ರಾಘವೇಂದ್ರ ಅಡಿಗ ಎಚ್ಚೆನ್.

ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ “ ಪ್ರೇಮಂ ಮಧುರಂ” ಚಿತ್ರ ತೆರೆಗೆ ಬರಲು ಸಜ್ಜಾಗಿದೆ, ಎಲ್ಲಾ ಅಂದುಕೊಂಡಂತೆ ಆದರೆ ಈ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ,
ಈ ಹಿನ್ನೆಲೆಯಲ್ಲಿ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಿದೆ.ಗಾಂಧಿ.ಎ.ಬಿ ಸಿನಿಮಾಕ್ಕೆ ಕಥೆ, ನಿರ್ದೇಶನ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿಯರಾದ ಐಶ್ವರ್ಯ ದಿನೇಶ್, ಅನುಷಾ ಜೈನ್ ಕಾಣಿಸಿಕೊಂಡಿದ್ದಾರೆ

premam

ನಿರ್ದೇಶಕ ಕಮ್ ನಾಯಕ ಗಾಂಧಿ ಮಾತನಾಡಿ ಸಿನಿಮಾ ಪ್ರತಿಯೊಬ್ಬರ ಬದುಕಲ್ಲಿ ಪ್ರೀತಿ ಯಶಸ್ಸು, ಇಲ್ಲವೆ ಸೋತಿರುತ್ತದೆ. ಅವರೆಲ್ಲರಿಗೂ ಅನ್ವಯವಾಗುತ್ತದೆ. ಹೊಸದಾಗಿ ಏನನ್ನು ಹೇಳಲಿಕ್ಕೆ ಹೋಗಿಲ್ಲ. ಸ್ಕೂಲ್, ಕಾಲೇಜ್‍ದಲ್ಲಿ ಅನುಭವಿಸಿದ ಕಂಡ ಒಂದಷ್ಟು ಅಂಶಗಳನ್ನು ಚಿತ್ರರೂಪಕ್ಕೆ ತರಲಾಗಿದೆ. ಮೂರು ಹಂತಗಳಲ್ಲಿ ಪ್ರೀತಿ ಹೇಗಿರುತ್ತೆ ಎಂಬುದನ್ನು

premam 2

ತೋರಿಸಲಾಗಿದೆ. ಬೆಂಗಳೂರು, ಮಂಗಳೂರು, ಬೈಂದೂರು, ಉಡುಪಿ ಕಾಲ್ತೋಡು, ಮಲ್ಪೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕಾಸು ಕೊಟ್ಟು ಬರುವ ಪ್ರೇಕ್ಷಕನಿಗೆ ಸಂಪೂರ್ಣ ಮನರಂಜನೆ ಕೊಡಲಿದೆ. ಚುಂಬನ ದೃಶ್ಯದಲ್ಲಿ ಪ್ಯಾನಿಕ್ ಆಗಿದ್ದೆ ಎಂದು ಹೇಳಿದರು

premam 5

ನಿರ್ಮಾಪಕ ಅರಗೊಂಡ ಶೇಖೆರ್‍ರೆಡ್ಡಿ ಮಾತನಾಡಿ ಹುಟ್ಟೂರು ತಿರುಪತಿ, ಬದುಕು ಕಂಡಿದ್ದು ಬೆಂಗಳೂರು. ಇಲ್ಲಿನ ಋಣ ಹಾಗೂ ಕನಿಷ್ಠ 10 ಹುಡುಗರಿಗೆ ಬದುಕು ಕೊಡುವ ಸಲುವಾಗಿ ಚಿತ್ರ ಮಾಡಿದ್ದೇನೆ. ಚಿರಂಜೀವಿ ಅಪ್ಪಟ ಅಭಿಮಾನಿಯಾಗಿ ಅವರ ಮಾತಿನಂತೆ ನಡೆದುಕೊಂಡಿದ್ದೇನೆ.

premam 3

ಅಂದರೆ ಮಾತು ಕೊಡುವ ಮುಂಚೆ ನೀನು ಯಜಮಾನ. ಕೊಟ್ಟ ಮೇಲೆ ಗುಲಾಮ. ಅದರಂತೆ ನಡೆದುಕೊಳ್ಳುವುದು ಸೂಕ್ತ ಅಂತ ಮೆಘಾಸ್ಟಾರ್ ನುಡಿಯನ್ನು ಪಾಲಿಸಿದ್ದೇನೆ ಎಂದರು
ತಾರಾಗಣದಲ್ಲಿ ಸಿಹಿಕಹಿಚಂದ್ರು, ರಾಜೇಶ್ವರಿ, ಲಪಂಗ್‍ರಾಜ, ಅನೂಪ್ ಅಗಸ್ತ್ಯ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ವಿಶಾಲ್ ಆಲಾಪ ಸಂಗೀತ ಸಂಯೋಜಿಸಿದ್ದಾರೆ.

premam 4

ಛಾಯಾಗ್ರಹಣ ಮಂಜುನಾಥ ಹೆಗಡೆ, ಸಂಕಲನ ಸಂಜೀವ್ ಜಾಗಿರ್‍ದಾರ್, ಹಿನ್ನಲೆ ಶಬ್ದ ಶ್ರೀಮಾನ್ ಗಂಧರ್ವ, ನೃತ್ಯ ಮನೀಷ್ ಕೇಶವ್, ಲೋಕೇಶ್ ಅರ್ಜುನ್, ರಾಂಕುಮಾರ್.ಡಿ, ಗೌತಂ ಸೆಲ್ವರಾಜ್ ಅವರದಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ