ಮದರ್ಸ್ ಡೇ ದಿನದಂದು ನಿಮ್ಮ ತಾಯಿಗೆ ನೀವು ನೀಡಲಿರುವ ಈ ಉಡುಗೊರೆಗಳು ಅವರ ಮುಖದಲ್ಲಿ ಮಂದಹಾಸ ಮೂಡಿಸಿ, ನಿಮ್ಮತ್ತ ಹೆಮ್ಮೆಯ ಭಾವ ತರಿಸಲಿದೆ…..!
ತಾಯಿ ತನ್ನ ಮಕ್ಕಳ ಖುಷಿಗಾಗಿ ಏನೆಲ್ಲ ಮಾಡುತ್ತಾಳೆ….. ಹೊತ್ತು, ಹೆತ್ತು, ಸಾಕಿ ಸಲಹಿ ಅವರಿಗಾಗಿ ನಿದ್ದೆಗೆಟ್ಟು, ಉಪವಾಸವಿದ್ದು, ತನ್ನ ವೈಯಕ್ತಿಕ ಬೇಕು ಬೇಡಗಳನ್ನೆಲ್ಲ ನಿರ್ಲಕ್ಷಿಸುತ್ತಾಳೆ. ಮಗುವಿನ ಒಂದು ಬೇಡಿಕೆ ಎದುರು ಅವಳು ತನ್ನ ಸಂಪೂರ್ಣ ಸುಸ್ತು ಸಂಕಟ ಮರೆತು ಅದನ್ನು ಪೂರೈಸುತ್ತಾಳೆ.
ಆದರೆ ನಾವು ದೊಡ್ಡವರಾದ ಮೇಲೆ ಅಮ್ಮನಿಗಾಗಿ ಖಂಡಿತಾ ಹೆಚ್ಚಿಗೇನೂ ಮಾಡಲಾಗದು. ಒಬ್ಬ ಮಗಳಾಗಿ ವಯಸ್ಕರಾದ ನೀವು ಅಮ್ಮನಿಗಾಗಿ ಇನ್ನರ್ ಬ್ಯೂಟಿ ತರಹ, ಔಟರ್ ಬ್ಯೂಟಿಗಾಗಿ, ಈ ಬೆಸ್ಟ್ ಬ್ಯೂಟಿ ಟ್ರೀಟ್ ಮೆಂಟ್ಸ್ ಕೊಡಿಸಬಹುದು. ಏಕೆಂದರೆ ಆಕೆ ತನ್ನನ್ನು ತಾನು ಅಂದವಾಗಿ ಸಿಂಗರಿಸಿಕೊಳ್ಳ ಬಯಸಿದರೂ, ಸಂಸಾರದ ಸುಳಿಯಲ್ಲಿ ಅದೆಲ್ಲ ಸಾಧ್ಯವಾಗದೇ ಹೋಗಿರಬಹುದು. ಹಾಗಾಗಿ ಈ ಮದರ್ಸ್ ಡೇ ಸಂದರ್ಭ ಆಕೆಗೆ ಈ ಅಮೂಲ್ಯ ಉಡುಗೊರೆ ನೀಡಿ, ಅವಳ ಮುಖದಲ್ಲಿ ಮಂದಹಾಸ ತೇಲಿಸಿ :
ಫೇಶಿಯಲ್ ಕೇರ್ ಬಾಕ್ಸ್ ತನ್ನ ಮುಖದ ಅಂದ ಚೆಂದ ಎಲ್ಲರೂ ಹೊಗಳಬೇಕು ಅಂತ ಅಮ್ಮನಿಗೆ ಅನಿಸಿದರೆ ತಪ್ಪೇನು? ಆದರೆ ಸದಾ ಕಾಂಪ್ರಮೈಸ್ ಮಾಡಿಕೊಳ್ಳುತ್ತಾ ಅದನ್ನು ನಿರ್ಲಕ್ಷಿಸಿರುತ್ತಾಳೆ. ಆದ್ದರಿಂದ ಈ ಸಂದರ್ಭದಲ್ಲಿ ಆಕೆಗೆ ಫೇಶಿಯಲ್ ಕೇರ್ ಬಾಕ್ಸ್ ನೀಡಿ, ಅವಳ ಈ ಆಸೆ ಪೂರೈಸಿ. ಇದರಿಂದ ಆಕೆಯ ಮುಖದಲ್ಲಿ ಕಾಂತಿಯ ಕಳೆ ಕೂಡುತ್ತದೆ. ಈ ಬಾಕ್ಸ್ ನಲ್ಲಿ ಫೇಶಿಯಲ್ ಕ್ಲೆನ್ಸರ್, ಟೋನರ್, ಹಲವು ಫೇಸ್ ಪ್ಯಾಕ್ ಗಳಿಂದ ಹಿಡಿದು ನೈಟ್ ಟ್ರೀಟ್ ಮೆಂಟ್ ಕ್ರೀಂವರೆಗೂ ಹಾಗೂ ಸನ್ ಪ್ರೊಟೆಕ್ಷನ್‌ನೀಡುವ ಸನ್ ಸ್ಕ್ರೀನ್ ಸಹ ಉಂಟು. ಇವೆಲ್ಲ ಆಕೆಯ ಮುಖ ಚರ್ಮವನ್ನು ಕ್ಲೀನ್ ಮಾಡಿ, ಡೆಡ್ ಸ್ಕಿನ್ ತೊಲಗಿಸಿ, ಮುಖದಲ್ಲಿ ಸೌಮ್ಯ ಕಾಂತಿ ತುಂಬುತ್ತವೆ. ಜೊತೆಗೆ ಸ್ಕಿನ್ನಿನ ಏಜಿಂಗ್ ಪ್ರಕ್ರಿಯೆಯನ್ನೂ ತಗ್ಗಿಸಬಲ್ಲದು.
ನೈಟ್ ಕ್ರೀಂ ಚರ್ಮನನ್ನು ಸುದೀರ್ಘ ಕಾಲ ಹೈಡ್ರೇಟೆಡ್ ಆಗಿರಿಸಿ, ಸ್ಕಿನ್ ಸೆಲ್ಸ್ ನ್ನು ರಿಪೇರಿ ಮಾಡುವಲ್ಲಿಯೂ ಮುಂದಾಗುತ್ತದೆ. ಹೀಗಾಗಿ ನೀವು ಮಾರ್ಕೆಟ್ ನಲ್ಲಿ ಲಭ್ಯವಿರುವ ಫಾರೆಸ್ಟ ಎಸೆನ್ಶಿಯಲ್ಸ್ ನ ಫೇಶಿಯಲ್ ಕೇರ್ ಕಿಟ್, ಜಸ್ಟ್ ಹರ್ಬ್ಸ್ ನ ಫೇಶಿಯಲ್ ಕೇರ್, ಮಾಮಾಸ್ ಅರ್ಥ್ ನ ಕಿಟ್….. ಇತ್ಯಾದಿ ಯಾವುದನ್ನಾದರೂ ಕೊಳ್ಳಬಹುದು. ಇದು ಬಜೆಟ್ ಫ್ರೆಂಡ್ಲಿ ಜೊತೆಗೆ ಅತ್ಯಂತ ಪರಿಣಾಮಕಾರಿ! ಸ್ಕಿನ್ ಕೇರ್ ರೊಟೀನ್ ಒಬ್ಬ ತಾಯಿ ಹಣದ ಉಳಿತಾಯದ ಸಲುಲಗಿ ಸ್ಕಿನ್ ಕೇರ್ ರೊಟೀನ್ ಕುರಿತಾಗಿ ಕಾಂಪ್ರಮೈಸ್ ಆಗುತ್ತಾಳೆ. ಹೀಗಾಗಿ ಬೇಕೆಂದೇ ಫೇಸ್ ವಾಶ್ ಬಳಸುಲ ಬದಲು ಸೋಪ್ ಬಳಸಿ ಸುಮ್ಮನಾಗಿರುತ್ತಾಳೆ. ಆದರೆ ಅವಳ ಪ್ರೌಢ ವಯಸ್ಸಿಗೆ ಇಂಥ ಸೋಪ್ ಹಾರ್ಶ್ ಎಫೆಕ್ಟ್ ನೀಡಬಲ್ಲದು.
ಸೋಪಿನ ಆಲ್ಕೈನ್ ನೇಚರ್ ಮುಖದಲ್ಲಿ ನ್ಯಾಚುರ್ ಮಾಯಿಶ್ಚರನ್ನು ಹಾಳುಗೆಡವಿ, ಅದನ್ನು ಹೆಚ್ಚು ಡ್ರೈ ಮಾಡುತ್ತದೆ. ಇದರಿಂದ ಮುಖದ ಸುಕ್ಕು ಹೆಚ್ಚುತ್ತದೆ, ಕಾಲು ಒಡೆಯುವಂತೆ ಮುಖದ ಚರ್ಮ ಅಲ್ಲಲ್ಲಿ ಒಡೆಯಬಹುದು. ಆದರೆ ಫೇಸ್ ವಾಶ್ ಚರ್ಮದ Ph ಲೆವೆಲ್ ನ್ನು ಸದಾ ಬ್ಯಾಲೆನ್ಸ್ ನಲ್ಲಿಡುತ್ತದೆ. ಅದರಲ್ಲಿ ಹ್ಯಾಲುರೋನಿಕ್ ಆ್ಯಸಿಡ್ ಬೆರೆತಿದ್ದರೆ, ಚರ್ಮದ ಡ್ರೈನೆಸ್ ದೂರಾಗಿ ಫೈನ್ ಲೈನ್ಸ್ ಸುಕ್ಕುಗಳ ನಿವಾರಣೆಯೂ ಆಗುತ್ತದೆ. ಇದಾದ ಮೇಲೆ ವಿಟಮಿನ್ಸ್ ಹ್ಯಾಲುರೋನಿಕ್ ಆ್ಯಸಿಡ್ ರಿಚ್ ಫೇಸ್ ಕ್ರೀಂ ಚರ್ಮವನ್ನು ಮಾಯಿಶ್ಚರೈಸ್ ಗೊಳಿಸಿ, ಅದಕ್ಕೆ ಹೆಚ್ಚಿನ ಕಾಂತಿ ತುಂಬುತ್ತದೆ. ಹೀಗಾಗಿ ಇಂಥ ಘಟಕ ತುಂಬಿರುವಂಥ ಫೇಸ್ ವಾಶ್ ಫೇಸ್ ಕ್ರೀಮುಗಳನ್ನು ಮಾರ್ಕೆಟ್ ಬ್ರಾಂಡ್ಸ್ ನಲ್ಲಿ ನಿಮ್ಮ ಬಜೆಟ್ ಅನುಸಾರ ಆರಿಸಿ ಉಡುಗೊರೆ ನೀಡಿರಿ.
ಕೊಲ್ಯಾಜೆನ್ ಮಾಸ್ಕ್ ದೇಹದಂತೆಯೇ ನಮ್ಮ ಚರ್ಮಕ್ಕೂ ಸಹ ಸೂಪರ್ ಫುಡ್ಸ್ ನ ಅಗತ್ಯವಿದೆ. ಹೀಗಾಗಿ ನಿಮ್ಮ ತಾಯಿಯ ಆರೋಗ್ಯಕರ ಚರ್ಮಕ್ಕಾಗಿ ಕೊಲ್ಯಾಜೆನ್ ಮಾಸ್ಕ್ ಸೂಪರ್ ಫುಡ್ ಎನಿಸಿದೆ. ಇದು ನಮ್ಮ ಚರ್ಮದ ಮೆಯ್ನ್ ಸ್ಟ್ರಕ್ಚರ್ ಆಗಿದ್ದು, ಪ್ರೋಟೀನ್ ಮೂಲ ಹೊಂದಿದೆ. ಇದರ ಬೆಟರ್ ಬ್ಯಾಲೆನ್ಸಿಂಗ್ ನಿಂದ ಮಾತ್ರ ನಮ್ಮ ಚರ್ಮ ಟೈಟ್, ಗ್ಲೋಯಿಂಗ್‌ಏಜಿಂಗ್ ನಿಂದ ದೂರವಾಗಬಲ್ಲದು. ಆದರೆ ಅಮ್ಮ ಇದನ್ನೆಲ್ಲ ನಿರ್ಲಕ್ಷಿಸಿ ತನ್ನ ಕೆಲಸದಲ್ಲಿ ಬಿಝಿ ಆಗುತ್ತಾಳೆ. ಹೀಗಾಗಿ ಅವಳ ಸ್ಕಿನ್ ಕ್ರಮೇಣ ತನ್ನ ಕೊಲ್ಯಾಜೆನ್ ಕಳೆದುಕೊಳ್ಳ ತೊಡಗುತ್ತದೆ. ಇದರಿಂದ ತನ್ನ ವಯಸ್ಸಿಗಿಂತ ಹೆಚ್ಚು ಪ್ರೌಢಳಾಗಿರುವಂತೆ ಕಂಡುಬರುತ್ತಾಳೆ.
ಹೀಗಾಗಿ ಕೊಲ್ಯಾಜೆನ್ ಮಾಸ್ಕ್ ನಿಮ್ಮ ತಾಯಿಯ ಚರ್ಮದಿಂದ ಕೊಳೆ, ಡೆಡ್ ಸೆಲ್ಸ್ ತೊಲಗಿಸಿ, ಚರ್ಮವನ್ನು ಕ್ಲಿಯರ್‌ಸಾಫ್ಟ್ ಗೊಳಿಸುತ್ತದೆ. ಜೊತೆಗೆ ಚರ್ಮದಲ್ಲಿನ ರಕ್ತ ಸಂಚಾರವನ್ನೂ ಸರಿಪಡಿಸುತ್ತದೆ. ಇದರಿಂದ ಚರ್ಮ ಟೈಟಾಗಿ, ಚರ್ಮದ ಏಜಿಂಗ್ ಫ್ಯಾಕ್ಟರ್ ತಗ್ಗಿಸುತ್ತದೆ. ಸಹಜವಾಗಿ ಆಕೆಯ ಕಂಗಳ ಕೆಳಗಿನ ಡಾರ್ಕ್ ಸರ್ಕಲ್ಸ್ ದೂರವಾಗಿ, ಇವರು ವಯಸ್ಸಿಗಿಂತ ಕಿರಿಯಳಾಗಿ ತೋರಿಸುತ್ತದೆ!
ಹೀಗಾಗಿ ಮದರ್ಸ್ ಡೇ ಸಂದರ್ಭದಲ್ಲಿ ಆಕೆಗೆ ಇಂಥ ಕೊಲ್ಯಾಜೆನ್ ಮಾಸ್ಕ್ ಗಿಫ್ಟ್ ನೀಡಿ. ಇದರಿಂದ ನಿಮ್ಮಮ್ಮ ಅಜ್ಜಿ ಹಾಗೆ ಕಾಣಿಸದೆ ಆಂಟಿ ಹಾಗೆ ಕಂಡು ಬರುತ್ತಾರೆ. ಇದಕ್ಕಾಗಿ ನೀವು ಇಂದೂರ್ ಕೊಲ್ಯಾಜೆನ್ ಫೇಶಿಯಲ್ ಮಾಸ್ಕ್, ದಿ ಡರ್ಮಾ ಕಂಪನಿ ಕೊಲ್ಯಾಜೆನ್ ಮಾಸ್ಕ್ ಹಾಗೂ ಅನೇಕ ಬ್ರಾಂಡೆಡ್ ಕಂಪನಿಗಳಲ್ಲಿ ಇಂಥ ಲಭ್ಯವಿವೆ.
ಫೇಸ್ ಸೀರಮ್
ನೀವು ಇಂಥ ಬಹು ಉಪಯುಕ್ತ, ಸುಲಭವಾಗಿ ಚರ್ಮದಲ್ಲಿ ವಿಲೀನಗೊಳ್ಳುವಂಥ ಗಿಫ್ಟ್ ನೀಡಿ ಅಮ್ಮನನ್ನು ಖುಷಿಪಡಿಸಿ! ಜೊತೆಗೆ ಇದು ಈಝಿ ಟು ಯೂಸ್ ಕೂಡ! ಆದರೆ ಆಕೆಗೆ ಎಂಥ ಸ್ಕಿನ್ ಪ್ರಾಬ್ಲಂ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಕೆಯ ಚರ್ಮದಲ್ಲಿ ಕೊಲ್ಯಾಜೆನ್‌ಎಲಾಸ್ಟಿಸಿಟಿಯ ಕೊರತೆ ಇದೆ ಎಂದು ಚರ್ಮ ತಜ್ಞರು ಖಚಿತಪಡಿಸಿದರಾದಲ್ಲಿ, ಅದಕ್ಕಾಗಿ ರೆಟಿನಾಲ್‌ಆ್ಯಂಟಿ ಆಕ್ಸಿಡೆಂಟ್ಸ್ ಇರುವಂಥ ಸೀರಮ್ ಮಾತ್ರ ಕೊಡಿ.
ಇದರ ಬದಲು ಫ್ರೀ ರಾಡಿಕಲ್ಸ್ ಸಮಸ್ಯೆ ಇದೆ ಎಂದಾದಲ್ಲಿ ಕಾಫೀ ಇನ್ ಪಸೇಡ್ ಸೀರಮ್ ಕೊಡಿಸಿ. ಅವರ ಮುಖದಲ್ಲಿ ಸುಕ್ಕು ನಿರಿಗೆ, ಪಿಗ್ಮೆಂಟೇಶನ್ ಸಮಸ್ಯೆಗಳಿದ್ದರೆ ವಿಟಮಿನ್ ಯುಕ್ತ ಸೀರಮ್ ನ ಗಿಫ್ಟ್ ನೀಡಿ. ಇದೇ ತರಹ ಅವರದು ಅಧಿಕ ಡ್ರೈ ಚರ್ಮವಾಗಿದ್ದರೆ, ಹ್ಯಾಲುರೋನಿಕ್ ಆ್ಯಸಿಡ್ ಯುಕ್ತ ಸೀರಮ್ ಗಿಫ್ಟ್ ನೀಡಿ.
ಲಿಪ್ ಸ್ಟಿಕ್ ಕಿಟ್
ಸಾಮಾನ್ಯವಾಗಿ ಅಮ್ಮಂದಿರ ಬಳಿ 1-2 ಶೇಡ್ ನ ಲಿಪ್ ಸ್ಟಿಕ್ ಮಾತ್ರ ಇರುವುದನ್ನು ಗಮನಿಸಿರುತ್ತೇವೆ. ಎಲ್ಲಾ ಫಂಕ್ಷನ್ ಗಳಿಗೂ ಆಕೆ ಅದನ್ನೇ ಪದೇ ಪದೇ ಬಳಸುತ್ತಿರುತ್ತಾಳೆ. ಎಷ್ಟೋ ಸಲ ಅಗ್ಗದ ಲೋಕಲ್ ಬ್ರಾಂಡ್ ಕೊಂಡು ಹಣ ಉಳಿಸಲೆತ್ನಿಸುತ್ತಾಳೆ. ಇದರಿಂದ ಮೆಚ್ಚಿದ ಶೇಡ್ ಸಿಗಬಹುದೇನೋ, ಆದರೆ ತುಟಿಗಳ ಆರೋಗ್ಯಕ್ಕೆ ಒಳ್ಳೆಯದಲ್ಲ.
ಹೀಗಾಗಿ ನೀವು ಈ ಸಂದರ್ಭದಲ್ಲಿ ಲಿಪ್ ಸ್ಟಿಕ್ ಕಿಟ್ ನ್ನು ಗಿಫ್ಟಾಗಿ ಕೊಡಿ. ಅದರಲ್ಲಿ ಮ್ಯಾಟ್, ಗ್ಲಾಸಿ ಇತ್ಯಾದಿ ಎಲ್ಲಾ ಬಗೆಯವು ಇರುತ್ತವೆ. ಡ್ರೆಸ್ ಗೆ ತಕ್ಕ ಮ್ಯಾಚಿಂಗ್ ಸಹ ಆರಿಸಬಹುದು. ಈ ಬ್ರಾಂಡೆಡ್ ಲಿಪ್ ಸ್ಟಿಕ್ಸ್ ಅವರ ತುಟಿಯ ಡ್ರೈನೆಸ್‌ಪಿಗ್ಮೆಂಟೇಶನ್ ಸಹ ಎಷ್ಟೋ ತಗ್ಗಿಸುತ್ತದೆ. ಇದನ್ನು ತುಟಿಗೆ ತೀಡುವ ಜೊತೆಗೆ, ಚೀಕ್ಸ್ ನ್ನು ಹೈಲೈಟ್ ಮಾಡಲಿಕ್ಕೂ ಬಳಸಬಹುದು. ಇದಕ್ಕಾಗಿ ನೀವು ಲ್ಯಾಕ್ಮೆ, ಸ್ವಿಸ್ ಬ್ಯೂಟಿ, ನೈಕಾ, ಶುಗರ್ ಕಾಸ್ಮೆಟಿಕ್ಸ್, ಜಸ್ಟ್ ಹರ್ಬ್ಸ್ ಇತ್ಯಾದಿ ಬ್ರಾಂಡ್ಸ್ ಟ್ರೈ ಮಾಡಿ.
ಹೇರ್ ಟ್ರೀಟ್ ಮೆಂಟ್ ಕಿಟ್
ತನ್ನ ಮಕ್ಕಳ ಪಾಲನೆ ಪೋಷಣೆಯಲ್ಲಿ ಕಿಂಚಿತ್ತೂ ಲೋಪ ಬರಿಸದ ತಾಯಿ, ತನ್ನ ಕುರಿತಾಗಿ ಕೇರ್ ತೆಗೆದುಕೊಳ್ಳ ಬೇಕಾದಾಗ, ಅದನ್ನು ಸಂಪೂರ್ಣ ನಿರ್ಲಕ್ಷಿಸಿರುತ್ತಾಳೆ. ಪೌಷ್ಟಿಕ ಆಹಾರ ಸೇವಿಸದೆ ಪರಿಸರ ಮಾಲಿನ್ಯ, ಸೂರ್ಯನ ತೀಕ್ಷ್ಣ ಕಿರಣಗಳ ಬಾಧೆಗಳಿಂದಾಗಿ ಹೇರ್ ಫಾಲ್ ಸಮಸ್ಯೆ ಮಾತ್ರವಲ್ಲದೆ, ಕೂದಲಿನ ಮಾಯಿಶ್ಚರ್ ಸಹ ಸಂಪೂರ್ಣ ಹಿಂಗಿ ಹೋದ ಕಾರಣ, ಅವಳ ಕೂದಲು ಸಂಪೂರ್ಣ ನಿರ್ಜೀವ ಆಗಿರುತ್ತದೆ. ಆದರೂ ಆಕೆ ಯಾವುದೋ ಒಂದೇ ಬಗೆಯ ಶ್ಯಾಂಪೂ ಉಪಯೋಗಿಸುತ್ತಾ, ಸುಮ್ಮನಾಗಿ ಬಿಟ್ಟಿರುತ್ತಾಳೆ. ಹೀಗಾದಾಗ ನೀವು ಖಂಡಿತಾ ಆಕೆಗೆ ಹೇರ್ ಟ್ರೀಟ್ ಮೆಂಟ್ ಗಿಫ್ಟ್ ನೀಡಿ, ಅವಳ ಹೊಂಗೂದಲು ಮರಳಿ ಬರುವಂತೆ ಮಾಡಿ. ಇದಕ್ಕಾಗಿ ನೀವು ಅಮ್ಮನಿಗೆ ಹೇರ್ ಮಾಸ್ಕ್, ಹೇರ್ ಕಿಟ್ ಗಳ ಗಿಫ್ಟ್ ನೀಡಿ. ಇದರಲ್ಲಿ ಬಹೂಪಯೋಗಿ ಶ್ಯಾಂಪೂ, ಕಂಡೀಶನರ್, ಸ್ಕ್ರಬ್, ಹೇರ್ ಮಾಸ್ಕ್ ಇತ್ಯಾದಿ ತುಂಬಿರುತ್ತವೆ. ಇದರಿಂದ ಅವಳ ಕೇಶ ಸಂರಕ್ಷಣೆ ಪರಿಪೂರ್ಣ ಆಗಲಿದೆ. ತಲೆಯ ಸ್ಕಾಲ್ಪ್ ನಿಂದ ಕೊಳೆ, ಡೆಡ್ ಸ್ಕಿನ್ ತೊಲಗಿಸಲಿಕ್ಕೂ ಅನುಕೂಲಕರ. ಹಾಗೆಯೇ ಅವಳ ಕೂದಲನ್ನು ಸಾಫ್ಟ್ ಶೈನಿ, ಮಾಯಿಶ್ಚರೈಸ್ಡ್ ಗೊಳಿಸುತ್ತವೆ. ಇದಕ್ಕಾಗಿ ನೀವು ಆಕೆಗೆ ಕೆಫೀನ್, ಮಾಮಾಸ್ ಅರ್ಥ್, ಪಾಲೇಂನಂಥ ಬ್ರಾಂಡ್ಸ್ ಗಳಿಂದ ಹೇರ್ ಪ್ರಾಡಕ್ಟ್ಸ್ ಗಿಫ್ಟ್ ನೀಡಬಹುದು.
ರಿಂಕಲ್ ಕ್ರೀಂ
ವಯಸ್ಸು ಹೆಚ್ಚಿದಂತೆಲ್ಲ ಆಕೆಯ ಕಂಗಳ ಕೆಳಗೆ ಕಪ್ಪು ಉಂಗುರ, ಸುಕ್ಕು ನಿರಿಗೆಗಳ ಸಮಸ್ಯೆ ಹೆಚ್ಚಾಗುತ್ತವೆ. ಇದು ಅವಳ ಅಂದ ಚೆಂದ ಕುಗ್ಗಿಸಿ, ಅಕಾಲಿಕ ವೃದ್ಧಾಪ್ಯ ತಂದೊಡ್ಡುತ್ತವೆ.
ಇದಕ್ಕಾಗಿ ಆಕೆ ಒಂದಿಷ್ಟು ಏನೋ ಮನೆಮದ್ದು ಮಾಡಿಕೊಂಡು ಸುಮ್ಮನಾಗುತ್ತಾಳೆ. ಅದರಿಂದ ಅವಳ ಹೆಚ್ಚಿನ ಸಮಸ್ಯೆಗಳೇನೂ ನಿವಾರಣೆ ಆಗದು. ಹೀಗಾಗಿ ಅವಳ ಮುಖ ಹಿಂದಿನಂತೆ ಕಳೆಗಟ್ಟಲು, ಈ ಸಂದರ್ಭದಲ್ಲಿ ಆಕೆಗೆ ರಿಂಕಲ್ ಫ್ರೀ ಕ್ರೀಂ ಗಿಫ್ಟ್ ನೀಡಿ. ಈ ಕ್ರೀಮುಗಳನ್ನು ಕಂಡ ತಕ್ಷಣ ಇದೆಷ್ಟು ದುಬಾರಿಯೋ ಎಂದು ಆಕೆ ಗಾಬರಿಗೊಳ್ಳಬಹುದು. ಹಾಗೇನಿಲ್ಲ ಎಂದು ಅವಳಿಗೆ ಸಮಾಧಾನ ಹೇಳಿ. ಇದಕ್ಕಾಗಿ ನೀವು ಹಿಮಾಲಯ, ಒಝಿಲಾ, ಪಿಲಿಗ್ರಿಂ ರಿಂಕಲ್ಸ್, ಮಾಮಾಸ್ ಅರ್ಥ್, ಗಾರ್ನಿಯರ್ ಸ್ಕಿನ್ ನ್ಯಾಚುರಲ್ಸ್, ಪಾಂಡ್ಸ್ ಏಜ್, ಓಲೆ ಇತ್ಯಾದಿ ಬೇರೆ ಬೇರೆ ಬ್ರಾಂಡ್ ಗಳ ರಿಂಕಲ್ ಫ್ರೀ ಕ್ರೀಂ ಗಿಫ್ಟ್ ಕೊಡಿಸಿ. ತನ್ನ ಕುರಿತಾಗಿ ಇಷ್ಟೆಲ್ಲ ಕಾಳಜಿ ವಹಿಸುವ ಮಗಳನ್ನು ಕಂಡು ಯಾವ ಪ್ರೌಢ ತಾಯಿಗೆ ತಾನೇ ಹೆಮ್ಮೆ ಎನಿಸದು? ಹ್ಯಾಪಿ ಮದರ್ಸ್‌ಡೇ!
– ಪ್ರತಿನಿಧಿ