ಪ್ರ : ನನಗೀಗ 25 ವಯಸ್ಸು. ನನ್ನ ಹಲ್ಲುಗಳು ಹುಳುಕಾಗಿವೆ. ಇದರ ಕಾರಣ ಹಲ್ಲು ನೋವು ಬಹಳ ಜಾಸ್ತಿ ಆಗಿದೆ. ಎಂದಾದರೂ ಸಿಹಿ ಸವಿದಾಗ, ಹಲ್ಲು ಭಾರಿ ಜುಮ್ಮೆನ್ನುತ್ತದೆ, ಯಾತನೆ ಹೆಚ್ಚುತ್ತದೆ. ನಾನು ಇಲ್ಲಿನ ಸ್ಥಳೀಯ ಡೆಂಟಿಸ್ಟ್ ಬಳಿ ಪರೀಕ್ಷೆ ಮಾಡಿಸಿದ್ದೆ. ಅವರು ರೂಟ್ಕೆನಾಲ್ ಟ್ರೀಟ್ಮೆಂಟ್ಮಾಡಿಸಲು ಸಲಹೆ ನೀಡಿದ್ದಾರೆ. ಟ್ರೀಟ್ಮೆಂಟ್ಅನಿವಾರ್ಯವೇ?

ಉ : ನಿಮ್ಮಲ್ಲಿ ಹಲ್ಲು ನೋವಿನ ಜೊತೆ, ಹಲ್ಲು `ಜುಂ' ಎನ್ನುವ ಬಾಧೆಯೂ ಇದೆ, ಹೀಗಾಗಿ ನಿಮಗೆ ಅವರು ತಿಳಿಸಿರು ರೂಟ್‌ ಕೆನಾಲ್ ‌ಟ್ರೀಟ್‌ ಮೆಂಟ್‌ ಅತ್ಯಗತ್ಯ. ನಿಮ್ಮನ್ನು ಕೂಲಂಕಷವಾಗಿ ಪರೀಕ್ಷಿಸಿಯೇ ಡೆಂಟಿಸ್ಟ್ ಹೀಗೆ ಹೇಳಿರುತ್ತಾರೆ. ಆದ್ದರಿಂದ ನಿಸ್ಸಂದೇಹವಾಗಿ ನೀವು ಈ ಚಿಕಿತ್ಸೆ ಪಡೆಯಿರಿ. ರೂಟ್‌ ಕೆನಾಲ್ ‌ಟ್ರೀಟ್‌ ಮೆಂಟ್‌ ನಲ್ಲಿ, ವಸಡಿನ ಊತ, ಅದರಲ್ಲಿನ ಸೋಂಕಿನ ಭಾಗವನ್ನು (ಪಲ್ಪ್) ತೆಗೆದು ಹಾಕುತ್ತಾರೆ. ಈ ರೀತಿ ತೆಗೆದ ನಂತರ ಆ ಭಾಗವನ್ನು ನೀಟಾಗಿ ಕ್ಲೀನ್‌ ಮಾಡಿ, ಸೆಪ್ಟಿಕ್‌ ಆಗದಂತೆ ಔಷಧಿ ಸವರುತ್ತಾರೆ. ಸರಿಯಾದ ಆಕಾರ ನೀಡಿ ತುಂಬಿಸುತ್ತಾರೆ. ಇಲ್ಲಿ ವಸಡುಗಳಿಗೆ ಅನಸ್ತೇಷಿಯಾ ನೀಡಿ, ಈ ಪ್ರಕ್ರಿಯೆ ನಡೆಸುತ್ತಾರೆ. ಮೊದಲು ಎಕ್ಸ್-ರೇ ತೆಗೆದು ಖಚಿತಪಡಿಸಿಕೊಂಡು, ನಂತರ ಈ ಚಿಕಿತ್ಸೆ ಒದಗಿಸಲಾಗುತ್ತದೆ. ಯಾವ ಹಲ್ಲು ಹುಳುಕಾಗಿದೆ ಎಂಬುದನ್ನು ಗಮನಿಸಿಕೊಂಡು, ಹಿಂದೆಲ್ಲ ಆ ಹಲ್ಲನ್ನು ತೆಗೆಯಲಾಗುತ್ತಿತ್ತು, ಇಲ್ಲವೇ ಟೊಳ್ಳಾದ ಆ ಭಾಗಕ್ಕೆ ಲೋಹದ ಅಂಶ ತುಂಬಲಾಗುತ್ತಿತ್ತು. ಈ ಪ್ರಕ್ರಿಯೆ ಬಲು ನೋವು ನೀಡುತ್ತದೆ. ಆದರೆ ಹೊಸ ಟೆಕ್ನಿಕ್‌ ಹಾಗೂ ಅನಸ್ತೇಷಿಯಾ ನೆರವಿನಿಂದ, ನೋವು ಇರುವುದೇ ಇಲ್ಲ. ಚಿಕಿತ್ಸೆ ಸಹ ಸುಲಭವಾಗಿ ಆಗಿಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಹಲ್ಲನ್ನು ಕೀಳದೆಯೇ ಅದನ್ನು ಸುರಕ್ಷಿತಗೊಳಿಸಬಹುದು.

 

ಪ್ರ : ನಾನು 56 ವರ್ಷದ ತುಸು ಸ್ಥೂಲ ಮಹಿಳೆ. ನನಗೆ ಈಗಾಗಲೇ ಒಂದು ಸಲ ಹಾರ್ಟ್ಅಟ್ಯಾಕ್ಆಗಿದೆ. ಅಂದರೆ ನನಗೆ ಸೆಕೆಂಡ್ಹಾರ್ಟ್ಅಟ್ಯಾಕ್ಆಗುವ ಸಾಧ್ಯತೆಗಳು ಹೆಚ್ಚಿವೆ ಅಂತೀರಾ?

ಉ : ಯಾರಿಗೆ ಈಗಾಗಲೇ ಹಾರ್ಟ್‌ ಆಟ್ಯಾಕ್‌ ಆಗಿದೆಯೋ ಅಂಥವರಿಗೆ ಇತರ ಸಾಧಾರಣ ಜನರಿಗಿಂತ, ಸೆಕೆಂಡ್‌ ಅಟ್ಯಾಕ್‌ ಆಗುವ ಅಕಾಶ ಹೆಚ್ಚು. ನಮ್ಮ ದೇಶದ ಹೃದ್ರೋಗಿಗಳಲ್ಲಿ ಪ್ರತಿ ವರ್ಷ ಇಂಥ ಅಪಾಯ 10-15% ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಮೊದಲ ಅಟ್ಯಾಕ್‌ ನಂತರ ನಿಮ್ಮ ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಿ. ಹುರಿದ ಕರಿದ ಪದಾರ್ಥ ಸೇವಿಸಬಾರದು, ಹೊರಗಿನ ಜಂಕ್‌ ಫುಡ್‌/ಫಾಸ್ಟ್ ಫುಡ್‌ ಸೇವನೆ ತ್ಯಜಿಸಿ ಮನೆಯ ಪೌಷ್ಟಿಕ ಆಹಾರ ಮಾತ್ರ ಸೇವಿಸಿ.

ನಿಮ್ಮ ರಕ್ತದಲ್ಲಿ ಶುಗರ್‌, ಕೊಲೆಸ್ಟ್ರಾಲ್ ಮಟ್ಟಗಳನ್ನು ಸದಾ ನಿಯಂತ್ರಣದಲ್ಲಿಟ್ಟುಕೊಳ್ಳಿ. ರೆಗ್ಯುಲರ್‌ ಆಗಿ ಎಲ್ಲವನ್ನೂ ಚೆಕ್‌ ಅಪ್ ಮಾಡಿಸುತ್ತಿರಿ. ಮದ್ಯಪಾನದ ಸಹವಾಸ ಬೇಡ, ಮೂಲ ಧೂಮಪಾನ ಮಾತ್ರವಲ್ಲದೆ ಪ್ಯಾಸಿವ್ ‌ಸ್ಮೋಕಿಂಗ್‌ (ಬೇರೆಯವರು ಸಿಗರೇಟ್‌ ಸೇದುತ್ತಿದ್ದರೆ ನೀವು ಅವರ ಬಳಿ ಇದ್ದಾಗ) ಸಹ ಸೆಕೆಂಡ್‌ ಅಟ್ಯಾಕ್‌ ಗೆ ಬೇಗ ದಾರಿ ಮಾಡುತ್ತದೆ. ಹೀಗಾಗಿ ಎಲ್ಲಾ ತರಹದ ಮುನ್ನೆಚ್ಚರಿಕೆಗಳನ್ನೂ ಮೊದಲೇ ಕೈಗೊಳ್ಳಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ