ಥಗ್ಸ್ ಆಫ್ ಹಿಂದೂಸ್ತಾನ್, ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲಿನ ಬಳಿಕ ಆಮಿರ್ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಲಕ ಕಮ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ಆಮಿರ್ ಖಾನ್ ಸಿನಿಮಾ ರಿಲೀಸ್ ಆಗುತ್ತಿದೆ. ‘ಸಿತಾರೇ ಜಮೀನ್ ಪರ್’ ಟ್ರೇಲರ್ ಗೆ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದೇ ಜೂನ್ 20ಕ್ಕೆ ಈ ಸಿನಿಮಾ ರಿಲೀಸ್ ಆಗ್ತಿದೆ. ಆದ್ರೆ ಹಾಲಿವುಡ್ ಸಿನಿಮಾವೊಂದನ್ನ ಕಾಪಿ ಮಾಡಿ ಆಮಿರ್ ಈ ‘ಸಿತಾರೆ ಜಮೀನ್ ಪರ್’ ಸಿನಿಮಾ ಮಾಡಿದ್ದಾರೆ ಅನ್ನೋದೇ ಅಚ್ಚರಿ ವಿಚಾರ.

IMG-20250606-WA0097

3 ನಿಮಿಷ 29 ಸೆಕೆಂಡ್ ಇರುವ ಈ  ಟ್ರೇಲರ್ನಲ್ಲಿ, ಅಮಿರ್ ಖಾನ್ ಬ್ಯಾಸ್ಕೆಟ್ಬಾಲ್ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ.. ರಿಲೀಸ್ ಆಗಿರುವ ಟ್ರೇಲರ್ ಎಲ್ಲಾ ಆ್ಯಂಗಲ್ನ್ನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಿದೆ..ಆಮಿರ್ಗೆ ಜೋಡಿಯಾಗಿ ಜೆನಿಲಿಯಾ ದೇಶ್ಮುಖ್ ಕಾಣಿಸಿಕೊಂಡಿದ್ದಾರೆ.ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಕಮರ್ಷಿಯಲ್ ಸಿನಿಮಾಗಳ ಹಿಂದೆ ಬಿದ್ದಾಗ, ಭಿನ್ನ ಹಾದಿಯನ್ನು ತುಳಿದವರು ಅಮೀರ್ ಖಾನ್. ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿ ಗೆದ್ದವರು ಮಿಸ್ಟರ್ ಪರ್ಫೆಕ್ಟ್.

IMG-20250606-WA0096

‘ಸಿತಾರೆ ಜಮೀನ್ ಪರ್’ ಸಿನಿಮಾ  ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ಕಾಪಿ ಎಂಬುದು ಈಗ ಸಾಕ್ಷಿ ಸಮೇತ ಸಾಭೀತಾಗಿದ್ದು, ಇದೇ ಕಾರಣದಿಂದ ಆಮಿರ್ ಖಾನ್ರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ‘ಚಾಂಪಿಯನ್ಸ್’ ಸಿನಿಮಾದ ರೀಮೇಕ್ ‘ಸಿತಾರೆ ಜಮೀನ್ ಪರ್’ ಚಿತ್ರ ಅನ್ನೋದು ಎರಡೂ ಟ್ರೈಲರ್ಗಳನ್ನು ನೋಡಿದ ಮೇಲೆ ಎಲ್ಲಾ ಅನುಮಾನಗಳಿಗೂ ಕ್ಲಾರಿಟಿ ಸಿಕ್ಕಿದೆ.. ಚಾಂಪಿಯನ್ಸ್ ಸಿನಿಮಾದಲ್ಲಿ ನಟ ಹ್ಯಾರೆಲ್ಸನ್, ವಿಶೇಷ ಚೇತನರ ಬಾಸ್ಕೆಟ್ ಬಾಲ್ ತಂಡಕ್ಕೆ ತರಬೇತಿಯನ್ನು ನೀಡುತ್ತಾರೆ. ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲೂ ಅದೇ. ಫ್ರೇಮ್ ಟು ಫ್ರೇಮ್ ಕಾಪಿ ಮಾಡಿ ‘ಸಿತಾರೆ ಜಮೀನ್ ಪರ್’  ಸಿನಿಮಾ ಸಿದ್ಧಪಡಿಸಿದ್ದಾರೆ ಆಮಿರ್ ಖಾನ್..ಅಲ್ಲಿಗೆ ‘ಚಾಂಪಿಯನ್ಸ್’ ಸಿನಿಮಾದ ಕಾಪಿಯೇ ‘ಸಿತಾರೆ ಜಮೀನ್ ಪರ್’.

IMG-20250606-WA0099

ಇದೇ ಕಾರಣಕ್ಕೆ ನೆಟ್ಟಿಗರರು ಟ್ರೋಲ್ ಮಾಡುತ್ತಿದ್ದಾರೆ. ರಿಮೇಕ್ ಸಂಪ್ರದಾಯವೇ ನಾಶವಾಗಿರುವ ಈ ಸಮಯದಲ್ಲಿ ರಿಮೇಕ್ ಮಾಡಲು ನಾಚಿಕೆಯಾಗಲ್ವಾ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಇನ್ನು ಆಮಿರ್ ಖಾನ್ ಅಭಿನಯದ ಕೊನೆಯ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಆಗಿತ್ತು. ಅದೂ ಕೂಡ ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿತ್ತು.

IMG-20250606-WA0101

ಈ ಬಗ್ಗೆ ಮಾತನಾಡಿರೋ ಅಮಿರ್ ನನಗೆ ರಿಮೇಕ್ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇಂದಿಗೂ ಕೂಡ ಜನರು ಶೇಕ್ಸ್ಪಿಯರ್ ನಾಟಕಗಳನ್ನು ಮಾಡುತ್ತಿದ್ದಾರೆ. ಇಂದಿಗೂ ಆತನೇ ನಂಬರ್ ಒನ್ ನಾಟಕಕಾರ. ಪ್ರತಿ ಭಾಷೆಯಲ್ಲಿ ಆತನ ನಾಟಕದ ಅಡಾಪ್ಟೇಷನ್ ಆಗುತ್ತದೆ. ಅದನ್ನು ನಾವು ಹೊಗಳುತ್ತೇವೆ. ಅದು ಯಾಕೆ? ಅದು ಕೂಡ ರಿಮೇಕ್ ತಾನೆ? ನೀವೇ ನಿಮ್ಮ ಸ್ವಂತ ನಾಟಕ ರಚಿಸಿಕೊಳ್ಳಿ' ಎಂದು ಆಮಿರ್ ಖಾನ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ