ಈ ಉರಿ ಬೇಸಿಗೆಯ ಝಳ ನಿಮ್ಮನ್ನು ತತ್ತರಿಸುವಂತೆ ಮಾಡಿರುವಾಗ, ನಿಮ್ಮ ಚರ್ಮ ಡೀಹೈಡ್ರೇಟ್ ಆಗದಿರುವಂತೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕು.....?
ಹೈಡ್ರೇಶನ್ ಎಂಬುದು ಚರ್ಮಕ್ಕೆ ಎಷ್ಟು ಮುಖ್ಯ ಅಂತ ಗೊತ್ತೇ? ಬೇಸಿಗೆಯಲ್ಲಿ ಬಾಯಾರಿದಾಗ 2 ಚೊಂಬು ನೀರು ಕುಡಿಯ ಬೇಕೆನಿಸುವಷ್ಟು! ಆದರೂ ಹೆಂಗಸರು ತಮ್ಮ ಚರ್ಮದ ಈ ಬೇಡಿಕೆ ನಿರ್ಲಕ್ಷಿಸುತ್ತಾರೆ. ಏಕೆಂದರೆ ಅವರು ಮಾಯಿಶ್ಚರೈಸರ್ ಕೇವಲ ಚಳಿಗಾಲಕ್ಕೆ ಮಾತ್ರ ಎಂದು ಭಾವಿಸುತ್ತಾರೆ. ಬೇಸಿಗೆಯಲ್ಲಿ ಅದನ್ನು ಬಳಸಿದರೆ ಚರ್ಮ ಜಿಡ್ಡು ಜಿಡ್ಡಾದೀತು ಎಂದು ಭಾವಿಸುತ್ತಾರೆ.
ಆದರೆ ಬೇಸಿಗೆಯಲ್ಲಿ ಹೈಡ್ರೇಟೆಡ್ ಮಾಯಿಶ್ಚರೈಸರ್ ಬಳಸದಿದ್ದರೆ ಅವರ ಚರ್ಮ ಆಯ್ಲಿ ಆಗಿ, ಹೊರಗೆ ಹೋದಾಗ ಅಲ್ಲಿನ ಧೂಳು, ಮಾಲಿನ್ಯದ ಹಿಂಸೆ ಹಾಗೂ A/C ಕೋಣೆಯ ಥಂಡಿ ಚರ್ಮವನ್ನು ಸೂಪರ್ ಡ್ರೈ ಮಾಡೀತು ಎಂಬುದನ್ನು ಅವರು ಮರೆಯುತ್ತಾರೆ.
ಹೀಗಾಗಿ ಈ ಉರಿ ಬೇಸಿಗೆಗೆ ಬೆಸ್ಟ್ ಹೈಡ್ರೇಟೆಡ್ ಮಾಯಿಶ್ಚರೈಸರ್ ಬಳಸುವುದೊಂದೇ ಮಾರ್ಗ. ಇದರಿಂದ ಉರಿ ಬಿಸಿಲಲ್ಲೂ ಚರ್ಮ ಸದಾ ಹೈಡ್ರೇಟೆಡ್ ಆಗಿದ್ದು, ಈ ಕಾಲದಲ್ಲಿ ಕಾಡುವ ರಾಶೆಸ್, ಟ್ಯಾನ್, ಸನ್ ಬರ್ನ್, ಆ್ಯಕ್ನೆಗಳಿಂದ ನಮ್ಮ ಚರ್ಮವನ್ನು ಸುರಕ್ಷಿತವಾವಾಗಿಡುವಲ್ಲಿ ಸಹಕಾರಿಯಾಗಿದೆ. ಹಾಗಾದರೆ ಇಂದಿನಿಂದಲೇ ನಿಮ್ಮ ಸಮ್ಮರ್ ಸ್ಕಿನ್ ಕೇರ್ ರೊಟೀನ್ ನಲ್ಲಿ ಈ ಬೆಸ್ಟ್ ಮಾಯಿಶ್ಚರೈಸರ್ ನ್ನು ಸೇರಿಸಿಕೊಳ್ಳಿ, ಆಗ ನಿಮ್ಮ ಚರ್ಮ ಸದಾ ಲವಲವಿಕೆಯಿಂದ ಕೂಡಿರುತ್ತದೆ.
ಲೋಟಸ್ ಪ್ಲಾಂಟ್ ರೆಟಿನಾಲ್ ವಿಟಮಿನ್ ಸಿ ಯ ಬ್ರೈಟ್ ನಿಂಗ್ ಕ್ರೀಂ : ಈ ಉತ್ಪನ್ನ ಬೇಸಿಗೆಗೆ ಅತಿ ಉಪಕಾರಿ. ಏಕೆಂದರೆ ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಯ ಪ್ಲಾಂಟ್ ರೆಟಿನಾಲ್ ನ ಉತ್ತಮಿಕೆಯ ಅಂಶಗಳಿವೆ. ವಿಟಮಿನ್ ಸಿ ಯ ಕೊಲೋಜೆನ್ ನಿರ್ಮಾಣಕ್ಕೆ ಪೂರಕ, ಚರ್ಮ ಯಂಗ್ ಆಗಿರಲು ಸಹಾಯಕ. ಹೀಗಾಗಿ ಫೈನ್ ಲೈನ್ಸ್ ಸುಕ್ಕುಗಳು ಸಹಜವಾಗಿ ದೂರವಾಗುತ್ತವೆ,
ಈವೆನ್ ಸ್ಕಿನ್‌ಟೋನ್ ದೊರಕುತ್ತದೆ. ಇದರಿಂದ ಚರ್ಮದ ಡಾರ್ಕ್ ಸ್ಪಾಟ್ಸ್ ತಗ್ಗುತ್ತವೆ. ರೆಟಿನಾಯ್ಡ್ ಸ್ಕಿನ್ ನ್ನು ಹೈಪರ್‌ಪಿಗ್ಮೆಂಟೇಶನ್‌ಸನ್ ಡ್ಯಾಮೇಜ್ ನಿಂದ ರಕ್ಷಿಸಿ, ಚರ್ಮದ ಟೆಕ್ಸ್ ಚರ್ ನ್ನು ಸುಧಾರಿಸುತ್ತದೆ. ಇದು ಚರ್ಮದ ಎಲಾಸ್ಟಿಸಿಟಿಯನ್ನು ವರ್ಧಿಸಿ, ಏಜಿಂಗ್ ವಿರುದ್ಧ ಹೋರಾಡಬಲ್ಲದು.
ವೈಶಿಷ್ಟ್ಯಗಳು : ಯಾವುದೇ ಹಾನಿಯಿಲ್ಲದೆ ಇದು ಚರ್ಮದಲ್ಲಿ ಮಾಯಿಶ್ಚರೈಸರ್ ನ್ನು ಸೀಲ್ ಮಾಡುತ್ತದೆ. ಇದು ನೈಸರ್ಗಿಕ ಘಟಕಗಳಿಂದ ತಯರಾಗಿದ್ದು ಪ್ಯಾರಾಬಿನ್, ಕೆಮಿಕಲ್ಸ್, ಕ್ರುಯೆಲ್ಟಿಗಳಿಂದ ಫ್ರೀ ಆಗಿದೆ, ಜೊತೆಗೆ ಕ್ಲಿನಿಕಲಿ ಟೆಸ್ಟೆಡ್ ಸಹ. ಇದು ನಿಮಗೆ 650-700 ರೂ.ಗಳೊಳಗೆ ದೊರಕುತ್ತದೆ, 2-3 ವಾರ ಬಾಳಿಕೆ ಬರುತ್ತದೆ.
ನ್ಯೂಟ್ರೊಜೆನಾ ಹೈಡ್ರೋ ಬೂಸ್ಟ್ ವಾಟರ್ ಜೆಲ್ : ಹ್ಯಾಲೂರೋನಿಕ್ ಆ್ಯಸಿಡ್ ಅಡಗಿದ ಈ ಫೇಸ್ ಮಾಯಿಶ್ಚರೈಸರ್ ನ್ನು ಈ ಬೇಸಿಗೆಗೆ ಬೆಸ್ಟ್ ಎಂದರೆ ಉತ್ಪ್ರೇಕ್ಷೆಯಲ್ಲ. ಇದರ ಲೈಟ್ ವೆಯ್ಟ್, ಚರ್ಮವನ್ನು ಸಾಫ್ಟ್ ಫ್ರೆಶ್ ಆಗಿರಿಸಲು ಸದಾ ಮುಂದು. ಇದು ಸ್ಕಿನ್ ಟೆಕ್ಸ್ ಚರ್ ನಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. ಹೀಗಾಗಿ ಅದನ್ನು ಹೈಡ್ರೇಟ್ ಗೊಳಿಸುವುದು ಸುಲಭ. ಜೊತೆಗೆ ಸ್ಕಿನ್ ನ್ನು ವೇಗವಾಗಿ ಹೀಲ್ ಆಗಿಸಿ, ರಕ್ತ ಸಂಚಾರ ಸುಧಾರಿಸುತ್ತದೆ. ಇದರಲ್ಲಿನ ಗ್ಲಿಸರಿನ್‌ಆಲಿವ್ ಸಾರ, ಸ್ಕಿನ್ ನ್ನು ಡೀಪ್ಲಿ ಹೈಡ್ರೇಟ್‌ಮಾಡುವುದರ ಜೊತೆಯಲ್ಲೇ, ಸುತ್ತಲ ವಾತಾವರಣದಿಂದ ಚರ್ಮದ ಮೇಲಾಗುವ ಎಲ್ಲಾ ಹಾನಿಗಳನ್ನೂ ದೂರ ಓಡಿಸುತ್ತದೆ.