ನಮ್ಮ ಹೃದಯವನ್ನು ಸದಾ ಆರೋಗ್ಯಕರ ಸುಸ್ಥಿತಿಯಲ್ಲಿ ಇರಿಸುವಂಥ 5 ಬಗೆಯ ಅಡುಗೆ ಎಣ್ಣೆಗಳ ಬಗ್ಗೆ ಸಂಪೂರ್ಣ ವಿವರ ತಿಳಿಯೋಣವೇ....?
ನಾವು ಅಡುಗೆ ಎಣ್ಣೆ ಕೊಳ್ಳಲು ಹೋದಾಗೆಲ್ಲ ಅದರ ಬೆಲೆ ಬಗ್ಗೆ ಬಹಳ ಚಿಂತಿಸುತ್ತೇವೆ. ಯಾವುದು ಇರುವುದರಲ್ಲಿ ಅಗ್ಗವೋ ಅದನ್ನೇ ಕೊಳ್ಳುತ್ತೇವೆ. ಇದು ನಮ್ಮ ಆರೋಗ್ಯಕ್ಕೆ ಎಷ್ಟು ಪೂರಕ ಎಂದು ನಾವು ಚಿಂತಿಸುವುದೇ ಇಲ್ಲ. ಆದರೆ ಎಣ್ಣೆಯ ಗುಣ ನಮ್ಮ ಆರೋಗ್ಯ ಮತ್ತು ಹೃದಯಕ್ಕೆ ನೇರ ಸಂಬಂಧಿಸಿದೆ. ಹೀಗಾಗಿ ಕುಕಿಂಗ್ ಆಯಿಲ್ ಆರಿಸುವಾಗ ನಾವು ಬಹಳ ಜಾಗೃತರಾಗಿರಬೇಕು. ಆಗ ಮಾತ್ರ ನಿಮ್ಮ ಅಡುಗೆ ರುಚಿ ಆಗಿರುವುದಲ್ಲದೆ, ಹೃದ್ರೋಗ ಕಾಡದೆ ನೆಮ್ಮದಿಯಾಗಿ ಇರಬಹುದು.
ನಮ್ಮ ದೇಶದಲ್ಲಿ ಪ್ರತಿ ವರ್ಷ 12 ಲಕ್ಷಕ್ಕೂ ಹೆಚ್ಚು ಯುವಜನರು ಹಾರ್ಟ್ ಅಟ್ಯಾಕ್ ನಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಅದರ ಮೂಲ ತಿಳಿದು ನಾವು ಮೊದಲೇ ಎಚ್ಚೆತ್ತುಕೊಳ್ಳುವುದು ಲೇಸು.
ಹಾಗಾದರೆ ಯಾವ ಬಗೆಯ ಅಡುಗೆ ಎಣ್ಣೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಯೋಣವೇ?
ಸ್ಯಾಚುರೇಟೆಡ್ / ಅನ್ ಸ್ಯಾಚುರೇಟೆಡ್ ಎಣ್ಣೆ
ಆಧುನಿಕ ಸಂಶೋಧನೆಗಳ ಪ್ರಕಾರ, ನಾವು ನಮ್ಮ ಹೃದಯವನ್ನು ಆರೋಗ್ಯಕರವಾಗಿ ಇರಿಸ ಬಯಸಿದರೆ, ನಾವು ಕೇವಲ ಅನ್ ಸ್ಯಾಚುರೇಟೆಡ್ ಫ್ಯಾಟ್ ಆಯಿಲ್ ಮಾತ್ರ ಸೇವಿಸಬೇಕು. ಇದನ್ನೇ ಪಾಲಿ ಅನ್ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಮಾನೋ ಅನ್ ಸ್ಯಾಚುರೇಟೆಡ್ ಎಂದೂ ಹೇಳುತ್ತಾರೆ. ರೂಂ ಟೆಂಪರೇಚರ್ ನಲ್ಲಿ ಇದು ದ್ರವ ರೂಪದಲ್ಲಿರುತ್ತದೆ. ಒಮೇಗಾ-3 ಫ್ಯಾಟಿ ಆ್ಯಸಿಡ್ಸ್ (ಮೂಲತಃ ಇದು ಅನ್ ಸ್ಯಾಚುರೇಟೆಡ್ ಫ್ಯಾಟ್) ನಮ್ಮ ಆರೋಗ್ಯಕ್ಕೆ ಹೆಚ್ಚು ಪೂರಕ. ಇದು ನಮಗೆ ಸ್ಟ್ರೋಕ್, ಹಾರ್ಟ್ ಅಟ್ಯಾಕ್ ಆಗದಂತೆ ತಡೆಯುತ್ತದೆ. ಜೊತೆಗೆ ಇದು ನಮ್ಮ ರಕ್ತದಲ್ಲಿನ ಟ್ರೈಗ್ಲಿಸಿರೈಡ್ಸ್ ನ ಮಟ್ಟವನ್ನು ಎಷ್ಟೋ ತಗ್ಗಿಸುತ್ತದೆ.
ಜೊತೆಗೆ ನಾವು ನಮ್ಮ ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟವನ್ನು ಆದಷ್ಟು ತಗ್ಗಿಸಿ, ಗುಡ್ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಬೇಕಾಗಿದೆ. ಜೊತೆಗೆ ಇದು ನಮ್ಮ BPಯನ್ನು ನಿಯಂತ್ರಿಸಿ, ರಕ್ತನಾಳ ಹೆಪ್ಪುಗಟ್ಟದಂತೆ (ಗರಣೆ ಕಟ್ಟದಂತೆ) ತಡೆಯುತ್ತದೆ. ಅದೇ ಇನ್ನೊಂದು ಕಡೆ ನೋಡಿದರೆ, ಸ್ಯಾಚುರೇಟೆಡ್ ಫ್ಯಾಟ್ಸ್ (ಬ್ಯಾಡ್ ಫ್ಲಾಟ್ಸ್)ನ್ನು ನಾವು ಆದಷ್ಟು ಕಡಿಮೆ ಸೇವಿಸಬೇಕು. ಅನಿವಾರ್ಯವಾಗಿ ಸೇವಿಸಬೇಕಾದಲ್ಲಿ ಅತಿ ಕಡಿಮೆ ಪ್ರಮಾಣ ಸೇವಿಸಬೇಕು. ಏಕೆಂದರೆ ಇದು ನಮ್ಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಇವು ದ್ರರೂಪದಲ್ಲಿರದೆ ಘನ ರೂಪದಲ್ಲಿರುತ್ತದೆ. ಅದರಲ್ಲೂ ಆರ್ಟಿಫಿಶಿಯ್ ಟ್ರಾನ್ಸ್ ಫ್ಯಾಟ್ಸ್ ಬಳಿಯಂತೂ ಸುಳಿಯಲೇ ಬಾರದು. ಏಕೆಂದರೆ ಇದು ನಮ್ಮ ದೇಹದ ಸ್ಥೂಲತೆ ಹೆಚ್ಚಿಸಿ ನಮಗೆ ಸ್ಟ್ರೋಕ್ಸ್, ಅಟ್ಯಾಕ್ಸ್, ಕ್ಯಾನ್ಸರ್ ಗಳ ಕೊಡುಗೆ ನೀಡುತ್ತವೆ.
ಮುಖ್ಯ ಮಾಹಿತಿ
ನಿಮ್ಮ ದೇಹಕ್ಕೆ ಪ್ರತಿ ದಿನ 2000 ಕ್ಯಾಲೋರಿಗಳ ಅಗತ್ಯವಿದ್ದರೆ, ಅದರಲ್ಲಿ 20-25% ಕ್ಯಾಲೋರಿಗಳನ್ನು ಮಾತ್ರ ಫ್ಯಾಟ್ ನಿಂದ ಪಡೆಯಬೇಕು. ಇದು ಆದಷ್ಟೂ ಅನ್ ಸ್ಯಾಚುರೇಟೆಡ್ ಫ್ಯಾಟ್ ಮಾತ್ರ ಆಗಿರುವಂತೆ ನೋಡಿಕೊಳ್ಳಬೇಕು. ಬಾಯಿ ರುಚಿಗಾಗಿ ಸ್ಯಾಚುರೇಟೆಡ್ ಫ್ಯಾಟ್ ಬೇಕಿದ್ದರೆ ಅದು 56% ಮಾತ್ರ ಆಗಿರಬೇಕು.