ಊದೋದು ಕೊಟ್ಟು ಒದರೋದು ಕೊಂಡಂತೆ : ಇದೆಂಥ ವಿಚಿತ್ರ? ಸ್ವಂತದ ಹಣ ಖರ್ಚು ಮಾಡಿ ಪಾರ್ಟಿ ಏರ್ಪಡಿಸುವ, ಹೆಂಡ ಕುಡಿಸು, ಮ್ಯೂಸಿಕ್ ಅರೇಂಜ್ ಮೆಂಟ್, ಪಾರ್ಟಿ ಮಧ್ಯೆ ಯಾರಿಗೋ ಏನೋ ಪೆಟ್ಟಾದರೆ ಅದರ ಹೊಣೆಗಾರಿಕೆ ಹೊರು…. ಇದೇನು ಕರ್ಮ? ದಾನ ಮಾಡಿ ಪುಣ್ಯ ಗಳಿಸಬೇಕೆಂದಿದ್ದರೆ, ಇದೆಂಥ ಪಾಪ ಬೆನ್ನಿಗಂಟಿತು? ಅಮೆರಿಕಾದ ಫ್ಲೋರಿಡಾ ಸಿಟಿಯಲ್ಲಿ ಒಂದು ಹಬ್ಬದ ಸಲುವಾಗಿ ರೆಸಾರ್ಟ್ ಒಂದು ಹೀಗೆ ಫ್ರೀ ಪಾರ್ಟಿ ಏರ್ಪಡಿಸಿ, ಕೆಲವು ಪರ್ಮನೆಂಟ್ ಗ್ರಾಹಕರಿಗಾಗಿ ಕಾಯುತ್ತಿತ್ತು. ಇದರ ಮಧ್ಯೆ 18ರ ಹರೆಯದ ಹುಡುಗನೊಬ್ಬ ನುಸುಳಿದ್ದ. ಹೇಗೋ ಏನೋ ಅವನಿಗೆ ಪೆಟ್ಟಾಯ್ತು. ಇದಾದ 5 ವರ್ಷಗಳ ನಂತರ ಕೋರ್ಟಿನಿಂದ ಬಂದ ಆದೇಶವೆಂದರೆ, ಪಾರ್ಟಿ ಏರ್ಪಡಿಸಿದ್ದ ರೆಸಾರ್ಟ್ ನೈತಿಕ ಹೊಣೆ ಹೊತ್ತು ಆ ಹುಡುಗನಿಗೆ 5.6 ಮಿಲಿಯನ್‌ಡಾಲರ್ ಪರಿಹಾರ ನೀಡಬೇಕಂತೆ! ಹೋಳಿ ಹಬ್ಬದ ದಿನ ನಮ್ಮಲ್ಲಿ ಪಾರ್ಟಿ ಏರ್ಪಡಿಸುವವರು ಸಹ ಇಂಥ ಪ್ರಕರಣದ ಬಗ್ಗೆ ತಿಳಿದು ಎಚ್ಚೆತ್ತುಕೊಳ್ಳುವುದು ಲೇಸು.
ಬಾಡಿಯನ್ನಲ್ಲ ಪ್ರಸಿದ್ಧಿ ನೋಡಿ : ಅಯ್ಯೋ ರಾಮ….. ತುಸು ಡುಮ್ಮಿಯರಾದರೆ ಏನಂತೆ? ಫ್ಯಾಷನ್ನಿನ ಪ್ಯಾಶನ್ ಅಂತೂ ಇದೆಯಲ್ಲ? ಇಂಥ ಡುಮ್ಮಕ್ಕರಿಗೆಂದೇ ಈ ವರ್ಷ ಪ್ಯಾರಿಸ್ ನಲ್ಲಿ ಫ್ಯಾಷನ್ ವೀಕ್ ನಲ್ಲಿ ಭಾರಿ ಪ್ಲಸ್ ಸೈಜ್ ಉಡುಗೆಗಳ ಪ್ರದರ್ಶನ ಹೀಗೆ ಭರ್ಜರಿಯಾಗಿ ನಡೆಯಿತು. ಜಾತಿ ಧರ್ಮದ ಭೇದಭಾವ ಇಲ್ಲದೆ, ಈ ಭಾರಿ ಸೈಜ್ ನ ಉಡುಗೆಗಳು ವಿಶ್ವಾದ್ಯಂತ ಹರಡಿಕೊಂಡವು. ಇಂಥ ಸ್ಥೂಲ ದೇಹಿಗಳು ವಿಶ್ವಾದ್ಯಂತ ಹರಡಿರುವುದರಿಂದ, ಇವರನ್ನು ಸ್ಲಿಮ್ ಮಾಡಲಂತೂ ಆಗದು, ಹಾಗೇಂತ ಇವರಿಗೆ ಟೆರರಿಸಂ ಪಟ್ಟ ಹೊರಿಸಲಾಗದು. ವಿಶ್ವದ ಎಲ್ಲಾ ಡುಮ್ಮಿಯರೂ ಒಂದಾದರೆ…. ಸಿಂಹಕಟಿಯರ ನಡು ನಡುಗಿ ಹೋದೀತು!
ಅಸಲಿ ಐಡೆಂಟಿಟಿ ಸಿಗುವುದೇ ಹೀಗೆ : ಇದೀಗ ಬ್ಯೂಟಿ ಪಾರ್ಲರ್ ಗಳಿಗೆ ಹೋಗುವುದೆಂದರೆ ಏರ್ ಲೈನ್ ಟಿಕೆಟ್ ಕೊಂಡಷ್ಟೇ ದುಬಾರಿ. ವಿಶ್ವಾದ್ಯಂತ ಬ್ಯೂಟಿ ಪಾರ್ಲರ್ ಗಳು ಶೋ, ಕ್ಯಾನ್ಸೀಶನ್, ರೀಶೆಡ್ಯೂಲ್ಸ್ ಸಾಫ್ಟ್ ವೇರ್ ಕಾಸ್ಟ್ ಇತ್ಯಾದಿ ಎಲ್ಲವನ್ನೂ ಗ್ರಾಹಕರಿಂದಲೇ ವಸೂಲು ಮಾಡುತ್ತಿವೆ. ಸೌಂದರ್ಯಕ್ಕಾಗಿ ಹಪಹಪಿಸುವ ಹೆಂಗಸರು ಇವೆಲ್ಲದರ ದರ ಭರಿಸುತ್ತಿದ್ದಾರೆ. ಕಾರ್ಪೊರೇಟ್ ಪಾರ್ಲರ್ ಗಳಂತೂ ಕೋಟಿ ಕೋಟಿ ಲೂಟಿ ಹೊಡೆಯುತ್ತಿವೆ. ಹೀಗಾಗಿ ಅಮೆರಿಕಾದ ಎನಾರ್ಬರ್ ಸಿಟಿಯ ವ್ಯೂವ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹುಡುಗಿಯರ ಮುಖದಲ್ಲಿ ಮಂದಹಾಸ ಮಿಂಚುತ್ತಿದೆ, ಏಕೆಂದರೆ ಕಂಪನಿಗೆ ಲಾಭವಾದರೆ ಇವರಿಗೆ ಹೆಚ್ಚಿನ ಪಗಾರ! ಹುಡುಗಿಯರು ಇಂಥ ಕೆಲಸಗಳಲ್ಲಿ ತಮ್ಮ ಪರ್ಸನಾಲಿಟಿಯತ್ತ ಗಮನ ಕೊಡುತ್ತಾ ಬರುವ ಗ್ರಾಹಕರ ಸೌಂದರ್ಯ ಸಂವರ್ಧನೆಯತ್ತಲೂ ಹೆಚ್ಚಿನ ಕಾಳಜಿ ವಹಿಸಿದಾಗ, ಇವರಿಗೆ ಅಸಲಿ ಐಡೆಂಟಿಟಿ ಲಭಿಸೀತು.
ಬಂಗಾರದಂಥ ನೆನಪುಗಳು : ಹಾಲಿವುಡ್ ನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಗೆ ಅತಿ ಪ್ರಾಮುಖ್ಯತೆ ಇದೆ. ಈ ನಿಟ್ಟಿನಲ್ಲಿ ಆ್ಯಂಡ್ರಿಯಾ ಈಸ್ಟ್ ಮನ್ ಒಂದು ಕಾಲದ ಅತಿ ಜನಪ್ರಿಯ ಕಾಸ್ಟಿಂಗ್ ಡೈರೆಕ್ಟರ್ ಎನಿಸಿದ್ದರು. ಈಕೆ ಫ್ರಾನ್ಸಿಸ್ ಫೋರ್ಡ್ ನ ಇಂದಿಗೂ ಮರೆಯಲಾಗದಂಥ `ದಿ ಗಾಡ್ ಫಾದರ್’ನಂಥ ಚಿತ್ರಗಳಿಗಾಗಿ ಇಂಥ ಉತ್ಕೃಷ್ಟ ಕೆಲಸ ಮಾಡಿದ್ದರು. ಇದಾದ ಮೇಲೆ ಈಕೆ `ದಿ ಗಾಡ್ ಫಾದರ್’ನ ಮೇಕಿಂಗ್ ನ ಅಡ್ವೈಸರ್ ಸಹ ಆಗಿದ್ದರು. ಆ ಪಾತ್ರವನ್ನು ಬೇರೆ ನಟಿ ನಿರ್ವಹಿಸಿದ್ದಳು. ಇತ್ತೀಚೆಗೆ ಈಕೆಯ ಖುಷಿಗೆ ಮೇರೆ ಇಲ್ಲವಾಯಿತು. ಕಾರಣ…. ಈಕೆಯ ಪ್ರಿಯ ಸಾಕುನಾಯಿ ಟ್ರೂಪರ್ ಇರುವಂಥ `ಟ್ರೂಪರ್ ಇನ್ ಬೆರ್ಲಿ ಹಿಲ್‌ಹೋಟೆಲ್’ ಚಿತ್ರ ರಿಲೀಸ್ ಆಯ್ತು. ಈಕೆ ಈಗ ವೃದ್ಧೆ ಇರಬಹುದು, ಆದರೆ ಈಕೆಯ ಸೇವೆ ಹಾಲಿವುಡ್ ನಲ್ಲಿ ಅಜರಾಮರ!
ಟೆಕ್ನಿಕ್ ಹಳೆಯದು ಸ್ಟೈಲ್ ಹೊಸತು : ಮೊದಲು ಸಕ್ಕರೆಯ ಲೇಪನ ತೀಡಿ, ಹೆಂಗಸರು ಸದಾ ತಮ್ಮ ಕಾಲು, ತೋಳುಗಳ ಅನಗತ್ಯ ಕೂದಲನ್ನು ನಿವಾರಿಸಿಕೊಳ್ಳುತ್ತಿದ್ದರು. ನಂತರ ಬಂದ ವ್ಯಾಕ್ಸಿಂಗ್ ಜನಪ್ರಿಯವಾಯಿತು. ಇದೀಗ ಅಮೆರಿಕಾದ ಒಂದು ಸೆಲೂನ್, ಹಳೆಯ ಟೆಕ್ನಿಕ್ ಅನುಸರಿಸಿ, ಒಂದು ಹೊಸ ಟೆಕ್ನಾಲಜಿಯನ್ನೇ ಮಾರ್ಕೆಟ್ ಗೆ ಬಿಟ್ಟಿದೆ. ಶುಗರಿಂಗ್ ವ್ಯೂ ಇದೀಗ ಅತ್ಯಧಿಕ ಫ್ರಾಂಚೈಸಿಗಳನ್ನೂ ಹೊಂದುತ್ತಿದೆ ಹಾಗೂ ಹಲವು ದಶಕಗಳ ಹಿಂದಿನ ಟೆಕ್ನಿಕ್ಸ್ ನ್ನು ದುಬಾರಿ ದರಕ್ಕೆ ಮಾರುತ್ತಿದೆ. ಲೇಸರ್, ಕೆಮಿಕಲ್, ಪೀಲಿಂಗ್ ನಂಥ ಚಿಕಿತ್ಸಾ ವಿಧಾನಗಳನ್ನು ಕಡೆಗಣಿಸಿ ಇದಕ್ಕೆ ಮಣೆ ಹಾಕಲಾಗುತ್ತಿದೆ, ಹೀಗಾಗಿ ಹೆಂಗಸರು ಈ ಬೇಸಿಗೆಯಲ್ಲಿ ಹೆಮ್ಮೆಯಿಂದ ಮಂಡಿವರೆಗಿನ ಶಾರ್ಟ್ ಸ್ಲೀವ್ ಲೆಸ್ ಡ್ರೆಸ್ ಧರಿಸಿ ಮೆರೆಯಬಹುದಾಗಿದೆ.
ಹೈಟೆಕ್ ಝಮಾನಾ : ಇದೀಗ ಹಲ್ಮೆಟ್ ನ ಕಾಲ! ಇದರಲ್ಲಿ ಬಲ್ಬ್, ಹಾರ್ನ್, ರೆಕ್ಕೆ ಮಾತ್ರವಲ್ಲದೆ ಬ್ರಾಂಡಿಂಗ್ ಸಹ ಸಾಧ್ಯ. ಅಂದ್ರೆ ಯಾರೇ ಆಗಲಿ, ತಮ್ಮ ಸ್ವಪ್ರಚಾರಕ್ಕಾಗಿ ಹೆಸರು ನೊಂದಾಯಿಸಬಹುದು. ದುಬಾರಿ ಎಂಬುದೇನೋ ನಿಜ, ಈ ಹೈಟೆಕ್ ಝಮಾನಾದಲ್ಲಿ ಅದನ್ನು ಯಾರು ಗಮನಿಸುತ್ತಾರೆ? ಕೆಲವರ ಬಳಿ ಕೊಳೆಯುವಷ್ಟು ಹಣವಿದ್ದರೆ ಹೆಚ್ಚಿನವರ ಬಳಿ ಏನೂ ಇಲ್ಲ. ಈ ಹೆಲ್ಮೆಟ್ ಉಳ್ಳವರಿಗಾಗಿ ಮಾತ್ರ. ರಿಲೇಟೆಡ್ ಪ್ರಾಡಕ್ಟ್ ತಯಾರಿಸಿ, ಮಾರಾಟ ಮಾಡಿ ಕೋಟ್ಯಂತರ ಕೊಳ್ಳೆ ಹೊಡೆಯುತ್ತಾ ಬಡವರಿಗೆ ಬಿಸ್ಕೆಟ್ ಎಸೆಯುವವರಿಗೆ ಇದೇನು ಮಹಾ? ನಮ್ಮಲ್ಲಿ ಇದನ್ನು ದುಬಾರಿ ಸೈಕ್ಲಿಂಗ್ ಸ್ಪೋರ್ಟ್ಸ್ ನವರು ಕೊಳ್ಳಬಹುದೇನೋ?
ಇದನ್ನು ನಿರ್ಲಕ್ಷಿಸಬೇಡಿ : ಇದು ಯಾವುದೋ ಪ್ಯಾನ್ ಇಂಡಿಯಾ ಚಿತ್ರದ ಹೈಫೈ ಲೋಗೋ ಅಥವಾ ಸೂಟ್ ಅಲ್ಲ. ಪ್ಯಾರಿಸ್ ಕಂಪನಿ ತಯಾರಿಸಿದ ಡಿಸೈನರ್ ಹ್ಯಾಂಡ್ ಕ್ರಾಫ್ಟೆಡ್ ಹುಡೀ ಅಂತೆ. ಇದು ಕಿವಿಗಳನ್ನು ಬಿಸಿಯಾಗಿಟ್ಟರೂ ಹೆಚ್ಚಿನ ಆಕರ್ಷಣೆ ನೀಡುತ್ತದೆ. ಇದನ್ನು ನಿರ್ಲಕ್ಷಿಸಬೇಡಿ. ನಮ್ಮ ದೇಶದಲ್ಲಿ ಇಂಥದೇ ನೂರಾರು ವೇಲ್, ದುಪಟ್ಟಾ ಮುಂದೆ ಹಿಜಾಬ್ ಗಳೂ ಹೀಗೆ ತಯಾರಾದರೂ ಆಶ್ಚರ್ಯವಿಲ್ಲ!.