ನಾವು ಮುಖಕ್ಕೆ ಸ್ಕ್ರಬ್ ಹಚ್ಚಿಕೊಳ್ಳುವಾಗೆಲ್ಲ ಒಂದಲ್ಲ ಒಂದು ತಪ್ಪು ಮಾಡಿಬಿಡುತ್ತೇವೆ. ಇದರಿಂದಾಗಿ ನಮ್ಮ ಚರ್ಮ ಒಮ್ಮೆ ರೆಡ್ ನೆಸ್ ಗಳಿಸಿದರೆ, ಒಮ್ಮೊಮ್ಮೆ ಯೆಲ್ಲೋ ಸಹ ಆಗಬಹುದು. ಹೀಗಾಗಿ ನೀವು ಫೇಸ್ ಸ್ಕ್ರಬ್ ಮಾಡಿಕೊಳ್ಳುವಾಗೆಲ್ಲ, ಸೌಂದರ್ಯ ತಜ್ಞೆಯರು ಸಲಹೆ ನೀಡುವ ಈ ಟಿಪ್ಸ್ ಟ್ರಿಕ್ಸ್ ನ್ನು ಅಗತ್ಯ ಫಾಲೋ ಮಾಡಿ. ಇದರಿಂದ ನಿಮಗೆ ಫೇಸ್ ಸ್ಕ್ರಬ್ ನಿಂದ ಹೆಚ್ಚಿನ ಲಾಭ ದೊರಕುವುದಲ್ಲದೆ, ನಿಮ್ಮ ಚರ್ಮಕ್ಕೆ ಯಾವುದೇ ಹಾನಿ ಆಗದೆ ಉತ್ತಮ ಆರೋಗ್ಯ ಸಿಗುತ್ತದೆ.
ಫೇಸ್ ಸ್ಕ್ರಬ್ : ಏಕೆ ಅಗತ್ಯ ಫೇಸ್ ಸ್ಕ್ರಬ್ ಚರ್ಮವನ್ನು ಎಕ್ಸ್ ಫಾಲಿಯೇಟ್ ಗೊಳಿಸುವಲ್ಲಿ ಮುಂದು. ಇದರಿಂದ ಚರ್ಮದ ಡೆಡ್ ಸ್ಕಿನ್ ತೊಲಗುತ್ತದೆ, ಪೋರ್ಸ್ ಕ್ಲಾಗ್ ಆಗುವ ಚಿಂತೆ ಇಲ್ಲ. ಧೂಳು ಮಣ್ಣು, ಕೊಳಕಿನ ಕಾರಣ ಪೋರ್ಸ್ ಕ್ಲೋಸ್ ಆಗುತ್ತದೆ. ಇದರಿಂದಾಗಿ ಆ್ಯಕ್ನೆ, ಮೊಡವೆ, ಚರ್ಮದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸೀಬಂ ಉತ್ಪಾದನೆ, ಆಯ್ಲಿ ಸ್ಕಿನ್ ಸಮಸ್ಯೆಗಳು….. ಇತ್ಯಾದಿ ಹೆಚ್ಚುತ್ತವೆ.
ಹೀಗಾಗಿ ಫೇಸ್ ಸ್ಕ್ರಬ್ ಚರ್ಮವನ್ನು ಆಂತರಿಕಾಗಿ ಡೀಪ್ ಕ್ಲೀನ್ ಮಾಡಿ, ಅದಕ್ಕೆ ಹೆಚ್ಚಿನ ಮೆರುಗು, ಕಾಂತಿ ತಂದುಕೊಡುತ್ತದೆ.
ಟಿಪ್ಸ್ ಟ್ರಿಕ್ಸ್
ಮೊದಲು ಉತ್ತಮ ಫೇಸ್ ವಾಶ್ ಬಳಸಿ ಮುಖವನ್ನು ಶುಚಿಗೊಳಿಸಿ. ಯಾವಾಗ ಫೇಸ್ ಸ್ಕ್ರಬ್ ಬಳಸಿದರೂ ಅದಕ್ಕೆ ಮೊದಲು ನಿಮ್ಮ ಮುಖವನ್ನು 100% ನೀಟ್ಕ್ಲೀನಾಗಿ ಇಡಿ. ಅಲ್ಲಿ ಒಂದಿಷ್ಟೂ ಕೊಳಕು ಇರಬಾರದು. ಜೊತೆಗೆ ನೀವು ಬಳಸಿದ ಯಾವುದೇ ಕಾಸ್ಮೆಟಿಕ್ಸ್ ಮುಖದಲ್ಲಿ ಉಳಿದಿರಬಾರದು. ಆಗ ಮಾತ್ರ ಈ ಸ್ಕ್ರಬ್ ನಿಂದ ಉತ್ತಮ ಪರಿಣಾಮ ಸಿಗುತ್ತದೆ. ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಫೇಸ್ ವಾಶ್ ನಂತರ ನಿಮ್ಮ ಮುಖ 100% ಡ್ರೈ ಆಗಬಾರದು, ವೈಟ್ ಆಗಿ ಒದ್ದೆ ಆಗಿರಲಿ. ಆಗ ಅದರ ಮೇಲೆ ಸ್ಕ್ರಬ್ ಮಾಡುವುದು ಸುಲಭ, ಪರಿಣಾಮಕಾರಿಯೂ ಹೌದು.
ಆರಾಮವಾಗಿ ಮಸಾಜ್ ಮಾಡಿ
ಒಮ್ಮೆ ಮುಖಕ್ಕೆ ಫೇಸ್ ಸ್ಕ್ರಬ್ ಹಚ್ಚಿದ ನಂತರ, ಜೋರು ಜೋರಾಗಿ ತಿಕ್ಕಿದರೇನೇ ಉತ್ತಮ ಪರಿಣಾಮ ಕಾಣಿಸುವುದು ಎಂದೇನಲ್ಲ. ಹಾರ್ಡ್ ಕೈಗಳಿಂದ ಹೀಗೆ ಉಜ್ಜಾಡಿದರೆ, ಚರ್ಮ ಪೀಲ್ ಆಗುವುದರ ಜೊತೆಗೆ, ಅದು ಕೆಂಪಗೆ ಆಗಿಹೋದೀತು! ಹೀಗಾಗಿ ನೀವು ಮುಖವನ್ನು ಸ್ಕ್ರಬ್ ಮಾಡುವಾಗೆಲ್ಲ, ಬಲು ಲೈಟ್ ಆಗಿ 30 ಕ್ಷಣಗಳ ಕಾಲ ಸರ್ಕ್ಯುಲರ್ ಆಗಿ ಜೆಂಟ್ಲಿ ಸ್ಕ್ರಬ್ ಅಂದ್ರೆ ಮಸಾಜ್ಮಾಡಬೇಕು.
ಇದಾದ ಮೇಲೆ ಮುಖವನ್ನು ತುಸು ಬೆಚ್ಚಗಿನ ನೀರಿನಿಂದ ಕ್ಲೀನ್ ಮಾಡಿ, ಏಕೆಂದರೆ ಇದು ನಿಮ್ಮ ಚರ್ಮದ ನೈಸರ್ಗಿಕ ತೈಲಾಂಶವನ್ನು ಬ್ಯಾಲೆನ್ಸ್ ಆಗಿಡುವಲ್ಲಿ ಪೂರಕ. ಆದರೆ ನೀವಿಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಷಯ ಎಂದರೆ, ನಿಮ್ಮ ಚರ್ಮಕ್ಕೆ ಯಾವುದೇ ಬಗೆಯ ಅಲರ್ಜಿ ಆಗಿದ್ದರೆ, ಆಗ ಸ್ಕ್ರಬಿಂಗ್ ಮಾಡಲು ಹೋಗಬೇಡಿ.
ಎಕ್ಸ್ ಫಾಲಿಯೇಶನ್ ವಿಧಗಳು
ನಿಮ್ಮ ಚರ್ಮ ಡ್ರೈ, ಸೆನ್ಸಿಟಿವ್ ಅಥವಾ ಆ್ಯಕ್ನೆ ಪ್ರೋನ್ ಆಗಿದ್ದರೆ, ನೀವು ಮೆಕ್ಯಾನಿಕ್ ಎಕ್ಸ್ ಫಾಲಿಯೇಶನ್ ಗೆ ಖಂಡಿತಾ ಮೊರೆಹೋಗಬೇಡಿ. ಏಕೆಂದರೆ ಆಗ ಅದರಿಂದ ನಿಮ್ಮ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಆಗ ನೀವು ಕೇವಲ ಸಾಫ್ಟ್ ಎಕ್ಸ್ ಫಾಲಿಯೇಶನ್ ಯಾ ಮೈಲ್ಡ್ ವಿಧಾನಗಳನ್ನು ಮಾತ್ರ ಅನುಸರಿಸಬೇಕು. ಸ್ಟ್ರಾಂಗರ್ ಕೆಮಿಕಲ್ ಟ್ರೀಟ್ ಮೆಂಟ್ ಯಾ ಮೆಕ್ಯಾನಿಕ್ ಎಕ್ಸ್ ಫಾಲಿಯೇಶನ್ ಗ್ರೀಸೀ ದಪ್ಪ ಚರ್ಮದವರಿಗೆ ಸೂಕ್ತ ಆಗಬಹುದು.
ನಿಮ್ಮ ಚರ್ಮ ಡಾರ್ಕ್ ಆಗಿದ್ದರೆ ಅಥವಾ ನಿಮ್ಮ ಮುಖದಲ್ಲಿ ಡಾರ್ಕ್ ಏರಿಯಾ ಹೆಚ್ಚಾಗಿದ್ದರೆ, ನೀವು ಇಂಥ ಹಾರ್ಶ್ ಕೆಮಿಕಲ್ಸ್ ಅಥವಾ ಮೆಕ್ಯಾನಿಕ್ ಎಕ್ಸ್ ಫಾಲಿಯೇಶನ್ ಗಳಿಂದ ದೂರವಿರುವುದೇ ಲೇಸು. ಏಕೆಂದರೆ ಎಕ್ಸ್ ಫಾಲಿಯೇಶನ್ನಿನ ಕೆಲವು ಟೆಕ್ನಿಕ್ಸ್ ನಿಂದಾಗಿ ಇಂದಿಗೂ ಸಹ ಸ್ಕಿನ್ ಮೇಲೆ ಡಾರ್ಕ್ ಸ್ಪಾಟ್ಸ್ ಉಂಟಾಗುವ ಸಾಧ್ಯತೆಗಳು ಕಡಿಮೆ ಆಗಿಲ್ಲ.
ಸ್ಕ್ರಬ್ ನ ಘಟಕಗಳು
ಸ್ಕ್ರಬ್ ನ ಫಾರ್ಮುಲೇಶನ್ನಿನಲ್ಲಿ ಬಳಸಲ್ಪಡುವ ಹಲವು ಘಟಕಗಳು ನಮ್ಮ ಚರ್ಮಕ್ಕೆ ಹಾನಿಕಾರಕ ಆಗಬಹುದು. ಉದಾ: ಉಪ್ಪು, ಬಾದಾಮಿ, ಫ್ರೂಟ್ ಪಿಟ್ಸ್ ಇತ್ಯಾದಿ. ಇವು ನೈಸರ್ಗಿಕವೇ ಇರಬಹುದು, ಆದರೆ ಎಷ್ಟೋ ಸಲ ಇವು ಚರ್ಮಕ್ಕೆ ಹಾರ್ಡ್ ಎಫೆಕ್ಟ್ಸ್ ನೀಡುವಲ್ಲಿ ಮುಂದಾಗುತ್ತವೆ. ಬದಲಿಗೆ ಜೋಜೋಬಾ ಬೀಡ್ಸ್, ಓಟ್ಸ್, ಸಿಲಿಕಾ, ರೈಸ್ ಬ್ರಾನ್ ಬಲು ಕೋಮಲ ಮತ್ತು ಪರಿಣಾಮಕಾರಿ ಎನಿಸಿವೆ. ಇವೆಲ್ಲದರ ಕಡೆ ಗಮನ ಕೊಟ್ಟು, ಘಟಕಗಳನ್ನು ಪರಿಶೀಲಿಸಿ, ನಿಮ್ಮ ಚರ್ಮಕ್ಕೆ ಹೊಂದುವಂಥ ಸ್ಕ್ರಬ್ ನ್ನೇ ಆರಿಸಿ.
ಸ್ಕ್ರಬ್ ನ ಕಣಗಳು ಬಲು ಸೂಕ್ಷ್ಮವಾಗಿದ್ದರೆ, ಬಳಸುವಾಗ ಅವು ಚರ್ಮದಲ್ಲಿ ವಿಲೀನಗೊಳ್ಳುವ ಸಾಧ್ಯತೆಗಳಿವೆ. ಇಂಥವನ್ನು ಮತ್ತೆ ಮತ್ತೆ ಉಪಯೋಗಿಸಲೇ ಬೇಡಿ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಷಯ ಅಂದ್ರೆ, ಸ್ಕ್ರಬ್ ನಲ್ಲಿ ಚರ್ಮವನ್ನು ಮಾಯಿಶ್ಚರೈಸ್ ಗೊಳಿಸಿ, ಅದನ್ನು ಶಾಂತಗೊಳಿಸುವ ಗುಣಗಳೂ ಅಡಗಿರಬೇಕು. ಹೀಗಾಗಿ ಸ್ಕ್ರಬ್ ನ ಘಟಕಗಳನ್ನು ಸರಿಯಾಗಿ ನೋಡಿ ಮಾಡಿ ಆರಿಸಿ.
– ಪವಿತ್ರಾ ಭಟ್