ಬಿಝಿ ರೊಟೀನ್ ಕಾರಣದಿಂದ ನಿಮ್ಮ ಮುಖ ಸದಾ ಸುಸ್ತಾಗಿರುವಂತೆ ಕಳಾಹೀನವಾಗಿದ್ದು, ನೀವು ಕ್ಷಣಾರ್ಧದಲ್ಲಿ ರೆಡಿಯಾಗಿ ಪಾರ್ಟಿಗೆ ಹೋಗಬೇಕಿದ್ದರೆ, ಅಗತ್ಯವಾಗಿ ಈ ಸಲಹೆಗಳನ್ನು ಅನುಸರಿಸಿ……!
ಬೇಸಿಗೆಯಲ್ಲಿ ನೀವು ನಿಮ್ಮ ಚರ್ಮಕ್ಕೆ ಕೂಲ್ ರಿಫ್ರೆಶ್ ಫೀಲ್ ನೀಡಬಯಸಿದರೆ, ಈ ಕೆಳಗಿನ ಸಲಹೆ ಅನುಸರಿಸಿ. ಇಲ್ಲದಿದ್ದರೆ ಬಿಸಿಲಿನ ಝಳಕ್ಕೆ ಮುಖದ ಬಣ್ಣ ಕಳಾಹೀನವಾಗಿ, ಡ್ರೈನೆಸ್ ಸಮಸ್ಯೆ ಎದುರಿಸಬೇಕಾದೀತು. ಹೀಗಾಗಿ ಈ ಸಂದರ್ಭದಲ್ಲಿ ಫೇಸ್‌ಮಿಸ್ಟ್ ಚರ್ಮವನ್ನು ಹೈಡ್ರೇಟ್ ಗೊಳಿಸಿ, ಕೂಲ್ ಫ್ರೆಶ್ ಆಗಿ ಇರಿಸುತ್ತದೆ. ಯಾವ ಬಗೆಯ ಫೇಸ್ ಮಿಸ್ಚ್ ಆರಿಸಿದರೆ ನಿಮಗೆ ಅನುಕೂಲ ಎಂದು ವಿವರವಾಗಿ ತಿಳಿಯೋಣವೇ? :
ಫೇಸ್ ಮಿಸ್ಟ್ ಎಂದರೇನು? : ಇದೊಂದು ಬಗೆಯ ಸ್ಪ್ರೇ. ಇದರಲ್ಲಿ ಬಹು ವಿಧದ ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ಸ್, ಎಕ್ಸ್ ಟ್ರಾಕ್ಟ್ಸ್, ಎಸೆನ್ಶಿಯಲ್ ಆಯಿಲ್ಸ್ ಅಡಗಿದ್ದು ಚರ್ಮಕ್ಕೆ ಹೆಚ್ಚಿನ ಲಾಭ ಒದಗಿಸುತ್ತದೆ. ಇದು ಚರ್ಮವನ್ನು ಇಡೀ ದಿನ ಹೈಡ್ರೇಟ್
ಆಗಿರಿಸುತ್ತದೆ. ಆದರೆ ಇದನ್ನು ನೀವು ಕ್ಲೀನಿಂಗ್‌ಮಾಯಿಶ್ಚರೈಸಿಂಗ್ ಸ್ಟೆಪ್ಸ್ ನಡುವೆ ಬಳಸಬೇಕು. ಇದರಿಂದ ಫೇಸ್ ಮಿಸ್ಟ್ ಚರ್ಮದ Ph ಲೆವೆಲ್ ನ್ನು ರೀಬ್ಯಾಲೆನ್ಸ್ ಮಾಡುವಲ್ಲಿ ಸಹಕಾರಿ.
ಸೌಂದರ್ಯ ಪ್ರೇಮಿಗಳ ಮೊದಲ ಆಯ್ಕೆ : ಫೇಸ್ ಮಿಸ್ಟ್ ಗೆ ಚರ್ಮವನ್ನು ಕ್ಷಣಗಳಲ್ಲೇ ತಾಜಾಗೊಳಿಸುವ ಸಾಮರ್ಥ್ಯವಿದ್ದು, ಬಳಸಲು ಬಲು ಸುಲಭ. ಇದು ಚರ್ಮದ ನಿರ್ಜೀವ ಕಳೆ ತೊಲಗಿಸಿ, ಸಜೀವ ಮಾಡಿ, ಮೇಕಪ್ ಗೆ ಸ್ಕಿನ್ ರೆಡಿ ಆಗುವಂತೆ ಮಾಡಬಲ್ಲದು. ಸ್ಕಿನ್ ಗೆ ಡ್ರೈನೆಸ್ ಪ್ರಾಬ್ಲಮ್ಸ್ ಇದ್ದರೆ, ಇದು ದೊಡ್ಡ ಮ್ಯಾಜಿಕ್ ಮಾಡಬಲ್ಲದು.
ಹೀಗಾಗಿ ಇದು ಸೌಂದರ್ಯ ಪ್ರೇಮಿಗಳ ಮೊದಲ ಆಯ್ಕೆ ಆಗಿದೆ. ಆದರೆ ನಿಮ್ಮ ಚರ್ಮದ ಆರೈಕೆಗೆ ತಕ್ಕಂತೆ ಎಂಥ ಫೇಸ್ ಮಿಸ್ಟ್ ಆರಿಸಬೇಕೆಂಬುದೂ ಅಷ್ಟೇ ಮುಖ್ಯ. ಇದರ ಕುರಿತು ವಿವರ ತಿಳಿಯೋಣ.
ಡ್ರೈನೆಸ್ ಫೈಟ್ ಮಾಡಲು : ನಿಮ್ಮದು ಅಪ್ಪಟ ಡ್ರೈ ಸ್ಕಿನ್ ಆಗಿದ್ದರೆ ನೀವು ಯಾವುದೇ ಬಗೆಯ ಫೇಸ್ ಮಿಸ್ಟ್ ಬಳಸದಿರುವುದೇ ಲೇಸು. ಇದರಿಂದ ಚರ್ಮದ ಡ್ರೈನೆಸ್ ಹೆಚ್ಚಿದರೆ ಕಷ್ಟ. ಹೀಗಾಗಿ ಹ್ಯಾಲೋರೋನಿಕ್ ಆ್ಯಸಿಡ್‌ಸ್ಕ್ವೀಲಾನ್ ನಂಥ ಘಟಕಗಳು ಅಡಗಿದ ಫೇಸ್ ಮಿಸ್ಟ್ ನ್ನು ಮಾತ್ರ ಆರಿಸಬೇಕು. ಆಗ ಇದು ಸ್ಕಿನ್ ಸೆಲ್ಸ್ ನ್ನು ಪ್ಲಂಪ್ ಮಾಡಿ, ಅದನ್ನು ಹೈಡ್ರೇಟ್ ಗೊಳಿಸುವಲ್ಲಿ ನೆರವಾದೀತು.
ಬೆಸ್ಟ್ ಫೇಸ್ ಮಿಸ್ಟ್ : ಬನಿಲಾ ಕೊಡಿಯರ್ ಹೈಡ್ರೇಶನ್ ಫೇಶಿಯಲ್ ಮಿಸ್ಟ್ ನಲ್ಲಿ ಬ್ಯಾಂಬೂ, ಲೋಟಸ್ ವಾಟರ್, ನೀಮ್ ಲೀಫ್ ಎಕ್ಸ್ ಟ್ರಾಕ್ಟ್ಸ್ ಅಡಗಿದ್ದು, ಚರ್ಮದ ಹೈಡ್ರೇಶನ್ ಲೆವೆಲ್ ನ್ನು ಬೂಸ್ಟ್ ಮಾಡುತ್ತದೆ.
ಪೈ ಸೆಂಚುರಿ ಫ್ಲವರ್ ಲೋಟಸ್‌ಆರೆಂಜ್ ಬ್ಲಾಸಂ ಸೂದಿಂಗ್ ಟಾನಿಕ್ ನ್ಯೂಟ್ರಿಯೆಂಟ್ ರಿಚ್ ವಾಟರ್, ಸ್ಕಿನ್ ಟೋನ್‌ಟೆಕ್ಸ್ಚರ್ ಸುಧಾರಿಸಿ, ಅದನ್ನು ರಿಫ್ರೆಶ್‌ಸೂಪರ್ ಸಾಫ್ಟ್ ಮಾಡಬಲ್ಲದು.
ಸ್ಟ್ರೆಸ್ ಸ್ಕಿನ್ ನಿಂದ ಮುಕ್ತಿ : ಬೇಸಿಗೆಯಲ್ಲಿ ಹೆಚ್ಚು ಎಕ್ಸ್ ಪೋಶರ್, ಹೀಟ್, ಮಾಲಿನ್ಯ, ಬೆವರಿನಿಂದಾಗಿ ಚರ್ಮದಲ್ಲಿ ಸ್ಟ್ರೆಸ್ ನ ಸಮಸ್ಯೆಗಳು ಹೆಚ್ಚುತ್ತವೆ. ಇದು ಚರ್ಮವನ್ನು ನಿರ್ಜೀವಗೊಳಿಸಿ ಕಾಂತಿಹೀನ ಮಾಡಿಬಿಡುತ್ತದೆ.
ಇಂಥ ಸಂದರ್ಭದಲ್ಲಿ ಕ್ಯಾಲೊಮೈನ್, ಜೋಜೋಬಾ ಆಯಿಲ್, ಎಸೆನ್ಶಿಯಲ್ ಆಯಿಲ್, ಲ್ಯಾವೆಂಡರ್ ಆಯಿಲ್, ರೋಸ್ ವಾಟರ್ ನಂಥ ಘಟಕಗಳ ಉತ್ತಮಿಕೆ ಇರುವ ಫೇಸ್ ಮಿಸ್ಟ್ ನ್ನೇ ಆರಿಸಬೇಕು. ಇದರಿಂದ ಸ್ಕಿನ್ ಬೇಗ ಡೀಸ್ಟ್ರೆಸ್ ಗೊಂಡು ಲವಲವಿಕೆ ಹೊಂದುತ್ತದೆ.
ಬೆಸ್ಟ್ ಫೇಸ್ ಮಿಸ್ಟ್ : ಬಾಡಿ ಹರ್ಬಲ್ ಸ್ಟ್ರೆಸ್ ರಿಲೀಫ್ ವ್ಯಾಲೆಂಡರ್ ಫೇಶಿಯಲ್ ಮಿಸ್ಟ್, ನಿಮ್ಮ ಸ್ಕಿನ್ ಟೋನ್ ಸುಧಾರಿಸಿ, ಏಜಿಂಗ್ ಪ್ರೋಸೆಸ್ ತಡೆಗಟ್ಟುತ್ತದೆ.
ರೋಸ್ ವಾಟರ್ ಮಿಸ್ಟ್ ಚರ್ಮವನ್ನು ರೆಡ್ ನೆಸ್‌ಪಫಿನೆಸ್ ನಿಂದ ದೂರವಿಡುತ್ತದೆ.
ಆ್ಯಕ್ನೆ ಪ್ರೋನ್ ಸ್ಕಿನ್ ಟ್ರೀಟ್ ಮೆಂಟ್ : ಬೇಸಿಗೆಯಲ್ಲಿ ಆಯ್ಲಿ ಚರ್ಮದವರ ಪೋರ್ಸ್ ಕ್ಲೋಸ್ ಆಗುವುದರಿಂದ, ಆ್ಯಕ್ನೆ ಪ್ರಾಬ್ಲಮ್ಸ್ ಭಾರಿ ಹೆಚ್ಚುತ್ತವೆ. ಆಗ ಸ್ಕಿನ್ ಬಲು ಡಲ್ ಆಗುತ್ತದೆ. ಆಗ ಈ ಫೇಸ್ ಮಿಸ್ಟ್ ನಿಜಕ್ಕೂ ಮ್ಯಾಜಿಕ್ ನಂತೆ ಕೆಲಸ ಮಾಡುತ್ತದೆ, ಏಕೆಂದರೆ ಇದು ಆಯಿಲ್ಸ್ ಸಿಲಿಕಾನ್ ಫ್ರೀ ಆಗಿರುತ್ತದೆ.
ಇಂಥ ಚರ್ಮಕ್ಕಾಗಿ ಫೇಸ್ ಮಿಸ್ಟ್ ನಲ್ಲಿ ರೋಸ್ ವಾಟರ್, ಆ್ಯಲೋವೆರಾ, ಗ್ರೀನ್ ಟೀಗಳಂಥ ಘಟಕಗಳಿರಬೇಕು. ಏಕೆಂದರೆ, ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದು ಚರ್ಮಕ್ಕೆ ತಂಪು ಒದಗಿಸುತ್ತದೆ.
ಬೆಸ್ಟ್ ಫೇಸ್ ಮಿಸ್ಟ್ : ಇನ್ನೀಸ್ ಫ್ರೀ ಗ್ರೀನ್ ಟೀ ಮಿಸ್ಟ್ ಲೈಟ್ ವೆಯ್ಟ್ ಆಗಿರುವುದರ ಜೊತೆ, ಗ್ರೀನ್ ಟೀಯ ಉತ್ತಮ ಅಂಶಗಳನ್ನೂ ಒಳಗೊಂಡಿದೆ. ಇದು ಹೈಡ್ರೇಶನ್, ಹೆಲ್ದಿ ಸ್ಕಿನ್ ಟೋನ್ ಮತ್ತು ಕಾಂತಿಯುತ ಚರ್ಮ ಒದಗಿಸುತ್ತದೆ. ಜೊತೆಗೆ ಚರ್ಮದ ಹೆಚ್ಚುವರಿ ಜಿಡ್ಡಿನಂಶ ತೊಲಗಿಸುವಲ್ಲಿಯೂ ಪೂರಕ.
ಇನ್ನೀಸ್ ಫ್ರೀ ಯೆಲ್ಲೋ ರೀವೈಟ್ ಸ್ಕಿನ್ ಮಿಸ್ಟ್ ಡ್ರೈ ಪೀಲಿಂಗ್ ಸ್ಕಿನ್ ಗಾಗಿ ಬೆಸ್ಟ್ ಎನ್ನಬಹುದು. ದಿ ಬ್ಯೂಟಿ ಕಂಪನಿ ಆ್ಯಲೋವೆರಾ ಮಿಸ್ಟ್ ಆಲ್ಕೋಹಾಲ್ ಫ್ರೀ ಆಗಿದ್ದು, ಚರ್ಮದ ಆರ್ದ್ರತೆ ಕಾಪಾಡುವಲ್ಲಿ ಸದಾ ಮುಂದು.
ಫೈಟ್ ವಿತ್ ಏಜಿಂಗ್: ಪ್ರತಿ ಮಹಿಳೆಯೂ ತನ್ನ ಚರ್ಮ ಸದಾ ಯಂಗ್ ಆಗಿಯೇ ಇರಬೇಕೆಂದು ಬಯಸುತ್ತಾಳೆ. ಆದರೆ ಅತಿಯಾದ ಕೆಮಿಕಲ್ಸ್ ಬೇಸ್ಡ್ ಸ್ಕಿನ್ ಕೇರ್ ಪ್ರಾಡಕ್ಟ್ಸ್ ಬಳಕೆಯಿಂದಾಗಿ, ಚರ್ಮ ಏಜಿಂಗ್ ಸಮಸ್ಯೆಗೆ ತುತ್ತಾಗುತ್ತದೆ. ಹೀಗಾಗಿ ಈ ಸಂದರ್ಭಕ್ಕಾಗಿಯೇ ಲೇಟೆಸ್ಟ್ ಬ್ಯೂಟಿ ಟ್ರೆಂಡ್ ನಲ್ಲಿ ಫೇಸ್ ಮಿಸ್ಟ್ ಏಜಿಂಗ್ ವಿರುದ್ಧ ಹೋರಾಡುವಲ್ಲಿ ಯಶಸ್ವಿ ಎನಿಸಿದೆ.
ಹೀಗಾಗಿ ಇಂಥ ಸಂದರ್ಭಕ್ಕಾಗಿ ಟೀ ಎಕ್ಸ್ ಟ್ರಾಕ್ಟ್, ವಿಟಮಿನ್ಸ್, ದಾಳಿಂಬೆ ಸಾರ, ಆಲ್ಫಾ ಬೀಟಾ ಹೈಡ್ರಾಕ್ಸಿ ಆ್ಯಸಿಡ್, ದ್ರಾಕ್ಷಿ ಸಾರ ಇತ್ಯಾದಿ ಅಡಗಿರುವಂಥ ಫೇಸ್ ಮಿಸ್ಟ್ ನ್ನೇ ಆರಿಸಿ. ಇದು ಆಕ್ಸಿಡೇಶನ್ ಸ್ಟ್ರೆಸ್ ನ್ನು ತಗ್ಗಿಸಿ, ಏಜಿಂಗ್ ಕಾಡದಂತೆ ಕಾಪಾಡುತ್ತದೆ.
ಬೆಸ್ಟ್ ಫೇಸ್ ಮಿಸ್ಟ್ : ಬೊಟ್ಯಾನಿಕಾ ನ್ಯೂಟ್ರಿಟಿಲಾ ಪೋಮೋಗ್ರಾನೆಟ್ ಫೇಸ್ ಮಿಸ್ಟ್ ಅತಿ ಸೂಕ್ತವಾಗಿದ್ದು, ಇದು ಆ್ಯಂಟಿಆಕ್ಸಿಡೆಂಟ್ಸ್ ನ ಪವರ್ ಹೌಸ್ ಎನಿಸಿದೆ, ಹೀಗಾಗಿ ಏಜಿಂಗ್ ತಗ್ಗಿಸುತ್ತದೆ.
ದಿ ಬಾಡಿ ಶಾಪ್ ನ ವಿಟಮಿನ್ C ಯ ಫೇಶಿಯ್ ಮಿಸ್ಟ್ ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸಿ, ಏಜಿಂಗ್ ವಿರುದ್ಧ ಯಶಸ್ವಿಯಾಗಿ ಹೋರಾಡಬಲ್ಲದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ಸ್ ಗುಣಗಳಿದ್ದು, ಸ್ಕಿನ್ ಸೆಲ್ಸ್ ನಲ್ಲಿ ಕೊಲೋಜೆನ್ ಉತ್ಪಾದನೆ ಹೆಚ್ಚಿಸಿ ಏಜಿಂಗ್ ಪ್ರೋಸೆಸ್ ತಗ್ಗಿಸಬಲ್ಲದು.
ಬ್ಲೂ ಲೈಟ್ ಪ್ರೊಟೆಕ್ಷನ್ ಮಿಸ್ಟ್ : ಇಂದಿನ ಉದ್ಯೋಗಸ್ಥ ವನಿತೆಯರೆಲ್ಲ ಕಂಪ್ಯೂಟರ್, ಲ್ಯಾಪ್ ಟಾಪ್ ಗಳ ಜೊತೆ ಸೆಣಸಬೇಕಿದೆ. ಇದು ಸ್ಕಿನ್ ಪ್ರಾಬ್ಲಮ್ಸ್ ಹೆಚ್ಚಲು ಕಾರಣವಾಗಿದೆ. ಇವುಗಳ ಬ್ಲೂ ಲೈಟ್ ನಿಂದಾಗಿ ಹೊರಹೊಮ್ಮುವ ಫ್ರೀ ರಾಡಿಕಲ್ಸ್, ಸ್ಕಿನ್‌ಮೇಜ್ ಆಗುತ್ತದೆ. ಇಂಥ ಸಮಯದಲ್ಲಿ ಚರ್ಮ ರಕ್ಷಣೆಗಾಗಿ ಫೇಶಿಯಲ್ ಮಿಸ್ಟ್ ಲಭ್ಯವಿದ್ದು, ಸ್ಕಿನ್ ಪ್ರೊಟೆಕ್ಷನ್‌ಗ್ಲೋ ಎರಡನ್ನೂ ಒದಗಿಸುತ್ತದೆ.
ಬೆಸ್ಟ್ ಫೇಸ್ ಮಿಸ್ಟ್ : ಬ್ಲೂ ಲೈಟ್ ಪ್ರೊಟೆಕ್ಷನ್ ಮಿಸ್ಟ್ ಚರ್ಮವನ್ನು ಹೈಡ್ರೇಟ್ ಗೊಳಿಸಿ, ಮೇಕಪ್ ಸೆಟ್ ಆಗಲು, ಹಾನಿಕಾರಕ, ಬ್ಲೂ ಲೈಟ್‌ಮಾಲಿನ್ಯದ ವಿರುದ್ಧ ಕಾಪಾಡುತ್ತದೆ.
ಪೋರ್ಸ್ ಮಿನಿಮೈಸ್ ಫೇಶಿಯಲ್ ಮಿಸ್ಟ್ : ದೊಡ್ಡ ಪೋರ್ಸ್ ಉಂಟಾಗಲು ಸೀರಂ ಕಾರಣ. ಹೆಣ್ಣಿನ ಕೊಬ್ಬಿನ ಗ್ರಂಥಿಗಳು ಹೆಚ್ಚು ಜಿಡ್ಡಿನಂಶ ಸ್ರವಿಸಿದರೆ ಹೀಗಾಗುತ್ತದೆ, ಹಾಗಾಗಿ ಚರ್ಮ ಆಯ್ಲಿ ಎನಿಸುತ್ತದೆ. ಇದರಿಂದ ಚರ್ಮ ಮೃದುತ್ವ ಕಳೆದುಕೊಳ್ಳುತ್ತದೆ. ಹೀಗಾಗಿ ಇದನ್ನು ತಗ್ಗಿಸಲು ಪವರ್ ಫುಲ್ ಆ್ಯಂಟಿ ಆಕ್ಸಿಡೆಂಟ್ಸ್ ರಿಚ್ ಫೇಸ್ ಮಿಸ್ಟ್ ಬಳಸಬೇಕು.
ಬೆಸ್ಟ್ ಫೇಸ್ ಮಿಸ್ಟ್ : ಪೋರ್ಸ್ ನ್ನು ತಗ್ಗಿಸಲು ರೇಡಿಯನ್ಸ್ ಮಿಸ್ಟ್ ಸಹಕಾರಿ. ಜೊತೆಗೆ ಚರ್ಮಕ್ಕೆ ಹಾನಿ ಮಾಡದೆ, ಅದನ್ನು ಎಕ್ಸ್ ಫಾಲಿಯೇಟ್ ಸಹ ಮಾಡುತ್ತದೆ.
– ಗೀತಾ ಭಟ್