ಬೇಸಿಗೆಯಲ್ಲೂ ನಿಮ್ಮ ಕೂದಲು ಸಿಲ್ಕಿ ಶೈನ್ಆಗಿರಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಬಲ್ಲಿರಾ...?

ಬೇಸಿಗೆಯ ದಿನಗಳು ಆರಂಭವಾಗುತ್ತಿದ್ದಂತೆ ಕೂದಲಿನ ಸಮಸ್ಯೆಗಳು ಹೆಚ್ಚು ಹಿಂಸೆ ಕೊಡಲಾರಂಭಿಸುತ್ತವೆ. ಹೀಗಿರುವಾಗ ಈ ಸೀಸನ್‌ ನಲ್ಲಿ ಕೂದಲಿನ ವಿಶೇಷ ಆರೈಕೆ ಮಾಡಬೇಕಾದುದು ಅನಿವಾರ್ಯ.

ಈ ಕುರಿತಾಗಿ ಕೇಶ ತಜ್ಞೆಯರು ನೀಡುವ ಸಲಹೆ ಎಂದರೆ, ಬೇಸಿಗೆಯಲ್ಲಿ ಕೂದಲು ಆರ್ದ್ರತೆ ಕಳೆದುಕೊಳ್ಳುತ್ತದೆ. ಅದು ನಿರ್ಜೀವವಾಗಿ ಕ್ರಮೇಣ ಉದುರತೊಡಗುತ್ತದೆ. ಆದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಸಲಹೆ ಅನುಸರಿಸಿದರೆ, ಕೂದಲನ್ನು ಈ ಸಮಸ್ಯೆಗಳಿಂದ ದೂರವಿರಿಸಬಹುದು.

ಅಂಟಂಟು ಕೂದಲಿಗೆ ಪರಿಹಾರ

ತಲೆಯ ಸ್ಕಾಲ್ಪ್ ನಲ್ಲಿನ ಚರ್ಮ ಬಿಸಿಲಿನ ಝಳದಿಂದ ಅಂಟಂಟು ಆಗುವಂತೆ, ಕೂದಲೂ ಹಾಗೇ ಆಗುತ್ತದೆ. ಇದರಿಂದ ತಲೆಗೂದಲಲ್ಲಿ ಹೊಟ್ಟು ಅಧಿಕ ಸೇರಿಕೊಳ್ಳುತ್ತದೆ. ಇದರಿಂದ ಕೂದಲುದುರುವಿಕೆ ಕ್ರಮೇಣ ಹೆಚ್ಚುತ್ತದೆ. ಅದಕ್ಕಾಗಿ ಈ ಸಲಹೆ ಅನುಸರಿಸಿ :

ಎಲ್ಲಕ್ಕೂ ಮೊದಲು ಮಾಯಿಶ್ಚರೈಸರ್‌ ಇಲ್ಲದ ಶ್ಯಾಂಪೂ ಆರಿಸಿ.

ದಿನ ಬಿಟ್ಟು ದಿನ ತಲೆಗೆ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ. ತಲೆಗೂದಲಲ್ಲಿ ಎಣ್ಣೆ ಜಿಡ್ಡು ಜಮೆಗೊಳ್ಳಲು ಬಿಡಬೇಡಿ.

ಅಂಟಂಟು ಕೂದಲಿಗೆ ಉಗುರು ಬೆಚ್ಚಗಿನ ನೀರಿನ ಬಳಕೆ ಸಾಕು, ಕುದಿ ನೀರು ಬೇಡ.

ಸದಾ ಕೂದಲನ್ನು ಬಾಚುತ್ತಿರಬೇಡಿ.

ಕೂದಲನ್ನು ತೊಳೆದ ನಂತರ, ಅದು ತುಸು ಒಣಗುವ ಮೊದಲೇ ಅದನ್ನು ಬಲವಂತವಾಗಿ ಟವೆಲ್ ‌ನಲ್ಲಿ ಸುತ್ತಬೇಡಿ. ಒದ್ದೆ ಕೂದಲಿನಿಂದ ಬೆವರು ತೊಟ್ಟಿಕ್ಕತೊಡಗಿದರೆ, ಅಂಟಂಟು ಹೆಚ್ಚಾಗುತ್ತದೆ.

ಪ್ರೋಟೀನ್‌ ಅಂಶ ಹೆಚ್ಚಾಗಿರುವ ಪೌಷ್ಟಿಕ ಆಹಾರ ಸೇವಿಸಿ. ಪ್ರೋಟೀನ್‌ ಕೊರತೆಯಿಂದಾಗಿ ಕೂದಲು ನಿರ್ಜೀವ ಆಗತೊಡಗುತ್ತದೆ.

ಹೊರಗೆ ಹೊರಡುವ ಮೊದಲು ತಲೆಗೂದಲನ್ನು ದುಪಟ್ಟಾ, ಸೆರಗಿನಿಂದ ಮರೆಮಾಡಿ.

ಮತ್ತೆ ಮತ್ತೆ ಕೂದಲನ್ನು ಮುಟ್ಟುತ್ತಾ ಇರಬೇಡಿ. ಇದರಿಂದಾಗಿ ಕೈನಲ್ಲಿನ ಕೊಳಕು ಕೂದಲಿಗೆ ಹೋಗಿ ಅದು ಅಂಟಂಟಾಗುತ್ತದೆ.

hair-mask

ತೈಲೀಯ ಸ್ಕಾಲ್ಪ್ ಗೆ ಆರೈಕೆ

ಸ್ಕಾಲ್ಪ್ ನಲ್ಲಿ (ತಲೆ ಬುರುಡೆಯ ಚರ್ಮ) ಹಲವಾರು ಸಿಬೇಶನ್‌ ಗ್ಲಾಂಡ್ಸ್ ಇರುತ್ತದೆ. ಇದರಿಂದ ಸೀಬಮ್ ಸ್ರವಿಸಲ್ಪಡುತ್ತದೆ. ಇದು ಕೂದಲಿಗೆ ಹೆಚ್ಚು ಲಾಭಕರ. ಇದು ಕೂದಲು ಶುಷ್ಕ ನಿರ್ಜೀವ ಆಗದಂತೆ ತಡೆಯುತ್ತದೆ. ಆದರೆ ಇದರ ಅಧಿಕ ಸ್ರಾವದಿಂದ ಕೂದಲು ಆಯ್ಲಿ ಆಗುತ್ತದೆ. ಇಲ್ಲಿನ ಸಲಹೆ ಅನುಸರಿಸಿ ಈ ತೊಂದರೆಯಿಂದ ಪಾರಾಗಬಹುದು :

ತೈಲೀಯ ಸ್ಕಾಲ್ಪ್ ಗೂ ಸಹ ಬೇಸಿಗೆಯಲ್ಲಿ ದಿನ ಬಿಟ್ಟು ದಿನ ಶ್ಯಾಂಪೂ ಬಳಸಿರಿ.

ನೀವು ಪ್ರತಿದಿನ ವ್ಯಾಯಾಮ ಮಾಡುವುದಾದರೆ, ಪ್ರತಿದಿನ ಶ್ಯಾಂಪೂ ಬಳಸಿರಿ. ಏಕೆಂದರೆ ಈ ಸೀಸನ್‌ ನಲ್ಲಿ ಸ್ಕಾಲ್ಪ್ ನ್ನು ಬೆವರಿನಿಂದ ರಕ್ಷಿಸಬೇಕಾದುದು ಮುಖ್ಯ.

ನಿಮ್ಮ ಸ್ಕಾಲ್ಪ್ ಆಯ್ಲಿ ಆಗಿದ್ದರೆ ಕೂದಲಿಗೆ ಡ್ರೈ ಶ್ಯಾಂಪೂ ಸ್ಪ್ರೇ ಸಹ ಮಾಡಬೇಕು. ಇದು ಸ್ಕಾಲ್ಪ್ ಆಯಿಲ್ ‌ಹೀರಿಕೊಂಡು ಕೂದಲು ಅಂಟಂಟಾಗದಂತೆ ರಕ್ಷಿಸುತ್ತದೆ. ಹೊರಗಿನ ಓಡಾಟಕ್ಕೆ ಮೊದಲು ಡ್ರೈ ಶ್ಯಾಂಪೂ ಅತ್ಯುತ್ತಮ ಆಯ್ಕೆಯಾಗಿದೆ.

ಬೇಸಿಗೆಯಲ್ಲಿ ಸ್ಕಾಲ್ಪ್ ಗೆ ಎಣ್ಣೆ ಹಚ್ಚುವುದನ್ನು ನಿಲ್ಲಿಸಿ. ಏಕೆಂದರೆ ಸ್ಕಾಲ್ಪ್ ಆಯ್ಲಿ ಆಗಿದ್ದರೆ, ಈ ಎಣ್ಣೆಯ ಜಿಡ್ಡು ಅದನ್ನು ಮತ್ತಷ್ಟು ತೈಲೀಯ ಮಾಡುತ್ತದೆ.

ಬೇಸಿಗೆಯಲ್ಲಿ ಆ್ಯಂಟಿ ಫಂಗಲ್ ಹೆಚ್ಚಾಗಿರುವ ಆ್ಯಂಟಿ ಡ್ಯಾಂಡ್ರಫ್‌ ಶ್ಯಾಂಪೂವನ್ನೇ ಬಳಸಬೇಕು. ಇದರಲ್ಲಿ ಅಡಗಿರುವ ಆಮ್ಲೀಯ ಅಂಶ ಬೇಸಿಗೆಯಲ್ಲಿ ಕೂದಲಿನ ಆರೈಕೆಗೆ ಪೂರಕ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ