ಈ ಉರಿ ಬೇಸಿಗೆಯ ಝಳ ನಿಮ್ಮನ್ನು ತತ್ತರಿಸುವಂತೆ ಮಾಡಿರುವಾಗ, ನಿಮ್ಮ ಚರ್ಮ ಡೀಹೈಡ್ರೇಟ್ ಆಗದಿರುವಂತೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕು…..?
ಹೈಡ್ರೇಶನ್ ಎಂಬುದು ಚರ್ಮಕ್ಕೆ ಎಷ್ಟು ಮುಖ್ಯ ಅಂತ ಗೊತ್ತೇ? ಬೇಸಿಗೆಯಲ್ಲಿ ಬಾಯಾರಿದಾಗ 2 ಚೊಂಬು ನೀರು ಕುಡಿಯ ಬೇಕೆನಿಸುವಷ್ಟು! ಆದರೂ ಹೆಂಗಸರು ತಮ್ಮ ಚರ್ಮದ ಈ ಬೇಡಿಕೆ ನಿರ್ಲಕ್ಷಿಸುತ್ತಾರೆ. ಏಕೆಂದರೆ ಅವರು ಮಾಯಿಶ್ಚರೈಸರ್ ಕೇವಲ ಚಳಿಗಾಲಕ್ಕೆ ಮಾತ್ರ ಎಂದು ಭಾವಿಸುತ್ತಾರೆ. ಬೇಸಿಗೆಯಲ್ಲಿ ಅದನ್ನು ಬಳಸಿದರೆ ಚರ್ಮ ಜಿಡ್ಡು ಜಿಡ್ಡಾದೀತು ಎಂದು ಭಾವಿಸುತ್ತಾರೆ.
ಆದರೆ ಬೇಸಿಗೆಯಲ್ಲಿ ಹೈಡ್ರೇಟೆಡ್ ಮಾಯಿಶ್ಚರೈಸರ್ ಬಳಸದಿದ್ದರೆ ಅವರ ಚರ್ಮ ಆಯ್ಲಿ ಆಗಿ, ಹೊರಗೆ ಹೋದಾಗ ಅಲ್ಲಿನ ಧೂಳು, ಮಾಲಿನ್ಯದ ಹಿಂಸೆ ಹಾಗೂ A/C ಕೋಣೆಯ ಥಂಡಿ ಚರ್ಮವನ್ನು ಸೂಪರ್ ಡ್ರೈ ಮಾಡೀತು ಎಂಬುದನ್ನು ಅವರು ಮರೆಯುತ್ತಾರೆ.
ಹೀಗಾಗಿ ಈ ಉರಿ ಬೇಸಿಗೆಗೆ ಬೆಸ್ಟ್ ಹೈಡ್ರೇಟೆಡ್ ಮಾಯಿಶ್ಚರೈಸರ್ ಬಳಸುವುದೊಂದೇ ಮಾರ್ಗ. ಇದರಿಂದ ಉರಿ ಬಿಸಿಲಲ್ಲೂ ಚರ್ಮ ಸದಾ ಹೈಡ್ರೇಟೆಡ್ ಆಗಿದ್ದು, ಈ ಕಾಲದಲ್ಲಿ ಕಾಡುವ ರಾಶೆಸ್, ಟ್ಯಾನ್, ಸನ್ ಬರ್ನ್, ಆ್ಯಕ್ನೆಗಳಿಂದ ನಮ್ಮ ಚರ್ಮವನ್ನು ಸುರಕ್ಷಿತವಾವಾಗಿಡುವಲ್ಲಿ ಸಹಕಾರಿಯಾಗಿದೆ. ಹಾಗಾದರೆ ಇಂದಿನಿಂದಲೇ ನಿಮ್ಮ ಸಮ್ಮರ್ ಸ್ಕಿನ್ ಕೇರ್ ರೊಟೀನ್ ನಲ್ಲಿ ಈ ಬೆಸ್ಟ್ ಮಾಯಿಶ್ಚರೈಸರ್ ನ್ನು ಸೇರಿಸಿಕೊಳ್ಳಿ, ಆಗ ನಿಮ್ಮ ಚರ್ಮ ಸದಾ ಲವಲವಿಕೆಯಿಂದ ಕೂಡಿರುತ್ತದೆ.
ಲೋಟಸ್ ಪ್ಲಾಂಟ್ ರೆಟಿನಾಲ್ ವಿಟಮಿನ್ ಸಿ ಯ ಬ್ರೈಟ್ ನಿಂಗ್ ಕ್ರೀಂ : ಈ ಉತ್ಪನ್ನ ಬೇಸಿಗೆಗೆ ಅತಿ ಉಪಕಾರಿ. ಏಕೆಂದರೆ ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಯ ಪ್ಲಾಂಟ್ ರೆಟಿನಾಲ್ ನ ಉತ್ತಮಿಕೆಯ ಅಂಶಗಳಿವೆ. ವಿಟಮಿನ್ ಸಿ ಯ ಕೊಲೋಜೆನ್ ನಿರ್ಮಾಣಕ್ಕೆ ಪೂರಕ, ಚರ್ಮ ಯಂಗ್ ಆಗಿರಲು ಸಹಾಯಕ. ಹೀಗಾಗಿ ಫೈನ್ ಲೈನ್ಸ್ ಸುಕ್ಕುಗಳು ಸಹಜವಾಗಿ ದೂರವಾಗುತ್ತವೆ,
ಈವೆನ್ ಸ್ಕಿನ್‌ಟೋನ್ ದೊರಕುತ್ತದೆ. ಇದರಿಂದ ಚರ್ಮದ ಡಾರ್ಕ್ ಸ್ಪಾಟ್ಸ್ ತಗ್ಗುತ್ತವೆ. ರೆಟಿನಾಯ್ಡ್ ಸ್ಕಿನ್ ನ್ನು ಹೈಪರ್‌ಪಿಗ್ಮೆಂಟೇಶನ್‌ಸನ್ ಡ್ಯಾಮೇಜ್ ನಿಂದ ರಕ್ಷಿಸಿ, ಚರ್ಮದ ಟೆಕ್ಸ್ ಚರ್ ನ್ನು ಸುಧಾರಿಸುತ್ತದೆ. ಇದು ಚರ್ಮದ ಎಲಾಸ್ಟಿಸಿಟಿಯನ್ನು ವರ್ಧಿಸಿ, ಏಜಿಂಗ್ ವಿರುದ್ಧ ಹೋರಾಡಬಲ್ಲದು.
ವೈಶಿಷ್ಟ್ಯಗಳು : ಯಾವುದೇ ಹಾನಿಯಿಲ್ಲದೆ ಇದು ಚರ್ಮದಲ್ಲಿ ಮಾಯಿಶ್ಚರೈಸರ್ ನ್ನು ಸೀಲ್ ಮಾಡುತ್ತದೆ. ಇದು ನೈಸರ್ಗಿಕ ಘಟಕಗಳಿಂದ ತಯರಾಗಿದ್ದು ಪ್ಯಾರಾಬಿನ್, ಕೆಮಿಕಲ್ಸ್, ಕ್ರುಯೆಲ್ಟಿಗಳಿಂದ ಫ್ರೀ ಆಗಿದೆ, ಜೊತೆಗೆ ಕ್ಲಿನಿಕಲಿ ಟೆಸ್ಟೆಡ್ ಸಹ. ಇದು ನಿಮಗೆ 650-700 ರೂ.ಗಳೊಳಗೆ ದೊರಕುತ್ತದೆ, 2-3 ವಾರ ಬಾಳಿಕೆ ಬರುತ್ತದೆ.
ನ್ಯೂಟ್ರೊಜೆನಾ ಹೈಡ್ರೋ ಬೂಸ್ಟ್ ವಾಟರ್ ಜೆಲ್ : ಹ್ಯಾಲೂರೋನಿಕ್ ಆ್ಯಸಿಡ್ ಅಡಗಿದ ಈ ಫೇಸ್ ಮಾಯಿಶ್ಚರೈಸರ್ ನ್ನು ಈ ಬೇಸಿಗೆಗೆ ಬೆಸ್ಟ್ ಎಂದರೆ ಉತ್ಪ್ರೇಕ್ಷೆಯಲ್ಲ. ಇದರ ಲೈಟ್ ವೆಯ್ಟ್, ಚರ್ಮವನ್ನು ಸಾಫ್ಟ್ ಫ್ರೆಶ್ ಆಗಿರಿಸಲು ಸದಾ ಮುಂದು. ಇದು ಸ್ಕಿನ್ ಟೆಕ್ಸ್ ಚರ್ ನಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. ಹೀಗಾಗಿ ಅದನ್ನು ಹೈಡ್ರೇಟ್ ಗೊಳಿಸುವುದು ಸುಲಭ. ಜೊತೆಗೆ ಸ್ಕಿನ್ ನ್ನು ವೇಗವಾಗಿ ಹೀಲ್ ಆಗಿಸಿ, ರಕ್ತ ಸಂಚಾರ ಸುಧಾರಿಸುತ್ತದೆ. ಇದರಲ್ಲಿನ ಗ್ಲಿಸರಿನ್‌ಆಲಿವ್ ಸಾರ, ಸ್ಕಿನ್ ನ್ನು ಡೀಪ್ಲಿ ಹೈಡ್ರೇಟ್‌ಮಾಡುವುದರ ಜೊತೆಯಲ್ಲೇ, ಸುತ್ತಲ ವಾತಾವರಣದಿಂದ ಚರ್ಮದ ಮೇಲಾಗುವ ಎಲ್ಲಾ ಹಾನಿಗಳನ್ನೂ ದೂರ ಓಡಿಸುತ್ತದೆ.
ವೈಶಿಷ್ಟ್ಯಗಳು : ಇದರ ಆಯ್ಲಿಫ್ರೀ ಫಾರ್ಮುಲಾ, ಚರ್ಮವನ್ನು ಜಿಡ್ಡು ಜಿಡ್ಡಾಗಿಸದೆ, ಬೇಸಿಗೆಯಲ್ಲಿ ಇಡೀ ದಿನ ಹೈಡ್ರೇಟೆಡ್ ಆಗಿ ಇರಿಸಬಲ್ಲದು. ಜೊತೆಗೆ ಇದು ನಾನ್ ಕಮೆಡೋಜೆನಿಕ್ ಆಗಿದ್ದು, ಪೋರ್ಸ್ ಕ್ಲಾಗ್ ಆಗದಿರುವಂತೆ ಮಾಡುತ್ತದೆ. 100% ಆಲ್ಕೋಹಾಲ್ ಫ್ರೀ ಆಗಿದ್ದು, ಕೇವಲ 1 ಸಾವಿರಕ್ಕೆ ದೊರಕುತ್ತದೆ, 23 ವಾರ ಬಾಳಿಕೆ ಬರುತ್ತದೆ.
ವಾಲೋ ಸ್ಕಿನ್ ಸೈನ್ಸ್ ಆ್ಯಲೋವೇರಾ ಮಲ್ಟಿ ವಿಟಮಿನ್ಸ್ ಫೇಸ್ ಕ್ರೀಂ : ಇದರಲ್ಲಿನ ಮಲ್ಟಿ ವಿಟಮಿನ್ಸ್ ನ ಉತ್ತಮಿಕೆಗಳು ಚರ್ಮಕ್ಕೆ ಸೂಕ್ತ ನ್ಯೂಟ್ರಿಶನ್ ಒದಗಿಸುತ್ತವೆ. ಇದು ಚರ್ಮವನ್ನು ಎಕ್ಸ್ ಫಾಲಿಯೇಟ್ ಮಾಡಿ, ಡೆಡ್ ಸೆಲ್ಸ್ ತೊಲಗಿಸುತ್ತದೆ. ಜೊತೆಗೆ ನ್ಯೂ ಹೆಲ್ದಿ ಸ್ಕಿನ್ ಸೆಲ್ಸ್ ಬೆಳೆಸುತ್ತದೆ. ಇದರಲ್ಲಿನ ಆ್ಯಲೋವೇರಾ ಸಾರ, ವಿಟಮಿನ್, ಶಿಯಾ ಬಟರ್, ಕೋಕೋ ಬಟರ್, ಆರ್ಗನ್‌ಆಯಿಲ್, ಜೋಜೋಬಾ ಆಯಿಲ್, ಆಲ್ಮಂಡ್ ಆಯಿಲ್, ಹ್ಯಾಲೂರೋನಿಕ್ ಆ್ಯಸಿಡ್, ಆ್ಯಂಟಿ ಆಕ್ಸಿಡೆಂಟ್ಸ್ ಇತ್ಯಾದಿಗಳೆಲ್ಲ ಕೂಡಿ ಚರ್ಮವನ್ನು ಫ್ರೀರ್ಯಾಡಿಕ್ಸ್ ನಿಂದ ಕಾಪಾಡಿ, ಏಜಿಂಗ್ ಆಗದಂತೆ ತಡೆಯುತ್ತದೆ. ಇವೆಲ್ಲ ಬೇಸಿಗೆಯಲ್ಲಿ ಚರ್ಮವನ್ನು ಸೂಪರ್ ಸಾಫ್ಟ್, ಕಾಂತಿಯುತ ಮೃದುವಾಗಿರಿಸಲು ಪೂರಕ. ಇದರಲ್ಲಿನ ಹ್ಯಾಲೂರೋನಿಕ್ ಆ್ಯಸಿಡ್ ಚರ್ಮದಲ್ಲಿನ ಕೊಲೋಜೆನ್ ಸ್ಟ್ರಕ್ಚರ್ ಸುಧಾರಿಸಿ, ಸ್ಕಿನ್ ಟೋನ್‌ಟೆಕ್ಸ್ ಚರ್ ವರ್ಧಿಸುತ್ತದೆ. ಸೂರ್ಯನ UV ಕಿರಣಗಳ ವಿರುದ್ಧ ಹೋರಾಡಿ ಹೈಪರ್ ಪಿಗ್ಮೆಂಟೇಶನ್ ಆಗದಂತೆ ತಡೆಯುತ್ತದೆ. ಇದರಿಂದ ಚರ್ಮ ಸದಾ ಹೈಡ್ರೇಟೆಡ್ ಆಗಿದ್ದು, ಹೆಚ್ಚು ಕಾಂತಿಯುತವಾಗುತ್ತದೆ.
ವೈಶಿಷ್ಟ್ಯಗಳು : ಇದು ನಾರ್ಮಲ್ ಆಯ್ಲಿವರೆಗೆ ಎಲ್ಲಾ ಬಗೆಯ ಚರ್ಮಕ್ಕೂ ಉಪಯುಕ್ತ. ಇದು ಸಲ್ಫೇಟ್, ಸಿಲಿಕಾನ್, ಪ್ಯಾರಾಬಿನ್ ಫ್ರೀ ಆಗಿದ್ದು, ಚರ್ಮಕ್ಕೆ ಯಾವುದೇ ರೀತಿಯ ಹಾನಿ, ಸೈಡ್ ಎಫೆಕ್ಟ್ ತರದು. ಇದು 600-700 ರೂ.ಗಳಲ್ಲಿ ದೊರಕುತ್ತದೆ, 2-3 ವಾರ ಬಾಳಿಕೆ ಬರುತ್ತದೆ.
ಕ್ಯಾಟಾಫಿಲ್ ಡೇಲಿ ಅಡ್ವಾನ್ಸ್ಡ್ ಅಲ್ಟ್ರಾ ಹೈಡ್ರೇಟೆಡ್ ಲೋಶನ್ : ಇದರಲ್ಲಿ 5 ಬಗೆಯ ಅನನ್ಯ ಘಟಕಗಳು ಅಡಗಿದ್ದು, ಚರ್ಮವನ್ನು ಆಂತರಿಕವಾಗಿ ಆರೋಗ್ಯವಾಗಿಡುತ್ತದೆ. ಇದರಲ್ಲಿ ಸ್ಕಿನ್ ರೀಪ್ಲೇಸಿಂಗ್ ಏಜೆಂಟ್ ಇದ್ದು, ಚರ್ಮ ಸದಾ ಹೆಲ್ದಿ ಆಗಿರುವಂತೆ ರಕ್ಷಿಸುತ್ತದೆ. ಜೊತೆಗೆ ಇದರ ಹ್ಯೂಮೆಕ್ಟೆಂಟ್ ನೀರಿನ ಪಸೆಯನ್ನು ಹೀರಿ, ಚರ್ಮಕ್ಕೆ ನ್ಯಾಚುರಲ್ ಮಾಯಿಶ್ಚರೈಸರ್ ಒದಗಿಸುತ್ತದೆ. ಇದರ ಲಿಪಿಡ್ಸ್, ಚರ್ಮದ ನ್ಯಾಚುರಲ್ ಫ್ಯಾಟ್ಸ್ ಆದಕಾರಣ, ಚರ್ಮವನ್ನು ಅತಿ ನುಣುಪಾಗಿಸಿ ಸಶಕ್ತಗೊಳಿಸುತ್ತದೆ, ಹೊರಗಿನ ಘಾತಕಗಳು ಆಕ್ರಮಿಸದಂತೆ ಚರ್ಮಕ್ಕೆ ಸುರಕ್ಷತಾ ಪದರ ನೀಡುತ್ತದೆ. ಇದರ ಎಮೋಲಿಯೆಂಟ್ ಚರ್ಮವನ್ನು ಸದಾ ಸಾಫ್ಟ್ ಸ್ಮೂತ್ ಆಗಿರಿಸುತ್ತದೆ. ಇದರ ವಾಟರ್ ಲೀಕ್ ಎಬಿಲಿಟಿ ಚರ್ಮವನ್ನು ಸದಾ ಹೈಡ್ರೇಟೆಡ್ ಆಗಿಡುತ್ತದೆ.
ವೈಶಿಷ್ಟ್ಯಗಳು : ಇದರ ನಾನ್ ಗ್ರೀಸಿ ಫಾರ್ಮುಲಾ ಚರ್ಮವನ್ನು ಜಿಡ್ಡುಜಿಡ್ಡಾಗಿಸದೆ, ಹೈಪೋ ಅಲರ್ಜೆನಿಕ್ ಫ್ರಾಗ್ರೆನ್ಸ್ ಫ್ರೀಯಿಂದಾಗಿ ಸುರಕ್ಷತೆ ಒದಗಿಸುತ್ತದೆ. ಡರ್ಮಟಾಲಜಿಸ್ಟ್ ಟೆಸ್ಟೆಡ್ ಆಗಿರುವುದರಿಂದ 100% ಸೇಫ್. ಇದು ಪೋರ್ಸ್ ಕ್ಲೋಸ್‌ಆಗಲು ಬಿಡದು. ಕೆಲವೇ ನಿಮಿಷಗಳಲ್ಲಿ ಚರ್ಮವನ್ನು ಸೂಪರ್ ಸಾಫ್ಟ್ ಸ್ಮೂತ್ ಆಗಿಸಬಲ್ಲದು. ಕೇವಲ 300-400 ರೂ.ಗಳಲ್ಲಿ ಲಭ್ಯ.
ಫಾರೆಸ್ಟ್ ಎಸೆನ್ಶಿಯಲ್ ಹೈಡ್ರೇಟಿಂಗ್ ಫೇಶಿಯಲ್ ಮಾಯಿಶ್ಚರೈಸರ್ : ಇದರಲ್ಲಿನ ಶ್ರೀಗಂಧ, ಆರೆಂಜ್ ಪೀಲ್, 25 SPF ಫಾರ್ಮುಲಾ ಚರ್ಮಕ್ಕೆ ಬೇಕಾದ ಸಕಲ ಪೋಷಕಾಂಶಗಳನ್ನೂ ಒದಗಿಸುತ್ತದೆ. ಇದರಿಂದಾಗಿ ಚರ್ಮ ಸೂರ್ಯನ UV, UVA ಕಿರಣಗಳಿಂದ ಕಾಪಾಡುತ್ತಾ, ಚರ್ಮದ ನ್ಯಾಚುರಲ್ ಹೈಡ್ರೇಶನ್ ಲೆವೆಲ್ ನ್ನು ಬೂಸ್ಟ್ ಮಾಡುತ್ತದೆ. ಇದರ ಅಶ್ವಗಂಧ, ವಯಸ್ಸು ಏರದಂತೆ ತಡೆಯುತ್ತದೆ. ಆರೆಂಜ್ ಪೀಲ್ ನ್ಯಾಚುರಲ್ ಆ್ಯಸ್ಟ್ರಿಂಜೆಂಟ್ ಆಗಿ ಕೆಲಸ ಮಾಡುತ್ತದೆ. ಹೀಗಾಗಿ ಚರ್ಮ ಸುಲಭವಾಗಿ ಡೀಟಾಕ್ಸ್ ಆಗಿ ಕ್ಲಿಯರ್ ಎನಿಸುತ್ತದೆ. ಇದರ ಆ್ಯಲೋವೇರಾ ಚರ್ಮದ ಆರ್ದ್ರತೆ ಕಾಪಾಡುತ್ತದೆ, ಎಳನೀರು ವಿಟಮಿನ್ ಸಿಯ ರಿಚ್ ಆಗಿದ್ದು, ಪಿಗ್ಮೆಂಟೇಶನ್‌ಸುಕ್ಕು ನಿರಿಗೆ ಆಗದಂತೆ ತಡೆಯುತ್ತದೆ.
ವೈಶಿಷ್ಟ್ಯಗಳು : ಇಕೋಫ್ರೆಂಡ್ಲಿ ಪ್ಯಾಕೇಜಿಂಗ್ ಜೊತೆ ಇದು ಕೆಮಿಕಲ್ಸ್, ಪ್ಯಾರಾಬೀನ್ಸ್, ಪೆಟ್ರೋಕೆಮಿಕಲ್ಸ್ ನಿಂದ ಮುಕ್ತವಾಗಿದ್ದು, 1300-1500 ರೂ.ಗಳ ಒಳಗೆ ಲಭ್ಯವಿದೆ.
ಫೈಟೋ ಫ್ಯೂಸ್ ಮಲ್ಟಿ ವಿಟಮಿನ್ ಫೇಸ್ ಮಾಯಿಶ್ಚರೈಸರ್ : ಈ ಫೇಸ್ ಮಾಯಿಶ್ಚರೈಸರ್ ಎಲ್ಲಾ ಪ್ರಕಾರದ ಚರ್ಮದವರಿಗೂ ಒದಗುತ್ತದೆ. ಇದರಲ್ಲಿನ ಬಯೋ ರೆಟಿನಾಲ್, ಚರ್ಮದ ಸೆಲ್ಸ್ ಏಜಿಂಗ್ ಕ್ರಿಯೆಯನ್ನು ತಡೆಗಟ್ಟುತ್ತದೆ, ಸೆಲ್ಸ್ ನ ಪುನರುಜ್ಜೀವನಕ್ಕೂ ಸಹಕಾರಿ. ಜೊತೆಗೆ ಇದು ಆ್ಯಕ್ನೆಗಳಿಂದಾಗುವ ಕಲೆ, ಸುಕ್ಕುಗಳನ್ನೂ ತಗ್ಗಿಸುತ್ತದೆ. ಇದು ಚರ್ಮದ ಎಲಾಸ್ಟಿಸಿಟಿ ಸುಧಾರಿಸಿ, ಚರ್ಮವನ್ನು ಸದಾ ಯಂಗ್ ಆಗಿಡುತ್ತದೆ.
ಇದರಲ್ಲಿನ ವಿಟಮಿನ್ಸ್ ಚರ್ಮವನ್ನು ಹೈಡ್ರೇಟ್ ಗೊಳಿಸಿ ಹೈಪರ್ ಪಿಗ್ಮೆಂಟೇಶನ್, ರೆಡ್ ನೆಸ್ ಹಾಗೂ ಏಜಿಂಗ್ ಪ್ರೋಸೆಸ್ ನ್ನು ಸ್ಲೋ ಮಾಡುತ್ತದೆ. ಇದರ ವಿಟಮಿನ್, ಪವರ್ ಫುಲ್ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು, ಫ್ರೀ ರಾಡಿಕಲ್ಸ್ ಓಡಿಸಿ ಚರ್ಮಕ್ಕೆ ಉತ್ತಮ ಪೋಷಣೆ ನೀಡುತ್ತದೆ.
ವೈಶಿಷ್ಟ್ಯಗಳು : ಇದು ಚರ್ಮಕ್ಕೆ ಲೈಟ್ ಫೀಲ್ ಅನುಭವ ನೀಡಿ, ಏಜಿಂಗ್ ಪ್ರೋಸೆಸ್ ತಗ್ಗಿಸುತ್ತದೆ. ಈ ತರಹ ಇವೆಲ್ಲ ಅತ್ಯುತ್ತಮ ಘಟಕಗಳನ್ನು ಹೊಂದಿರುವ ಈ ಕ್ರೀಂ ಮಾಯಿಶ್ಚರೈಸರ್ ನ್ನು ಬಳಸುತ್ತಾ ಬೇಸಿಗೆ ಪೂರ್ತಿ ನಿಮ್ಮ ಚರ್ಮವನ್ನು ಹೈಡ್ರೇಟೆಡ್, ಸಾಫ್ಟ್ ಗ್ಲೋಯಿಂಗ್ ಆಗಿ ಇರಿಸಿಕೊಳ್ಳಿ.
– ಪ್ರತಿನಿಧಿ