ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅಂಥಾ ಗುಂಡ(ನಾಯಿ) ಮತ್ತು ಹುಡುಗನೊಬ್ಬನ ನಡುವಿನ  ಸಂಬಂಧ ಹಾಗೂ ನಿಷ್ಕಲ್ಮಶ ಪ್ರೇಮದ ಕಥೆಯನ್ನು ಹೇಳುವ ಚಿತ್ರ ‘ನಾನು ಮತ್ತು ಗುಂಡ-,2’  ಪೊಯೆಮ್ ಪಿಕ್ಚರ್ಸ್ ಅಡಿಯಲ್ಲಿ  ರಘುಹಾಸನ್ ಕಥೆ ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶನ ಮಾಡಿರುವ ಈ ಚಿತ್ರದ ಟೈಟಲ್ ಸಾಂಗ್ ಲಾಂಚ್  ಕಾರ್ಯಕ್ರಮ ಈಚೆಗೆ ನಡೆಯಿತು.

ಜೋಗಿ ಪ್ರೇಮ್ ಅವರು ಈ ಮೆಲೋಡಿ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಾಡಿನ ಸ್ವರ ಸಂಯೋಜಕ ಆರ್.ಪಿ.ಪಟ್ನಾಯ್ ಕೂಡ ಹಾಜರಿದ್ದರು. ಪ್ರಜಾಕಿರಣ ಸೇವಾ ಕಿರಣ ಟ್ರಸ್ಟ್ ನ ನೂರಾರು ಮಕ್ಕಳು ಅತಿಥಿಗಳನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

1000508564

ಈ ಹಿಂದೆ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡ  ನಾನು ಮತ್ತು ಗುಂಡ ಚಿತ್ರದ ಮುಂದುವರೆದ ಭಾಗವಾದ “ನಾನು ಮತ್ತು ಗುಂಡ -2” ತೆರೆಗೆ ಬರಲು ಸಿದ್ದವಾಗಿದ್ದು  ಇತ್ತೀಚೆಗಷ್ಟೇ ಈ ಚಿತ್ರದ ಟೀಸರನ್ನು ವಿಜಯ್ ಕಿರಗಂದೂರು ಅವರ ಪತ್ನಿ ಶೈಲಜಾ ಕಿರಗಂದೂರು ರಿಲೀಸ್ ಮಾಡಿದ್ದರು.

ಈ ಚಿತ್ರದಲ್ಲಿ ರಾಕೇಶ್ ಆಡಿಗ ನಾಯಕನಾಗಿದ್ದು, ರಚನಾ ಇಂದರ್ ನಾಯಕಿ ಪಾತ್ರ  ನಿರ್ವಹಿಸಿದ್ದಾರೆ. ಚಿಕ್ಕ ವಯಸಿನ ರಾಕೇಶನ ಪಾತ್ರದಲ್ಲಿ ಮಾಸ್ಟರ್ ಯುವನ್ ಅವರು ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೇಮ್ ರಘು ನನ್ನ ಜತೆ ತುಂಬಾ ವರ್ಷ ಕೆಲಸ ಮಾಡಿದ್ದಾರೆ. ಆತ ಒಳ್ಳೆ ಟೆಕ್ನೀಷಿಯನ್. ನಾವು ಏನೇನೋ ಕಷ್ಟಪಟ್ಟು ಸಿನಿಮಾ ಮಾಡಿದರೂ,  ಒಂದು ನಾಯಿಯನ್ನು ಪಳಗಿಸಿ ಆಕ್ಟ್  ಮಾಡಿಸೋದು ಸುಲಭದ ಮಾತಲ್ಲ. ಈ ಸಾಂಗ್ ಕೇಳಿದ್ದೆ. ಈಗ ವಿಜ್ಯುಯಲ್ ನೋಡಿದೆ. ತುಂಬಾ ಚೆನ್ನಾಗಿದೆ. ಹಾಡು ಕೇಳಿದಾಗಲೇ ಇದು ಹಿಟ್ ಆಗುತ್ತೆ ಅಂತ ರಘುಗೆ ಹೇಳಿದ್ದೆ.

ಆರ್.ಪಿ.ಪಟ್ನಾಯಕ್ ಮಾಡಿರುವ ಎಕ್ಸ್ ಕ್ಯೂಸ್ ಮಿ ಚಿತ್ರದ ಹಾಡುಗಳು   ಇವತ್ತಿಗೂ ಎವರ್ ಗ್ರೀನ್ ಆಗಿವೆ. ಅವರು ಒಂದು ಲೈನ್ ಇಟ್ಕೊಂಡು ಮೆಲೋಡಿ ಟ್ಯೂನ್  ಮಾಡೋ ಅದ್ಭುತ ಮ್ಯೂಸಿಕ್  ಮಾಂತ್ರಿಕ  ಎಂದು ಹೇಳಿದರು.

ಆಕಾಶ್ ಚಿತ್ರದ “ನೀನೇ ನೀನೇ”  ಹಾಡಿನ ಮೂಲಕವೇ  ತಮ್ಮ ಮಾತು ಆರಂಭಿಸಿದ ಆರ್.ಪಿ. ಪಟ್ನಾಯಕ್  ಒಂದು ನಾಯಿ ಹಾಗೂ ಬಾಲಕನೊಬ್ಬನ ಬಾಂಧವ್ಯದ ಅದ್ಭುತವಾದ ಕಥೆಯಿದು. ಈ ಹಾಡನ್ನು ಗುಂಡ(ನಾಯಿ) ಕೇಳಿ ಒಪ್ಪಿದ ಮೇಲೇ ಕಂಪೋಜ್ ಮಾಡಿದ್ದು. ನಾನು ಪಾರ್ಟ್ ೧ ನೋಡಿದ್ದೇನೆ. ಅದರಲ್ಲಿದ್ದ ಎಮೋಷನ್ಸ್  ಇಲ್ಲೂ ಕ್ಯಾರಿ ಆಗಿದೆ  ಎಂದರು.

1000508557

ನಂತರ ಮಾತನಾಡಿದ ಚಿತ್ರದ  ನಿರ್ಮಾಪಕ, ನಿರ್ದೇಶಕ ರಘು ಹಾಸನ್ ನಮ್ಮ ಗುರುಗಳಾದ ಪ್ರೇಮ್ ಸರ್ ಬಂದು ಈ ಸಾಂಗ್ ಲಾಂಚ್ ಮಾಡಿದ್ದಾರೆ. ಹಾಡು ಕೇಲಿದ ಕೂಡಲೇ ಇಷ್ಟಪಟ್ಟು ನಾನೇ ಲಾಂಚ್ ಮಾಡ್ತೀನಿ ಅಂದರು.ಒಂದು ಸೋಲ್ಫುಲ್ ಸಾಂಗ್ಆರ್.ಪಿ. ಅದ್ಭುತವಾಗಿ ಮಾಡಿದ್ದಾರೆ.  ಈಗಾಗಲೇ ಚಿತ್ರದ ಫಸ್ಟ್ ಕಾಪಿ ರೆಡಿಯಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಗೆ ಹೋಗಲಿದೆ. ಬೇಗನೇ ಇನ್ನೊಂದು ಸಾಂಗ್ ಟ್ರೈಲರ್ ಲಾಂಚ್ ಮಾಡುತ್ತೇವೆ ಎಂದರು.

ಸೋಷಿಯಲ್  ಕನ್ ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು  ಸುತ್ತಮುತ್ತ  ಶೂಟಿಂಗ್ ನಡೆಸಲಾಗಿದ್ದು,  ಚಿತ್ರದ 6 ಹಾಡುಗಳಿಗೆ ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜಿಸಿದ್ದಾರೆ. ತನ್ವಿಕ್ ಅದ್ಭುತವಾಗಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ  ಚಿತ್ರ ರಿಲೀಸಾಗುತ್ತಿದೆ.

1000508555

ಉಳಿದಂತೆ ನಾಯಕ‌ ರಾಕೇಶ್ ಅಡಿಗ, ಹಾಡಲ್ಲಿ ಅಭಿನಯಿಸಿದ ನಯನ,  ಬಾಲನಟ ಜೀವನ್ ತಮ್ಮ ಪಾತ್ರಗಳ  ಕುರಿತಂತೆ ಮಾತನಾಡಿದರು.

ಶಂಕರನ‌ ಮಗ ಹಾಗೂ ನಾಯಿ ಸಿಂಬು ಪಾತ್ರಗಳ ಮೂಲಕ ಈ ಸಿನಿಮಾ ಮುಂದುವರೆಯಲಿದೆ.

ಅಲ್ಲದೆ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಸಹ ಈ ಚಿತ್ರದಲ್ಲಿ  ಅಭಿನಯಿಸಿದೆ.

ಚಿತ್ರದ ಸಂಭಾಷಣೆ ಸಾಹಿತ್ಯವನ್ನು ರೋಹಿತ್ ರಮನ್ ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ರುತ್ವಿಕ್ ಮುರಳೀಧರ್ ನಿರ್ವಹಿಸಿದ್ದಾರೆ.

ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ  ನಾನು ಮತ್ತು ಗುಂಡ-2  ಚಿತ್ರಕ್ಕೆ  ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿ.ನಾಗೇಂದ್ರ ಪ್ರಸಾದ್, ರಘು ಹಾಸನ್  ಅವರ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನ, ನವೀನ್ ಅವರ ಸೌಂಡ್ ಡಿಸೈನ್ ಇದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ