ಎಂದಿನ ಮನೆಗೆಲಸದ ಧಾವಂತ, ಉದ್ಯೋಗಸ್ಥೆಯಾದರೆ ಆಫೀಸಿಗೂ ದೌಡಾಯಿಸಬೇಕು, ಈ ಮಧ್ಯೆ ಮಕ್ಕಳನ್ನು ಶಾಲೆಗೆ ರೆಡಿ ಮಾಡಬೇಕು, ಪತಿರಾಯರಿಗೆ ಲಂಚ್ ಬಾಕ್ಸ್ ನೀಡಿ, ಮನೆಯ ಹಿರಿಯರಿಗೆ ವೇಳಾವೇಳೆಗೆ ಪಥ್ಯದ ಆಹಾರ, ಕೈಗೆ ಸಿಗುವಂತೆ ಔಷಧಿ ಸಿದ್ಧಪಡಿಸಿಟ್ಟು ಹೊರಡುವ ಮಹಿಳೆಯರಿಗೆ ಮುಖಕ್ಕೆ ಫ್ರೆಶ್ ಲುಕ್ಸ್ ತಂದುಕೊಳ್ಳಲು ಪುರಸತ್ತಾದರೂ ಎಲ್ಲಿ?
ತಮ್ಮನ್ನು ತಾವು ಅಲಂಕರಿಸಿಕೊಂಡು ಸಿದ್ಧರಾಗಿ ಹೊರಡಲು ಟೈಮೇ ಇಲ್ಲ ಅಂತಾರೆ. ಇಷ್ಟೆಲ್ಲ ಅಚ್ಚುಕಟ್ಟಾಗಿ ಕೆಲಸ ಪೂರೈಸುವ ಹೆಂಗಸರಿಗೆ ತಮ್ಮನ್ನು ತಾವೇ ಗಮನಿಸಿಕೊಳ್ಳಲು ಸಮಯಾವಕಾಶ ಖಂಡಿತಾ ಇರುವುದಿಲ್ಲ. ಆದರೆ ಫ್ರೆಶ್ ಲುಕ್ಸ್ ಗಾಗಿ ಪ್ರತಿ ಸಲ ಪಾರ್ಲರ್ ಗಂತೂ ಹೋಗಲಾಗದು. ನೀವು ಮನೆಯಲ್ಲಿದ್ದುಕೊಂಡೇ, ನಿಮ್ಮ ಸಮಯಾವಕಾಶದ ಅನುಕೂಲಕ್ಕೆ ತಕ್ಕಂತೆ ಈ ಸಲಹೆಗಳನ್ನು ಅನುಸರಿಸಿ ಉತ್ತಮ ಗ್ಲೋ ಪಡೆಯಿರಿ. ಅದೂ ಹೆಚ್ಚು ದುಬಾರಿ ಖರ್ಚು ಮಾಡದೆ! ಹೌದು, ಈ ಫೇಸ್ ಮಾಸ್ಕ್ ಬಳಸಿ ನೀವು ಮನೆಯಲ್ಲೇ ಕೆಲವಾರು ನಿಮಿಷಗಳಲ್ಲಿ ಬೇಕಾದ ಫ್ರೆಶ್ ಲುಕ್ಸ್ ಪಡೆಯಬಹುದು.
ಹನೀ ಫೇಸ್ ಮಾಸ್ಕ್
ಈ ಫೇಸ್ ಮಾಸ್ಕ್ ನ್ನು ಡ್ರೈ ಸ್ಕಿನ್ನಿನವರಿಗೆ ಮ್ಯಾಜಿಕ್ ಎಂದು ಹೇಳಿದರೆ, ಅದು ತಪ್ಪಲ್ಲ. ಏಕೆಂದರೆ ಇದರಲ್ಲಿ ಧಾರಾಳ ಹೈಡ್ರೇಶನ್ ಗುಣಗಳು ಅಡಗಿವೆ. ಈ ಜೇನು ಆಧಾರಿತ ಮಾಸ್ಕ್ ಆ್ಯಂಟಿ ಆಕ್ಸಿಡೆಂಟ್ ನಲ್ಲಿ ರಿಚ್ ಆಗಿದ್ದು, ನಿಮ್ಮ ಚರ್ಮವನ್ನು ಕೆಲವೇ ನಿಮಿಷಗಳಲ್ಲಿ ಮೃದುಗೊಳಿಸಬಲ್ಲದು.
ಜೊತೆಗೆ ಈ ಮಾಸ್ಕ್ ನಲ್ಲಿ ವಿಟಮಿನ್ಸ್ ಧಾರಾಳ ಇರುವುದರಿಂದ, ಇದು ಚರ್ಮದಲ್ಲಿ ಈ ಚಳಿಗಾಲಕ್ಕೆ ಬೇಕಾದಂಥ ಶುಷ್ಕತನ ತೊಲಗಿಸಿ, ಉತ್ತಮ ಗ್ಲೋ ತಂದುಕೊಡಬಲ್ಲದು. ಹೀಗಾಗಿ ಈ ಹೈಡ್ರೇಟೇಡ್ ಆ್ಯಂಟಿ ಆಕ್ಸಿಡೆಂಟ್ ಫೇಸ್ ಮಾಸ್ಕ್ ನಿಂದ ಆರಾಮವಾಗಿ ಗ್ಲೋಯಿಂಗ್ ಕಾಂಪ್ಲೆಕ್ಷನ್ ಪಡೆದುಕೊಳ್ಳಿ. ಹೀಗಾಗಿ ಈ ಹನೀ ಪೋಶನ್ ರೀನೇವಿಂಗ್ ಫೇಸ್ ಮಾಸ್ಕ್ ಹೆಚ್ಚು ಲಾಭಕರ ಎನಿಸುತ್ತದೆ.
ಬಳಸುವುದು ಹೇಗೆ? : ಈ ಮಾಸ್ಕ್ ನ್ನು ನೀವು 10-12 ನಿಮಿಷಗಳ ಕಾಲ ಮುಖಕ್ಕೆ ಮೆತ್ತಿಕೊಂಡು ಹಾಗೇ ಇರಿ, ನಂತರ ತೆಗೆದು ಮೃದು ಕೈಗಳಿಂದ ಮುಖವನ್ನು ಮಸಾಜ್ ಮಾಡಿ, ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖಕ್ಕೆ ಬಿಲ್ ಕುಲ್ ಉತ್ತಮ ಕಾಂತಿ ಮೈಗೂಡುತ್ತದೆ. ಯಾವುದೇ ಪಾರ್ಟಿ ಫಂಕ್ಷನ್ ಗಳಿಗೆ ಹೋಗಲು, ಇದು ಪರ್ಫೆಕ್ಟ್ ಆಯ್ಕೆ. ಇದನ್ನು ನೀವು ನಿಮ್ಮ ಸಮಯಾನುಸಾರ ಆನ್ ಲೈನ್, ಆಫ್ ಲೈನ್ ಕೊಳ್ಳಬಹುದು.
ಗ್ರೇಪ್ ಹೈಡ್ರೋಜೆಲ್ ಮಾಸ್ಕ್
ನಿಮ್ಮ ಮುಖದಲ್ಲಿ ಆ್ಯಕ್ನೆ ಸಮಸ್ಯೆ ಹೆಚ್ಚಾಗಿದ್ದರೆ, ನೀವು ನಿಮ್ಮ ಮುಖಕ್ಕೆ ಏನೂ ಹಚ್ಚುವುದೇ ಬೇಡ ಎಂದು ಗಾಬರಿಗೊಂಡಿದ್ದರೆ, ಆಗ ನೀವು ಧಾರಾಳವಾಗಿ ಈ ಗ್ರೇಪ್ ಫ್ರೂಟ್ ಹೈಡ್ರೋಜೆಲ್ ಮಾಸ್ಕ್ವನ್ನು ಒಂದಿಷ್ಟು ಟೆನ್ಶನ್ ಇಲ್ಲದೆ ಬಳಸಬಹುದು. ಇದನ್ನು ವಿಶೇಷವಾಗಿ ಆ್ಯಕ್ನೆ ಪ್ರೋನ್ ಸ್ಕಿನ್ ಗಾಗಿಯೇ ಡಿಸೈನ್ ಗೊಳಿಸಲಾಗಿದೆ. ಇದರಲ್ಲಿದೆ ಗ್ರೇಪ್ ಫ್ರೂಟ್ ಎಕ್ಸ್ ಟ್ರಾಕ್ಟ್. ಅದು ಚರ್ಮವನ್ನು ರೀಫ್ರೆಶ್ ಮಾಡಲು ಸದಾ ರೆಡಿ. ಇದರಲ್ಲಿ ವಿಟಮಿನ್ಸ್ ಇದ್ದು, ಚರ್ಮಕ್ಕೆ ಹೆಚ್ಚಿನ ಹೊಳಪು ನೀಡಿ, ಆ್ಯಕ್ನೆ ಆಗದಂತೆಯೂ ತಡೆಯುತ್ತದೆ. ಆ್ಯಕ್ನೆ ಸ್ಪಾಟ್ ಲೆಸ್ ನ ಕಲೆ ತಗ್ಗಿಸುವಲ್ಲಿಯೂ ಸಹಾಯಕ.