ನೀವು ಸಹ ನಿಮ್ಮ ಹೊಳೆಯುವ ಚರ್ಮ ಪ್ರದರ್ಶಿಸಿ ಜನರಿಂದ ಹೊಗಳಿಕೆಯ ಮಾತು ಕೇಳ ಬಯಸಿದರೆ, ಈ ಸಲಹೆಗಳನ್ನು ಖಂಡಿತಾ ಅನುಸರಿಸಿ......
ಮಳೆಗಾಲ ಅಥವಾ ಚಳಿಗಾಲದ ದಿನಗಳೇ ಇರಲಿ, ನಮ್ಮ ಚರ್ಮವನ್ನು ಸದಾ ಮಾಯಿಶ್ಚರೈಸ್ ಮಾಡುತ್ತಲೇ ಇರಬೇಕು. ಆಗ ಮಾತ್ರ ಚರ್ಮ ಆಂತರಿಕವಾಗಿ ಹೈಡ್ರೇಟ್ ಆಗಿ ನಿಮ್ಮನ್ನು ಡ್ರೈನೆಸ್ ಸಮಸ್ಯೆಯಿಂದ ದೂರ ಇರಿಸಲು ಸಾಧ್ಯ. ಜೊತೆಗೆ ಸ್ಕಿನ್ ಸದಾ ಗ್ಲೋಯಿಂಗ್ ಆಗಿಯೂ ಇರಬೇಕು, ಏಕೆಂದರೆ ಆರ್ದ್ರತೆಯ ಅಭಾವದಿಂದಾಗಿ ಚರ್ಮ ಡ್ರೈ ಆಗುವ ಜೊತೆ ಜೊತೆಗೆ ಆ್ಯಕ್ನೆ, ಟ್ಯಾನಿಂಗ್, ರಾಶೆಸ್ ನ ಸಮಸ್ಯೆಗಳಿಗೆ ಬಲಿಯಾದೀತು. ಇವೆಲ್ಲದ್ದಕ್ಕೆ ರಾಮಬಾಣ ಎಂದರೆ ಉತ್ತಮ ಮಾಯಿಶ್ಚರೈಸಿಂಗ್. ಇದರಿಂದ ಹೆಲ್ದಿ ಸ್ಕಿನ್ ಸೆಲ್ಸ್ ಪ್ರಮೋಟ್ ಆಗುತ್ತವೆ. ಆದರೆ ಎಷ್ಟೋ ಸಲ ನಾವು ಚರ್ಮವನ್ನು ಹೆಚ್ಚು ಆರ್ದ್ರತೆಗೆ ಒಳಪಡಿಸುವ ಸುಳಿಯಲ್ಲಿ, ಚರ್ಮವನ್ನು ಓವರ್ ಮಾಯಿಶ್ಚರೈಸ್ ಸಹ ಮಾಡಿಬಿಡುತ್ತೇವೆ. ಇದರ ಪರಿಣಾಮವಾಗಿ ಚರ್ಮ ಖುದ್ದಾಗಿ ತಾನೇ ಒದಗಿಸುತ್ತಿದ್ದ ಮಾಯಿಶ್ಚರ್ ನ ಅಂಶವನ್ನು ಕಡಿಮೆ ಉತ್ಪಾದಿಸ ತೊಡಗುತ್ತದೆ. ಹೀಗಾಗಿ ಚರ್ಮದ ಮೇಲೆ ಕ್ರೀಮ್ ನ ಪದರದ ಕೆಳಗಿನ ಸ್ಕಿನ್ ಡ್ರೈ ಆಗುತ್ತದೆ. ಆದ್ದರಿಂದ ಗಮನಿಸತಕ್ಕ ವಿಷಯ ಎಂದರೆ, ಅಗತ್ಯವಾಗಿ ಸ್ಕಿನ್ ಮಾಯಿಶ್ಚರೈಸ್ ಮಾಡಬೇಕು ನಿಜ, ಆದರೆ ಮಿತಿ ಮೀರಿ ಮಾಡಬಾರದು.
ಮಾಯಿಶ್ಟರೈಸಿಂಗ್ ಅತಿಯಾದರೆ ಏನು ಹಾನಿ ಎಂದು ತಜ್ಞರಿಂದ ಕೇಳಿ ತಿಳಿಯೋಣವೇ?
ಕ್ಲಾಗ್ ಪೋರ್ಸ್ ನ ಸಮಸ್ಯೆನಾ ಯಾವಾಗ ಚರ್ಮದ ಡ್ರೈನೆಸ್ ನ್ನು 100% ನಿವಾರಿಸಬೇಕೆಂದು ಓವರ್ ಮಾಯಿಶ್ಚರೈಸಿಂಗ್ ಮಾಡತೊಡಗುತ್ತೇವೋ, ಅದು ಚರ್ಮದ ಮೇಲಿನ ಪೋರ್ಸ್ ನ್ನು ಕ್ಲಾಗ್ ಮಾಡುತ್ತದೆ. ಏಕೆಂದರೆ ಹೆಚ್ಚಿನ ಪ್ರಮಾಣದ ಮಾಯಿಶ್ಚರೈಸರ್ ಚರ್ಮದ ಮೇಲೆ ಜಮೆಗೊಳ್ಳುತ್ತದೆ, ಜೊತೆಗೆ ಇದರ ಹೆವಿ ಟೆಕ್ಸ್ ಚರ್ ಚರ್ಮ ಫ್ರೀಯಾಗಿ ಉಸಿರಾಡದಂತೆ ಮಾಡಿ, ಪೋರ್ಸ್ ಕ್ಲಾಗ್ ಆಗಲು ಕಾರಣವಾಗುತ್ತದೆ. ಇಂಥ ಕ್ಲಾಗ್ಡ್ ಪೋರ್ಸ್ ನಿಂದ ಆಯಿಲ್‌ಡೆಡ್ ಸ್ಕಿನ್ ಸೆಲ್ಸ್‌ಹೊರ ಬರಲಾಗದು. ಇದು ಆ್ಯಕ್ನೆ, ಬ್ರೇಕ್ ಔಟ್ಸ್ ಆಗಲು ಕಾರಣವಾಗಿ, ನಿಮ್ಮ ಚರ್ಮ ಸೌಂದರ್ಯವನ್ನು ಸಂಪೂರ್ಣ ತಗ್ಗಿಸುತ್ತದೆ. ಹೀಗಾಗಿ ಚರ್ಮಕ್ಕೆ ಬೆಸ್ಟ್ ಮಾಯಿಶ್ಚರೈಸರ್ ಹಚ್ಚುವ ಜೊತೆಗೆ, ಎಷ್ಟು ಪ್ರಮಾಣ ಹಚ್ಚಬೇಕು ಎಂಬುದರತ್ತಲೂ ಗಮನ ಕೊಡಬೇಕು.
ಸ್ಕಿನ್ ಡ್ರೈನೆಸ್ ಸಮಸ್ಯೆ
ಕೇಳಲು ನಿಮಗೆ ವಿಚಿತ್ರ ಎನಿಸಬಹುದು, ಆದರೆ ಮಾಯಿಶ್ಚರೈಸರ್ ನ ಅತಿಯಾದ ಬಳಕೆ ಚರ್ಮದಲ್ಲಿ ತಂತಾನೇ ಡ್ರೈನೆಸ್ ಸಮಸ್ಯೆ ಹೆಚ್ಚಿಸುತ್ತದೆ ಎಂಬುದಂತೂ ನಿಜ. ಜೊತೆಗೆ ಸ್ಕಿನ್ ಡಲ್ ಸೆನ್ಸಿಟಿವ್ ಸಹ ಆಗುತ್ತದೆ. ಇದಕ್ಕೆ ಮತ್ತೊಂದು ಕಾರಣ, ಮುಖಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾಯಿಶ್ಚರೈಸರ್ ಅಪ್ಲೈ ಮಾಡುವುದರಿಂದ, ನಿಮ್ಮ ಮುಖದಲ್ಲಿ ಜಿಡ್ಡಿನಂಶದ ಉತ್ಪಾದನೆ ತಂತಾನೇ ಕಡಿಮೆ ಆಗುತ್ತದೆ. ಇದು ಸ್ಕಿನ್ ನ್ನು ನ್ಯಾಚುರಲಿ ಡ್ರೈ ಮಾಡಿಬಿಡುತ್ತದೆ. ಅಲ್ಲಿಯವರೆಗೂ ಸ್ಕಿನ್ ಸಾಫ್ಟ್ ಆಗಿಯೇ ಇದ್ದದ್ದು, ಡ್ರೈನೆಸ್ ಗೆ ತಿರುಗಿಬಿಡುತ್ತದೆ. ಎಲ್ಲಿಯವರೆಗೂ ಚರ್ಮದ ಮೇಲೆ ಒಂದು ಪದರ ಮಾಯಿಶ್ಚರೈಸರ್ ಇರುತ್ತದೋ ಓಕೆ, ಅದು ಮಾಸಿದಂತೆ, ಡ್ರೈನೆಸ್ ಧುತ್ತೆಂದು ತಲೆದೋರುತ್ತದೆ. ಈ ಶುಷ್ಕತೆ ಚರ್ಮದ ಕಾಂತಿಯನ್ನು ನಿರ್ಜೀವಗೊಳಿಸಿ, ಚರ್ಮವನ್ನು ಬಲು ಸೂಕ್ಷ್ಮ, ಸೆನ್ಸಿಟಿವ್ ಮಾಡಿಬಿಡುತ್ತದೆ. ಅಲ್ಲಿಂದ ಮುಂದೆ ಅನೇಕ ಸ್ಕಿನ್ ಪ್ರಾಬ್ಲಮ್ಸ್ ಕಾಡತೊಡಗುತ್ತವೆ.