ಕೆಲವು ಜನರು ತಮ್ಮ ವಕ್ರ ಹಲ್ಲುಗಳ ಸಮಸ್ಯೆಯಿಂದ ತೊಂದರೆಗೊಳಗಾಗಿರುತ್ತಾರೆ. ಅವನ್ನು ಸರಿಪಡಿಸಿಕೊಳ್ಳಲು ಅವರು ಅದಕ್ಕೆ ಮೆಟಲ್ ಕ್ಲಿಪ್ ಹಾಕಿಸಿಕೊಂಡಿರುತ್ತಾರೆ. ಆ ಕಾರಣದಿಂದಾಗಿ ಸ್ಮೈಲ್ ಕೊಟ್ಟಾಗ ತೊಂದರೆಯ ಜೊತೆಗೆ ಸಂಕೋಚ ಕೂಡ ಆಗುತ್ತದೆ. ಆದರೆ ಈಗ ಅವರು ಅಂತಹ ತೊಂದರೆ ಪಡಬೇಕಾದ ಅಗತ್ಯವಿಲ್ಲ. ಏಕೆಂದರೆ ಈಗ ಮಾರುಕಟ್ಟೆಯಲ್ಲಿ ಆ ತೊಂದರೆ ನಿವಾರಣೆಗೆ ಹೊಸದೊಂದು ಪರಿಹಾರ ಬಂದಿದೆ.
`ಒಡಿಎಸ್ ಕ್ಲಿಯರ್ ಅಲೈನರ್ಸ್’ನ ಸಂಸ್ಥಾಪಕ ಡಾ. ಸ್ವಪ್ನಿ ಗುಪ್ತಾ ಇನ್ ವಿಜಿಬಲ್ ಬ್ರೆಸೆಸ್ ಕುರಿತಂತೆ ವಿವರವಾಗಿ ತಿಳಿಸಿದರು.
ಇನ್ ವಿಜಿಬಲ್ ಬ್ರೆಸೆಸ್ ಅರ್ಥೋಡೆಂಟಿಕ್ಸ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವಾಗಿದೆ. ಯಾರು ತಮ್ಮ ವಕ್ರ ಹಲ್ಲುಗಳನ್ನು ನೇರಗೊಳಿಸಲು ಬಯಸುತ್ತಾರೊ, ತಮ್ಮ ಬಗ್ಗಿವೆ ಎಚ್ಚರದಿಂದಿರುತ್ತಾರೋ ಅವರಿಗೆ ಇದು ಒಂದು ಆದರ್ಶ ತಂತ್ರಜ್ಞಾನವಾಗಿದೆ.
ತಮ್ಮ ಹಲ್ಲುಗಳ ಸುತ್ತಮುತ್ತ ತಂತಿಗಳ ಆರಣವನ್ನು ಕೂಡ ಅವರು ಇಷ್ಟಪಡುವುದಿಲ್ಲ.
ಹೊಸ ಪ್ರಕ್ರಿಯೆಯಲ್ಲಿ ಮೆಟಲ್, ಸೆರಾಮಿಕ್, ತಂತಿ ಅಥವಾ ಲಿಂಗ್ಯುಲ್ ಬ್ರೆಸಸ್ ಉಪಯೋಗಿಸದೆಯೇ ನೀವು ವಕ್ರ ಹಲ್ಲುಗಳನ್ನು ನೇರಗೊಳಿಸಿಕೊಳ್ಳಬಹುದು. ಈ ಬ್ರೆಸಸ್ ಪಾರಂಪರಿಕ ರೀತಿಯಲ್ಲಿ ಕೆಲಸ ಮಾಡುತ್ತವೆ ಹಾಗೂ ಮುಂದೆ ಚಾಚುವ ಹಲ್ಲುಗಳನ್ನು ಸರಿದಾರಿಗೆ ತರುತ್ತವೆ. ಯಾರು ತಮ್ಮ ಲುಕ್ ನಲ್ಲಿ ಒಂದಿಷ್ಟೂ ವ್ಯತ್ಯಾಸ ಉಂಟಾಗಲು ಬಯಸುವುದಿಲ್ಲವೋ, ಯಾರಿಗೆ ಸಮಯದ ಕೊರತೆ ಇರುತ್ತೋ, ಅವರು ಈ ಒಂದಿಷ್ಟು ದುಬಾರಿ ಪ್ರಕ್ರಿಯೆಗೆ ಅಡಿ ಇಡಬಹುದು. ಇದು ನೋವುರಹಿತ ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿರಬೇಕಾದ ಅಗತ್ಯ ಉಂಟಾಗುವುದಿಲ್ಲ.
ಈ ಚಿಕಿತ್ಸೆ ಹೇಗೆ?
ಈ ಪ್ರಕ್ರಿಯೆ ಹಲವು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. ಚಿಕಿತ್ಸೆಯ ಪ್ರಕ್ರಿಯೆ ದವಡೆಗಳ ಇಂಪ್ರೆಶನ್ ಜೊತೆಗೆ ಹಲ್ಲುಗಳು ಮತ್ತು ವಸಡಿನ ಒಂದು ಎಕ್ಸರೇ ತೆಗೆಯುವುದರ ಮೂಲಕ ಆರಂಭವಾಗುತ್ತದೆ. ಈ ಬ್ರೆಸೆಸ್ ಗಳನ್ನು ಪ್ಲಾಸ್ಟಿಕ್ ಅಥವಾ ಆ್ಯಕ್ರೆಲಿಕ್ ಸಾಮಗ್ರಿಗಳಿಂದ ಮುಕ್ತವಾಗಿ ಇರಬೇಕಾಗುತ್ತದೆ. ಅದಕ್ಕಾಗಿ ಸುಮಾರು 1 ತಿಂಗಳಷ್ಟು ಸಮಯ ತಗಲುತ್ತದೆ. ಆ ಸೆಟ್ ಧರಿಸಲು ಸೂಕ್ತವಾದಂಥದು ಆಗಿರುತ್ತದೆ. ಆದರೆ ಆಹಾರ ಸೇವನೆಯ ಸಂದರ್ಭದಲ್ಲಿ ಬ್ರಶಿಂಗ್ ಅಥವಾ ಫ್ಲಶಿಂಗ್ ನ ಸಮಯವನ್ನು ಹೊರತುಪಡಿಸಿ ಇಡೀ ದಿನ ಧರಿಸಬೇಕು.
ಈ ಸೆಟ್ ನ್ನು ಮುಂದಿನ ಸೆಟ್ ಮುಖಾಂತರ ಪ್ರತಿಷ್ಠಾಪಿಸುವ ಮುಂಚೆ 2-3 ವಾರಗಳ ಕಾಲ ಧರಿಸಬೇಕಾಗುತ್ತದೆ.
ಈ ಸಂಗತಿಗಳ ಬಗ್ಗೆ ಗಮನವಿರಲಿ
ನಿಮ್ಮ ತಜ್ಞ ವೈದ್ಯರ ಸಲಹೆಯ ಪ್ರಕಾರ, 1-2 ವಾರಗಳ ಕಾಲ ಅಲೈನರ್ ನ ಪ್ರತಿಯೊಂದು ಸೆಟ್ ನ್ನು ಧರಿಸಿ. ಪ್ರತಿ 6-8 ವಾರಕ್ಕೆ ಚೆಕಪ್ ಮಾಡಿಸಿ.
ಅಲೈನರ್ಸ್ ನ ಪ್ರತಿಯೊಂದು ಹೊರ ಸೆಟ್ ನ್ನು ಅಳವಡಿಸಿಕೊಂಡ ಬಳಿಕ ಒಂದಷ್ಟು ಹೆಚ್ಚುವರಿ ಒತ್ತಡ ಅಥವಾ ಅಸೌಕರ್ಯ ಉಂಟಾಗಬಹುದು. ಅದು ಪರಿಪೂರ್ಣವಾಗಿ ಸಾಮಾನ್ಯವಾಗಿದೆ.
ಇನ್ ವಿಜಿಬಲ್ ಬ್ರೆಸೆಸ್ ಹಲ್ಲುಗಳ ನಡುವೆ ಗ್ಯಾಪ್, ವಕ್ರ ಹಲ್ಲುಗಳು, ಓವರ್ ವೈಟ್, ಅಂಡರ್ ವೈಟ್, ಡೀಪ್ ವೈಟ್ ಮತ್ತು ಓಪನ್ ವೈಟ್ ಮುಂತಾದ ಪರಿಸ್ಥಿತಿಗಳನ್ನು ಎದುರಿಸುವವರಿಗೆ ಇದು ಹೆಚ್ಚು ಸೂಕ್ತವಾಗಿದೆ.
ಎಚ್ಚರಿಕೆಗಳು
ಹಲ್ಲುಗಳನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಿ. ನೀರು ಕುಡಿಯುವುದನ್ನು ಹೊರತುಪಡಿಸಿ, ಏನನ್ನೇ ತಿಂದರೂ, ಕುಡಿದರೂ ಬ್ರೆಸೆಸ್ ನ್ನು ತೆಗೆಯಲು ಮರೆಯಬೇಡಿ. ಅದರ ಹೊರತಾಗಿ ಅಲೈನರ್ ನ್ನು ಕಲೆಗಳಿಂದ ರಕ್ಷಿಸಲು ಪ್ರತಿಸಲದ ಊಟದ ಬಳಿಕ ಬ್ರಶ್ ಮಾಡಿ.
ತಗಲುವ ಸಮಯ ಹಾಗೂ ವೆಚ್ಚ
ಇನ್ ವಿಜಿಬಲ್ ಬ್ರೆಸಸ್ ನ ಉಪಯೋಗದಿಂದ ನೀವು ಹಲ್ಲುಗಳನ್ನು ಸರಿಯಾದ ರೂಪಕ್ಕೆ ತರಲು ಸುಮಾರು 1 ವರ್ಷ ತಗುಲಬಹುದು. ಅದಕ್ಕಾಗಿ 14 ಲಕ್ಷ ರೂ. ತನಕ ಖರ್ಚು ಬರಬಹುದು. ಇನ್ ವಿಜಿಬಲ್ ಬ್ರೆಸೆಸ್ ನ ಪರಿಣಾಮ ಖಾಯಂ ಆಗಿರುವಂಥದ್ದು ಅದು ಜೀವನವಿಡೀ ನಡೆಯುತ್ತದೆ.
– ಡಾ. ಸುಧಾ