ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಂಗ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬವನ್ನು ಮೇ 1 ರಂದು ಆಚರಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಸಂಗಾತಿ ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಶುಭಾಶಯ ಕೋರಿದ್ದಾರೆ. ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ “ನನ್ನ ಆತ್ಮೀಯ ಗೆಳತಿ, ನನ್ನ ಜೀವನ ಸಂಗಾತಿ, ನನ್ನಿಷ್ಟದ ಒಡನಾಡಿ, ನನ್ನ ಪ್ರೀತಿಯ ಅರ್ಧಾಂಗಿ, ನನ್ನ ಸರ್ವಸ್ವವೂ ಆಗಿರುವ ಜೀವನದ ಮಾರ್ಗದರ್ಶಕ ಬೆಳಕೇ… ಪ್ರತಿದಿನ, ಪ್ರತಿಕ್ಷಣವೂ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಪುತ್ರಿ ವಾಮಿಕಾ ಹಾಗೂ ಪುತ್ರ ಅಕಾಯ್ ಅವರ ಫೋಟೋಗಳನ್ನು ಅವರು ಇದುವರೆಗೂ ರಿವೀಲ್ ಮಾಡಿಲ್ಲ. ಇದೀಗ ಪುತ್ರಿ ವಾಮಿಕಾ ಸ್ಕೂಲ್ ವಿಚಾರ ಮುನ್ನೆಲೆಗೆ ಬಂದಿದ್ದು, ಎರಡು ಆಯ್ಕೆಗಳನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಲಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಿಂಗ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇನ್ನೂ ಇಬ್ಬರ ಮಕ್ಕಳ ಜೀವನಶೈಲಿ ಜನಸಾಮಾನ್ಯರಂತೆ ಇರಬೇಕು ಎಂಬ ದೃಷ್ಟಿಯಿಂದ ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿದ್ದಾರೆ. ವಾಮಿಕಾ ಮತ್ತು ಅಕಾಯ್ ಕೊಹ್ಲಿ ಖಾಸಗಿ ಜೀವನಕ್ಕೆ ಯಾವುದೇ ಧಕ್ಕೆಯಾಗಬಾರದೆಂದು ಹಲವು ನಿರ್ಧಾರಗಳನ್ನು ದಂಪತಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿಗೆ ಪುತ್ರಿ ವಾಮಿಕಾ ಎಂದರೆ ಅಚ್ಚುಮೆಚ್ಚು. ವಾಮಿಕಾ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಒಲವು ತೋರಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಆಕೆಯನ್ನು ಮುಂಬೈನ ಧೀರೂಭಾಯ್ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ಗೆ ಅಡ್ಮಿಶನ್ ಮಾಡಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ ಇದು ಮುಂಗಡ ದಾಖಲಾತಿ ಆಗಿದ್ದು ನಿಖರ ಮಾಹಿತಿ ಇಲ್ಲ ಎಂದು ಹೇಳಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ, ಲಂಡನ್ನಲ್ಲಿನ ಮನೆಯಲ್ಲೇ ಪುತ್ರಿ ವಾಮಿಕಾ ಕೊಹ್ಲಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ ಎನ್ನಲಾಗಿದೆ.
ಅನುಷ್ಕಾ ಕೂಡ ಬೆಂಗಳೂರಿನಲ್ಲೇ ತಮ್ಮ ಬಾಲ್ಯ ಕಳೆದಿದ್ದು, ಈ ಕಾರಣದಿಂದ ಮಗಳಿಗೂ ಇಲ್ಲೇ ಶಿಕ್ಷಣ ಕೊಡುಸುತ್ತಾರಾ ಎಂಬ ಕುತೂಹಲವೂ ಮೂಡಿದೆ. ಇದಲ್ಲದೆ, ಬೆಂಗಳೂರಿಗೆ ವಿಶೇಷ ನಂಟು ಹೊಂದಿರುವ ಈ ಜೋಡಿ ಇಲ್ಲಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮುಂಗಡ ಅಡ್ಮಿಶನ್ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಪುತ್ರಿ ವಾಮಿಕಾಗೆ ಸದ್ಯ 4 ವರ್ಷ. ಹೀಗಾಗಿ ನರ್ಸರಿ ಬಳಿಕ ಕಿಂಡರ್ ಗಾರ್ಡನ್ಗೆ ಅಡ್ಮಿಶನ್ ಪಡೆಯಬಹುದಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ದಂಪತಿ ಧೀರೂಭಾಯ್ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ವಾಮಿಕಾಗೆ ಮುಂಗಡ ಅಡ್ಮಿಶನ್ ಮಾಡಿಸಿದ್ದಾರೆ. ಇಲ್ಲಿನ ಸ್ಕೂಲ್ ಫೀಜ್ ಎಲ್ಕೆಜಿಗೆ ರೂ.1.7 ಲಕ್ಷ ರೂಪಾಯಿ ಇದೆ ಎಂದು ತಿಳಿದು ಬಂದಿದೆ.