ಮದರ್ಸ್ಡೇ ದಿನದಂದು ನಿಮ್ಮ ತಾಯಿಗೆ ನೀವು ನೀಡಲಿರುವ ಉಡುಗೊರೆಗಳು ಅವರ ಮುಖದಲ್ಲಿ ಮಂದಹಾಸ ಮೂಡಿಸಿ, ನಿಮ್ಮತ್ತ ಹೆಮ್ಮೆಯ ಭಾವ ತರಿಸಲಿದೆ.....!

ತಾಯಿ ತನ್ನ ಮಕ್ಕಳ ಖುಷಿಗಾಗಿ ಏನೆಲ್ಲ ಮಾಡುತ್ತಾಳೆ..... ಹೊತ್ತು, ಹೆತ್ತು, ಸಾಕಿ ಸಲಹಿ ಅವರಿಗಾಗಿ ನಿದ್ದೆಗೆಟ್ಟು, ಉಪವಾಸವಿದ್ದು, ತನ್ನ ವೈಯಕ್ತಿಕ ಬೇಕು ಬೇಡಗಳನ್ನೆಲ್ಲ ನಿರ್ಲಕ್ಷಿಸುತ್ತಾಳೆ. ಮಗುವಿನ ಒಂದು ಬೇಡಿಕೆ ಎದುರು ಅವಳು ತನ್ನ ಸಂಪೂರ್ಣ ಸುಸ್ತು ಸಂಕಟ ಮರೆತು ಅದನ್ನು ಪೂರೈಸುತ್ತಾಳೆ.

ಆದರೆ ನಾವು ದೊಡ್ಡವರಾದ ಮೇಲೆ ಅಮ್ಮನಿಗಾಗಿ ಖಂಡಿತಾ ಹೆಚ್ಚಿಗೇನೂ ಮಾಡಲಾಗದು. ಒಬ್ಬ ಮಗಳಾಗಿ ವಯಸ್ಕರಾದ ನೀವು ಅಮ್ಮನಿಗಾಗಿ ಇನ್ನರ್‌ ಬ್ಯೂಟಿ ತರಹ, ಔಟರ್‌ ಬ್ಯೂಟಿಗಾಗಿ, ಈ ಬೆಸ್ಟ್ ಬ್ಯೂಟಿ ಟ್ರೀಟ್‌ ಮೆಂಟ್ಸ್ ಕೊಡಿಸಬಹುದು. ಏಕೆಂದರೆ ಆಕೆ ತನ್ನನ್ನು ತಾನು ಅಂದವಾಗಿ ಸಿಂಗರಿಸಿಕೊಳ್ಳ ಬಯಸಿದರೂ, ಸಂಸಾರದ ಸುಳಿಯಲ್ಲಿ ಅದೆಲ್ಲ ಸಾಧ್ಯವಾಗದೇ ಹೋಗಿರಬಹುದು. ಹಾಗಾಗಿ ಈ ಮದರ್ಸ್‌ ಡೇ ಸಂದರ್ಭ ಆಕೆಗೆ ಈ ಅಮೂಲ್ಯ ಉಡುಗೊರೆ ನೀಡಿ, ಅವಳ ಮುಖದಲ್ಲಿ ಮಂದಹಾಸ ತೇಲಿಸಿ :

ಫೇಶಿಯಲ್ ಕೇರ್‌ ಬಾಕ್ಸ್ ತನ್ನ ಮುಖದ ಅಂದ ಚೆಂದ ಎಲ್ಲರೂ ಹೊಗಳಬೇಕು ಅಂತ ಅಮ್ಮನಿಗೆ ಅನಿಸಿದರೆ ತಪ್ಪೇನು? ಆದರೆ ಸದಾ ಕಾಂಪ್ರಮೈಸ್‌ ಮಾಡಿಕೊಳ್ಳುತ್ತಾ ಅದನ್ನು ನಿರ್ಲಕ್ಷಿಸಿರುತ್ತಾಳೆ. ಆದ್ದರಿಂದ ಈ ಸಂದರ್ಭದಲ್ಲಿ ಆಕೆಗೆ ಫೇಶಿಯಲ್ ಕೇರ್ ಬಾಕ್ಸ್ ನೀಡಿ, ಅವಳ ಈ ಆಸೆ ಪೂರೈಸಿ. ಇದರಿಂದ ಆಕೆಯ ಮುಖದಲ್ಲಿ ಕಾಂತಿಯ ಕಳೆ ಕೂಡುತ್ತದೆ. ಈ ಬಾಕ್ಸ್ ನಲ್ಲಿ ಫೇಶಿಯಲ್ ಕ್ಲೆನ್ಸರ್‌, ಟೋನರ್‌, ಹಲವು ಫೇಸ್‌ ಪ್ಯಾಕ್‌ ಗಳಿಂದ ಹಿಡಿದು ನೈಟ್‌ ಟ್ರೀಟ್‌ ಮೆಂಟ್‌ ಕ್ರೀಂವರೆಗೂ ಹಾಗೂ ಸನ್ ಪ್ರೊಟೆಕ್ಷನ್‌ನೀಡುವ ಸನ್‌ ಸ್ಕ್ರೀನ್‌ ಸಹ ಉಂಟು. ಇವೆಲ್ಲ ಆಕೆಯ ಮುಖ ಚರ್ಮವನ್ನು ಕ್ಲೀನ್‌ ಮಾಡಿ, ಡೆಡ್‌ ಸ್ಕಿನ್‌ ತೊಲಗಿಸಿ, ಮುಖದಲ್ಲಿ ಸೌಮ್ಯ ಕಾಂತಿ ತುಂಬುತ್ತವೆ. ಜೊತೆಗೆ ಸ್ಕಿನ್ನಿನ ಏಜಿಂಗ್‌ ಪ್ರಕ್ರಿಯೆಯನ್ನೂ ತಗ್ಗಿಸಬಲ್ಲದು.

ನೈಟ್‌ ಕ್ರೀಂ ಚರ್ಮನನ್ನು ಸುದೀರ್ಘ ಕಾಲ ಹೈಡ್ರೇಟೆಡ್‌ ಆಗಿರಿಸಿ, ಸ್ಕಿನ್‌ ಸೆಲ್ಸ್ ನ್ನು ರಿಪೇರಿ ಮಾಡುವಲ್ಲಿಯೂ ಮುಂದಾಗುತ್ತದೆ. ಹೀಗಾಗಿ ನೀವು ಮಾರ್ಕೆಟ್‌ ನಲ್ಲಿ ಲಭ್ಯವಿರುವ ಫಾರೆಸ್ಟ ಎಸೆನ್ಶಿಯಲ್ಸ್ ನ ಫೇಶಿಯಲ್ ಕೇರ್‌ ಕಿಟ್‌, ಜಸ್ಟ್ ಹರ್ಬ್ಸ್ ನ ಫೇಶಿಯಲ್ ಕೇರ್‌, ಮಾಮಾಸ್‌ ಅರ್ಥ್‌ ನ ಕಿಟ್‌..... ಇತ್ಯಾದಿ ಯಾವುದನ್ನಾದರೂ ಕೊಳ್ಳಬಹುದು. ಇದು ಬಜೆಟ್‌ ಫ್ರೆಂಡ್ಲಿ ಜೊತೆಗೆ ಅತ್ಯಂತ ಪರಿಣಾಮಕಾರಿ!  ಸ್ಕಿನ್‌ ಕೇರ್‌ ರೊಟೀನ್‌ ಒಬ್ಬ ತಾಯಿ ಹಣದ ಉಳಿತಾಯದ ಸಲುಲಗಿ ಸ್ಕಿನ್‌ ಕೇರ್‌ ರೊಟೀನ್‌ ಕುರಿತಾಗಿ ಕಾಂಪ್ರಮೈಸ್‌ ಆಗುತ್ತಾಳೆ. ಹೀಗಾಗಿ ಬೇಕೆಂದೇ ಫೇಸ್‌ ವಾಶ್‌ ಬಳಸುಲ ಬದಲು ಸೋಪ್‌ ಬಳಸಿ ಸುಮ್ಮನಾಗಿರುತ್ತಾಳೆ. ಆದರೆ ಅವಳ ಪ್ರೌಢ ವಯಸ್ಸಿಗೆ ಇಂಥ ಸೋಪ್‌ ಹಾರ್ಶ್‌ ಎಫೆಕ್ಟ್ ನೀಡಬಲ್ಲದು.

ಸೋಪಿನ ಆಲ್ಕೈನ್‌ ನೇಚರ್‌ ಮುಖದಲ್ಲಿ ನ್ಯಾಚುರ್‌ ಮಾಯಿಶ್ಚರನ್ನು ಹಾಳುಗೆಡವಿ, ಅದನ್ನು ಹೆಚ್ಚು ಡ್ರೈ ಮಾಡುತ್ತದೆ. ಇದರಿಂದ ಮುಖದ ಸುಕ್ಕು ಹೆಚ್ಚುತ್ತದೆ, ಕಾಲು ಒಡೆಯುವಂತೆ ಮುಖದ ಚರ್ಮ ಅಲ್ಲಲ್ಲಿ ಒಡೆಯಬಹುದು. ಆದರೆ ಫೇಸ್‌ ವಾಶ್ ಚರ್ಮದ Ph ಲೆವೆಲ್ ‌ನ್ನು ಸದಾ ಬ್ಯಾಲೆನ್ಸ್ ನಲ್ಲಿಡುತ್ತದೆ. ಅದರಲ್ಲಿ ಹ್ಯಾಲುರೋನಿಕ್‌ ಆ್ಯಸಿಡ್‌ ಬೆರೆತಿದ್ದರೆ, ಚರ್ಮದ ಡ್ರೈನೆಸ್‌ ದೂರಾಗಿ ಫೈನ್ ಲೈನ್ಸ್ ಸುಕ್ಕುಗಳ ನಿವಾರಣೆಯೂ ಆಗುತ್ತದೆ. ಇದಾದ ಮೇಲೆ ವಿಟಮಿನ್ಸ್ ಹ್ಯಾಲುರೋನಿಕ್‌ ಆ್ಯಸಿಡ್‌ ರಿಚ್‌ ಫೇಸ್‌ ಕ್ರೀಂ ಚರ್ಮವನ್ನು ಮಾಯಿಶ್ಚರೈಸ್‌ ಗೊಳಿಸಿ, ಅದಕ್ಕೆ ಹೆಚ್ಚಿನ ಕಾಂತಿ ತುಂಬುತ್ತದೆ. ಹೀಗಾಗಿ ಇಂಥ ಘಟಕ ತುಂಬಿರುವಂಥ ಫೇಸ್ ವಾಶ್‌ ಫೇಸ್‌ ಕ್ರೀಮುಗಳನ್ನು ಮಾರ್ಕೆಟ್‌ ಬ್ರಾಂಡ್ಸ್ ನಲ್ಲಿ ನಿಮ್ಮ ಬಜೆಟ್‌ ಅನುಸಾರ ಆರಿಸಿ ಉಡುಗೊರೆ ನೀಡಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ