ಪ್ರ : ಎಎಚ್ ಕ್ರೀಮಿನಿಂದ ಕಪ್ಪು ವಲಯಗಳು ಹಾಗೂ ಕಲೆಗಳನ್ನು ನಿವಾರಿಸಬಹುದೇ?

ಉ : ಎಎಚ್‌ಎ ಅಂದರೆ `ಅಲ್ಟ್ರಾ ಹೈಡ್ರಾಕ್ಸಿ ಆ್ಯಸಿಡ್‌' ಕ್ರೀಮಿನಲ್ಲಿ ಹಣ್ಣುಗಳಿಂದ ತೆಗೆಯಲಾದ ಆ್ಯಸಿಡ್‌ ಇರುತ್ತದೆ. ಅದು ತ್ವಚೆಯಲ್ಲಿ ಕೊಲೋಜೆನ್‌ ತೀವ್ರವಾಗಿ ಉತ್ಪನ್ನಗೊಂಡು, ಅದರ ಮೇಲೆ ಸುಕ್ಕುಗಳು ಉಂಟಾಗದಂತೆ ತಡೆಯುತ್ತದೆ. ಕಣ್ಣುಗಳ ಕೆಳಗಿನ ಕಪ್ಪುಛಾಯೆಯನ್ನು ದೂರಗೊಳಿಸಲು ನೆರವಾಗುತ್ತದೆ. ಈ ಕ್ರೀಮ್ ನ ಬಳಕೆಯಿಂದ ಎಕ್ಸ್ ಪೋಲಿಯೇಶನ್‌ ಮತ್ತು ಹೊಸ ಜೀವಕೋಶಗಳ ಹುಟ್ಟು ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಅದರಿಂದಾಗಿ ತ್ವಚೆಯಲ್ಲಿ ಹೊಸತನ ಬರುತ್ತದೆ. ಪ್ರತಿ ರಾತ್ರಿ ತ್ವಚೆಯನ್ನು ಸ್ವಚ್ಛಗೊಳಿಸಲು ಬೆರಳಿನಲ್ಲಿ ಕ್ರೀಮ್ ಲೇಪಿಸಿಕೊಂಡು ಕಣ್ಣುಗಳು ನಾಲ್ಕೂ ಬದಿ ಗೋಲಾಕಾರದಲ್ಲಿ ಮಸಾಜ್‌ ಮಾಡಿ. ಈ ಕ್ರೀಮ್ ನ ಪ್ರತಿದಿನದ ಬಳಕೆಯಿಂದ ಸೈನ್‌ ಆಫ್‌ ಏಜಿಂಗ್‌ ಕಡಿಮೆಯಾಗುತ್ತದೆ ಮತ್ತು ತ್ವಚೆ ಹೊಳಪುಳ್ಳದ್ದಾಗುತ್ತದೆ. ಆದರೆ ಕ್ರೀಮ್ ಕಣ್ಣೊಳಗೆ ಹೋಗದಂತೆ ಎಚ್ಚರ ವಹಿಸಿ

ಪ್ರ : ನನಗೆ ನೇಲ್ ಪಾಲಿಶ್ಲೇಪಿಸಿಕೊಳ್ಳುವುದು ಬಹಳ ಹಿತವೆನಿಸುತ್ತದೆ. ಆದರೆ ಉಗುರಿನ ಪಾಲಿಶ್ಹೆಚ್ಚು ದಿನ ಉಳಿಯುವುದಿಲ್ಲ. ಉಗುರಿನ ಮೇಲೆ ಹೆಚ್ಚು ದಿನಗಳ ಕಾಲ ಉಳಿಯುವ ಉಪಾಯ ತಿಳಿಸಿ.

ಉ : ಹಲವು ಬಣ್ಣಗಳಲ್ಲಿ ಲಭ್ಯವಿರುವ ನೇಲ್ ‌ಪಾಲಿಶ್‌ ಲೇಪಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಎಷ್ಟೋ ಸಲ ಏನಾಗುತ್ತದೆಯೆಂದರೆ, ನೇಲ್ ಪಾಲಿಶ್‌ ಲೇಪಿಸಿಕೊಂಡ ಬಳಿಕ, ನೀರಿಗೆ ಸಂಬಂಧಪಟ್ಟ ಯಾವುದಾದರೂ ಕೆಲಸ ಮಾಡಿದಾಗ ನೇಲ್ ಪಾಲಿಶ್‌ ಹೊರಟುಹೋಗುತ್ತದೆ. ಅದು ಏಕಕಾಲಕ್ಕೆ ಹೊರಟು ಹೋಗುವುದಿಲ್ಲ ಹಾಗೂ ಉಗುರುಗಳು ಚೆನ್ನಾಗಿ ಕಾಣುವುದಿಲ್ಲ. ಇಂತಹದರಲ್ಲಿ ಪರ್ಮನೆಂಟ್‌ ಜೆಲ್ ‌ನೇಲ್ ‌ಪಾಲಿಶ್‌ ಪರ್ಮನೆಂಟ್‌ ಮೇಕಪ್‌ ನ ಒಂದು ಭಾಗವಾಗಿದೆ. ಅದರಿಂದ ಉಗುರನ್ನು ಕೃತಕವಾಗಿ ಸುಂದರಗೊಳಿಸಬಹುದು. ಅದು 3-10 ವಾರಗಳ ತನಕ ಉಳಿಯುತ್ತದೆ.

ಪ್ರ : ಇತ್ತೀಚಿನ ದಿನಗಳಲ್ಲಿ ನನಗೆ ಲೈಟ್‌ ಮೇಕಪ್‌ ಮಾಡಿಕೊಳ್ಳುವುದು ಇಷ್ಟವಾಗುತ್ತಿದೆ. ಅದರ ವಿಧಾನವನ್ನು ತಿಳಿಸಿ.

ಉ : ಮೇಕಪ್‌ ಮಾಡಿಕೊಳ್ಳುವ ಮೊದಲು ಮುಖ ಸ್ವಚ್ಛವಾಗಿರಲಿ. ಟೋನರ್‌ ಬಳಸಿ ಮೇಕಪ್‌ ಮಾಡಿಕೊಳ್ಳುವುದರಿಂದ ಮೇಕಪ್ ಹರಡುವುದಿಲ್ಲ. ಲೈಟ್‌ ಮೇಕಪ್‌ ಮಾಡಿಕೊಳ್ಳುವಾಗ ಕಾಜಲ್ ನ್ನು ಅವಶ್ಯ ಬಳಸಿ. ಗಾಢ ವರ್ಣದ ಶ್ಯಾಡೊ ಲೇಪಿಸುವುದರಿಂದ ದೂರ ಇರಿ. ಹಾಗೊಂದು ವೇಳೆ ಬಳಸಲೇಬೇಕಿದ್ದರೆ, ನ್ಯೂಟ್ರಲ್ ಕಲರ್‌ ಬಳಸಿ. ಲೈಟ್‌ ಕಲರ್‌ ಲಿಪ್‌ ಸ್ಟಿಕ್‌ ನ್ನು ಗ್ಲಾಸ್‌ ಜೊತೆಗೆ ಲೇಪಿಸುವುದು ಒಳ್ಳೆಯದು. ಗ್ಲಿಟರ್‌ ನ್ನು ಬಳಸಲೇಬೇಡಿ. ಹಗಲಿನಲ್ಲಿ ಬಿಸಿಲು ಹಾಗೂ ಉಷ್ಣತೆಯಿಂದ ಮೇಕಪ್‌ ಹಾಳಾಗಬಹುದು. ಹೀಗಾಗಿ ಯಾವಾಗಲೂ ವಾಟರ್‌ ಪ್ರೂಫ್‌ ಬ್ಯೂಟಿ ಪ್ರಾಡಕ್ಟ್ ಗಳನ್ನೇ ಉಪಯೋಗಿಸಿ. ಮೇಕಪ್‌ ಮಾಡಿಕೊಳ್ಳುವ 20 ನಿಮಿಷ ಮೊದಲೇ ಸನ್‌ ಸ್ಕ್ರೀನ್‌ ಲೇಪಿಸಿಕೊಳ್ಳುವುದನ್ನು ಮರೆಯಬೇಡಿ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ