ಜಾಗೀರ್ದಾರ್*.
ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವಿನಯ್ ವಾಸುದೇವ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ “ದಿ” ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ಹೊಸತಂಡದ ಹೊಸಪ್ರಯತ್ನವಾಗಿರುವ ಈ ಚಿತ್ರ ಮೇ 16 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಪೋಸ್ಟರ್ ಗಳ ಮೂಲಕ “ದಿ” ಜನರ ಮನ ತಲುಪಿದೆ. ವಿಜಯ್ ಸಿನಿಮಾಸ್ ಅವರು ವಿಶಾಲ ಕರ್ನಾಟಕಕ್ಕೆ ಈ ಸಿನಿಮಾವನ್ನು ಹಂಚಿಕೆ ಮಾಡಲಿದ್ದಾರೆ.
ಅಲೆನ್ ಭರತ್ ಛಾಯಾಗ್ರಹಣ, ಯು.ಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ ಹಾಗೂ ಸಿದ್ದಾರ್ಥ್ ಆರ್ ನಾಯಕ್ ಅವರ ಸಂಕಲನವಿರುವ ‘ದಿ” ಚಿತ್ರದ ತಾರಾಬಳಗದಲ್ಲಿ ವಿನಯ್ ವಾಸುದೇವ್, ದಿಶಾ ರಮೇಶ್, ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಬಲಾ ರಾಜವಾಡಿ, ಕಾಮಿಡಿ ಕಿಲಾಡಿ ಚಂದ್ರು, ಡಾಲಾ ಶರಣ್, ಕಲಾರತಿ ಮಹಾದೇವ ಮುಂತಾದವರಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ