ಪ್ರ : ನನಗೆ 40 ವರ್ಷ. ಚಳಿಗಾಲದಲ್ಲಿ ಕೀಲುಗಳಲ್ಲಿ ಹಿಡಿದುಕೊಂಡಂತಾಗುವಿಕೆ ಹಾಗೂ ನೋವು ಭಾಸವಾಗುತ್ತದೆ. ವಿಶ್ರಾಂತಿಯ ಬಳಿಕ ನೋವು ಒಮ್ಮೆ, ಗಂಭೀರವಾಗಿರುತ್ತದೆ. ಕಾರಣದಿಂದ ಏನು ಮಾಡಲು ಆಗುವುದಿಲ್ಲ. ಇದಕ್ಕೆ ಏನಾದರೂ ಪರಿಹಾರ ಸೂಚಿಸಿ.

ಉ : ನಿಮ್ಮ ವಯಸ್ಸಿನವರಿಗೆ ಮೂಳೆಗಳ ಸಮಸ್ಯೆ ಉಂಟಾಗುವಿಕೆ ಸಾಮಾನ್ಯ. ಚಳಿಗಾಲದಲ್ಲಿ ಬಿಸಿಲಿನ ಕೊರತೆಯ ಕಾರಣದಿಂದ ಮೂಳೆಗಳು ಹಾಗೂ ಸಂದುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚುತ್ತವೆ. ಆ ಕಾರಣದಿಂದ ನೋವು ಹಾಗೂ ಹಿಡಿದಕೊಂಡಂತಾಗುವಿಕೆಯ ಪ್ರಮಾಣ ಹೆಚ್ಚುತ್ತದೆ.

ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಸಾಧಾರಣ ಬೆಚ್ಚಗಿನ ತೈಲದಿಂದ ಮಸಾಜ್‌ ಮಾಡಿಸಿಕೊಳ್ಳಿ. ಸಾಧಾರಣ ವ್ಯಾಯಾಮದಿಂದ ಮೂಳೆಗಳು ಹಿಡಿದುಕೊಂಡಂತಾಗುವಿಕೆ ಸಮಸ್ಯೆ ನಿವಾರಣೆಯಾಗಿ ನೋವಿನಿಂದ ನಿರಾಳತೆ ದೊರಕುತ್ತದೆ. ನಿಮ್ಮ ವಯಸ್ಸು ಹೆಚ್ಚಿಗೆ ಇರುವುದರಿಂದ ನಿಮಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇದೆ. ಹೀಗಾಗಿ ಮೂಳೆ ತಜ್ಞರನ್ನು ಭೇಟಿಯಾಗಿ.

 

ಪ್ರ : ನಾನು 23 ವರ್ಷದ ವಿವಾಹಿತ ಮಹಿಳೆ. ನನಗೊಬ್ಬ ಮಗನೂ ಇದ್ದಾನೆ. ನನ್ನ ತೂಕ ಮೊದಲಿನಿಂದಲೇ ಕಡಿಮೆ ಇದೆ. ಇತ್ತೀಚೆಗೆ ಅದು ಇನ್ನಷ್ಟು ಕಡಿಮೆಯಾಗಿ ಕೇವಲ 32 ಕಿಲೋ ಆಗಿದೆ. ಕುಟುಂಬದ ಎಲ್ಲರೂ ನಾನು ಸರಿಯಾಗಿ ಊಟತಿಂಡಿ ತಿನ್ನುವುದಿಲ್ಲ, ಖುಷಿಯಿಂದಿರುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಆದರೆ ನಾನು ಸರಿಯಾಗೇ ತಿನ್ನುತ್ತೇನೆ. ಆದರೆ ದೇಹ ಕುಗ್ಗುತ್ತಾ ಹೊರಟಿದೆ. ಇದು ಯಾವುದಾದರೂ ಆಂತರಿಕ ರೋಗದ ಲಕ್ಷಣ ಆಗಿರಬಹುದೆ? ತೂಕ ಹೆಚ್ಚಲು ಏನು ಮಾಡಬೇಕು ತಿಳಿಸಿ.

ಉ : ಯಾವುದೇ ಒಬ್ಬ ವ್ಯಕ್ತಿಯ ತೂಕ ಪ್ರಯತ್ನ ಮಾಡದೇ ತಂತಾನೇ ಕುಗ್ಗುತ್ತಾ ಹೋದರೆ, ಆ ವ್ಯಕ್ತಿಗೆ ದೈಹಿಕ ಅಥವಾ ಮಾನಸಿಕ ರೋಗ ಇರದೇ ಇದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನೀವು ನಿಮ್ಮ ಕುಟುಂಬ ವೈದ್ಯರು ಅಥವಾ ಇಂಟರ್ನಲ್ ಮೆಡಿಸಿನ್‌ ನ ತಜ್ಞ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ.

ಕರುಳಿನ ಹಲವು ಪ್ರಕಾರದ ರೋಗಗಳಲ್ಲಿ ಕರುಳಿನ ಪಚನಶಕ್ತಿ ದುರ್ಬಲಗೊಳ್ಳುತ್ತದೆ ಹಾಗೂ ಆಹಾರ ಕರುಳಿನಲ್ಲಿ ಪಚನವಾಗುವ ಬದಲಿಗೆ ದೇಹದಲ್ಲಿ ವ್ಯರ್ಥವಾಗಿ ಹೋಗುತ್ತದೆ. ಆ ಕಾರಣದಿಂದ ಈ ಸ್ಥಿತಿ ಉದ್ಭವಿಸಬಹುದು. ಮಧುಮೇಹ ವಿಪರೀತ ಸ್ಥಿತಿಗೆ ಹೋದಾಗಲೂ ಈ ಲಕ್ಷಣ ಕಂಡುಬರುತ್ತದೆ. ದೇಹದಲ್ಲಿ ಟಿಬಿ ಅಂದರೆ ಕ್ಷಯ ರೋಗ ಇದ್ದಾಗಲೂ ದೇಹ ಕೃಶವಾಗುತ್ತದೆ. ಕೆಲವು ಹಾರ್ಮೋನ್‌ ರೋಗಗಳು ಹೈಪೊಥೈರಾಯ್ಡಿಸಂ ಹಾಗೂ ಎಡಿಸನ್‌ ರೋಗದ ಸಂದರ್ಭದಲ್ಲೂ ತೂಕ ಕುಗ್ಗುತ್ತಾ ಹೋಗುತ್ತದೆ.  ಕೆಲವು ವ್ಯಕ್ತಿಗಳಲ್ಲಿ ಕ್ಯಾನ್ಸರ್‌ ನಂತಹ ರೋಗ ಕೂಡ ಅದಕ್ಕೆ ಕಾರಣವಾಗಬಹುದು.

ಕೆಲವು ಜನರಲ್ಲಿ ಮಾನಸಿಕ ಅತೃಪ್ತಿ, ಉದಾಸತನ, ಖಿನ್ನತೆಯಿಂದಲೂ ಹೀಗಾಗಬಹುದು. ಮತ್ತೆ ಕೆಲವರಲ್ಲಿ ಇದೇ ಲಿವರ್‌, ಕಿಡ್ನಿ ಅಥವಾ ಹಾರ್ಟ್‌ ಫೆಲ್ಯೂರ್‌ ಗೂ ಸಂಬಂಧಿಸಿದ್ದಾಗಿ ಇರಬಹುದು. ನೀವು ಸಮಸ್ಯೆಯಿಂದ ಹೊರಬರಲು ಎಲ್ಲಕ್ಕೂ ಮೊದಲು ಅದಕ್ಕೆ ಏನು ಕಾರಣ ಎಂದು ಕಂಡುಕೊಳ್ಳಬೇಕು. ಆ ಬಳಿಕವೇ ಅದಕ್ಕೆ ಏನು ಉಪಾಯ ಎಂದು ಹೇಳಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ