ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾದಲ್ಲಿ ನಟಿಯರ ಬಗ್ಗೆ ಹಾಗೂ ಅವರ ಕಾಲದ ಸಿನಿಮಾಗಳ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಕಾಲದಲ್ಲಿ ಸಿನಿಮಾಗಳನ್ನು ಯಾವ ರೀತಿ ಮಾಡುತ್ತಿದ್ದೆವು ಹಾಗೂ ಆ ಸಿನಿಮಾಗಳನ್ನು ಯಾವ ರೀತಿ ರಿಲೀಸ್ ಮಾಡುತ್ತಿದ್ದೆವು ಹಾಗೂ ನಟಿ ಗ್ಲಾಮರಸ್ ಆಗಿದ್ರೆ ಮಾತ್ರ…ಎನ್ನುವ ಕೆಲವು ವಿಚಾರಗಳನ್ನು ಅವರು ಮಾತನಾಡಿದ್ದಾರೆ.
ರವಿಮಾಮ ತಮ್ಮ ಸಿನಿಮಾಗಳಲ್ಲಿ ನಟಿಯರನ್ನು ಅತ್ಯಂತ ಆಕರ್ಷಕವಾಗಿ ಹಾಗೂ ಉತ್ತಮವಾಗಿ ತೋರಿಸುತ್ತಿದ್ದರು ಅಂತ ಅವರೊಂದಿಗೆ ನಟಿಸಿರುವ ಹಲವು ನಟಿಯರು ಹೇಳಿದ್ದೂ ಇದೆ. ಇದೀಗ ಅವರೇ ಈ ಕುರಿತು ಮಾತನಾಡಿದ್ದಾರೆ. ಸಿನಿಮಾ ನಟಿಯರು ಹಾಗೂ ಗ್ಲಾಮರ್ ಬಗ್ಗೆ ಅವರು ಮೊದಲ ಬಾರಿ ಬಹಿರಂಗವಾಗಿಯೇ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರು ತೆರೆಯ ಮೇಲೆ ಹಾಗೂ ಸಿನಿಮಾಗಳಲ್ಲಿ ಅತ್ಯಂತ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದೇ ಹೆಚ್ಚು.
ಸೂತ್ರಧಾರಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರು ಮಾತನಾಡಿರುವ ರವಿಚಂದ್ರನ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಾವೆಲ್ಲಾ ಸಿನಿಮಾಗಳನ್ನು ಮಾಡುತ್ತಿದ್ದಾಗ, ಎಲ್ಲೂ ಸಿನಿಮಾಗಳ ಬಗ್ಗೆ ಮಾತನಾಡಿಯೇ ಇಲ್ಲ. ಸಿನಿಮಾ ಮಾಡುತ್ತಿದ್ದೆವು. ಅದನ್ನು ಬಿಡುಗಡೆ ಮಾಡಲಾಗುತ್ತಿತ್ತು. ಅದನ್ನು ಜನ ನೋಡುತ್ತಿದ್ದರು. ಅದನ್ನು ಇಷ್ಟಪಟ್ಟು ಆ ಸಿನಿಮಾವನ್ನು ಮೇಲಕ್ಕೆ ಎತ್ತುಕೊಂಡು ಹೋಗುತ್ತಿದ್ದರು. ನಾವೆಲ್ಲೂ ಆಗೆಲ್ಲಾ ಸಿನಿಮಾಗಳ ಬಗ್ಗೆ ಮಾತನಾಡಿದ್ದೇ ಇಲ್ಲ ಎಂದು ಅವರು ಹೇಳಿದ್ದಾರೆ. ಸಿನಿಮಾವನ್ನು ಜನ ಎತ್ತುಕೊಂಡು ಹೋಗಬೇಕು.. ನಾವು ಕಷ್ಟಪಟ್ಟು ಸಿನಿಮಾವನ್ನು ಜನರ ಮುಂದೆ ಇರಿಸಬೇಕು ಅಂತ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಚಂದನ್ ಶೆಟ್ಟಿ ಬಗ್ಗೆಯೂ ಅವರು ಮಾತನಾಡಿದ್ದು, ಇದು ಚಂದನ್ ಶೆಟ್ಟಿ ಅವರ ಪೂರ್ಣ ಪ್ರಮಾಣದ ಸಿನಿಮಾ ಅಂತ ಗೊತ್ತಿರಲಿಲ್ಲ. ಅವರು ಹೇಳಿದ ಮೇಲೆಯೇ ಗೊತ್ತಾಗಿದ್ದು. ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಿನಿಮಾವೊಂದರಲ್ಲಿ ಹೀರೋ ಆಗಿ ನಟಿಸಿರುವುದು ಇದೇ ಮೊದಲ ಸಿನಿಮಾ ಅಂತ ಅವರು ಹೇಳಿದರು.
ಮುಂದುವರಿದು ನಟಿ ಅಪೂರ್ವ ಅವರ ಬಗ್ಗೆ ಮಾತನಾಡಿದ ರವಿಚಂದ್ರನ್, ಅಪೂರ್ವ ಗ್ಲಾಮರ್ ಆಗಿದ್ದಾರೆ. ಅವರು ಗ್ಲಾಮರ್ ಆಗಿರುವುದಕ್ಕೆ ಅಲ್ವಾ ರವಿಚಂದ್ರನ್ ಕಣ್ಣು ಬಿದ್ದಿರೋದು.. ಇಲ್ಲ ಅಂದರೆ ಎಲ್ಲಿ ಬೀಳುತ್ತೆ ಅಂತ ಹಾಸ್ಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಒಂದು ಕಾಲದಲ್ಲಿ ನಟ ರವಿಚಂದ್ರನ್ ಹಾಗೂ ಅವರೊಂದಿಗೆ ನಟಿಸುತ್ತಿದ್ದ ನಟಿಯರ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿತ್ತು. ರವಿಚಂದ್ರನ್ ಅವರು ತಮ್ಮ ಸಿನಿಮಾಗಳಲ್ಲಿ ನಟಿಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು. ಅವರ ಸಿನಿಮಾಗಳಲ್ಲಿ ಬಟ್ಟೆ ಹಾಗೂ ಗ್ಲಾಮರಸ್ ಆಗಿ ತೋರಿಸುತ್ತಿದ್ದರು ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ.