ಕ್ಯೂಟ್ ಪಾತ್ರಗಳಲ್ಲಿ ನಟಿಸುತ್ತಾ, ಅಭಿಮಾನಿಗಳ ಮನ ಕದ್ದಿರುವ ಈ ಚೆಲುವೆಯ ಕ್ರೇಜ್ ಸಿಕ್ಕಾಪಟ್ಟೆ ಹೆಚ್ಚಾಗಿದ್ದರೂ ಕೂಡ, ಸಿನಿಮಾಗಳಿಂದ ದೂರ ಉಳಿದಿದ್ದರು. 2018ರಿಂದ ಇಲ್ಲಿಯವರೆಗೆ ಕೇವಲ ಮೂರು ಸಿನಿಮಾಗಳನ್ನಷ್ಟೆ ಮಾಡಿದ್ದಾರೆ.
2023ರ ವರೆಗೆ ಸಿನಿಮಾಗಳಿಂದ ದೂರ ಉಳಿದಿದ್ದು ಅನುಷ್ಕಾ ಶೆಟ್ಟಿ, ಇನ್ನೇನು ಸಿನಿಮಾ ರಂಗಕ್ಕೇ ಗುಡ್ ಬೈ ಹೇಳ್ತಾರೇನೋ ಎನ್ನುವಾಗಲೇ, ಇದೀಗ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅನುಷ್ಕಾ ಶೆಟ್ಟಿಗೆ ಸಂಬಂಧ ಸುದ್ದಿಯೊಂದಿಗೆ ಮೂರ್ನಾಲ್ಕು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬಾಲಕೃಷ್ಣ ಅವರೊಂದಿಗೆ ಸಿನಿಮಾದಲ್ಲಿ ನಟಿಸಿದ್ದು ತಾವು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ ಎನ್ನುವ ಸುದ್ದಿ ಇದೀಗ ಟಾಲಿವುಡ್ ಅಂಗಳದಲ್ಲಿ ಸಿಕ್ಕಾಟಪಟ್ಟೆ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಬಾಲಯ್ಯ ಕುರಿತು ನಟಿ ಅನುಷ್ಕಾ ಈ ರೀತಿ ಹೇಳಲು ಕಾರಣವೇನು? ಅನ್ನೋ ಪ್ರಶ್ನೆಯೂ ಮೂಡಿದೆ.
ಸಿನಿಮಾದಲ್ಲಿ ಹೀರೋ ಇಲ್ಲ ಅಂದ್ರೂ ಮಹಿಳಾ ಪ್ರಧಾನ ಮೂವಿಗಳಲ್ಲಿ ನಟಿಸಿ ಬಾಕ್ಸ್ ಆಫೀಸ್ ಅನ್ನು ಧೂಳ್ ಎಬ್ಬಿಸುವ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು. ಅನುಷ್ಕಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೇನೆ ಅದಕ್ಕಿರುವ ಕ್ರೇಜ್ ಬೇರೇನೆ ಇತ್ತು. ಈಗೀಗ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಾ ಸೈ ಎನಿಸಿಕೊಂಡಿರುವ ಈ ತಾರೆ, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಮೊದಲಿನಲ್ಲಿ ರೊಮ್ಯಾಂಟಿಕ್ ಪಾತ್ರಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಅಂತಹ ಸಿನಿಮಾಗಳಲ್ಲಿ ಬಾಲಯ್ಯ ಅವರ ಸಿನಿಮಾ ಕೂಡ ಒಂದು. ನಟಿ ಅನುಷ್ಕಾ ಶೆಟ್ಟಿ ಬಾಲಯ್ಯ ಅವರ ಜೊತೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಿದ್ದರು.
ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ನಟಿ ಅನುಷ್ಕಾ ಶೆಟ್ಟಿ, ಬಾಲಯ್ಯ ಅವರ ಜೊತೆ ʻಒಕ್ಕ ಮಗಾಡುʼ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ 2008ರಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿತ್ತು, ಆದರೆ ಸಿನಿಮಾ ಮಾತ್ರ ನಿರೀಕ್ಷಿಸಿದಂತೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವಲ್ಲಿ ವಿಫಲವಾಯಿತು. ಈ ಸಿನಿಮಾ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ನಿರಾಸೆಗೊಂಡಿದ್ದರು.
ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಈ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾ, ಈ ಚಿತ್ರದಲ್ಲಿ ನಾನು ನಟಿಸಿದ್ದು ನನ್ನ ಜೀವನದಲ್ಲಿ ಮಾಡಿದ ಅತೀ ದೊಡ್ಡ ತಪ್ಪು ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ನಾನು ಯಾವ ಕಾರಣಕ್ಕಾಗಿ ಇದ್ದೇನೆ ಎಂದು ಸಹ ನನಗೆ ಗೊತ್ತಿರಲಿಲ್ಲ, ಈ ಸಿನಿಮಾದಲ್ಲಿ ನಟನೆ ಮಾಡಲು ನಿರ್ಧರಿಸಿದ್ದು, ನಾನು ಮಾಡಿದ ತಪ್ಪು ಎಂದು ಅನುಷ್ಕಾ ಹೇಳಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ವೈರಲ್ ಆಗುತ್ತಿದ್ದು, ಈ ವಿಚಾರ ಸದ್ಯ ಟಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ.
ಇನ್ನೂ, ಅನುಷ್ಕಾ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಸದ್ಯ ʻಘಾಟಿʼ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಇದರಲ್ಲಿ ಅನುಷ್ಕಾ ಅವರ ಲುಕ್ ಅಭಿಮಾನಿಗಳ ನಿದ್ದೆ ಕೆಡಿಸಿದೆ, ಸಿನಿಮಾದ ಶೂಟಿಂಗ್ ಸದ್ಯ ಭರದಿಂದ ಸಾಗುತ್ತಿದ್ದು, ರಿಲೀಸ್‌ಗಾಗಿ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಮತ್ತೊಂದೆಡೆ,ಅನುಷ್ಕಾ ಶೆಟ್ಟಿ ʻಖತನಾರ್ʼ ಎಂಬ ಮಲಯಾಳಂ ಸಿನಿಮಾದಲ್ಲಿಯೂ ನಟಿಸುತ್ತಿದ್ದು, ಈ ಎರಡು ಸಿನಿಮಾಗಳು ಹಿಟ್ ಆಗುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಸಿನಿಮಾದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.