ಪ್ರ : ನನ್ನ ವಯಸ್ಸು 27. ನನಗೆ ಹೆವಿ ವರ್ಕ್ ಔಟ್ ಮಾಡುವುದು ಇಷ್ಟ.... ಆದರೆ ಚಳಿಯ ಸಂದರ್ಭದಲ್ಲಿ ರನ್ನಿಂಗ್ ಮಾಡುವಾಗ ನನಗೆ ಮಂಡಿಗಳಲ್ಲಿ ನೋವು ಬಾಧಿಸುತ್ತದೆ. ಆ ಕಾರಣದಿಂದ ನನಗೆ ಸರಿಯಾಗಿ ವರ್ಕ್ ಔಟ್ ಮಾಡಲು ಆಗುವುದಿಲ್ಲ. ಇದು ಹೇಗಾಗುತ್ತದೆ ಹಾಗೂ ಅದರಿಂದ ಹೇಗೆ ನಿರಾಳತೆ ಪಡೆದುಕೊಳ್ಳಬೇಕು?
ಉ : ನೀವು ಹೆವಿ ವರ್ಕ್ ಔಟ್ ಮಾಡುವುದರಿಂದ ನಿಮ್ಮ ಮಂಡಿಯ ಕೆಳಭಾಗದ ಲಿಗಮೆಂಟ್ ಗಳಲ್ಲಿ ಅದರ ಪ್ರಭಾವ ಬೀರುತ್ತದೆ. ನಿಮ್ಮ ವರ್ಕ್ ಔಟ್ ನ್ನು ಸ್ವಲ್ಪ ಕಡಿಮೆ ಮಾಡಲು ಪ್ರಯತ್ನಿಸಿ. ನೀವು ವರ್ಕ್ ಔಟ್ ನ್ನು ಜಿಮ್ ನಲ್ಲಿ ಮಾಡುತ್ತಿದ್ದರೆ, ನಿಮಗೆ ವಿಟಮಿನ್ `ಡಿ' ಕೊರತೆ ಆಗಬಹುದು. ಏಕೆಂದರೆ ಅದು ಬಿಸಿಲು ಕಾಯಿಸುವುದರಿಂದ ದೊರಕುತ್ತದೆ. ನೀವು ಬಿಸಿಲಿನಲ್ಲಿ ಓಡುವ ಅಭ್ಯಾಸ ಮಾಡುವುದರಿಂದ ನಿಮ್ಮ ಲಿಗಮೆಂಟ್ ನಲ್ಲಿ ಆಗುವ ನೋವು ಕಡಿಮೆಯಾಗುತ್ತದೆ. ವರ್ಕ್ ಔಟ್ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಶೂಗಳನ್ನು ಧರಿಸಿ. ಏಕೆಂದರೆ ಅವನ್ನು ಧರಿಸಿದಾಗ ನಿಮಗೆ ಕಂಫರ್ಟ್ ಅನಿಸಬೇಕು. ಅದರಿಂದ ಯಾವುದೇ ಬಗೆಯ ನೋವು ಅನಿಸಬಾರದು. ಇದರ ಹೊರತಾಗಿ ನಿಮ್ಮ ಆಹಾರ ಹೇಗಿರಬೇಕು ಎಂದರೆ, ಅದರಲ್ಲಿ ಎಲ್ಲ ಬಗೆಯ ಮಿನರಲ್ಸ್ ಜೊತೆಗೆ ವಿಟಮಿನ್ `ಡಿ' ಕೂಡ ಹೇರಳ ಪ್ರಮಾಣದಲ್ಲಿ ಸಿಗಬೇಕು. ಓಟದ ಬಳಿಕ ಸಾಧಾರಣ ಬೆಚ್ಚಗಿನ ನೀರಿನಿಂದ ಕಾವು ಕೊಡಬೇಕು. ಅದರಿಂದಲೂ ನೋವಿನಿಂದ ನಿರಾಳತೆ ದೊರಕುತ್ತದೆ.
ಪ್ರ : ನಾನು 22 ವರ್ಷದವಳು. 2 ವರ್ಷದಿಂದ ನನಗೆ ಬೆನ್ನುನೋವಿನ ಸಮಸ್ಯೆಯಿದೆ. ಆ ನೋವು ಕುತ್ತಿಗೆಯಿಂದ ಹಿಡಿದು ಕೆಳಭಾಗದ ತನಕ ತಲುಪುತ್ತದೆ. ಹೆಚ್ಚು ಹೊತ್ತು ಕುಳಿತುಕೊಂಡಾಗ, ಎದ್ದು ನಿಂತಾಗ, ನಡೆಯುವಾಗ ಬೆನ್ನಿನಿಂದ ನೋವು ಉಂಟಾಗುತ್ತದೆ. ಬೇಸಿಗೆಯಲ್ಲಿ ನೋವು ಸಹಿಸಿಕೊಳ್ಳುತ್ತೇನೆ. ಆದರೆ ಚಳಿಗಾಲದಲ್ಲಿ ನೋವು ಅಸಹನೀಯವಾಗುತ್ತದೆ. ಮಲಗಿದಾಗ ನಿರಾಳತೆ ದೊರಕುತ್ತದೆ. ಆದರೆ ಯಾವಾಗಲೂ ಮಲಗಿಕೊಂಡಿರುವುದು ಕಷ್ಟ. ಔಷಧಿಯಿಲ್ಲದೆ ನೋವಿನಿಂದ ಮುಕ್ತಿ ಕಂಡುಕೊಳ್ಳುವುದು ಹೇಗೆ?
ಉ : ಚಳಿಗಾಲದಲ್ಲಿ ಮೂಳೆ ಹಾಗೂ ಕೀಲುಗಳ ನೋವು ಅಧಿಕವಾಗುತ್ತದೆ. ಚಿಕ್ಕ ವಯಸ್ಸಿನವರಲ್ಲಿ ಈ ಸಮಸ್ಯೆ ಬಾಧಿಸುವುದು ಕಡಿಮೆ. ಆದರೆ ತಪ್ಪು ಅಭ್ಯಾಸಗಳಿಂದ ಈ ಸಮಸ್ಯೆಗೆ ತುತ್ತಾಗುತ್ತಾರೆ. ನೀವು ಲೈಫ್ ಸ್ಟೈಲ್ ನಲ್ಲಿ ಬದಲಾವಣೆ ತಂದುಕೊಳ್ಳುವುದು ಅತ್ಯವಶ್ಯ. ಒಳ್ಳೆಯ ಆಹಾರ, ನಿದ್ರೆ, ಕುಳಿತುಕೊಳ್ಳುವ ಭಂಗಿ ಸರಿಯಾಗಿರಬೇಕು. ಎಕ್ಸರ್ ಸೈಜ್ ನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನಿಮ್ಮ ಸಮಸ್ಯೆ ಗಂಭೀರವಾಗಿದ್ದು, ನೀವು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ನೀವು ಸರ್ವೈಕಲ್ ಸಮಸ್ಯೆಗೆ ತುತ್ತಾಗಿಲ್ಲ ತಾನೇ ಎಂದು ಪರೀಕ್ಷಿಸಿಕೊಳ್ಳಿ. ನೀವು ಸೂಕ್ತ ಔಷಧಿ ಹಾಗೂ ಫಿಸಿಯೋಥೆರಪಿ ಸಹಾಯದಿಂದ ನೋವಿನಿಂದ ಮುಕ್ತರಾಗಬಹುದು. ಬೆಚ್ಚಗಿನ ಬಟ್ಟೆ ಧರಿಸಿ, ಬೆನ್ನಿಗೆ ಬಿಸಿಕಾವು ಕೊಡಿ, ಮಲ್ಟಿ ವಿಟಮಿನ್ ಟ್ಯಾಬ್ಲೆಟ್ ಸೇವನೆಯಿಂದಲೂ ನೋವಿನಿಂದ ನಿರಾಳತೆ ಕಂಡುಕೊಳ್ಳಬಹುದು.