ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆಯಾದರು. ಆದರೆ, ಮೇಘನಾ ರಾಜ್ ವಿವಾಹ ಆದ ಕೆಲವೇ ವರ್ಷಗಳಲ್ಲಿ ಚಿರಂಜೀವಿ ಅವರನ್ನು ಳೆದುಕೊಂಡರು. ಆದರೆ, ಅವರ ಜೊತೆಗಿನ ನೆನಪು ಅವರಲ್ಲಿ ಸದಾ ಉಳಿಯುವಂಥದ್ದು. ಇದಕ್ಕೆ ಸಾಕ್ಷಿ ಒದಗಿಸುವಂತಹ ಫೋಟೋಗಳು ಇದೀಗ ವೈರಲ್ ಆಗಿವೆ.

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಸಿ ವಿವಾಹ ಆಗಿ ಕೆಲವೇ ವರ್ಷ ಸುಖಸಂಸಾರ ನಡೆಸಿದ್ದರು. ಚಿರು ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. ಆ ಬಳಿಕ ಮೇಘನಾ ಅವರು ಚಿರುನ ನೆನಪಿನಲ್ಲೇ ಬದುಕುತ್ತಿದ್ದಾರೆ.

ಮೇಘನಾ ರಾಜ್ ಎರಡನೇ ಮದುವೆ ಆಗುತ್ತಾರೆ ಎಂಬ ವದಂತಿ ಮೊದಲಿನಿಂದಲೂ ಇದೆ. ವಿಜಯ ರಾಘವೇಂದ್ರ ಹಾಗೂ ಮೇಘನಾ ಎರಡನೇ ವಿವಾಹ ಆಗಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಇದೀಗ ಮೇಘನಾ ರಾಜ್​ ಎಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇದಕ್ಕೆ ಕಾರಣವೆಂದರೆ, ಅವರು ತಮ್ಮ ಇನ್ಸ್​ಟಾದಲ್ಲಿ ಹಂಚಿಕೊಂಡಿರುವ ಮೂರು ಫೋಟೋಗಳು ಹಾಗೂ ಅದಕ್ಕೆ ನೀಡಿರುವ ಕ್ಯಾಪ್ಶನ್.

ಪತಿ ಚಿರಂಜೀವಿ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಇದಕ್ಕೆ ‘ಪ್ರತಿ ಜೀವಿತಾವಧಿಗೂ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಅಂದರೆ ಪ್ರತಿ ಜೀವಿತಾವಧಿಗೂ ಚಿರು ಬೇಕು ಎಂದು ಅವರು ಹೇಳಿದ್ದಾರೆ. ಈ ಕ್ಯಾಪ್ಶನ್ ಮೂಲಕ ಎಲ್ಲ ವದಂತಿಗೂ ಫುಲ್ ಸ್ಟಾಪ್ ಇಟ್ಟಿದ್ದಾರೆ ಮೇಘನಾ.

ಚಿರಂಜೀವಿ ನಿಧನದ ಬಳಿಕ ರಾಯನ್ ಬಂದಿದ್ದಾನೆ. ರಾಯನ್ ಹಾಗೂ ಚಿರು ನಡುವೆ ಸಾಕಷ್ಟು ಹೋಲಿಕೆ ಇದೆ ಎಂದು ಮೇಘನಾ ಅನೇಕ ಬಾರಿ ಹೇಳುತ್ತಿರುತ್ತಾರೆ. ಅವರು ಸದ್ಯಕ್ಕೆ ಎರಡನೇ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ ಎಂಬ ಬಗ್ಗೆಯೂ ಅವರು ಈ ಮೂಲಕ ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಮೇಘನಾ, ‘ಚಿರುಗೆ ಸರಿ ಎನಿಸಿದರೆ ಆತನೇ ನನಗೆ ವ್ಯಕ್ತಿಯೊಬ್ಬನನ್ನು ಕಳುಹಿಸುತ್ತಾನೆ. ಇಲ್ಲದಿದ್ದರೆ ನಾನು ಸಿಂಗಲ್ ಆಗಿಯೇ ಇರುತ್ತೇನೆ’ ಎಂದು ಮೇಘನಾ ರಾಜ್ ಹೇಳಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ