ಪ್ರ : ಇತ್ತೀಚಿನ ಎ್ಲಾ ಜಾಹೀರಾತುಗಳಲ್ಲೂ CC ಗ್ಲೋ ಬಗ್ಗೆ ಹೇಳುತ್ತಿರುತ್ತಾರೆ. ಇದು ನಿಜವಾಗಿಯೂ ನಮ್ಮ  ಚರ್ಮಕ್ಕೆ ಒಳ್ಳೆಯದು ಅಂತೀರಾ?

ಉ : ‌ CC ಗ್ಲೋ ಒಂದು ಆಧುನಿಕ ಸೌಂದರ್ಯ ಚಿಕಿತ್ಸೆ. ಇದರಲ್ಲಿ ನಿಮ್ಮ ಚರ್ಮಕ್ಕೆ ಒಂದು ಸಾಧನದ ಮೂಲಕ `ಅಕಾರ್ಡಿಂಗ್‌ ಟು ಯುವರ್‌ ಸ್ಕಿನ್‌ ನ್ಯೂಟ್ರಿಯೆಂಟ್ಸ್’ನ್ನು ಫೀಡ್‌ ಮಾಡಲಾಗುತ್ತದೆ. ಇದು ಚರ್ಮದ ಒಳಗೆ ಪ್ರವೇಶಿಸಿ, ಚರ್ಮವನ್ನು ಸ್ಟ್ರೆಚ್ ಗೊಳ್ಳುವಂತೆ ಮಾಡುತ್ತದೆ, ರಿಂಕಲ್ ಫ್ರೀ ಮಾಡಿಸಿ ಮುಖಕ್ಕೆ ಹೆಚ್ಚಿನ ಕಾಂತಿ ತುಂಬಿಸುತ್ತದೆ. ಇದರ ಜೊತೆ ಜೊತೆಗೆ CC ‌ಗ್ಲೋನಲ್ಲಿ ನಿಮ್ಮ ಚರ್ಮಕ್ಕೆ ಅನುಸಾರ, ಒಂದು ಫೌಂಡೇಶನ್‌ ನ್ನು ಚರ್ಮದ ಆಂತರಿಕ ಭಾಗಕ್ಕೆ ಒದಗಿಸಲಾಗುತ್ತದೆ, ಇದರಿಂದ ನಿಮ್ಮ ಚರ್ಮದ ಮೇಲ್ಪದರದಲ್ಲಿ ಮೇಕಪ್‌ ನ ಒಂದು ತೆಳುಪದರ ಮೂಡುತ್ತದೆ, ಇದು ಸುಮಾರು ಒಂದು ತಿಂಗಳವರೆಗೂ ಹಾಗೇ ಉಳಿಯುತ್ತದೆ. ಹಾಗೆಯೇ ನಿಮ್ಮ ಫೇಸ್‌ ಗೊಂದು ಸೂಕ್ತ ಶೇಪ್‌ ನೀಡಲು ಕಂಟೂರಿಂಗ್‌ಬ್ಲಶರ್‌ ಸಹ ಒದಗಿಸಲಾಗುತ್ತದೆ. ಇದರಿಂದ ನಿಮ್ಮ ಫೇಸ್‌ ಗೊಂದು ಬ್ಯೂಟಿಫುಲ್ ಶೇಪ್‌ ಬರುತ್ತದೆ. ಇದು ಒಂದು ಆಧುನಿಕ, ಉತ್ತಮ ಸೌಂದರ್ಯ ಸಂವರ್ಧನೆಯ ಚಿಕಿತ್ಸೆಯಾಗಿದ್ದು, ಇದರಿಂದ ಮುಖಕ್ಕೆ ಬೆಸ್ಟ್ ಗ್ಲೋ ಬರುವುದಲ್ಲದೆ, ಪರ್ಫೆಕ್ಟ್ ಶೇಪ್‌ ಸಹ ಸಿಗುತ್ತದೆ. ಮುಂದಿನ 20-30 ದಿನಗಳವರೆಗೆ ನೀವು ಮತ್ತೆ ಮೇಕಪ್‌ ಮಾಡಿಕೊಳ್ಳಬೇಕಾದ ಗೋಜಿಲ್ಲ.

ಪ್ರ : ಚಳಿಗಾಲದಲ್ಲಿ ನನಗೆ ಸದಾ ಹಿಮ್ಮಡಿ ಒಡೆಯುತ್ತಿರುತ್ತದೆ, ಒಮ್ಮೊಮ್ಮೆ ರಕ್ತ ಸಹ ಜಿನುಗುತ್ತದೆ. ನಾನು ಏನು ಮಾಡಲಿ? ದಯವಿಟ್ಟು ಸಲಹೆ ನೀಡಿ.

ಉ : ಚಳಿಗಾಲದಲ್ಲಿ ನಿಮ್ಮ ಚರ್ಮ ಡ್ರೈ ಆಗಿ ಹೋಗುವುದು ಮಾಮೂಲಿ ವಿಷಯ. ಹಿಮ್ಮಡಿಯ ಚರ್ಮ ಬಹಳ ದಪ್ಪ ಇರುತ್ತದೆ, ಹೀಗಾಗಿ ಅದರ ಹೆಚ್ಚಿನ ಭಾಗ ಬೇಗ ಬೇಗ ಡ್ರೈ ಆಗುತ್ತದೆ. ಹೀಗಿರುವಾಗ ದಿನ ಅದರ ಸ್ವಚ್ಛತೆ, ಶುಭ್ರತೆ ಕಡೆ ಗಮನ ಕೊಡದಿದ್ದರೆ, ಉತ್ತಮ ಕ್ರೀಂನಿಂದ ಆ ಭಾಗವನ್ನು ಚೆನ್ನಾಗಿ ಮಸಾಜ್‌ ಮಾಡದಿದ್ದರೆ, ಆಗ ಅದು ಒಡೆಯತೊಡಗುತ್ತದೆ. ಆದ್ದರಿಂದ ಎಲ್ಲಕ್ಕಿಂತ ಮುಖ್ಯ ಎಂದರೆ, ನೀವು ದಿನಾ ಸ್ನಾನ ಮಾಡುವ ಸಂದರ್ಭದಲ್ಲಿ, ಯಾವುದೇ ಸ್ಕ್ರಬರ್‌ ನಿಂದ ಆ ಭಾಗವನ್ನು ಚೆನ್ನಾಗಿ ತಿಕ್ಕಬೇಕು. ಇದಕ್ಕಾಗಿ ಪ್ಯೂಮಿಕ್ ಸ್ಟೋನ್‌ ಬಳಸುವುದು ಲೇಸು. ಇದರ ಮೇಲೆ ಉತ್ತಮ ಹೀಲ್ ‌ಕ್ರಾಕ್‌ ಕ್ರೀಂ, ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಬೇಕು. ಆಗ ಒಡೆದ ಹಿಮ್ಮಡಿ ತಂತಾನೇ ಕೂಡಿಕೊಳ್ಳುತ್ತದೆ. ಬೆಳಗಿನ ಹೊತ್ತು ಇಷ್ಟೆಲ್ಲ ಆರೈಕೆ ಮಾಡಿಕೊಳ್ಳಲು ಪುರಸತ್ತು ಇಲ್ಲ ಎನಿಸಿದರೆ, ರಾತ್ರಿ ಮಲಗುವ ಮುನ್ನ, ಬಿಸಿ ನೀರಿಗೆ ತುಸು ಕಲ್ಲುಪ್ಪು ಹಾಕಿ ಕರಗುವಂತೆ ಮಾಡಿ. ನಂತರ ಅದರಲ್ಲಿ 15-20 ನಿಮಿಷ ನಿಮ್ಮ ಪಾದ ಮುಳುಗಿಸಿ ಇರಿಸಿಕೊಳ್ಳಿ. ನಂತರ ಸ್ಕ್ರಬರ್‌ ನಿಂದ ತಿಕ್ಕಿಕೊಳ್ಳಿ. ಆಮೇಲೆ ನೀಟಾಗಿ ಒರೆಸಿ, ಮೇಲೆ ಹೇಳಿದಂತೆ ಕ್ರೀಂ/ಕೊಬ್ಬರಿ ಎಣ್ಣೆ ಬಳಸಿ ನೀಟಾಗಿ ಆ ಭಾಗ ಮಸಾಜ್‌ ಮಾಡಿ. ನಂತರ ಕಾಟನ್‌ ಸಾಕ್ಸ್ ಧರಿಸಿ ನಿದ್ದೆ ಮಾಡಿ. ಇದರಿಂದ ನಿಮ್ಮ ಒಡೆದ ಹಿಮ್ಮಡಿ ಎಷ್ಟೋ ಸುಧಾರಿಸುತ್ತದೆ. ಇದನ್ನು ಸತತ 2-3 ತಿಂಗಳು ಮಾಡಬೇಕು, ತುಸು ಸುಧಾರಣೆ ಕಂಡ ತಕ್ಷಣ ನಿಲ್ಲಿಸಬಾರದು. ಇದಕ್ಕೂ ಇದು ನಿಯಂತ್ರಣಕ್ಕೆ ಬರಲಿಲ್ಲವೆಂದರೆ, ಒಂದು ಚಿಕ್ಕ ಬಟ್ಟಲಿಗೆ ತುಸು ಕೊಬ್ಬರಿ ಎಣ್ಣೆ, ಕರ್ಪೂರದ ತೈಲ, ಕರಗಿದ ಕ್ಯಾಂಡಲ್ ದ್ರವ ಬೆರೆಸಿ ಬಿಸಿ ಮಾಡಿ. ರಾತ್ರಿ ಮಲಗುವಾಗ ಒಡೆದ ಹಿಮ್ಮಡಿ ಶುಚಿಗೊಳಿಸಿ, ಆ ಭಾಗಕ್ಕೆ ಇದನ್ನು ಚೆನ್ನಾಗಿ ಸವರಿ, ಎಣ್ಣೆ ಒಳಗಿಳಿಯುವಂತೆ ಮಾಡಿ. ತಕ್ಷಣ ಸಾಕ್ಸ್ ಧರಿಸಿ ಮಲಗಿಬಿಡಿ. ಇದರಿಂದ ನಿಮ್ಮ ಬಾಧೆ ತಪ್ಪುವುದರಲ್ಲಿ ಸಂದೇಹವಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ