ಸಲಹೆಗಳನ್ನು ಅನುಸರಿಸಿ ನೀವು ಸಹ ಸುಲಭವಾಗಿ ಮನೆಯಲ್ಲೇ ಮೆನಿಕ್ಯೂರ್ಪೆಡಿಕ್ಯೂರ್ಮಾಡಿಕೊಳ್ಳಬಹುದು. ಅದು ಹೇಗೆ....?

ಸುರಸುಂದರ ಮುಖದ ಜೊತೆ ನಮ್ಮ ಕೈಕಾಲುಗಳೂ ಸುಂದರವಾಗಿದ್ದಾಗ ಮಾತ್ರ ಸೌಂದರ್ಯಕ್ಕೆ ಒಂದು ಪರಿಪೂರ್ಣತೆ  ಬರುತ್ತದೆ. ಕೋಮಲ, ನಾಜೂಕಾದ, ಬ್ಯೂಟಿಫುಲ್ ಕೈಕಾಲುಗಳನ್ನು ಹೊಂದಲು ಹೆಂಗಸರು ಅದೆಷ್ಟು ಬ್ಯೂಟಿಪಾರ್ಲರ್‌ ಗಳ ಮೆಟ್ಟಿಲು ಹತ್ತಿಳಿಯುತ್ತಾರೋ ಏನೋ? ಒಮ್ಮೆ ಕ್ರೀಂ, ಮತ್ತೊಮ್ಮೆ  ಪ್ಯಾಕ್‌, ಒಮ್ಮೆ ಸನ್‌ ಸ್ಕ್ರೀನ್‌, ಪಾರ್ಲರ್‌ ಗಳಿಂದ ಆರೈಕೆ.... ಇತ್ಯಾದಿ ನಡೆಯುತ್ತಲೇ ಇರುತ್ತದೆ. ಆದರೆ ಪ್ರತಿ ಸಲ ಪಾರ್ಲರ್‌ ಗಳನ್ನು ಎಡತಾಕುತ್ತಾ, ಮೆನಿಕ್ಯೂರ್‌ ಪೆಡಿಕ್ಯೂರ್‌ ಗಳಿಗಾಗಿ ಓಡಾಡಿದರೆ ಖರ್ಚು ದುಬಾರಿ ಆದೀತು. ಇದರಿಂದ  ಹಣ, ಸಮಯ ಎರಡೂ ದಂಡ. ಹೀಗಾಗಿ ಇವೆರಡನ್ನೂ ಮನೆಯಲ್ಲೇ ಮಾಡಿಕೊಳ್ಳುವುದು ಲೇಸು.

ಮೆನಿಕ್ಯೂರ್ಏಕೆ ಅಗತ್ಯ?

ಸ್ವಚ್ಛತೆ ಶುಭ್ರತೆಗಾಗಿ : ಯಾವುದೇ ಕೆಲಸ ಮಾಡಲಿಕ್ಕೂ ಕೈಗಳ ನೆರವಿಲ್ಲದೆ ಆಗುವುದಿಲ್ಲ. ಹೀಗಾಗಿ ಬೇಗ ಅದಕ್ಕೆ ಧೂಳು, ಕೊಳೆ ಸೇರಿಕೊಳ್ಳುತ್ತದೆ. ಹೀಗಾಗಿ ಸೋಪು ಬಳಸಿ ಕೈ ತೊಳೆಯಲು ಯತ್ನಿಸುತ್ತೇವೆ. ಆದರೆ ಅದು ಉಗುರು ಅಡಿಯ ಕೊಳಕನ್ನು ನಿವಾರಿಸಲಾಗದು. ದಿನ ಕಳೆದಂತೆ ಈ ಜಾಗದಲ್ಲಿ ಕೊಳಕು ಜಮೆಗೊಳ್ಳುತ್ತಾ ಹೋಗುತ್ತದೆ, ಮುಂದೆ ಸೋಂಕಿಗೂ ತಿರುಗಬಹುದು. ನಿಯಮಿತವಾಗಿ ಮೆನಿಕ್ಯೂರ್‌ ಮಾಡಿಸುವುದರಿಂದ ಅದು ಉಗುರಿನ ಪ್ರದೇಶದ ಕೊಳಕು ನಿವಾರಿಸಿ, ಕೀಟಾಣು ದೂರಗೊಳಿಸುತ್ತದೆ.

ಕೈಗಳು ಅತಿ ಮೃದುವಾಗಲು : ಮೆನಿಕ್ಯೂರ್‌ ನಂತರ ಕೈಗಳು ಬಲು ಕೋಮಲ, ಮೃದು ಆಗುತ್ತವೆ. ಕೈಗಳ ಬಣ್ಣ ಎಷ್ಟೋ ತೇಲುತ್ತದೆ, ತಿಳಿಯಾಗುತ್ತದೆ. ಇವು ನಮ್ಮ ಕೈಗಳೇ ಎಂಬಷ್ಟು ಸುಂದರವಾಗುತ್ತವೆ. ಈ ಮೂಲಕ ಮಾಡುವ ಮಸಾಜ್‌ ನಿಂದ ರಕ್ತಸಂಚಾರ ಸುಧಾರಿಸುತ್ತದೆ. ಇದರಲ್ಲಿ ಸ್ಕ್ರಬಿಂಗ್‌, ಎಕ್ಸ್ ಫಾಲಿಯೇಶನ್‌ ಸಹ ಇರುತ್ತದೆ. ಒರಟು ಕೈಗಳು ಸರಿಹೋಗಲು ಇದು  ಬೆಸ್ಟ್ ವಿಧಾನ.

ಕ್ಯುಟಿಕಲ್ಸ್ ಗೂ ಪೋಷಣೆ : ಉಗುರಿನ ಅಂಚಲ್ಲಿ ಜಮೆಗೊಳ್ಳುವ ಡೆಡ್‌ ಸ್ಕಿನ್‌ ಕ್ಯುಟಿಕಲ್ಸ್ ಎನಿಸಿದೆ. ಇದು ಉಗುರಿನ ಸುತ್ತಲ ಚರ್ಮಕ್ಕೆ ಕೀಟಾಣು ನಿರೋಧಕವಾಗಿ ಕೆಲಸ ಮಾಡಲು ದಪ್ಪ ಪದರವಾಗಿ ನಿಲ್ಲುತ್ತದೆ. ನೀವು ನಿಯಮಿತವಾಗಿ ಮನೆಯಲ್ಲಿ ಮೆನಿಕ್ಯೂರ್‌ ಮಾಡುತ್ತಿದ್ದರೆ, ಕ್ಯುಟಿಕಲ್ಸ್ ಗೆ ಆಟೋಮೆಟಿಕಲಿ ಉತ್ತಮ ಪೋಷಣೆ, ಆಕಾರ ದೊರಕುತ್ತದೆ.

ರಿಲ್ಯಾಕ್ಸೇಶನ್ಗಾಗಿ ಅಗತ್ಯ : ನೀವು ರಿಲ್ಯಾಕ್ಸ್ ಆಗಲು ನಿಯಮಿತ ಮಸಾಜ್‌ ಬಹಳ ಅವಶ್ಯಕ. ಅದರಲ್ಲೂ ಇಂದಿನ ಟೆನ್ಶನ್‌ ಭರಿತ ಜೀವನಶೈಲಿಗೆ ಇದು ಬೇಕೇಬೇಕು. ಇದರಿಂದ ಇಡೀ ದೇಹಕ್ಕೆ ಆರಾಮ ಸಿಗುತ್ತದೆ.

ರಕ್ತ ಸಂಚಾರಕ್ಕೂ ಪೂರಕ : 15-20 ನಿಮಿಷಗಳ ಮಸಾಜ್‌ ಮೆನಿಕ್ಯೂರ್‌ ನ ಒಂದು ಅವಶ್ಯಕ ಅಂಶವಾಗಿದೆ. ಇದು ನಮ್ಮ ಕೈಗಳಲ್ಲಿ ರಕ್ತ ಸಂಚಾರ ಉತ್ತೇಜಿಸಿ ಬೆರಳು, ಮಣಿಕಟ್ಟು ಚುರುಕಾಗಿ ಕೆಲಸ ಮಾಡಲು ಸಹಕರಿಸುತ್ತದೆ.

ಮೆನಿಕ್ಯೂರ್ಗಾಗಿ ಅಗತ್ಯ ಪರಿಕರ

ನೇಲ್‌ ಪಾಲಿಶ್‌ ರಿಮೂವರ್‌, ನೇಲ್ ‌ಫೈಬರ್‌ಕಲರ್‌, ಕಾಟನ್‌ ಪ್ಯಾಡ್ಸ್, ಕ್ಯುಟಿಕಲ್ ಕ್ರೀಂ ಪುಶರ್‌, ನೇಲ್ ಪಾಲಿಶ್‌, ಕೈಗಳನ್ನು ಬಿಸಿ ನೀರಲ್ಲಿ ಅದ್ದಿಡಲು ಒಂದು ದೊಡ್ಡ ಬಟ್ಟಲು, ಶ್ಯಾಂಪೂ ಯಾ ಬಾಡಿವಾಶ್‌, ನಿಂಬೆರಸ, ಜೇನು, ಸಕ್ಕರೆ, ಆಲಿವ್ ‌ಆಯಿಲ್ ‌ಯಾ ಬಾದಾಮಿ ಎಣ್ಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ