ಬದಲಾಗುತ್ತಿರುವ ಜೀವನಶೈಲಿ, ಕಂಪ್ಯೂಟರ್ಯಾ ಸ್ಮಾರ್ಟ್ಫೋನುಗಳ ಅತಿಯಾದ ಬಳಕೆ ಕಂಗಳಲ್ಲಿ ತಂತಾನೇ ಡ್ರೈನೆಸ್ ಹೆಚ್ಚಿಸುತ್ತಾ ರೋಗವಾಗುತ್ತದೆ. ಇದರ ನಿವಾರಣೆಗಾಗಿ ತಜ್ಞರ ಸಲಹೆ ಪಡೋಣವೇ.....?

ನಾವು ನೋಡುವ ಪ್ರತಿ ದೃಶ್ಯವನ್ನೂ ಕಂಗಳು ಮೆದುಳಿಗೆ ತಕ್ಷಣ ಸಂದೇಶವಾಗಿ ರವಾನಿಸುತ್ತದೆ. ಕಂಗಳು ನಮ್ಮ ದೇಹದ ಅತಿ ಸೂಕ್ಷ್ಮ ಅಂಗಗಳು ಎಂದೇ ಹೇಳಬೇಕು. ಹೀಗಾಗಿ ಇದರ ಸುರಕ್ಷತೆಯತ್ತ ನಾವು ಹೆಚ್ಚಿನ ಗಮನ ಹರಿಸಬೇಕು. ಒಂದು ವರದಿ ಪ್ರಕಾರ, ಇತ್ತೀಚೆಗೆ 2 ಲಕ್ಷ ಮಕ್ಕಳು ನಮ್ಮ ದೇಶದಲ್ಲಿ ದೃಷ್ಟಿಹೀನರಾಗಿದ್ದಾರೆ, ಇವರಲ್ಲಿ ಕೆಲವರಿಗೆ ದೃಷ್ಟಿ ಸಿಗಬಹುದು, ಉಳಿದವರು ಜೀವನವಿಡೀ ಅಂಧರಾಗಿಯೇ ಇರಬೇಕು.

ಕೋವಿಡ್‌ ಹೆಮ್ಮಾರಿಯ ಕಾಲದಲ್ಲೂ ಕಂಗಳ ಮೇಲೆ ಹೆಚ್ಚಿನ ಒತ್ತಡ ಹೇರಲಾಯಿತು. ಏಕೆಂದರೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಕಂಪ್ಯೂಟರ್‌ ಮುಂದೆ ಕೂರಲೇಬೇಕಾದ ಕಾಲವಿದು. ಇದರಿಂದ ಕಂಗಳ ರೆಡ್‌ ನೆಸ್‌, ಗೀಜು ಕಟ್ಟುವಿಕೆ, ಕ್ರಮೇಣ ಕಂಬನಿ ಬತ್ತುವಿಕೆ, ಊತ, ಕಂಗಳ ಡ್ರೈನೆಸ್‌ ಎಲ್ಲಕ್ಕೂ ಹೆಚ್ಚಿನ ಹಿಂಸೆ ನೀಡುತ್ತದೆ.

ತಜ್ಞರು ಈ ಕುರಿತಾಗಿ, ಕೋವಿಡ್‌ ಕಾರಣ ನಮ್ಮ ಆಧುನಿಕ ಜೀವನಶೈಲಿ ಎಷ್ಟೋ ಬದಲಾಗಿದೆ. ಇದರಿಂದಾಗಿ ಕಂಗಳ ಡ್ರೈನೆಸ್ ದೊಡ್ಡ ಹಿಂಸೆಯಾಗಿದೆ. ಏಕೆಂದರೆ ಕಂಗಳ ಡ್ರೈನೆಸ್‌ ಒಂದು ಗಂಭೀರ ಸ್ಥಿತಿಯಾಗಿದ್ದು, ಹಲವು ತೊಂದರೆಗಳ ಜೊತೆ ಮುಂದೆ ದೃಷ್ಟಿಹೀನತೆಗೂ ಕಾರಣವಾದೀತು, ಎನ್ನುತ್ತಾರೆ.

ಮಕ್ಕಳ ಸ್ಕ್ರೀನ್‌ ಟೈಂ ಹೆಚ್ಚುವಿಕೆ, ಪೌಷ್ಟಿಕ ಆಹಾರ ಸೇವಿಸದೆ, ಜಂಕ್‌/ಫಾಸ್ಟ್ ಫುಡ್‌ ಗೆ ಮೊರೆ ಹೋಗುವುದು, ಅನಿಯಮಿತ ನಿದ್ದೆ ಇತ್ಯಾದಿಗಳಿಂದ ಕಂಗಳ ಡ್ರೈನೆಸ್‌ ಹೆಚ್ಚುತ್ತದೆ. ಇದರಿಂದ ಪಾರಾಗಲು ಹೀಗೆ ಮಾಡಿ : ಮನೆಯಲ್ಲೇ ಇರುವುದರಿಂದ ಟಿವಿ ನೋಡುತ್ತಾ, ಫೋನ್‌ ತಡಕಾಡುತ್ತಾ ಕಂಗಳ ಡ್ರೈನೆಸ್‌ ಪ್ರಕರಣ ಹೆಚ್ಚುತ್ತಾ ಹೋಗುತ್ತದೆ. ಸದಾ ಕಣ್ಣು ಉಜ್ಜಿಕೊಳ್ಳಬೇಕು, ಉರಿ, ನೋವು ಇದರ ಲಕ್ಷಣಗಳು. ಇನ್‌ ಡೋರ್‌ ಏರ್‌ ಕ್ವಾಲಿಟಿ ಸಹ ಕಂಗಳ ಡ್ರೈನೆಸ್‌ ಗೆ ಮತ್ತೊಂದು ಕಾರಣ. ಕಂಗಳ ಒಳಗಿನ ನೀರು ಬಾಷ್ಪೀಕರಣಗೊಂಡು, ಮುಂದೆ ಊತಕ್ಕೆ ದಾರಿ ಆಗುತ್ತದೆ.

ಅಡುಗೆ ಮಾಡು ವಿಧಾನ, ಆಹಾರದ ವೇಳೆ (ಊಟ, ತಿಂಡಿ ನಡುವಿನ ಟೈಂ ಗ್ಯಾಪ್‌), ಅನುಚಿತ ಆಹಾರ ಸೇವನೆಯಿಂದಾಗಿ, ದೇಹದಲ್ಲಿ ಅಗತ್ಯದ ಫ್ಯಾಟಿ ಆ್ಯಸಿಡ್ಸ್, ವಿಟಮಿನ್‌ಗಳ ಕೊರತೆ ಆಗುತ್ತದೆ. ಇದು ಕಂಗಳ ಆರೋಗ್ಯ ಹಾಳಾಗಲು ಮುಖ್ಯ ಕಾರಣ. ಸರಿಯಾಗಿ ನಿದ್ದೆ ಮಾಡದೆ ಇರುವುದು ಸಹ ಕಂಗಳಲ್ಲಿನ ದ್ರವ ಹಿಂಗಲು ಪೂರಕ. ಎಲೆಕ್ಟ್ರಾನಿಕ್‌ ಗ್ಯಾಜೆಟ್ಸ್ ನ ಸತತ ಬಳಕೆ ನಮ್ಮನ್ನು ಬಲು ಹಿಂಸಿಸುತ್ತದೆ.

ರೆಪ್ಪೆ ಬಡಿಯದಿರುವಿಕೆ : ಸ್ಕ್ರೀನ್‌ ಟೈಂ ಸತತ ಹೆಚ್ಚುತ್ತಿರುವುದೇ ಕಂಗಳ ಡ್ರೈನೆಸ್‌ ಗೆ ಮೂಲಕಾರಣ. ಆರೋಗ್ಯವಂತರು ಪ್ರತಿ ನಿಮಿಷಕ್ಕೆ 15 ಸಲ ಬ್ಲಿಂಕ್‌ ಮಾಡಬೇಕು, ಆದರೆ ಈ ಸ್ಕ್ರೀನ್‌ ಟೈಂನಿಂದಾಗಿ ಇದರ ದರ ತಗ್ಗಿ ಪ್ರತಿ ನಿಮಿಷಕ್ಕೆ 5-7 ಸಲ ಬ್ಲಿಂಕ್ ಮಾಡುವಂತಾಗಿದೆ. ಈ ರೀತಿ ಕನಿಷ್ಠ ಬ್ಲಿಂಕ್ಸ್ ಕಂಗಳ ಒಳಪದರದಲ್ಲಿ ಆರ್ದ್ರತೆಯನ್ನು ಹಿಂಗಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ