ರಾಘವೇಂದ್ರ ಅಡಿಗ ಎಚ್ಚೆನ್.,

ಪ್ರೇಕ್ಷಕರು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದ ‘ಉತ್ತರಕಾಂಡ’ ಸಿನಿಮಾದ ಕೆಲಸಗಳು ಸದ್ಯಕ್ಕೆ ನಿಂತಿವೆ. ಅದಕ್ಕೆ ಕಾರಣ ಏನು ಎಂಬುದನ್ನು ನಿರ್ದೇಶಕ ರೋಹಿತ್ ಪದಕಿ  ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ವಿವರಿಸಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಶಿವರಾಜ್ಕುಮಾರ್, ಡಾಲಿ ಧನಂಜಯ ಮುಂತಾದವರಿಗೆ ಪ್ರಮುಖ ಪಾತ್ರವಿದೆ. ಶಿವರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಶೂಟಿಂಗ್ಗೆ ಬ್ರೇಕ್ ನೀಡಲಾಯಿತು ಎಂದು ರೋಹಿತ್ ಪದಕಿ ಮತ್ತು ಕಾರ್ತಿಕ್ ಗೌಡ ಹೇಳಿದ್ದಾರೆ. ‘ಶಿವಣ್ಣ ಅವರ ಆ್ಯಕ್ಷನ್ ಸನ್ನಿವೇಶಗಳು ಈ ಸಿನಿಮಾದಲ್ಲಿ ಜಾಸ್ತಿ ಇವೆ. ಹಾಗಾಗಿ ಅವರಿಗೆ ಸಮಯ ನೀಡಬೇಕು. ಅವರ ಜೊತೆ ಮಾತುಕತೆ ಮಾಡಿ ಮುಂದಿನ ಶೂಟಿಂಗ್ ಬಗ್ಗೆ ನಿರ್ಧಾರ ಮಾಡಬೇಕು’ ಎಂದು ರೋಹಿತ್ ಪದಕಿ ಹೇಳಿದ್ದಾರೆ.

download (1)

ಯುವರಾಜ್ ಕುಮಾರ್  ನಟನೆಯ ‘ಎಕ್ಕ’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭ ಆಗಿದೆ. ಟೀಸರ್ ಇನ್ನಿತರೆಗಳ ಬಿಡುಗಡೆ ಒಂದಾರ ಮೇಲೆ ಒಂದರಂತೆ ಆಗುತ್ತಿದೆ. ಇಂದು (ಜೂನ್ 19) ‘ಎಕ್ಕ’ ಸಿನಿಮಾದ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಯುವರಾಜ್ ಕುಮಾರ್ ಹಾಗೂ ಸಿನಿಮಾದ ಇತರೆ ನಟರುಗಳ ಜೊತೆಗೆ ಸಿನಿಮಾದ ಸಹ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸಹ ಹಾಜರಿದ್ದರು. ಇದೇ ಸಮಯದಲ್ಲಿ  ‘ಉತ್ತರಕಾಂಡ’ ಸಿನಿಮಾದ ಕುರಿತು ಪತ್ರಕರ್ತರ ಪ್ರಶ್ನೆಗೆ ನಿರ್ಮಾಪಕರು ಮೇಲಿನಂತೆ ಉತ್ತರಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ‘ಉತ್ತರಕಾಂಡ’ ಕೂಡ ಒಂದಾಗಿತ್ತು. ಕೆಆರ್‌ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಸದ್ಯದ ಶೂಟಿಂಗ್ ಕೂಡ ಆರಂಭ ಆಗಿತ್ತು. ಉತ್ತರ ಕರ್ನಾಟಕದ ರಗಡ್ ಸ್ಟೋರಿಗಳನ್ನು ತೆರೆಮೇಲೆ ತರುವುದಕ್ಕೆ ನಿರ್ದೇಶಕ ರೋಹಿತ್ ಪದಕಿ ಉತ್ಸಾಹದಿಂದಲೇ ಕೆಲಸ ಆರಂಭಿಸಿದ್ದರು. ಆದರೆ ಇದೀಗ ಈ ಬಗ್ಗೆ ಅಪ್ ಡೇಟ್ ಕೊಟ್ಟಿರುವ ಚಿತ್ರತಂಡ  ‘ಉತ್ತರಕಾಂತ’ ಸಿನಿಮಾದ ಶೂಟಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಸಿನಿಮಾ ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟ ಪಡಿಸಿದೆ.  ಇನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ‘ಉತ್ತರಕಾಂಡ’ ಸಿನಿಮಾದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು. ರಕ್ತ ಚರಿತ್ರೆ ಬರೆಯಲು ಹೊರಟಿದ್ದ ಶಿವಣ್ಣ ‘ಮಾಲೀಕ’ನಾಗಿ ಮಾಸ್ ಅವತಾರ ತಾಳಿದ್ದರು. ಇದು ಶಿವಣ್ಣನ ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು.

download (1) (1)

ವಿಜಯ್ ಕಿರಗಂದೂರು ಅವರು ಪ್ರಸ್ತುತ ಪಡಿಸಿದ್ದ ಚಿತ್ರ “ಉತ್ತರಕಾಂಡ ” ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುವವರಿದ್ದರು, ಡಾಲಿ ಧನಂಜಯ  ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದರು ಈ ಚಿತ್ರವನ್ನು ರೋಹಿತ್ ಪದಕಿ್ನಿರ್ದೇಶಿಸುತ್ತಿದ್ದರು ರತ್ನನ್ ಪ್ರಪಂಚ ಯಶಸ್ಸಿನ ನಂತರ ಕೆ.ಆರ್.ಜಿ ಸ್ಟುಡಿಯೋಸ್ , ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಅವರ ತಂಡ ಮತ್ತೊಮ್ಮೆ ಕೈ ಜೋಡಿಸಿತ್ತು. ಚಿತ್ರದ ಮುಹೂರ್ತವು ನವೆಂಬರ್ ೬, ೨೦೨೨ರಂದು ನಡೆದಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ