- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಸೇರಿದಂತೆ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿದ್ಧವಾಗುತ್ತಿರುವ,
ನಟ ನಿರ್ದೇಶಕ ತೇಜ್ ಸಾರಥ್ಯದಲ್ಲಿ ಬರುತ್ತಿರುವ *DUDE* ಚಿತ್ರದ ಶೀರ್ಷಿಕೆಯು ಯಾವುದೇ ವಿವಾದವಿಲ್ಲದೇ ಬಗೆ ಹರಿದ ಬಗ್ಗೆ,ಪತ್ರಿಕಾ ಗೋಷ್ಟಿಯಲ್ಲಿ ತೇಜ್ ಸ್ಪಷ್ಟ ಪಡಿಸಿದರು
ಕನ್ನಡ ಭಾಷೆಯಲ್ಲಿ *DUDE* ಚಿತ್ರವನ್ನೂ ರಿಲೀಸ್ ಮಾಡಿ, ಅದೇ ಸಮಯದಲ್ಲಿ ತೆಲುಗು ಹಾಗೂ ಮಲಯಾಳಂ ನಲ್ಲಿಯೂ ತಮ್ಮ *DUDE* ಅನ್ನೂ ಡಬ್ ಮಾಡಿ ಬಿಡುಗಡೆ ಮಾಡಬೇಕು ಎಂದಿದ್ದ ತೇಜ್ ಗೆ,ಸ್ವಲ್ಪ ಬೇಸರವಾಗಿದ್ದು ನಿಜ..
ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ *DUDE* ಹೆಸರಿನ ಶೀರ್ಷಿಕೆ ನೋಂದಣಿ ಆದಂತಹ ವಿಚಾರ ತಿಳಿದ ತಕ್ಷಣ,ನಟ ನಿರ್ದೇಶಕ ತೇಜ್, ತಕ್ಷಣ ಆ ವಿಚಾರಕ್ಕಾಗಿ ಗಟ್ಟಿ ದ್ವನಿಯನ್ನ ಎತ್ತಿ,ದೊಡ್ಮನೆ ರಾಘಣ್ಣನ ಸಹಕಾರ ಹಾಗೂ ಫಿಲ್ಮ್ ಚೇಂಬರ್ ತಮ್ಮ ಜೊತೆ ನಿಂತಿದ್ದಕ್ಕಾಗಿ ತಾವು ಗೆದ್ದಿದ್ದೇವೆ ಎಂಬುದು ತೇಜ್ ಮಾತಾಗಿತ್ತು..
ಪ್ಯಾನ್ ಇಂಡಿಯಾ ಮೂವೀ ಮೇಕಿಂಗ್ ಮತ್ತು ರಿಲೀಸ್ ಕಾನ್ಸೆಪ್ಟ್ ಬಂದಾಗಿನಿಂದ ಇಂತಹ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು,ಎಷ್ಟೋ ಸಿನಿಮಾ ತಂಡಗಳಿಗೆ ದೊಡ್ಡ ತಲೆ ನೋವಾಗಿದೆ,
ಒಂದೇ ಶೀರ್ಷಿಕೆಯನ್ನು ಹಲವು ಭಾಷೆಗಳಲ್ಲಿ ನೋಂದಣಿ ಮಾಡಿರುತ್ತಾರೆ,
ಯಾವಾಗ ಬಿಡುಗಡೆ ಅನ್ನೋ ವಿಷ್ಯ ಬರತ್ತೊ ಆಗ್ಲೇ,ಎಲ್ಲರ ಕಣ್ಣು ಕೆಂಪಾಗೋದು..
ನಾನು ಶಂಕರ್ ನಾಗ್ ಸರ್ ಜೊತೆ ಕೆಲಸ ಮಾಡಿದ್ದೇನೆ, ಅವರ ಜೊತೆ ನಟಿಸುವಾಗ,
ನಾನು ತುಂಬಾ ಚಿಕ್ಕವನು,
ಆಗಿನಿಂದಲೇ ನಾನು ಇಂಡಸ್ಟ್ರಿ ನೋಡಿದ್ದೇನೆ,ಅಣ್ಣಾವ್ರು, ವಿಷ್ಣುವರ್ಧನ್ ಸರ್ ಸೇರಿದಂತೆ ಬಹುತೇಕ ಕನ್ನಡದ ಸೂಪರ್ ಸ್ಟಾರ್ಸ್ ಗಳ ಸಿನ್ಮಾಗಳು ಆಗಲೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಿದ್ದನ್ನು ನಾವು ಹೆಮ್ಮೆಯಿಂದ ಮಾತಾಡಬೇಕು..
ಅನುರಾಗ್ ಕಶ್ಯಪ್,ಸುಜಯ್ ಶಾಸ್ತ್ರಿ ಕಾಂಬಿನೇಶನ್ ನಲ್ಲಿ ಬರ್ತಾ ಇರುವಂತಹ *8* ಚಿತ್ರಕ್ಕೂ ನಮ್ಮ *DUDE* ಕ್ಕು ಯಾವುದೇ ಸಂಭಂದ ಇಲ್ಲ,
ಅವರದು ಎಮೋಷನಲ್ ಬಾಂಡಿಂಗ್ ಕಥೆ,ನಮ್ಮದು ಪಕ್ಕಾ ಮನೋರಂಜನೆ ಸಹಿತ,ಕಮರ್ಷಿಯಲ್ ಸಿನಿಮಾ ಎಂದು ತೇಜ್ ಈ ಹಂತದಲ್ಲೇ ಸ್ಪಷ್ಟ ಪಡಿಸಿದ್ದು ಮತ್ತೊಂದು ಪ್ಲಸ್ ಪಾಯಿಂಟ್..
ಹೆಣ್ಣುಮಕ್ಕಳೆ ಸ್ಟ್ರಾಂಗ್ ಗುರು,ಎನ್ನುವ ರೀತಿಯಲ್ಲಿ, ಹೆಣ್ಣುಮಕ್ಕಳು ಎಷ್ಟು,ಗಟ್ಟಿಯಾಗಿರುತ್ತಾರೆ ಹೇಗೆಲ್ಲ ಸವಾಲುಗಳನ್ನು ಎದುರಿಸಿ,ಮುಂದೆ ಹೋಗುತ್ತಾರೆ ಅನ್ನೋದು, *DUDE* ಹೇಳತ್ತೆ
ಅಕ್ಟೋಬರ್ ಒಳಗೆ ನಮ್ಮ *DUDE* ಸಿದ್ಧವಾಗಲಿದೆ, ಅದೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ ಎಂದು ಮಾಧ್ಯಮದವರಿಗೆ ತಿಳಿಸಿ ಕೊಟ್ಟರು