ನೀವು ಚೊಚ್ಚಲ ತಾಯಿಯಾಗಿದ್ದು, ನಿಮಗೆ ಮಗುವಿನ ಪೋಷಣೆಯ ಚಿಂತೆ ಕಾಡುತ್ತಿದ್ದರೆ, ಈ ಮಾಹಿತಿ ನಿಮಗೆ ಬಹಳ ಉಪಯುಕ್ತ ಆಗುತ್ತದೆ.....!
ಚಿತ್ರಾ ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ಅವಳ ಕುಟುಂಬದವರಿಗಂತೂ ಜೀವನದ ಅತ್ಯದ್ಭುತ ಖುಷಿಯೇ ದೊರಕಿದಂತೆ ಅನಿಸಿತು. ಆ ಖುಷಿಯೇ ಹಾಗೆ. ಆ ಖುಷಿಯನ್ನು ನಾವು ಜಗತ್ತಿನ ಮತ್ತಾವುದೇ ಖುಷಿಗೂ ಹೋಲಿಸಲು ಆಗದು. ಕುಟುಂಬದ ಪ್ರತಿಯೊಬ್ಬರೂ ಆ ಮಗುವಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ, ಅದು ಸದಾ ನಗುತ್ತಾ ಇರಬೇಕೆಂದು ಅಪೇಕ್ಷೆಪಟ್ಟರು.
ಆದರೆ ಚಿತ್ರಾಳ ಮಗು ನಗು ಬದಲು ಸ್ವಲ್ಪ ಸ್ವಲ್ಪ ಹೊತ್ತಿಗೆ ಅಳುತ್ತಾ ಇರುತ್ತಿತ್ತು. ಈ ಕಾರಣದಿಂದ ಅದಕ್ಕೆ ನಿದ್ರೆ ಕೂಡ ಪೂರ್ತಿ ಆಗುತ್ತಿರಲಿಲ್ಲ. ಆ ಮಗು ಅಳಲು ಏನು ಕಾರಣ, ಏನು ಸಮಸ್ಯೆ ಎನ್ನುವುದು ಯಾರೊಬ್ಬರಿಗೂ ಗೊತ್ತಾಗುತ್ತಿರಲಿಲ್ಲ.
ಅದೊಂದು ದಿನ ಚಿತ್ರಾಳ ಗೆಳತಿ ಸೀಮಾ ಮನೆಗೆ ಬಂದಳು, ಗೆಳತಿಯ ಮುಂದೆ ಮಗು ಅಳುತ್ತಿರುವ ಬಗ್ಗೆ ಹೇಳಿದಳು. ಸೀಮಾ ಆ ಮುಂಚೆಯೇ ಅಂತಹ ಸಮಸ್ಯೆಯನ್ನು ಎದುರಿಸಿದ್ದಳು. ಹೀಗಾಗಿ ಅವಳಿಗೆ ಮಗು ಏಕೆ ಅಳುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯಿತು.
``ನೀನು ಈ ಮಗುವಿಗೆ ಸರಿಯಾಗಿ ಹಾಲನ್ನಾದರೂ ಕುಡಿಸುತ್ತಿರುವೆಯೊ ಇಲ್ಲವೋ?'' ಎಂದು ಕೇಳಿದಳು. ಆಗ ಚಿತ್ರಾ ಸ್ವಲ್ಪ ಸಂಕೋಚದಿಂದಲೇ, ``ಹೌದು, ಆದರೆ ನನಗಾಗುತ್ತಿರುವ ಸಮಸ್ಯೆ ಏನೆಂದರೆ, ಸ್ತನಗಳಲ್ಲಿ ಹಾಲು ತುಂಬಿರುವ ಕಾರಣದಿಂದ ಅವು ಭಾರವಾಗಿ ಹಾಲು ಹಾಗೆಯೇ ಸ್ರವಿಸುತ್ತಾ ಇರುತ್ತದೆ. ಆ ಕಾರಣದಿಂದ ನೋವುಂಟಾಗಿ ನನಗೆ ಹಾಲು ಕುಡಿಸಲು ಸಮಸ್ಯೆ ಆಗುತ್ತಿದೆ. ಮಗುವಿಗೆ ಹೊಟ್ಟೆ ತುಂಬ ಹಾಲು ಸಿಗುತ್ತಿಲ್ಲ ಅನಿಸುತ್ತಿದೆ,'' ಎಂದು ಹೇಳಿದಳು.
``ಅದೇ ಕಾರಣದಿಂದ ನಿನ್ನ ಮಗು ಬಿಟ್ಟು ಬಿಟ್ಟು ಅಳುತ್ತಿರುತ್ತದೆ. ಹೊಟ್ಟೆ ತುಂಬದೇ ಇರುವ ಕಾರಣದಿಂದ ಸರಿಯಾಗಿ ನಿದ್ರಿಸಲು ಆಗುತ್ತಿಲ್ಲ,'' ಎಂದು ಸೀಮಾ ಹೇಳಿದಳು.
ಆಗ ಸೀಮಾ ಚಿತ್ರಾಳಿಗೆ ಬ್ರೆಸ್ಟ್ ಪಂಪ್ ಬಗ್ಗೆ ತಿಳಿಸಿ, ಅದು ನಿನ್ನ ಸಮಸ್ಯೆಯನ್ನು ಬಗೆಹರಿಸುತ್ತದೆ. ಹೇಗೆಂದರೆ, ಆ ಪಂಪ್ ನ ಸಹಾಯದಿಂದ ನೀನು ನಿನ್ನ ಸ್ತನಗಳಲ್ಲಿ ತುಂಬಿರುವ ಹಾಲನ್ನು ತೆಗೆದು ಸಂಗ್ರಹಿಸಿ ಇಡಬಹುದು. ಅದರಿಂದ ನಿನ್ನ ಸ್ತನಗಳಲ್ಲಿ ನೋವು ಇರದು ಹಾಗೂ ಮಗುವಿನ ಹೊಟ್ಟೆಯೂ ತುಂಬುತ್ತದೆ,'' ಎಂದು ಹೇಳಿದಳು.
ಸೀಮಾ ಹೇಳಿದ ವಿಷಯ ಕೇಳಿ ಚಿತ್ರಾಳಿಗೆ ಖುಷಿಯಾಯಿತು. ತನ್ನ ಮಗು ಹಸಿವಿನಿಂದ ಅಳುವುದನ್ನು ಅವಳಿಗೆ ನೋಡಲು ಆಗುತ್ತಿರಲಿಲ್ಲ.
ಬ್ರೆಸ್ಟ್ ಪಂಪ್ ವರದಾನ
ಹೊಸದಾಗಿ ತಾಯಂದಿರಾಗುತ್ತಿದ್ದಂತೆ ಅವರ ಜೀವನವೇ ಬದಲಾಗಿಬಿಡುತ್ತದೆ. ತನಗಾಗಿ ಸಮಯ ಮೀಸಲಿಡಲು ಆಗುವುದಿಲ್ಲ. ಸಂಗಾತಿಗೂ ಟೈಮ್ ಕೊಡಲು ಆಗುವುದಿಲ್ಲ. ಅವಳಿಗೆ ಸದಾ ಮಗುವಿನ ಚಿಂತೆಯೇ ಕಾಡುತ್ತಿರುತ್ತದೆ. ಇಂತಹದರಲ್ಲಿ ಬ್ರೆಸ್ಟ್ ಪಂಪ್ ಹಾಲು ಕುಡಿಸುವ ಕೆಲಸವನ್ನು ಸುಲಭಗೊಳಿಸುತ್ತದೆ. ಅದರ ಮುಖಾಂತರ ತನಗಾಗಿಯೂ ಸಮಯ ಮೀಸಲಿಟ್ಟುಕೊಳ್ಳಬಹುದು. ಹಾಗಾಗಿ ಅದು ಒಂದು ವರದಾನವಿದ್ದಂತೆ.
ಅದರ ಲಾಭವೇನು?
ಬ್ರೆಸ್ಟ್ ಪಂಪ್ ನ್ನು ಹೇಗೆ ರೂಪಿಸಲಾಗಿದೆ ಎಂದರೆ, ಅದು ತಾಯಿಯ ಎದೆಹಾಲಿನ ಒಂದೊಂದು ಹನಿಯನ್ನೂ ಬಾಟಲ್ ನಲ್ಲಿ ಸಂಗ್ರಹಿಸುವ ಕೆಲಸ ಮಾಡುತ್ತದೆ.