ಅಬ್ಬಬ್ಬಾ.. ಮತ್ತಷ್ಟು ಬೋಲ್ಡ್ ಲುಕ್ನಲ್ಲಿ ರಶ್ಮಿಕಾ

ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ನಮ್ಮ ನ್ಯಾಷನಲ್ ಕ್ರಶ್ ಎಂದು ಹೊತ್ತು ಮೆರೆಸಿದ್ದು ಕನ್ನಡಿಗರು. ಸದ್ಯ ರಶ್ಮಿಕಾ ಟಾಲಿವುಡ್ ಹಾಗು ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಬ್ಯಾಕ್ to ಬ್ಯಾಕ್ ಪ್ರಾಜೆಕ್ಟ್ ಗಳಿಗೆ ಸೈನ್ ಮಾಡೋ ಮೂಲಕ ಬ್ಯುಸಿ ಆಗ್ತಿದ್ದಾರೆ. ಅದ್ರಲ್ಲೂ ಬಾಲಿವುಡ್ ನಲ್ಲಿ ರಶ್ಮಿಕಾಗೆ ಬಾರಿ ಕ್ರೇಜ್ ಹಾಗು ಡಿಮ್ಯಾಂಡ್ ಇದೆ. ಹೈ ಪ್ರೊಫೈಲ್ ಕಾಂಟಾಕ್ಟ್ ಇರೋ ರಶ್ಮಿಕಾ ಈಗ ಖಾನ್.. ಕಪೂರ್ ಸಿನಿಮಾಗಳಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ.

ಸಲ್ಮಾನ್ ಖಾನ್ ಜೊತೆ ಅಭಿನಯಿಸಿದ ಸಿಕಂದರ್ ಸಿನಿಮಾ ಫ್ಲಾಪ್ ಆಯಿತು ಆದ್ರೆ ರಶ್ಮಿಕಾ ಕರಿಯರ್ ಗೆ ಇದು ಮೈನಸ್ ಆಗಿಲ್ಲ ಬದಲಾಗಿ ಇನ್ನಷ್ಟು ಆಫರ್ಸ್ ಅರಸಿ ಬರ್ತಿವೆ. ಸದ್ಯ ರಶ್ಮಿಕಾ ಹಿಂದಿಯಲ್ಲಿ ಯಾವ ಸಿನಿಮಾದಲ್ಲಿ ನಲ್ಲಿ ಅಭಿನಯಿಸುತ್ತಿದ್ದಾರೆ ನೆಕ್ಸ್ಟ್ ಪ್ರಾಜೆಕ್ಟ್ ಯಾವ್ದು ಅನ್ನೋದಕ್ಕೆ ಇಲ್ಲಿದೆ ಉತ್ತರ

2012ರಲ್ಲಿ ‘ಕಾಕ್ಟೇಲ್’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಸೈಫ್ ಅಲಿ ಖಾನ್, ಡೈನಾ ಪೆಂಟಿ, ದೀಪಿಕಾ ಪಡುಕೋಣೆ ಸ್ಕ್ರೀನ್ ಶೇರ್ ಮಾಡಿದ್ರು. ಈಗ ಆ ಸಿನಿಮಾಗೆ ಸೀಕ್ವೆಲ್ ಬರೋದು ಕನ್ಫರ್ಮ್ ಆಗಿದೆ. ಆದರೆ ಪಾತ್ರಧಾರಿಗಳು ಬದಲಾಗುತ್ತಿದ್ದಾರೆ ಅನ್ನೋದು ಇಂಟೆರೆಸ್ಟಿಂಗ್. ಅಂದಹಾಗೆ ‘ಕಾಕ್ಟೇಲ್ 2’ ಸಿನಿಮಾದಲ್ಲಿರಶ್ಮಿಕಾ ನಟಿಸೋದು ಬಹುತೇಕ ಕನ್ಫರ್ಮ್ ಆಗಿದೆ.. ಈ ಬಾರಿ ರಶ್ಮಿಕಾ ಶಾಹಿದ್ ಕಪೂರ್ ಗೆ ನಟಿಯಾಗಿ ಮಿಂಚಲಿದ್ದಾರೆ.

IMG-20250606-WA0093

ಶಾಹಿದ್ ಕಪೂರ್ ಜೊತೆ ರಶ್ಮಿಕಾ ರೋಮ್ಯಾನ್ಸ್..!

ಕಾಕ್ಟೇಲ್-2 ಕಿಕ್.. ಕೃತಿ, ರಶ್ ಹಾಟ್ನೆಸ್ ಗೆ ಶಾಹಿದ್ ಫ್ಲಾಟ್

ಆದ್ರೆ ಶಾಹಿದ್ ಗೆ ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇರ್ತಾರೆ. ಅದುವೇ ರಶ್ಮಿಕಾ ಹಾಗು ಕೃತಿ ಸನನ್.  ಸದ್ಯಕ್ಕೆ ರಶ್ಮಿಕಾ ಮಂದಣ್ಣ, ಕೃತಿ ಸನನ್ ಮತ್ತು ಶಾಹಿದ್ ಕಪೂರ್ ಬೇರೆ ಬೇರೆ ಪ್ರಾಜೆಕ್ಟ್ಗಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾಗಳ ಕೆಲಸಗಳು ಮುಗಿದ ಬಳಿಕ ‘ಕಾಕ್ಟೇಲ್ 2’ ಸಿನಿಮಾದ ಶೂಟಿಂಗ್ನಲ್ಲಿ ಅವರು ಭಾಗಿ ಆಗಲಿದ್ದಾರೆ. ವರದಿಗಳ ಪ್ರಕಾರ, ಜುಲೈನಲ್ಲಿ ‘ಕಾಕ್ಟೇಲ್ 2’ ಚಿತ್ರೀಕರಣ ಆರಂಭ ಆಗಲಿದೆ.

ಈಗಾಗಲೇ ರಶ್ಮಿಕಾ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸಿದ್ದು ನೋಡಿದ್ದೀರ. ಡಿಯರ್ comrade ಹಾಗು ಗೀತಾ ಗೋವಿಂದಂ ಸಿನಿಮಾಗಳಲ್ಲಿ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡೋ ಮೂಲಕ sensation ಕ್ರಿಯೇಟ್ ಮಾಡಿದ್ರು. ನಂತರ ಬಾಲಿವುಡ್ ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಿಸ್ ಮಾಡಿರೋ ಸೀನ್ ಗಳಿವೆ. ಬಾಲಿವುಡ್ ಲವ್ ಸ್ಟೋರಿ ಸಿನಿಮಾಗಳು ಅಂದ್ರೆ ಕಿಸ್ ಸೀನ್ ಫಿಕ್ಸ್. ಹಾಗೆಯೇ ರಶ್ಮಿಕಾ ಕೂಡ ಲಿಪ್ ಲಾಕ್ ಸೀನ್ ಗಳಿಗೆ ತಕರಾರು ಮಾಡೋದಿಲ್ಲ. ಆದ್ರಿಗ ರಶ್ಮಿಕಾ ಫ್ಯಾನ್ಸ್ ಥ್ರಿಲ್ಲ್ ಆಗಿರೋದು ಕಾಕ್ಟೇಲ್-2ನಲ್ಲಿ ರಶ್ಮಿಕಾ ಇನ್ನಷ್ಟು ಬೋಲ್ಡ್ ಹಾಗು ಡೇರಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಸುದ್ದಿ.

IMG-20250606-WA0094

ಈ ಸಿನಿಮಾಗೆ ಲವ್ ರಂಜನ್ ನಿರ್ದೇಶನ ಮಾಡಲಿದ್ದು ‘ಮೆಡಾಕ್ ಫಿಲ್ಸ್’ ಮೂಲಕ ನಿರ್ಮಾಣ ಆಗಲಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರ ಕಾಂಬಿನೇಷನ್ ಎಂಬ ಕಾರಣದಿಂದ ಈಗಲೇ ಈ ಸಿನಿಮಾ ಮೇಲೆ ನಿರೀಕ್ಷೆ ಶುರುವಾಗಿದೆ. ಇದಲ್ಲದೇ, ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್ನಿಂದ ಅನೇಕ ಅವಕಾಶಗಳು ಸಿಗುತ್ತಿವೆ. ಒಟ್ನಲ್ಲಿ ಈ ಸುದ್ದಿ ಕೇಳಿ ಬಿಟೌನ್ ಸಿನಿಪ್ರಿಯರು ಥ್ರಿಲ್ಲ್ ಆಗಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ