ಕೂದಲಿನ ಸೌಂದರ್ಯ ಸದಾ ಉಳಿಸಿಕೊಳ್ಳಬೇಕೆಂದರೆ, ಅದನ್ನು ಹೀಗೆ ನ್ಯಾಚುರಲ್ ಆಗಿ ಆರೈಕೆ ಮಾಡಬೇಕಾಗುತ್ತದೆ……!
ಕಾಲ ಎಷ್ಟೇ ಆಧುನಿಕವಾಗಿ ಬದಲಾಗಲಿ, ಆದರೆ ಉದ್ದನೆಯ, ದಟ್ಟ, ಒತ್ತಾದ, ಕಾಂತಿಯುತ, ಕಡುಕಪ್ಪು ಕೂದಲಿನ ಬೇಡಿಕೆ ಮಾತ್ರ ನಿರಂತರ. ಆದರೆ ನಮ್ಮ ಈ ಬಿಝಿ ಲೈಫ್ ಸ್ಟೈಲ್ ಮಧ್ಯೆ ಕೂದಲನ್ನು ಸದಾ ಧೂಳುಮಣ್ಣು, ಪರಿಸರ ಮಾಲಿನ್ಯ, ಕೆಮಿಕಲ್ ಯುಕ್ತ ಹೇರ್ ಕೇರ್ ಪ್ರಾಡಕ್ಟ್ಸ್ ನ ಬಳಕೆ ಹಾಳು ಮಾಡುತ್ತಲೇ ಇರುತ್ತವೆ. ಹೀಗಾಗಿ ಕೂದಲಿನ ನ್ಯಾಚುರಲ್ ಬ್ಯೂಟಿ, ಶೈನ್, ಸಾಫ್ಟ್ ನೆಸ್, ವಾಲ್ಯೂಂ….. ಎಲ್ಲ ಕಡಿಮೆ ಆಗುತ್ತಾ ಹೋಗುತ್ತದೆ. ಸಹಜವಾಗಿ ಇದು ಕೇಶ ಸೌಂದರ್ಯಕ್ಕೆ ಧಕ್ಕೆ ತರುತ್ತದೆ. ಹೀಗಿರುವಾಗ ನೀವು ನಿಮ್ಮ ಕೂದಲನ್ನು ಇನ್ನಷ್ಟು ಸುಂದರ ಅಪ್ಪಟ ನೈಸರ್ಗಿಕ ಘಟಕಗಳಿಂದ ತುಂಬಿಸಬೇಕು. ಉದಾ:
ಗ್ರೀನ್ ಆ್ಯಪಲ್ : ಇದರಲ್ಲಿ ಹೇರಳ ವಿಟಮಿನ್, ಸಿ, ಫೈಬರ್, ಪ್ರೋಟೀನ್, ಪೊಟಾಶಿಯಂ, ಕಬ್ಬಿಣಾಂಶಗಳು ತುಂಬಿರುವ ಕಾರಣ ಇದು ಕೂದಲಿನ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ. ಇದರಿಂದ ದೇಹದ ಪೌಷ್ಟಿಕತೆಯ ಸಾಮಗ್ರಿ ಸಹಜವಾಗಿ ಸಿಗುತ್ತದೆ. ಗ್ರೀನ್ ಆ್ಯಪಲ್ ಎಕ್ಸ್ ಟ್ರಾಕ್ಟ್ ನಿಮ್ಮ ತಲೆಯ ನೆತ್ತಿಯನ್ನು ಕ್ಲೀನ್ ಮಾಡುವುದರ ಜೊತೆ, ನಿಮ್ಮ ಕೂದಲಿನ ಹೆಚ್ಚುವರಿ ಜಿಡ್ಡಿನಾಂಶ ತೊಲಗಿಸಿ, ಕೂದಲಿಗೆ ಫ್ರೆಶ್ ಲುಕ್ಸ್ ಒದಗಿಸುತ್ತದೆ. ಇದರಲ್ಲಿ ಕೂದಲನ್ನು ಮಾಯಿಶ್ಚರೈಸ್ ಗೊಳಿಸುವ ಗುಣಗಳಿದ್ದು, ಅದರಿಂದ ಹಾಳಾದ ಕೂದಲು ರಿಪೇರಿ ಆಗುತ್ತದೆ. ಜೊತೆಗೆ ಇದು ನಿಮ್ಮ ಕೂದಲಿನ ವಾಲ್ಯೂಂ ಹೆಚ್ಚಿಸುವಲ್ಲಿಯೂ ಪೂರಕ. ಅದನ್ನು ಸಿಲ್ಕಿ, ಶೈನಿಗೊಳಿಸಲು ಸಹಕಾರಿ.
ಆ್ಯಲೋವೇರಾ : ಇದರಲ್ಲಿ ಪ್ರೋಟೋಲಿಟಿಕ್ ಎಂಜೈಮ್ಸ್ ತುಂಬಿದ್ದು, ಅದು ನೆತ್ತಿಯ ಮೃತ ಜೀವಕೋಶ ತೊಲಗಿಸಲು ಸಹಕಾರಿ. ಹೀಗಾಗಿ ನಿಮ್ಮ ನೆತ್ತಿಯಲ್ಲಿನ ಅನಗತ್ಯ ಹೊಟ್ಟು, ಉರಿ, ತುರಿಕೆ ಇತ್ಯಾದಿ ತೊಲಗಿಸುತ್ತದೆ. ಇದು ಉತ್ತಮ ಹೇರ್ ಕಂಡೀಶನರ್ ಆಗಿಯೂ ಕೆಲಸ ಮಾಡುತ್ತದೆ. ಏಕೆಂದರೆ ಇದು ಕೂದಲಿನ ಬೆಳವಣಿಗೆಗೆ ಸಹಕರಿಸಿ, ಮಾಲಿನ್ಯ ಕೆಮಿಕ್ಲ್ಸ ಯುಕ್ತ ಹೇರ್ ಕೇರ್‌ಪ್ರಾಡಕ್ಟ್ಸ್ ನ ಬಳಕೆಯ ಕಾರಣ ಉಂಟಾದ ಹಾನಿಗಳನ್ನೂ ತೊಲಗಿಸಿ, ಕೂದಲಿಗೆ ರೇಷ್ಮೆಯಂಥ ಮೃದುತ್ವ ನೀಡುತ್ತದೆ. ಇದರಲ್ಲಿ ವಿಟಮಿನ್ಸ್‌ಹಾಗೂ ಫಾಲಿಕ್ ಆ್ಯಸಿಡ್ ಇರುವ ಕಾರಣ, ಇದು ಕೂದಲಿನ ಉದುರುವಿಕೆ ತಡೆಗಟ್ಟುವಲ್ಲೂ ಎತ್ತಿದ ಕೈ!
ಟೀ ಟ್ರೀ ಆಯಿಲ್ : ಶ್ಯಾಂಪೂನಲ್ಲಿ ಟೀ ಟ್ರೀ ಆಯಿಲ್ ಬೆರೆತಿದ್ದರೆ, ಅದು ಕೂದಲಿಗೆ ಕೆಮಿಕಲ್ಸ್ ನಿಂದಾಗುವ ಹಾನಿ ತಪ್ಪಿಸಿ, ನೆತ್ತಿಯಿಂದ ಡೆಡ್ ಸ್ಕಿನ್ ತೊಲಗಿಸಲು ಸಹಕರಿಸುತ್ತದೆ. ವಿಶೇಷ ಎಂದರೆ, ಇದು ಕೂದಲನ್ನು ಆರೋಗ್ಯಕರವಾಗಿಸಿ ಮಾಯಿಶ್ಚರೈಸ್ ಗೊಳಿಸುತ್ತದೆ. ಇದರಿಂದ ಹೆಲ್ದಿ ಸೆಲ್ಸ್ ಪ್ರಮೋಟ್ ಗೊಂಡು ಕೂದಲು ಉದ್ದ, ದಟ್ಟವಾಗಿ ಬೆಳೆಯುತ್ತದೆ. ಇದು ರಕ್ತದ ಪ್ರವಾಹ ಸುಧಾರಿಸಿ, ನ್ಯೂಟ್ರಿಯೆಂಟ್ಸ್ ನ್ನು ಹೇರ್ ಫಾಲಿಕ್ಸ್ ವರೆಗೂ ತಲುಪಿಸುವಲ್ಲಿ ಸಹಕಾರಿ. ನೆತ್ತಿಯ Ph ಲೆವೆಲ್ ನ್ನು ಬ್ಯಾಲೆನ್ಸ್ ಆಗಿಡುವಲ್ಲಿಯೂ ಪೂರಕ.
ನಿಂಬೆ : ಇದರಲ್ಲಿನ ಸಿಟ್ರಿಕ್ ಆಮ್ಲ, ನ್ಯಾಚುರಲ್ ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಇದರಿಂದ ನಿಧಾನವಾಗಿ ನರೆಗೂದಲಿನ ಸಮಸ್ಯೆ ತಗ್ಗುತ್ತದೆ. ಇದರಲ್ಲಿನ ಆ್ಯಂಟಿ ಮೈಕ್ರೋಬಿಯಲ್ ಗುಣಗಳ ಕಾರಣ ಇದು ನೆತ್ತಿಯನ್ನು ಶುಭ್ರವಾಗಿಡಬಲ್ಲದು. ಜೊತೆಗೆ ಹೇರ್ ಫಾಲಿಕ್ಸ್ ನ್ನು ಟೈಟ್ ಮಾಡಿ, ಕೂದಲಿಗೆ ಹೊಟ್ಟು ಸೇರದಂತೆ ತಡೆಯುತ್ತದೆ. ಇದು ಕೊಲೋಜನ್ ಪ್ರೊಡಕ್ಷನ್ ನ್ನು ಸರಾಗಗೊಳಿಸಿ, ಹಾಳಾದ ಸ್ಕಿನ್ ಸೆಲ್ಸ್ ನ್ನು ರಿಪೇರಿ ಮಾಡುತ್ತದೆ. ಹೊಸ ಅಧ್ಯಯನದ ಪ್ರಕಾರ, ಇದು ನೆತ್ತಿಗೆ ನ್ಯಾಚುರಲ್ ಅಡ್ಜಸ್ಟರ್ ಆಗಿದೆ. ಹೀಗಾಗಿ ನಿಂಬೆಯುಕ್ತ ಶ್ಯಾಂಪೂವನ್ನು ಮಾತ್ರ ಕೊಂಡುಕೊಳ್ಳಿ.
ನೆಲ್ಲಿ : ನೀವು ನೆಲ್ಲಿ ಬೆರೆತ ಶ್ಯಾಂಪೂ ಬಳಸಿದ್ದೇ ಆದರೆ, ಇದು ನಿಮ್ಮ ರಕ್ತವನ್ನು ಪರಿಶುದ್ಧಗೊಳಿಸುವುದರ ಜೊತೆಗೆ, ನಿಮ್ಮ ಕೂದಲಿನ ಸಹಜ ಬಣ್ಣವನ್ನು ಮೇಂಟೇನ್ ಮಾಡಲು ಪೂರಕ ಆಗುತ್ತದೆ. ಹೀಗಾಗಿ ನಿಮಗೆ ಬೇಗ ಬಿಳಿ ಕೂದಲು ಕಾಡಿಸದು. ನೆಲ್ಲಿಕಾಯಿಯಲ್ಲಿನ ವಿಟಮಿನ್ ಸಿ, ಕೊಲೋಜೆನ್ ಪ್ರೋಟೀನ್ ಹೆಚ್ಚಲು ಸಹಕಾರಿ. ಇದು ಕೂದಲು ಒತ್ತಾಗಿ, ದಟ್ಟವಾಗಿ, ಉದ್ದಕ್ಕೆ ಬೆಳೆಯಲು, ವಾಲ್ಯೂಂ ಹೆಚ್ಚಲು ಪೂರಕ.
ವೀಟ್ ಪ್ರೋಟೀನ್ : ಈ ಪ್ರೋಟೀನ್ ನಿಮ್ಮ ಕೂದಲಿನ ಮಾಯಿಶ್ಚರ್ ನ್ನು ಮೇಂಟೇನ್ ಮಾಡುನಲ್ಲಿ ಸಹಕಾರಿ. ಇದರಿಂದ ಕೂದಲು ಹೆಚ್ಚು ಒತ್ತಾಗಿ, ದಟ್ಟವಾಗಿ, ಸಿಲ್ಕಿ ಹಾಗೆ ಆಗುತ್ತದೆ. ನಿಮ್ಮ ಕೂದಲು ಹೆಚ್ಚು ಡ್ರೈ ಅಥವಾ ಕರ್ಲಿ ಆಗಿದ್ದರೆ, ವೀಟ್ ಪ್ರೋಟೀನ್‌ನಿಮ್ಮ ಕೂದಲಿಗೆ ಹೆಚ್ಚಿನ ವಾಲ್ಯೂಂ ನೀಡುವುದರ ಜೊತೆಗೆ ಕೂದಲಿನ ಆರೋಗ್ಯದತ್ತ ಗಮನ ಹರಿಸುತ್ತದೆ. ಇದು ಕೂದಲಿನ ಫ್ರಿಜಿನೆಸ್, ಸಿಕ್ಕು, ತುಂಡರಿಸುವಿಕೆ ತಡೆಯುತ್ತದೆ. ಇದು ಕೂದಲಿಗೆ ಹೊಸ ಜೀವ ನೀಡುತ್ತದೆ.
ಕೊಬ್ಬರಿ ಎಣ್ಣೆಯ ಶ್ಯಾಂಪೂ : ಇದು ಹೊಟ್ಟನ್ನು ನಿಯಂತ್ರಿಸುವುದರ ಜೊತೆ ಕೂದಲಿಗೆ ಮಾಯಿಶ್ಚರ್ ಸಹ ಒದಗಿಸುತ್ತದೆ. ಇದು ಕೂದಲಿನ ಸೀಳು ತುದಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಎಲ್ಲಾ ತರಹದ ಕೂದಲಿಗೂ ಪ್ರೋಟೀನ್ ಒದಗಿಸುತ್ತದೆ, ಅದು ಸ್ವಸ್ಥ ಕೂದಲಿಗೆ ಅಗತ್ಯ. ಇದರಿಂದ ನಿಧಾನವಾಗಿ ಕೂದಲಿನ ಫ್ರಿಜಿನೆಸ್ ಕಡಿಮೆಯಾಗಿ, ಕೂದಲು ಹೆಚ್ಚು ಕಾಂತಿಯುತ ಹಾಗೂ ಸ್ವಸ್ಥವಾಗುತ್ತದೆ.
ಹೀಗಾಗಿ ಮೇಲಿನ ಎಲ್ಲಾ ಅಂಶಗಳನ್ನೂ ಒಳಗೊಂಡಂಥ ಜೊತೆಗೆ ಸೀಗೇಕಾಯಿ, ಚಿಗರೆಪುಡಿ, ರೋಜ್ ಮೆರಿ, ಸೋಯಾ ಪ್ರೋಟೀನ್, ಗೋರಂಟಿ, ತುಳಸಿ, ಕೊಬ್ಬರಿ ಎಣ್ಣೆ ಇತ್ಯಾದಿ ಅಡಗಿರುವ ಉತ್ತಮ ಹರ್ಬಲ್ ಶ್ಯಾಂಪೂ, ಕಂಡೀಶನರ್, ಹೇರ್ ಆಯಿಲ್ ಗಳನ್ನೇ ಬಳಸಬೇಕು.
– ಪ್ರತಿನಿಧಿ