ಇಂದು ಪ್ರತಿಯೊಬ್ಬ ಹೆಣ್ಣೂ ಸಹ ತನ್ನ ಚರ್ಮ ಅತ್ಯಧಿಕ ಹೊಳೆಯುತ್ತಿರಬೇಕು, ವಯಸ್ಸಿನ ಎಲ್ಲಾ ಹಂತದಲ್ಲೂ ಈ ಗ್ಲೋಯಿಂಗ್ ಹಾಗೇ ಉಳಿದಿರಬೇಕೆಂದು ಬಯಸುತ್ತಾಳೆ. ಇದಕ್ಕಾಗಿ ಅವಳು ತನ್ನ ಮುಖಕ್ಕೆ ಬಗೆಬಗೆಯ ಬ್ಯೂಟಿ ಪ್ರಾಡಕ್ಟ್ಸ್ ಬಳಸುತ್ತಾಳೆ. ಇದಕ್ಕಾಗಿ ಅವಳು ಒಮ್ಮೆ ಬ್ಲೀಚ್ ಮಾಡಿಸಿದರೆ, ಮತ್ತೊಮ್ಮೆ ಬಗೆಬಗೆಯ ಫೇಶಿಯಲ್ ಗೆ ಟ್ರೈ ಮಾಡುತ್ತಾಳೆ. ಆದರೂ ಮನ ಬಯಸಿದ ಪರಿಣಾಮ ಸಿಗಲಿಲ್ಲವೆಂದು ಕೊರಗುವುದು ತಪ್ಪದು.
ಹೀಗಾದಾಗ ನಿರಾಸೆ ಬೇಡ. ಇದಕ್ಕಾಗಿಯೇ ಅತ್ಯಾಧುನಿಕ ಕಾಸ್ಮೆಟಿಕ್ ಥೆರಪಿ ಹೈಡ್ರಾ ಫೇಶಿಯಲ್ ರೂಪುಗೊಂಡಿದೆ. ಇದು ನಿಮ್ಮ ಚರ್ಮವನ್ನು ಡೀಪ್ ಎಕ್ಸ್ ಫಾಲಿಯೇಟ್ ಮಾಡುವುದರ ಜೊತೆ ಜೊತೆಯಲ್ಲೇ ನಿಮ್ಮ ಚರ್ಮದ ಟೆಕ್ಸ್ ಚರ್, ಟೋನ್ ಸಹ ಇಂಪ್ರೂವ್ ಮಾಡುತ್ತದೆ.
ಹೈಡ್ರಾ ಫೇಶಿಯಲ್
ಇದೊಂದು ಅತ್ಯಾಧುನಿಕ ಕಾಸ್ಮೆಟಿಕ್ ಥೆರಪಿ. ಇದು ಚರ್ಮನ್ನು ಡೀಪ್ ಕ್ಲೀನ್ ಮಾಡುವುದರ ಜೊತೆ ಹೈಡ್ರೇಟ್ ಸಹ ಮಾಡುತ್ತದೆ. ಇದರಲ್ಲಿ ಒಂದು ವಿಶೇಷ ಟೆಕ್ನಿಕ್‌ಮೂಲಕ, ಪೋರ್ಸ್ ನಿಂದ ಡೆಡ್ ಸ್ಕಿನ್ ನ್ನು ರಿಮೂವ್ ಮಾಡುತ್ತಾರೆ. ಜೊತೆಗೆ ಸ್ಕಿನ್ ಗೆ ಆ್ಯಂಟಿ ಆಕ್ಸಿಡೆಂಟ್ ಸೀರಂ ಒದಗಿಸಲಾಗುತ್ತದೆ. ಇದರಿಂದ ಸ್ಕಿನ್ ಹೈಡ್ರೇಟೆಡ್ ಆಗುವುದರ ಜೊತೆ ಏಜಿಂಗ್ ಸಮಸ್ಯೆ ದೂರವಾಗಿ ಚಿರಯೌವನ ಉಳಿಯುತ್ತದೆ. ಈ ಇಡೀ ಪ್ರಕ್ರಿಯೆ 30-೦40 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಇದಾದ ಮೇಲೆ ಚರ್ಮದ ಸ್ಟ್ರೆಸ್ ದೂರವಾಗಿ, ಪೂರ್ಣ ರೂಪದಲ್ಲಿ ಫ್ಲಾಲೆಸ್ ಆಗಿ ಕಾಂತಿ ಗಳಿಸುತ್ತದೆ.
ಇದರ ಲಾಭಗಳು
ಆ್ಯಕ್ನೆಗೆ ಬಹಳ ಪರಿಣಾಮಕಾರಿ : ಚರ್ಮ ಡೀಪ್ ಎಕ್ಸ್ ಫಾಲಿಯೇಟ್ ಆಗದಿದ್ದಾಗ ಪೋರ್ಸ್ ಕ್ಲೀನ್ ಆಗದು, ಆ ಕಾರಣ ಚರ್ಮದಲ್ಲಿ ಆ್ಯಕ್ನೆ ಮೂಡುವುದು ಮಾಮೂಲಿ. ಇದರಿಂದ ಚರ್ಮ ಡಲ್ ನಿರ್ಜೀವ ಆಗಿಬಿಡುತ್ತದೆ. ಆದರೆ ಚರ್ಮಕ್ಕೆ ಮೈಕ್ರೋ ಡರ್ಮಾಬ್ರೇಶನ್ ಟೆಕ್ನಿಕ್ ನಿಂದ ಡೀಪ್ ಕ್ಲೀನ್ ಆದಾಗ, ಇದು ಕ್ಲೋಸ್ಡ್ ಪೋರ್ಸ್ ನ್ನು ಓಪನ್ ಮಾಡಿ, ಚರ್ಮದ ಸೆಲ್ಸ್ ನ್ನು ಪುನರುಜ್ಜೀವನ ಗೊಳಿಸುತ್ತದೆ. ಇದರಿಂದ ಆ್ಯಕ್ನೆ, ಅದರ ಕಲೆಗುರುತು ಎಷ್ಟೋ ಮಟ್ಟ ಕಡಿಮೆ ಆಗುತ್ತದೆ.
ಬ್ಲ್ಯಾಕ್ ಹೆಡ್ಸ್ ನಿವಾರಣೆಗೂ ಸಹಕಾರಿ : ಚರ್ಮದ ಮೇಲೆ ಡೆಡ್ ಸೆಲ್ಸ್ ಹೆಚ್ಚಾಗಿ ಜಮೆಗೊಂಡಾಗ ಅದು ಬ್ಲ್ಯಾಕ್ ಹೆಡ್ಸ್ ಗೆ ದಾರಿಯಾಗುತ್ತದೆ. ಇದು ಮುಖದಲ್ಲಿ ವಿರೂಪವಾಗಿ ಕೆಟ್ಟದೆನಿಸುತ್ತದೆ. ಇದರಿಂದಾಗಿ ಚರ್ಮಕ್ಕೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಹೈಡ್ರಾ ಫೇಶಿಯಲ್ ಪ್ರಕ್ರಿಯೆಯಲ್ಲಿ ಎಕ್ಸ್ ಫಾಲಿಯೇಟಿಂಗ್‌ಎಕ್ಸ್ ಟ್ರಾಕ್ಟಿಂಗ್ ಟೆಕ್ನಿಕ್ಸ್ ಒಳಗೊಂಡಿದ್ದು, ಆ್ಯಕ್ನೆ ಕಂಟ್ರೋಲ್ ಮಾಡುವುದರ ಜೊತೆಯಲ್ಲೇ, ಬ್ಲ್ಯಾಕ್ ಹೆಡ್ಸ್ ನ್ನು ಸಂಪೂರ್ಣ ನಿವಾರಿಸುತ್ತದೆ. ಇದರಿಂದಾಗಿ ಚರ್ಮ ಎಷ್ಟೋ ಪಟ್ಟು ಕ್ಲಿಯರ್ ಆಗುತ್ತದೆ, ಹೆಚ್ಚಿನ ಹೊಳಪು ಕೂಡುತ್ತದೆ.
ಸ್ಕಿನ್ ಏಜಿಂಗ್ ಕಂಟ್ರೋಲ್ : ಯಾವ ಮಹಿಳೆಯೇ ಇರಲಿ, ತನಗೆ ವಯಸ್ಸಾಗುತ್ತಿದೆ ಎಂದು ಸೂಚಿಸುವ ಸುಕ್ಕು ನಿರಿಗೆ ತೊಲಗಿಸಲು ಮೊದಲು ಧಾವಿಸುತ್ತಾಳೆ. ಆದರೆ ಯಾರು ಈ ಹೈಡ್ರಾ ಫೇಶಿಯಲ್ ಮಾಡಿಸಿರುತ್ತಾರೋ, ಅವರ ಚರ್ಮ ಹೆಚ್ಚು ಕಾಂತಿಯುತ ಆಗುವುದಲ್ಲದೆ, ಅವರಿಗೆ ಏಜಿಂಗ್ ಸಮಸ್ಯೆ ತಂತಾನೇ ತಗ್ಗಿ ಚಿರಯೌವನ ಉಳಿಯುತ್ತದೆ. ಜೊತೆಗೆ ಡೀಪ್ ಕ್ಲೀನಿಂಗ್ ನಿಂದ ಇದು ಪೋರ್ಸ್ ನ್ನು ಸಣ್ಣದಾಗಿಸಿ, ಹೈಪರ್ ಪಿಗ್ಮೆಂಟೇಶನ್‌ಫೈನ್ ಲೈನ್ಸ್ ನ್ನು ಎಷ್ಟೋ ತಗ್ಗಿಸುತ್ತದೆ.