ರೋಸ್ ವಾಟರ್ ನ ದೈನಂದಿನ ಬಳಕೆ ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಿ ಇಡುವುದಲ್ಲದೆ, ಇದು ಮುಖದ ಹೊಳಪನ್ನು ಹೆಚ್ಚಿಸುವಲ್ಲಿಯೂ ಮುಂದು. ಗುಲಾಬಿ ಜಲ ಚರ್ಮಕ್ಕೆ ಬಲು ಲಾಭಕರ. ಅದು ಒಂದೆರಡಲ್ಲ, ಅನೇಕ ಎಂದೇ ಹೇಳಬಹುದು. ಇದು ಚರ್ಮವನ್ನು ಕೂಲ್ ಆಗಿಡುವುದಲ್ಲದೆ, ಸುಕ್ಕುಗಳನ್ನು ದೂರವಾಗಿಸುವಲ್ಲಿಯೂ ನೆರವಾಗುತ್ತದೆ. ಇದನ್ನು ನೀವು ಪ್ರತಿ ದಿನ ಬಳಸುತ್ತಿರಿ, ನಿಮಗೆ ಇದರ ಹೆಚ್ಚಿನ ಲಾಭಗಳ ಅರಿವಾಗುತ್ತದೆ.
ಗುಲಾಬಿ ಜಲಕ್ಕೆ ಮೊದಲು ಹತ್ತಿ ಅದ್ದಿಕೊಂಡು ನಂತರ ಮುಖಕ್ಕೆ ಮೃದುವಾಗಿ ತೀಡಿರಿ. ಚರ್ಮ ಇದನ್ನು ಒಳಗೆ ಎಳೆದುಕೊಂಡ ನಂತರ ನಿಮ್ಮ ಆಯ್ಕೆಯ ಕ್ರೀಂ ಹಚ್ಚಿಕೊಳ್ಳಿ.
ಒಂದು ಸಣ್ಣ ಬಟ್ಟಲಿಗೆ ಅರ್ಧದಷ್ಟು ಮೊಸರು, ತುಸು ನಿಂಬೆ ರಸ, ಗುಲಾಬಿ ಜಲ ಬೆರೆಸಿಕೊಂಡು ಮಿಕ್ಸ್ ರೆಡಿ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಹಾಗೇ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮ ಸಾಫ್ಟ್ ಆಗಿ, ಹೆಚ್ಚಿನ ಹೊಳಪು ಕೊಡುತ್ತದೆ.
ರೋಸ್ ವಾಟರ್ ನ್ನು ಐಸ್ ಟ್ರೇಗೆ ಸುರಿದು ಫ್ರೀಝರ್ ನಲ್ಲಿಟ್ಟು ಸೆಟ್ ಮಾಡಿ. ಈ ಕ್ಯೂಬ್ಸ್ ಚೆನ್ನಾಗಿ ಸೆಟಲ್ ಆದ ನಂತರ, ಇದನ್ನು ಮೃದುವಾಗಿ ನಿಮ್ಮ ಮುಖ, ಕುತ್ತಿಗೆಯ ಭಾಗದ ಮೇಲೆ ಆಡಿಸಿ. ಚರ್ಮಕ್ಕೆ ತಂಪು ದೊರೆತು, ಆ ಭಾಗದ ರಕ್ತ ಸಂಚಾರ ಎಷ್ಟೋ ವರ್ಧಿಸುತ್ತದೆ.
ಮೊಸರಿನ ಜೊತೆ ಗುಲಾಬಿ ಜಲ ಬೆರೆಸಿಕೊಂಡು ಮುಖ, ಕುತ್ತಿಗೆಗೆ ಹಚ್ಚಬೇಕು. ಇದರಿಂದ ಸ್ಕಿನ್ ಲೈಟ್ ನಿಂಗ್ ನಲ್ಲಿ ಬಹಳ ಇಂಪ್ರೂವ್ ಮೆಂಟ್ ಗಮನಿಸಬಹುದು.
ಗುಲಾಬಿ ಜಲವನ್ನು ಪ್ರತಿದಿನ ಬಳಸುತ್ತಾ ಇದ್ದರೆ, ಅದು ಮುಖದಲ್ಲಿ ಆಯಿಲ್ ಕಾರಣ ಉಂಟಾಗುವ ಮೊಡವೆಗಳನ್ನು ಬಲು ಬೇಗ ದೂರ ಮಾಡುತ್ತದೆ.
ತೀವ್ರ ಬಿಸಿಲಿನಿಂದ ಮುಖ ಚರ್ಮ ಬಲು ಉರಿ ಉರಿ ಆಗುತ್ತದೆ. ಗುಲಾಬಿ ಜಲದ ಬಳಕೆ ಇದಕ್ಕೆ ಉತ್ತಮ ಪರಿಹಾರ.
ಮುಖದಲ್ಲಿ ಗಾಯದ ಉರಿ, ಅಕಸ್ಮಾತ್ ಸುಟ್ಟಂಥ ಇರಿಟೇಶನ್ ಉಂಟಾದರೆ ತಕ್ಷಣ ರೋಸ್ ವಾಟರ್ ಬಳಸಿ ಪರಿಹಾರ ಪಡೆಯಿರಿ.
ಇದರಿಂದ ಮುಖದ ಚರ್ಮ ಹೆಚ್ಚಿನ ಆರ್ದ್ರತೆ ಗಳಿಸುತ್ತದೆ. ಸುಟ್ಟ ಗುರುತು, ಕಲೆ ಅಥವಾ ಗಾಯದ ಗುರುತುಗಳಿದ್ದರೂ ಇದರ ಬಳಕೆಯಿಂದ ಉತ್ತಮ ಪರಿಹಾರ ಪಡೆಯಬಹುದು.
ಗುಲಾಬಿ ಜಲ ಅನಾದಿ ಕಾಲದಿಂದಲೂ ರಾಜಮನೆತನದ ಹೆಂಗಸರ ಮುಖ್ಯ ಪ್ರಸಾಧನ ಆಗಿತ್ತು. ಇದರ ಪರಿಣಾಮಗಳನ್ನು ಇತರ ಪ್ರಾಡಕ್ಟ್ಸ್ ಬಳಕೆಗಿಂತ ಬೇಗ ಗುರುತಿಸಬಹುದಾಗಿದೆ. ಒಂದು ನೆನಪಿಡಿ, ಯಾವಾಗಲೂ ಅತಿ ಉತ್ತಮ ಗುಣಮಟ್ಟದ ಕಂಪನಿಯ ಬೆಸ್ಟ್ ರೋಸ್ ವಾಟರ್ ನ್ನು ಮಾತ್ರ ಖರೀದಿಸಿ, ಅಂಥದ್ದರ ಬಳಕೆಯಿಂದ ಮೊದಲ ಸಲವೇ ನಿಮಗೆ ವ್ಯತ್ಯಾಸ ಗುರುತಿಸುವಂತಾಗಬೇಕು. ಅಗ್ಗದ ಆಸೆಗೆ ಕಳಪೆ ಮಾಲು ಎಂದೂ ಕೊಳ್ಳಬೇಡಿ!
- ಪ್ರತಿನಿಧಿ