ಶರತ್ ಚಂದ್ರ 

ಸಂಜು ವೆಡ್ಸ್ ಗೀತಾ 2 ಈ ಮುಂಚೆ ಜನವರಿ 17ನೇ ತಾರೀಕಿಗೆ ಬಿಡುಗಡೆಯಾಗಿತ್ತು. ತೆಲುಗು ಮೂಲದ ನಿರ್ಮಾಪಕರೊಬ್ಬರು ಜನವರಿ 10ನೇ ತಾರೀಕಿಗೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಕ್ಕೆ ಸ್ಟೇ ತಂದಿದ್ದರು.ಕರ್ನಾಟಕ ಮತ್ತು ವಿದೇಶ ದ ಹಲವು ಚಿತ್ರ ಮಂದಿರಗಳಲ್ಲಿ ಥೀಯೇಟರ್ ಬುಕ್ ಮಾಡಿದ್ದ ಕಾರಣ ಅವಸರವಾಗಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಚಿತ್ರಕ್ಕೆ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ ನೋಡಿ, ನಿರ್ದೇಶಕ ನಾಗಶೇಖರ್ ನಿರ್ಮಾಪಕರೊಂದಿಗೆ ಚರ್ಚಿಸಿ ಮೂರು ದಿನಗಳ ನಂತರ ಪ್ರದರ್ಶನ ಸ್ಥಗಿತ ಗೊಳಿಸಿದ್ದರು. ಅವಸರ ದಲ್ಲಿ ಚಿತ್ರವನ್ನು  ತಾಂತ್ರಿಕವಾಗಿ ಶ್ರೀಮಂತಗೊಳಿಸಲು ಆಗಲಿಲ್ಲ, ಮತ್ತೆ 21 ನಿಮಿಷಗಳನ್ನು ಸೇರಿಸಿ ಮರು ಬಿಡುಗಡೆ ಮಾಡುವ ನಿರ್ಧಾರವನ್ನು ನಿರ್ಮಾಪಕ ಚಲವಾದಿ ಕುಮಾರ್ ಮತ್ತು ನಿರ್ದೇಶಕ ನಾಗಶೇಖರ್ ಕೈ ಗೊಂಡಿದ್ದಾರೆ.

1000537205

ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ದಿನಾಂಕ ವನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ.ಮುಂದಿನ ತಿಂಗಳು 6ನೇ ತಾರೀಕಿಗೆ ಪ್ರಪಂಚದಾದ್ಯಂತ ಚಿತ್ರ ಮರು ಬಿಡುಗಡೆಯಾಗಲಿದೆ.

1000537203

ಈ ಹಿಂದೆ ಬಿಡುಗಡೆ ಯಾದ ಸಂಜು ವೆಡ್ಸ್ ಗೀತಾ 2 ಮರೆತು ಬಿಡಿ, ನಿಜವಾದ ಚಿತ್ರ ಜೂನ್ 6 ರಂದು ಬಿಡುಗಡೆಯಾಗುತ್ತದೆ ಎಂದು ನಿರ್ದೇಶಕ ನಾಗಶೇಖರ್ ತಿಳಿಸಿದರು.ಇತ್ತೀಚೆಗೆ ಮರು ಬಿಡುಗಡೆಯಾದ’ ಸನಮ್ ತೇರಿ ಕಸಮ್’ ಚಿತ್ರ ಹಾಗೂ ರಾಜ್ ಕಪೂರ್ ನಿರ್ದೇಶನ ದ ಮೇರಾ ನಾಮ್ ಜೋಕರ್ ಮರು ಬಿಡುಗಡೆಯಾಗಿ ಯಶಸ್ವೀ ಯಾಗರುವುದನ್ನು ಸ್ಮರಿಸಿದರು.

1000537200

ಚಿತ್ರದ ನಾಯಕಿ ಯಾಗಿ ಸುಂದರ ವಾಗಿ ಕಾಣಿಸಿ ಕೊಂಡು ಅತ್ಯುತ್ತಮ ಅಭಿನಯ ನೀಡಿದ್ದ ರಚಿತಾ ರಾಮ್ ಕಳೆದ ಬಾರಿ ಕೊನೆಯ ಪತ್ರಿಕಾ ಗೋಷ್ಠಿ ಮತ್ತು ಸಿನಿಮಾದ ಮೊದಲ ಶೋ ಗೆ ಬಂದಿರಲಿಲ್ಲ. ಈ ಬಗ್ಗೆ ಪತ್ರಕರ್ತ ರು ಕೇಳಿದ ಪ್ರಶ್ನೆ ಗೆ, ಮುಂದಿನ ತಿಂಗಳು ಅದ್ದೂರಿ ಪ್ರೀ ರಿಲೀಸ್ ಆಯೋಜಿಸಲಿದ್ದು ಶಿವಣ್ಣ ಗೆಸ್ಟ್ ಆಗಿ ಬರಲಿದ್ದಾರಂತೆ. ಆ ಕಾರ್ಯಕ್ರಮ ಕ್ಕೆ ತಪ್ಪದೇ ಬರುತ್ತಾರೆ ಎಂದು ನಿರ್ದೇಶಕ ನಾಗಶೇಖರ್ ತಿಳಿಸಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ