ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಟಕೀಲಾ
ನಿರ್ದೇಶನ:  ಪ್ರವೀಣ್ ನಾಯಕ್
ನಿರ್ಮಾಣ: ಮರಡಿಹಳ್ಳಿ ನಾಗಚಂದ್ರ
ತಾರಾಂಗಣ: ಧರ್ಮ ಕೀರ್ತಿರಾಜ್,ನಿಖಿತಾ ಸ್ವಾಮಿ, ನಾಗೇಂದ್ರ ಅರಸ್ ಮೊದಲಾದವರು
ರೇಟಿಂಗ್:
*ಧರ್ಮ ಕೀರ್ತಿರಾಜ್,ನಿಖಿತಾ ಸ್ವಾಮಿ ಜೋಡಿಯ ಕಲರ್ ಫುಲ್ ಸಿನಿಮಾ “ಟಕೀಲಾ”ಇಂದು (16/05/2025) ತೆರೆಗೆ ಬಂದಿದೆ.  ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ನಿರ್ಮಾಣದ,  ಪ್ರವೀಣ್ ನಾಯಕ್ ನಿರ್ದೇಶನದ ಈ ಚಿತ್ರಕ್ಕೆ ಪಿಕೆ ಎಚ್ ದಾಸ್ ಛಾಯಾಗ್ರಹಣಟಾಪ್ ಸ್ಟಾರ್ ರೇಣು ಸಂಗೀತವಿದೆ.  ಸಾಕಷ್ಟು ನಿರೀಕ್ಷೆಗಳನ್ನು  ಹುಟ್ಟು ಹಾಕಿದ್ದ ಚಿತ್ರ ಹೇಗಿದೆ ತಿಳಿಯಲು ಮುಂದೆ ಓದಿ..
ಓರ್ವ ಸಾಫ್ಟ್ ವೇರ್ ಕಂಪನಿ ನಡೆಸುವ ರವಿ (ಧರ್ಮ ಕೀರ್ತಿರಾಜ್) ಅವನ ಪತ್ನಿ ಅಪ್ಸರಾ (ನಿಖಿತಾ ಸ್ವಾಮಿ) ಇವರಿಬ್ಬರ ಮಧುರ ಪ್ರೇಮ ದಾಂಪತ್ಯ ಸಾಗುತ್ತಿದ್ದಾಗಲೇ ಮತ್ತೊಬ್ಬನ ಎಂಟ್ರಿ ಅವನ ಮೂಲಕ ಅಪ್ಸರಾಗೆ ಟಕೀಲಾ ನಶೆ ಹತ್ತುತ್ತದೆ. ಈ ನಶೆ ಅವಳನ್ನು ಅವಳ ಸಂಸಾರ ಜೀವನವನ್ನು ಎಲ್ಲಿಗೆಲ್ಲಾ ತೆಗೆದುಕೊಂಡು ಹೋಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಸಾರಾಂಶ. ಶ್ರೀಮಂತ ಯುವಕ, ಆತನನ್ನು ಅಗಾಧವಾಗಿ ಪ್ರೀತಿಸುವ ಹೆಂಡತಿ, ಅಂಥವನ ಲೈಫಲ್ಲಿ ಬಿರುಗಾಳಿ ಬೀಸಿದಾಗ, ಅದು ಅನಾಹುತ ಮಾಡದಂತೆ ಆತ ಹೇಗೆ ನಿಭಾಯಿಸಿದ? ಮನುಷ್ಯ ಯಾವುದಾದರೂ ಒಂದು ಚಟಕ್ಕೆ ಅಂಟಿಕೊಂಡು  ಅತಿಯಾದಾಗ  ಅದರ ಪರಿಣಾಮ ಏನೆಲ್ಲ ಆಗಬಹುದು ಎಂಬುದನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಿದ್ದಾರೆ.

GrB9EzdXIAEPZ2y

ಚಿತ್ರದ ಮೊದಲರ್ಧ, ಪ್ರೇಮ ಕಾಮದಾಟಗಳ ದೃಶ್ಯಗಳಲ್ಲೇ ಸಾಗುತ್ತದೆ. ದ್ವಿತೀಯಾರ್ಧಕ್ಕೆ ಮುನ್ನ ಬರುವ ಟ್ವಿಸ್ಟ್ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸುತ್ತದೆ. ಮತ್ತು ದ್ವಿತೀಯಾರ್ಧದಲ್ಲಿ ಕಥೆ ಮತ್ತೊಂದು ಹಂತದಲ್ಲಿ ತೆರೆದುಕೊಳ್ಳುತ್ತಾ ಸಾಗುತ್ತದೆ.  ನಮ್ಮ ಸುತ್ತಲಿರುವ ಸಮಾಜದಲ್ಲಿ ಯುವತಿಯರನ್ನು ನಾನಾ ನೆಪದಲ್ಲಿ ಬಲೆಗೆ ಬೀಳಿಸಿಕೊಂಡು ಮೋಸ ಮಾಡುವ ವಂಚಕರಿದ್ದಾರೆ ಹಾಗೆ ಅಂತಹಾ ಯುವಕರಿಗೆ ಸುಲಭವಾಗಿ ಬಲಿಯಾಗುವ ಯುವತಿಯರೂ ಇದ್ದಾರೆ ಇದನ್ನು ಚಿತ್ರದಲ್ಲಿ ನೈಜತೆಯ ಸ್ಪರ್ಶದೊಡನೆ ತೋರಿಸಲಾಗಿದೆ.

GrCoNFTbYAAc6h2

ನಾಯಕನಟ ಧರ್ಮ ಕೀರ್ತಿರಾಜ್ ಇದುವರೆಗಿನ ಚಿತ್ರಕ್ಕಿಂತ ಬೇರೆಯದಾಗಿ ಕಾಣಿಸಿಕೊಂಡಿದ್ದಾರೆ. ಅವರು ಪ್ರೀತಿಸುವ ಪತಿಯಾಗಿ ಅಂತೆಯೇ ಭಯ ಹುಟ್ಟಿಸುವ ದೆವ್ವದ ರೂಪದಲ್ಲಿ ಎರಡೂ ಶೇಡ್ ನಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ನಿಖಿತಾ ಪ್ರೇಮ ಕಾಮದ ನಾನಾ ಛಾಯೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ನಾಗೇಂದ್ರ ಅರಸ್ ಪೋಲೀಸ್ ಪಾತ್ರದಲ್ಲಿ ನಟಿಸಿದ್ದು ಅವರಿಗೆ ತೆರೆಮೇಲೆ ಹೆಚ್ಚಿನ ಸ್ಪೇಸ್ ಸಿಕ್ಕಿದೆ ಮಾತ್ರವಲ್ಲ ಕೆಲವಷ್ಟು ಫೈಟಿಂಗ್ ದೃಶ್ಯಗಳಲ್ಲಿ ಸಹ ಅಭಿನಯಿಸಿದ್ದಾರೆ. ಇನ್ನುಳಿದಂತೆ ಎಲ್ಲಾ ಸಹ ನಟರು ತಮ್ಮ ಪಾತ್ರಗಳಿಗೆ ನ್ಯಾಯಸಲ್ಲಿಸಿದ್ದಾರೆ.

GrCVWGDaAAEflJ5

ಚಿತ್ರದ ಎರಡು ಹಾಡುಗಳು ಚೆನ್ನಾಗಿ ಮೂಡಿಬಂದಿದ್ದು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಇನ್ನು ಛಾಯಾಗ್ರಹಣ ಸಹ ಸಿನಿಮಾದ ಒಂದು ಪ್ಲಸ್ ಪಾಯಿಂಟ್.
ಇದು “ಎ” ಸರ್ಟಿಫಿಕೇಟ್ ನೀಡಿರುವ ಸಿನಿಮಾ ಆಗಿರುವುದರಿಂದ ಸಂಸಾರ ಸಮೇತ ನೋಡುವಂತಿಲ್ಲ. ಇದೊಂದು soft porn film ಜೊತೆಗೆ intimate scenes ಸಾಕಷ್ಟು ಇದೆ. ಇದಲ್ಲದೆ ಕನ್ನಡದಲ್ಲಿ ಈ ಹಿಂದೆಯೂ ಈ ವಿಷಯದಲ್ಲಿ ಸಾಕಷ್ಟು ಚಿತ್ರಗಳು ಬಂದಿದೆ. ಮಾದಕ ವಸ್ತು, ಕಾಮ, ಪ್ರೇಮದಾಟಗಳು, ಅನೈತಿಕ ಸಾಂಬಂಧ ಇಂತಹಾ ವಿಷಯದಲ್ಲಿ ಬಹುಪಾಲು ಚಿತ್ರಗಳು ಬಂದಿದ್ದು ಇದೇನೂ ಹೊಸತನದ ಕಥೆ ಎನಿಸಲಾರದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ